ಕೋಲಾರ: ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗುಲ್ಲಹಳ್ಳಿ ಗ್ರಾಮದ ಕಾಮಸಮುದ್ರ ಬಳಿ ನಡೆದಿದೆ.
ಆನೆಯ ಏಕಾಏಕಿ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಸಿದ್ದಮ್ಮ (50) ಸಾವಿಗೀಡಾದ ದುರ್ದೈವಿ. ಇವರು ಬೆಳಗ್ಗಿನ ಜಾವ ಮೊಮ್ಮಗನನ್ನು ನೋಡಲೆಂದು ಗುಲ್ಲಹಳ್ಳಿ ಗ್ರಾಮದಿಂದ ಗೊಡಗಮಂದೆ ಗ್ರಾಮಕ್ಕೆ ತೆರಳುತ್ತಿದ್ದರು. ಆದರೆ, ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಕಾಡಾನೆ ಎದುರಾಗಿದೆ. ದಿಢೀರ್ ಎಂದು ಆನೆ ದಾಳಿ ನಡೆಸಿದ ಪರಿಣಾಮ ಸಿದ್ದಮ್ಮರಿಗೆ ಅಲ್ಲಿಂದ ಓಡಿಹೋಗಲು ಅವಕಾಶವೂ ಸಿಕ್ಕಿಲ್ಲ. ಈ ಪರಿಣಾಮ ಆನೆ ದಾಳಿ ನಡೆಸಿದ್ದರಿಂದ ಸಾವನಪ್ಪಿದ್ದಾರೆ.


















