Mangalore

ಮಂಗಳೂರು ರೈಲಿನಲ್ಲಿ ಭಾರೀ ರಾಬರಿ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ರೈಲಿನಲ್ಲಿ ಬರುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ನಡೆದಿದೆ. ಕಾರವಾದ ಮೂಲದ ಶಿಕ್ಷಕ ರಮೇಶ್‌ ಮತ್ತು ನಿರ್ಮಲಾ ದಂಪತಿ ರೈಲಿನಲ್ಲಿ ರಾತ್ರಿ ಕಾರವಾರಕ್ಕೆ ರೈಲಿನಲ್ಲಿ ಹೊರಟಿದ್ದರು.ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವ್ಯಾನಿಟಿ ಬ್ಯಾಗ್‌ ತೆಗೆದುಕೊಂಡು ಪರಾರಿಯಾಗಿದ್ದಾನೆ. ನಂತರ ಆತ ರೈಲಿನಿಂದ ಹಾರಲು ಯತ್ನಿಸಿದ್ದಾನೆ. ಕೂಡಲೇ ಮಹಿಳೆ ತುರ್ತು ಸಂದರ್ಭ ರೈಲು ನಿಲ್ಲಿಸುವ ಚೈನ್‌ ಎಳೆದಿದ್ದಾರೆ. ಅದರಂತೆ ರೈಲಿನ ವೇಗ […]

ಮಂಗಳೂರು ರೈಲಿನಲ್ಲಿ ಭಾರೀ ರಾಬರಿ Read More »

ಮೋದಿ ಕಾರ್ಯಕ್ರಮಕ್ಕೆ ಜರ್ಮನ್ ಪೆಂಡಾಲ್| ಭರದಿಂದ ನಡೆಯುತ್ತಿರುವ ತಯಾರಿ

ಸಮಗ್ರ ನ್ಯೂಸ್: ಸಪ್ಟೆಂಬರ್​ 2 ರಂದು ಮಂಗಳೂರಿನಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರಿ ಸಮಾವೇಶಕ್ಕೆ ವಿಶಾಲ ಜರ್ಮನ್ ಪೆಂಡಾಲ್ ಅಳವಡಿಸಲು ಮತ್ತು ವೇದಿಕೆ ಸಹಿತ ಇಡೀ ಸಭಾಂಗಣ ಪೂರ್ತಿ ನೆಲದಿಂದ ಎತ್ತರದಲ್ಲಿ ಇರುವಂತೆ ಸಿದ್ಧತೆ ಆರಂಭವಾಗಿದೆ. ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಸಿಟಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕರಾವಳಿಯಲ್ಲಿ ಪದೇ ಪದೇ ಮಳೆಯಾಗುತ್ತಿದ್ದು ಪ್ರಧಾನಿ ಸಮಾವೇಶಕ್ಕೆ ತೊಂದರೆಯಾಗದಂತೆ ಇಡೀ ಸಮಾವೇಶ ಸ್ಥಳವನ್ನು ಪೂರ್ತಿಯಾಗಿ ನೆಲಮಟ್ಟದಿಂದ ತುಸು ಎತ್ತರದಲ್ಲಿ ಫ್ಲ್ಯಾಟ್‌ಫಾರಂ ರಚಿಸಲಾಗುತ್ತದೆ. ಇದರಿಂದಾಗಿ ಒಂದು ವೇಳೆ ಮಳೆ ಬಂದರೂ

ಮೋದಿ ಕಾರ್ಯಕ್ರಮಕ್ಕೆ ಜರ್ಮನ್ ಪೆಂಡಾಲ್| ಭರದಿಂದ ನಡೆಯುತ್ತಿರುವ ತಯಾರಿ Read More »

ಸೆ.02 ಮಂಗಳೂರಿಗೆ ಪ್ರಧಾನಿ ಮೋದಿ| ಪ್ರಮುಖ ವಿಷಯಗಳ ಚರ್ಚೆ ಸಾಧ್ಯತೆ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದು, ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಸೆ. 2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಧಾನಿ ಅಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮೋದಿ ಮಂಗಳೂರು ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು, ಪ್ರಧಾನಿ ಭದ್ರತಾ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಪೂರ್ವ ಸಿದ್ಧತೆ ಮತ್ತು ಭದ್ರತೆ ವ್ಯವಸ್ಥೆ ಪರಿಶೀಲನೆ

ಸೆ.02 ಮಂಗಳೂರಿಗೆ ಪ್ರಧಾನಿ ಮೋದಿ| ಪ್ರಮುಖ ವಿಷಯಗಳ ಚರ್ಚೆ ಸಾಧ್ಯತೆ Read More »

ಮಂಗಳೂರಿನಿಂದ ಕಾಶ್ಮೀರ

ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿದ ಅಮೃತಾ ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸವಿನೆನಪಿನಲ್ಲಿ ಕಾಸರಗೋಡು ಮೂಲದ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿದ್ದಾರೆ. 21 ವರ್ಷ ಅಮೃತಾ ಜೋಷಿ ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ , ದೇಶದ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ 22000 ಕಿ.ಮೀ ಸಂಚರಿಸಿ ದೇಶಾದ್ಯಂತ ಪರ್ಯಟನೆ ಮಾಡಿದ್ದಾರೆ.

ಮಂಗಳೂರಿನಿಂದ ಕಾಶ್ಮೀರ Read More »