ಇಂದು ಪಂಜಾಬ್ ಸಿಎಂ ಭಗವಂತಮಾನ್ ಗೆ ಎರಡನೇ‌ ಮದುವೆ

ಸಮಗ್ರ ನ್ಯೂಸ್: ಪಂಜಾಬ್ ಪ್ರತಿನಿಧಿಸುವ ಹಾಗೂ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರ ವಿವಾಹದ ದಿನ. ಅಂದಹಾಗೆ ಪಂಜಾಬ್​ ಸಿಎಂಗೆ ಇದು ಎರಡನೇ ಮದುವೆ.

Ad Widget ... ..

48 ವರ್ಷದ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರು ಇಂದು ಚಂಡೀಗಢದಲ್ಲಿ ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಡಾ. ಗುರುಪ್ರೀತ್​ ಕೌರ್​ ಎಂಬುವರನ್ನು ವರಿಸಲಿದ್ದಾರೆ. ಈ ಹಿಂದೆ ಸ್ಟ್ಯಾಂಡ್​ ಅಪ್​​ ಕಾಮಿಡಿಯನ್​ ಆಗಿದ್ದ ಮಾನ್​, 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯಿಂದ ಡಿವೋರ್ಸ್​ ಪಡೆದುಕೊಂಡಿದ್ದಾರೆ. ಮಾನ್​ ಮತ್ತು ಗುರುಪ್ರೀತ್​ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ.

Ad Widget

ವಧುವಿನ ಬಗ್ಗೆ ತಿಳಿಯುವುದಾದರೆ, ಮಾನ್​ ಕೈಹಿಡಿಯಲಿರುವ ವಧುವಿನ ಹೆಸರು ಡಾ. ಗುರುಪ್ರೀತ್​ ಕೌರ್​. ಇವರ ವಯಸ್ಸು 32. ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಕುರುಕ್ಷೇತ್ರ ಜಿಲ್ಲೆಯ ಪೆಹೊವಾ ಮೂಲದವರು. ಅವರ ತಂದೆ ಇಂದ್ರಜಿತ್​ ಸಿಂಗ್​ ಓರ್ವ ರೈತ. ಅವರ ತಾಯಿ ರಾಜ್​ ಕೌರ್​ ಗೃಹಿಣಿ. ಗುರುಪ್ರೀತ್​ ಕೌರ್​ಗೆ ಇಬ್ಬರು ಸಹೋದರಿಯರಿದ್ದಾರೆ. ಇಬ್ಬರು ಕೂಡ ವಿದೇಶದಲ್ಲಿದ್ದಾರೆ. ಮಾನ್​ ಅವರ ನಿಕಟ ಮೂಲಗಳ ಪ್ರಕಾರ, ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಸಂಬಂಧ ಇದೆ.

ಭಗವಂತ್ ಮಾನ್​ ಅವರಿಗೆ ಈಗಾಗಲೇ ಇಂದ್ರಪ್ರೀತ್ ಕೌರ್ ಎಂಬುವರ ಜತೆ ಮದುವೆ ಆಗಿತ್ತು. ಇವರಿಬ್ಬರ ಸಂಬಂಧ 2015ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಮುರಿದು ಬಿದ್ದಿತ್ತು. ಇವರ ಮಾಜಿ ಪತ್ನಿ ಹಾಗೂ ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. 6 ವರ್ಷದಿಂದ ಏಕಾಂಗಿಯಾಗಿದ್ದ ಭಗವಂತ್ ಮಾನ್​ ಅವರು ಇದೀಗ ಮತ್ತೊಂದು ಮದ್ವೆ ಆಗುತ್ತಿದ್ದಾರೆ. ತಾಯಿ ಹಾಗೂ ಸಹೋದರಿ ಇಬ್ಬರೂ ಮತ್ತೊಂದು ಮದ್ವೆ ಆಗಲು ಒಪ್ಪಿಸಿದ್ದಾರೆ.

Leave a Comment

Your email address will not be published. Required fields are marked *