ಚರಣ್ ರಾಜ್ ಕೊಲೆ ಪ್ರಕರಣ| ಮೂವರು ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೆಯ್ಯೂರು ಗ್ರಾಮದ ಪಲ್ಲತ್ತಡ್ಕದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

. Ad Widget . Ad Widget . Ad Widget .

ಕಿಶೋರ್ ಪೂಜಾರಿ ತಂಡದ ಸಹಚರರಾದ ನರ್ಮೇಶ್ ರೈ,(29), ನಿತಿಲ್ ಶೆಟ್ಟಿ (23), ವಿಜೇಶ್ (22) ಬಂಧಿತ ಆರೋಪಿಗಳು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.

ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಕಲ್ಲಡ್ಕದ ಕಿಶೋರ್ ಪೂಜಾರಿ ತಂಡ ಹತ್ಯೆ ಮಾಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಎಸ್‌.ಪಿ ಸೋನಾವಣೆ ಋಷಿಕೇಷ್‌ ಭಗವಾನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಪೊಲೀಸ್ ಉಪಾಧೀಕ್ಷಕರಾದ ಗಾನ ಪಿ ಕುಮಾರ್ ಸೂಚನೆಯಂತೆ, ಸುಳ್ಯ ಠಾಣೆಯ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ, ಬೆಳ್ಳಾರೆ ಪಿಎಸ್‌ಐ ರುಕ್ಮ ನಾಯ್ಕ್, ಸಂಪ್ಯ ಪೊಲೀಸ್‌ ಸಬ್ ಇನ್ಸ್ ಪೆಕ್ಟರ್ ಉದಯ ರವಿ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *