ರಾಜಕೀಯ

ನಾಳೆ(ಮೇ.9) ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ

ಸಮಗ್ರ ನ್ಯೂಸ್: ದ್ರಾವಿಡ ರಾಜಕಾರಣದ ಭದ್ರಕೋಟೆ ತಮಿಳುನಾಡಿನಲ್ಲಿ ದಶಕಗಳ ನಂತರ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಿಂದ ತಮಿಳುನಾಡು ರಾಜಕೀಯದಲ್ಲಿ ಮನೆಮಾಡಿದ್ದ ತೀವ್ರ ಕುತೂಹಲ, ಕಾನೂನು ಹೋರಾಟ ಮತ್ತು ರಾಜಕೀಯ ಹಗ್ಗಜಗ್ಗಾಟಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದ್ದಾರೆ. ಈ ಮೂಲಕ ಬೆಳ್ಳಿತೆರೆಯ ‘ದಳಪತಿ’ ಈಗ ಅಧಿಕೃತವಾಗಿ ರಾಜ್ಯದ ಸಾರಥಿಯಾಗಲು ಸಜ್ಜಾಗಿದ್ದಾರೆ. ಚುನಾವಣಾ ಫಲಿತಾಂಶದ ನಂತರ […]

ನಾಳೆ(ಮೇ.9) ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ Read More »

ತಮಿಳುನಾಡಿನಲ್ಲಿ ಟಿವಿಕೆ – ಕಾಂಗ್ರೆಸ್ ಮೈತ್ರಿ ಸರ್ಕಾರ| ರಾಗಾ ಬೆಂಬಲ ಕೋರಿದ ವಿಜಯ್

ಸಮಗ್ರ ನ್ಯೂಸ್: ತಮಿಳುನಾಡಿನಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದು ಬಹುತೇಕ ಅಂತಿಮವಾಗಿದೆ. ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿದೆ. ಟಿವಿಕೆ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸ್ಥಾನಗಳಲ್ಲಿ ಅಂದರೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆಯಾದರೂ ಬಹುಮತಕ್ಕೆ ಇನ್ನೂ 10 ಸ್ಥಾನಗಳು ಕಡಿಮೆ ಇದೆ.ಹೀಗಾಗಿ, ಅನಿವಾರ್ಯವಾಗಿ ಟಿವಿಕೆ ಮೈತ್ರಿ ಮಾಡಿಕೊಳ್ಳುತ್ತಿದೆ. ಇದೀಗ ಟಿವಿಕೆ ಪಕ್ಷವು ಕಾಂಗ್ರೆಸ್ ಪಕ್ಷದ ಬೆಂಬಲ ಕೇಳಿದೆ. ಕಾಂಗ್ರೆಸ್ ಪಕ್ಷವು ತಮಿಳುನಾಡಿನ

ತಮಿಳುನಾಡಿನಲ್ಲಿ ಟಿವಿಕೆ – ಕಾಂಗ್ರೆಸ್ ಮೈತ್ರಿ ಸರ್ಕಾರ| ರಾಗಾ ಬೆಂಬಲ ಕೋರಿದ ವಿಜಯ್ Read More »

ತಮಿಳುನಾಡು ಸಿಎಂ ಸ್ಥಾನಕ್ಕೆ ಎಂ.ಕೆ ಸ್ಟಾಲಿನ್ ರಾಜೀನಾಮೆ

ಸಮಗ್ರ ನ್ಯೂಸ್: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವು ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇವಲ 59 ಸ್ಥಾನಗಳಿಗೆ ಸೀಮಿತವಾದ ಡಿಎಂಕೆ ಅಧಿಕಾರ ಕಳೆದುಕೊಂಡಿದ್ದು, ಸ್ಟಾಲಿನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ತಮಿಳುನಾಡು ರಾಜಕೀಯದಲ್ಲಿ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಸರ್ಕಾರ ರಚನೆಯ ಪ್ರಯತ್ನದಲ್ಲಿ ಟಿವಿಕೆ (TVK) ಪಕ್ಷವು ಇತರ ಪಕ್ಷಗಳೊಂದಿಗೆ ಮಹತ್ವದ ಮಾತುಕತೆ ನಡೆಸುತ್ತಿದೆ. ಮತ್ತೊಂದೆಡೆ, ಚುನಾವಣೆಯಲ್ಲಿನ ಭೀಕರ

