ಬೆಂಗಳೂರು : ಕೋಲಾರದಲ್ಲಿ ಸಚಿವ ನಾಗೇಶ್ ಮತ್ತು ಅತಿಥಿ ಉಪನ್ಯಾಸಕರ ನಡುವೆ ವಾಗ್ವಾದ ನಡೆದಿದ್ದು, ಅತಿಥಿ ಉಪನ್ಯಾಸಕರ ವಿರುದ್ಧ ಗರಂ ಆಗಿದ್ದರೆ.
ಕೋಲಾರ ಹೊರ ವಲಯದ ಹೆದ್ದಾರಿಯಲ್ಲಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಅರ್ಪಿಸಲು ಮುಂದಾದ, ಜಿಲ್ಲೆಯ ಅತಿಥಿ ಉಪನ್ಯಾಸಕರು ಈ ವೇಳೆಯಲ್ಲಿ, ಸಚಿವರ ಮುಂದೆ, ನಮಗೆ ವೇತವನ್ನ ಹೆಚ್ಚಳ ಮಾಡಿ, ನಾವು ಶೋಷಣೆಗೆ ಒಳಗಾಗಿದ್ದೇವೆ ಅಂಥ ಹೇಳಿಕೊಂಡರು.
ಮನವಿಯನ್ನ ಕೇಳಿಸಿಕೊಳ್ಳುವ ವೇಳೆಯಲ್ಲಿ ಗರಂ ಆದ ಸಚಿವರು, ಮನವಿಕಾರರ ವಿರುದ್ದ ಕಿಡಿಕಾರಿ ನಿಮಗೆ ಶೋಷಣೆ ಅನ್ನುವ ಪದದ ಅರ್ಥ ಗೊತ್ತ ಅಂತ ಹೇಳಿದರು. ಇನ್ನೂ ನಿಮ್ಮನ್ನು, ಕಾಲು ಕಟ್ಟಿಹಾಕಿ ಯಾರೂ ನಿಮ್ಮನ್ನ ಕರೆತಂದಿಲ್ಲ. ಇಷ್ಟ ಇದ್ದರೆ ಕೆಲಸ ಮಾಡಿ, ಇಲ್ಲ ಅಂದ್ರೆ ಪರೀಕ್ಷೆ ಬರೆದು ಬೇರೆ ದಾರಿ ನೋಡಿಕೊಳ್ಳಿ ಅಂತ ಹೇಳಿದರು. ಇದೇ ವೇಳೆ ಸಚಿವರ ಈ ಹೇಳಿಕೆಗೆ ಅತಿಥಿ ಉಪನ್ಯಾಸಕರು ತೀವ್ರವಾದ ವಿರೋಧ ವ್ಯಕ್ತಪಡಿಸಿ, ಕೂಡಲೇ ಸಚಿವರು ಸಾರಿ ಕೇಳಬೇಕು ಅಂತ ಒತ್ತಾಯಿಸಿದ್ದರು.







