ಮಂಗಳೂರು ರೈಲಿನಲ್ಲಿ ಭಾರೀ ರಾಬರಿ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ರೈಲಿನಲ್ಲಿ ಬರುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ನಡೆದಿದೆ.

Ad Widget ... ..

ಕಾರವಾದ ಮೂಲದ ಶಿಕ್ಷಕ ರಮೇಶ್‌ ಮತ್ತು ನಿರ್ಮಲಾ ದಂಪತಿ ರೈಲಿನಲ್ಲಿ ರಾತ್ರಿ ಕಾರವಾರಕ್ಕೆ ರೈಲಿನಲ್ಲಿ ಹೊರಟಿದ್ದರು.ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವ್ಯಾನಿಟಿ ಬ್ಯಾಗ್‌ ತೆಗೆದುಕೊಂಡು ಪರಾರಿಯಾಗಿದ್ದಾನೆ. ನಂತರ ಆತ ರೈಲಿನಿಂದ ಹಾರಲು ಯತ್ನಿಸಿದ್ದಾನೆ. ಕೂಡಲೇ ಮಹಿಳೆ ತುರ್ತು ಸಂದರ್ಭ ರೈಲು ನಿಲ್ಲಿಸುವ ಚೈನ್‌ ಎಳೆದಿದ್ದಾರೆ. ಅದರಂತೆ ರೈಲಿನ ವೇಗ ತಗ್ಗಿದಾಗ ಅಪರಿಚಿತ ನಿರ್ಮಲಾರಿಂದ ಬಿಡಿಸಿಕೊಂಡು ರೈಲಿನಿಂದ ಹಾರಿದ್ದಾನೆ.
ಮಂಗಳೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Ad Widget

Leave a Comment

Your email address will not be published. Required fields are marked *