ತಮಿಳುನಾಡು ಸಿಎಂ ಸ್ಥಾನಕ್ಕೆ ಎಂ.ಕೆ ಸ್ಟಾಲಿನ್ ರಾಜೀನಾಮೆ Read More »

ಪಂಚರಾಜ್ಯ ಚುನಾವಣೆ 2026| ಮೂರು ರಾಜ್ಯಗಳ ಸಿಎಂಗಳಿಗೆ ಭಾರೀ ಸೋಲು

ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆ 2026ರಲ್ಲಿ ದಾಖಲೆಯ ಫಲಿತಾಂಶಗಳು ಹೊರಬಿದ್ದಿದ್ದು, ಪ್ರಪ್ರಥಮ ಬಾರಿಗೆ ಮೂರು ರಾಜ್ಯಗಳಲ್ಲಿ ದಶಕಗಳ ಕಾಲ ಮುಖ್ಯಮಂತ್ರಿಗಳಾಗಿ ಅಧಿಪತ್ಯ ಮೆರೆದ ರಾಜಕೀಯ ನಾಯಕರು ಇದೀಗ ಹೀನಾಯ ಸೋಲಿನ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ದಾಖಲೆಯ ಮತಗಳು ಬಿದ್ದಾಗಲೇ ಹೊಸ ಅಧಿಕಾರದ ಮುನ್ಸೂಚನೆ ಇದು ಎಂಬುದು ಬಹುತೇಕರಿಗೆ ತಿಳಿಯಿತು. ಆದರೂ ಸಹ ಅಧಿಕೃತ ಫಲಿತಾಂಶ ಏನು ಹೇಳುತ್ತೆ ಎಂಬುದನ್ನು ಕಾದು ನೋಡಲು ತುದಿಗಾಲಿನಲ್ಲಿದ್ದರು. ಅಂತೆಯೇ, ಈಗ ಹೊರಬಿದ್ದಿರುವ ಪಂಚರಾಜ್ಯ ಚುನಾವಣೆಯಲ್ಲಿ ಹತ್ತತ್ತು

ಪಂಚರಾಜ್ಯ ಚುನಾವಣೆ 2026| ಮೂರು ರಾಜ್ಯಗಳ ಸಿಎಂಗಳಿಗೆ ಭಾರೀ ಸೋಲು Read More »

AAP ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ ಸಂಸದ ರಾಘವ್ ಚಡ್ಡಾ

ಸಮಗ್ರ ನ್ಯೂಸ್: ಆಪ್‌ ಪಕ್ಷದ ಇತರ 6 ಸಂಸದರೊಂದಿಗೆ AAP ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ರಾಘವ್ ಚಡ್ಡಾ ಘೋಷಿಸಿದ್ದಾರೆ. ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಘವ್ ಚಡ್ಡಾ, “ನಾನು ನನ್ನ ರಕ್ತ ಮತ್ತು ಬೆವರಿನಿಂದ ಪೋಷಿಸಿದ, ನನ್ನ ಯೌವ್ವನದ 15 ವರ್ಷಗಳನ್ನು ಅರ್ಪಿಸಿದ ಆಪ್ ತನ್ನ ತನ್ನ ಮೂಲ ತತ್ವಗಳು, ಮೌಲ್ಯಗಳು ಮತ್ತು ನೈತಿಕತೆಯಿಂದ ದೂರವಾಗಿದೆ”, ಎಂದು ಹೇಳಿದ್ದಾರೆ. “ಈಗ ಈ ಪಕ್ಷವು ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ

AAP ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ ಸಂಸದ ರಾಘವ್ ಚಡ್ಡಾ Read More »

ಗಲಾಟೆ, ಗೊಂದಲದ ನಡುವೆಯೇ ಸಂಸತ್ತಿನಲ್ಲಿ ಪ್ರಮುಖ 3 ಮಸೂದೆಗಳ ಮಂಡನೆ

ಸಮಗ್ರ ನ್ಯೂಸ್: ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸಬಹುದಾದ ಮಹತ್ವದ ಬೆಳವಣಿಗೆಯಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಗಡಿ ನಿರ್ಣಯ ಮಸೂದೆ ಮಂಡನೆಯಾಗಿದೆ. ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಉದ್ದೇಶದಜೊತೆಗೆ, ಲೋಕಸಭೆಯ ಪ್ರಸ್ತುತ 543 ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರ ಮುಂದಿಟ್ಟಿದೆ. ಇದೇ ಮಾದರಿಯಲ್ಲಿ ರಾಜ್ಯ ವಿಧಾನಸಭೆಗಳ ಸದಸ್ಯರ ಸಂಖ್ಯೆಯನ್ನೂ ವಿಸ್ತರಿಸುವ ಯೋಜನೆಗೆ ಸರ್ಕಾರ ಕೈಹಾಕಿದೆ. ಇವುಗಳ ಜೊತೆಗೆ 2026ರ ಗಡಿ ನಿರ್ಣಯ (ಡಿಲಿಮಿಟೇಶನ್) ಮಸೂದೆ, 2002ರ ಹಳೆಯ ಡಿಲಿಮಿಟೇಶನ್ ಕಾಯ್ದೆಯನ್ನು ರದ್ದುಗೊಳಿಸಿ ಅದರ ಬದಲಿಗೆ

ಗಲಾಟೆ, ಗೊಂದಲದ ನಡುವೆಯೇ ಸಂಸತ್ತಿನಲ್ಲಿ ಪ್ರಮುಖ 3 ಮಸೂದೆಗಳ ಮಂಡನೆ Read More »

ಪುತ್ತೂರು ಶಾಸಕ ಅಶೋಕ್ ರೈಯವರ ಒಂದೊಂದು ಸುಳ್ಳನ್ನೂ ಬಿಚ್ಚಿಡುತ್ತೇನೆ – ಛಲವಾದಿ ನಾರಾಯಣಸ್ವಾಮಿ| ನಾಯಿ ಬೊಗಳಲಿ, ನಾವು ಅದಕ್ಕೆ ಕಲ್ಲೆಸೆಯುವುದಿಲ್ಲ – ಅಶೋಕ್ ರೈ

ಸಮಗ್ರ ನ್ಯೂಸ್: ಅನುದಾನದ ವಿಚಾರದಲ್ಲಿ ಕಾಂಗ್ರೆಸ್ಸಿಗರು ಸುಳ್ಳಿನ ಮೇಲೆ ಹೇಳುತ್ತಾ ತಿರುಗಾಡುತ್ತಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ಒಂದೊಂದು ಸುಳ್ಳಿನಿಂದ ಅವರ ಬಟ್ಟೆ ಬಿಚ್ಚುತ್ತೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಉಪ್ಪಿನಂಗಡಿಯಲ್ಲಿ ಬಿಜೆಪಿ ವತಿಯಿಂದ ನಡೆದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬಾಯಿ ಬಿಟ್ಟರೆ ಬರೇ ಸುಳ್ಳುನ್ನೇ ಹೇಳೋ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತಾಕತ್ ಅಂತ ಇದ್ರೆ ನಮ್ಮ ವೇದಿಕೆಗೆ ಬಂದು ಯಾವೆಲ್ಲ ಅನುದಾನ

ಪುತ್ತೂರು ಶಾಸಕ ಅಶೋಕ್ ರೈಯವರ ಒಂದೊಂದು ಸುಳ್ಳನ್ನೂ ಬಿಚ್ಚಿಡುತ್ತೇನೆ – ಛಲವಾದಿ ನಾರಾಯಣಸ್ವಾಮಿ| ನಾಯಿ ಬೊಗಳಲಿ, ನಾವು ಅದಕ್ಕೆ ಕಲ್ಲೆಸೆಯುವುದಿಲ್ಲ – ಅಶೋಕ್ ರೈ Read More »

ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್ ಸಂಚು| ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ

