ತಡರಾತ್ರಿ ಊಟ ಮುಗಿಸಿ ಮರಳುತ್ತಿದ್ದವರ ಹೊತ್ತೊಯ್ದ ಜವರಾಯ|

ಬೆಳಗಾವಿ: ಡಾಬಾವೊಂದರಲ್ಲಿ ಊಟ ಮುಗಿಸಿಕೊಂಡು‌ ಬೈಕ್​ನಲ್ಲಿ ನಗರಕ್ಕೆ‌ ಹಿಂದಿರುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ ಸಂಭವಿಸಿದೆ.

Ad Widget ... ..

ಸದಾಶಿವ ನಗರದ ರಚಿತ್​ ಡುಮಾವತ(21) ಮತ್ತು ಚವಾಟಗಲ್ಲಿಯ ಶ್ರೀನಾಥ ಪವಾರ್(21) ಮೃತ ದುರ್ದೈವಿಗಳು.

Ad Widget

ಇವರಿಬ್ಬರೂ ಸ್ನೇಹಿತರ ಜತೆ ಊಟಕ್ಕೆಂದು ಡಾಬಾಕ್ಕೆ ತೆರಳಿದ್ದರು. ರಚಿತ್​ ಬಿಕಾಂ ಓದುತ್ತಿದ್ದ, ಶ್ರೀನಾಥ ಸಿಎ ಓದುತ್ತಿದ್ದ.

ಊಟ ಮುಗಿಸಿ ಬೈಕ್​ನಲ್ಲಿ ಮನೆಗೆ ಹಿಂದಿರುಗುವಾಗ ಪಿಬಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬಳಿ‌ ನಿಂತಿದ್ದ ಲಾರಿಗೆ ಡಿಕ್ಕಿ‌ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಇವರಿಬ್ಬರೂ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *