ಪೆಟ್ರೋಲ್‌, ಡೀಸೆಲ್‌ ಬೆಲೆ ಭಾರತದಲ್ಲೇ ಅತ್ಯಂತ ಕಡಿಮೆ ಏರಿಕೆ

ಸಮಗ್ರ ನ್ಯೂಸ್ : 10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದ್ದರೂ (Fuel Price) ಜಾಗತಿಕ ಇಂಧನ ಬಿಕ್ಕಟ್ಟಿನ ಸಂಪೂರ್ಣ ಪರಿಣಾಮದಿಂದ ಭಾರತ ತನ್ನ ಗ್ರಾಹಕರನ್ನ ರಕ್ಷಣೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

. Ad Widget . Ad Widget

ಕಚ್ಚಾ ತೈಲದ ವೆಚ್ಚಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾದ ಅಡಚಣೆಗಳ ಹೊರತಾಗಿಯೂ ಚಿಲ್ಲರೆ ಇಂಧನ ಬೆಲೆ ಏರಿಕೆ ಮಾಡದೇ 76 ದಿನಗಳ ಕಾಲ ಒತ್ತಡ ತಡೆದುಕೊಂಡಿದೆ ಎಂದು ಹೇಳಿದೆ.

. Ad Widget . . Ad Widget . Ad Widget

ಸರ್ಕಾರದ (Government) ಅಂಕಿ-ಅಂಶಗಳ ಪ್ರಕಾರ, ಮೇ 15, 19 ಮತ್ತು 23 ರಂದು ಮೂರು ಬಾರಿ ಹಂತ-ಹಂತವಾಗಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಮೂರು ಹಂತಗಳಲ್ಲಿ ಒಟ್ಟು 4.74 ರೂ. ನಿಂದ 4.82 ರೂ. ವರೆಗೆ ಬೆಲೆ ಏರಿಕೆಯಾಗಿದೆ. ಆದ್ರೆ ಹಲವಾರು ದೇಶಗಳಿಗೆ ಹೋಲಿಸಿದ್ರೆ, ಬೆಲೆ ಏರಿಕೆ ಭಾರತದಲ್ಲೇ (India) ಅತ್ಯಂತ ಕಡಿಮೆ ಎಂದು ಸಮರ್ಥಿಸಿಕೊಂಡಿದೆ.

ಭಾರತದಲ್ಲೇ ಅತ್ಯಂತ ಕಡಿಮೆ ದರ ಏರಿಕೆ 

ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ (Diesel) ಬೆಲೆ 5% ರಷ್ಟು ಮಾತ್ರ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನದಲ್ಲಿ 54.9%, ಅಮೆರಿಕದಲ್ಲಿ 44.5% ಹಾಗೂ ಯುಕೆ ನಲ್ಲಿ 19.2% ಇಂಧನ ಬೆಲೆಗಳು ಏರಿಕೆಯಾಗಿದೆ. ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಆಗಿರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳ (OMC) ಮೇಲೆ ಹೊರೆ ಹೆಚ್ಚಾಗಿದೆ. ಭಾರತೀಯ ತೈಲ ಕಂಪನಿಗಳು ಪ್ರತಿದಿನಕ್ಕೆ ಸುಮಾರು 1,000 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿವೆ. ಆದ್ರೆ ಇಂಧನ ದರ ಪರಿಷ್ಕರಣೆಯಿಂದ ಆ ನಷ್ಟ ದಿನಕ್ಕೆ 750 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದು ಕೇಂದ್ರ ತಿಳಿಸಿದೆ.

Leave a Comment

Your email address will not be published. Required fields are marked *