ಮಂಗಳೂರು: ಚಾರ್ಜಿಂಗ್ ಗೆ ಇರಿಸಿದ್ದ ಸ್ಕೂಟರ್ ಬೆಂಕಿಗಾಹುತಿ

ಸಮಗ್ರ ನ್ಯೂಸ್: ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗಾಹುತಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಇದೀಗ ಮಂಗಳೂರಿನಲ್ಲೂ ಚಾರ್ಚ್ ಗೆ ಇಟ್ಟಿದ್ದ ಎಲೆಕ್ಟಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿದೆ.

Ad Widget ... ..

ನಗರದ ಬೋಂದೆಲ್ ಸಮೀಪದ ಕೆ.ಎಚ್. ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್ ಮಾಲಕ ಅದನ್ನು ಚಾರ್ಚ್ ಗೆ ಇಟ್ಟಿದ್ದರು, ಆದರೆ ಸ್ವಲ್ಪ ಸಮಯದಲ್ಲೇ ಸ್ಕೂಟರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.

Ad Widget

ಬೆಂಕಿ ಹೊತ್ತಿಕೊಂಡ ತತ್‌ಕ್ಷಣ ಸ್ಕೂಟರ್‌ ಸ್ಪೋಟಗೊಂಡಿದೆ. ಸ್ಕೂಟರ್‌ನ ಯಂತ್ರಗಳು, ಬಿಡಿಭಾಗಗಳು ಸೇರಿದಂತೆ ಸಂಪೂರ್ಣ ಸ್ಕೂಟರ್‌ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳ ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

Leave a Comment

Your email address will not be published. Required fields are marked *