ಕಡಬ : ಬುದ್ಧಿಮಾಂದ್ಯ ಯುವತಿಯನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ

ಸಮಗ್ರ ನ್ಯೂಸ್: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಡಬ‌ ಠಾಣಾ ವ್ಯಾಪ್ತಿಯ ಕಾಣಿಯೂರಿನಲ್ಲಿ ನಡೆದಿದೆ.

. Ad Widget . Ad Widget . Ad Widget

ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಬಂಡಾಜೆ ನಿವಾಸಿ ಚಂದ್ರಶೇಖರ (57) ಎಂದು ಗುರುತಿಸಲಾಗಿದೆ. ಸಂತ್ರಸ್ತ ಯುವತಿಯ ಸಹೋದರ ಚಾರ್ವಾಕದಲ್ಲಿರುವ ತನ್ನ ಜಮೀನಿನಲ್ಲಿ ಕೃಷಿ ಕೆಲಸದ ಬಗ್ಗೆ ತಂದೆ, ತಾಯಿಯವರನ್ನು ಬಿಟ್ಟು ಬರಲು ಹೋದ ಸಂದರ್ಭ, ಬುದ್ಧಿಮಾಂದ್ಯಳಾದ ಅಕ್ಕ ಮನೆಯಲ್ಲಿ ಒಬ್ಬಳೇ ಇದ್ದರು ಎನ್ನಲಾಗಿದೆ.
ಚಾರ್ವಾಕದಿಂದ ಮರಳಿ ಮನೆಗೆ ಬಂದಾಗ ಮನೆಯಲ್ಲಿದ್ದ ಅಕ್ಕ ಕಾಣದೇ ಇದ್ದಾಗ ಆಕೆಯನ್ನು ಹುಡುಕುತ್ತಿದ್ದ ವೇಳೆ ಮನೆಯ ಎದುರಿನ ಗುಡ್ಡದಿಂದ ಬರುತ್ತಿದ್ದಳು. ಈ ಬಗ್ಗೆ ವಿಚಾರಿಸಿದಾಗ ಆರೋಪಿ ಚಂದ್ರಶೇಖರ “ನೀನು ನನ್ನ ಜತೆ ಗುಡ್ಡಕ್ಕೆ ಬರಬೇಕು. ಇಲ್ಲದಿದ್ದರೆ ನಿನಗೆ ತೊಂದರೆ ನೀಡುತ್ತೇನೆ’ ಎಂದು ಬೆದರಿಸಿ ಕರೆದೊಯ್ದಿದ್ದಾನೆ ಎಂದು ಆಕೆ ಹೇಳಿದ್ದಾಳೆ ಎಂದು ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತ ಯುವತಿಯ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

. Ad Widget .

Leave a Comment

Your email address will not be published. Required fields are marked *