ಸಮಗ್ರ ನ್ಯೂಸ್: ಸಂಸತ್ತಿನ ಬಜೆಟ್ ಅಧಿವೇಶನದ ಏಳನೇ ದಿನದಂದು ಅಭೂತಪೂರ್ವ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ವಿರೋಧ ಪಕ್ಷಗಳು ಸಂಚು ರೂಪಿಸಿದ್ದವು ಎಂದು ಲೋಕಸಭಾ ಸಚಿವಾಲಯ (Lok Sabha Secretariat) ಸ್ಫೋಟಕ ಹೇಳಿಕೆ ನೀಡಿದೆ. ವಿರೋಧ ಪಕ್ಷದ ಮಹಿಳಾ ಸಂಸದರು ಒಟ್ಟಾಗಿ ಪ್ರಧಾನಿ ಮೋದಿ ಅವರ ಕುರ್ಚಿಯನ್ನು ಮುತ್ತಿಗೆ ಹಾಕಿ ದಾಳಿ ಮಾಡಲು ಯೋಜಿಸಿದ್ದರು ಎಂದು ಸಚಿವಾಲಯ ತಿಳಿಸಿದೆ. ಈ ಪಿತೂರಿಯಲ್ಲಿ ಮಹಿಳಾ ಸದಸ್ಯರನ್ನು ‘ಗುರಾಣಿ’ಯಾಗಿ ಬಳಸಿಕೊಳ್ಳಲಾಗಿತ್ತು

ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್ ಸಂಚು| ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ Read More »

ಖೇಮ್ ಚಂದ್ ಮಣಿಪುರದ ನೂತನ ಸಿಎಂ

ಸಮಗ್ರ ನ್ಯೂಸ್: ಬಿಜೆಪಿ ನಾಯಕ ವೈ.ಖೇಮಚಂದ್ ಸಿಂಗ್ (62) ಅವರು ಮಣಿಪುರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಅಜಯ್‌ ಕುಮಾರ್‌ ಭಲ್ಲಾ, ಸಿಂಗ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ಕುಕಿ ಸಮುದಾಯದ ಮಹಿಳಾ ನಾಯಕಿ, ಬಿಜೆಪಿ ಶಾಸಕಿ ನೆಮ್ಚಾ ಕಿಪ್ಗೆನ್ ಹಾಗೂ ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕರಾದ ಎಲ್‌. ದಿಖೂ ಅವರೂ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಯ ಗೋವಿಂದಾಸ್‌ ಕೋಂಥೌಜಾಮ್ ಹಾಗೂ ಎನ್‌ಪಿಪಿಯ ಲೋಕೆನ್ ಸಿಂಗ್‌ ಅವರೂ ಸಚಿವರಾಗಿ ಪದಗ್ರಹಣಗೊಂಡಿದ್ದಾರೆ.

ಖೇಮ್ ಚಂದ್ ಮಣಿಪುರದ ನೂತನ ಸಿಎಂ Read More »

ಪ್ರತಿಪಕ್ಷದ ಸದಸ್ಯರಿಂದ ಭಾಷಣಕ್ಕೆ ಅಡ್ಡಿ| ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಶಾಸನ ಶಿವಲಿಂಗೇಗೌಡ ಕಿಡಿ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಗಂಭೀರ ರಾಜಕೀಯ ಚರ್ಚೆ ತೀವ್ರ ಗದ್ದಲ, ಆರೋಪ-ಪ್ರತ್ಯಾರೋಪ ಹಾಗೂ ಅಸಭ್ಯ ಭಾಷೆಯ ಬಳಕೆಯಿಂದ ಸಂಪೂರ್ಣ ನಿಯಂತ್ರಣ ತಪ್ಪಿದಂತಾಯಿತು. ನೂರು ಪ್ರತಿಶತ ಹಣ ಲೂಟಿ ನಡೆದಿದೆ ಎಂದು ಆರೋಪಿಸಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ ಬೆನ್ನಲ್ಲೇ, ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತು. “ನೂರಕ್ಕೆ ನೂರರಷ್ಟು ಹಣ ಹೊಡೆದಿರೋದು ಸತ್ಯ. ಆ ಮಂತ್ರಿ ಮೊದಲು ರಾಜೀನಾಮೆ ನೀಡಿ

ಪ್ರತಿಪಕ್ಷದ ಸದಸ್ಯರಿಂದ ಭಾಷಣಕ್ಕೆ ಅಡ್ಡಿ| ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಶಾಸನ ಶಿವಲಿಂಗೇಗೌಡ ಕಿಡಿ Read More »