ಸಮಗ್ರ ನ್ಯೂಸ್: ಹಕ್ಕುಪತ್ರ ವಿಚಾರದಲ್ಲಿ ಬಂಟ್ವಾಳ ತಹಶೀಲ್ದಾರ್ ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ತನ್ನ ಬಗ್ಗೆ ವೈಯುಕ್ತಿಕ ಟೀಕೆ ನಡೆಸಲಾಗಿದ್ದು, ನನಗೆ ಅದಕ್ಕಿಂತಲೂ ಕೆಟ್ಟ ಪದಗಳಲ್ಲಿ ಟೀಕೆ ಮಾಡಲು ತಿಳಿದಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ಎಚ್ಚರಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಐದು ಕುಟುಂಬಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತ ಕುಟುಂಬಗಳು ಹಾಗು ಬಿಜೆಪಿ ಪಕ್ಷ ಪುತ್ತೂರು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯಲ್ಲಿ ಓರ್ವ ಬಿಜೆಪಿ ಮುಖಂಡ ತನ್ನ ವಿರುದ್ಧ ವೈಯುಕ್ತಿಕ ಟೀಕೆ ಮಾಡಿದ್ದಾನೆ. ಶಾಸಕರು ಹಕ್ಕುಪತ್ರ ಕೊಡೋದು ಅವರ ಅಪ್ಪನದ್ದಲ್ಲ ಎಂದಿದ್ದಾನೆ. ರಾಜಕೀಯದಲ್ಲಿ ವೈಯುಕ್ತಿಕವಾಗಿ ಮಾತನಾಡೋದು ಸರಿಯಾದ ಕ್ರಮವಲ್ಲ.
ಈ ವಿಚಾರದಲ್ಲಿ ನನ್ನ ಅಪ್ಪನನ್ನು ಎಳೆದು ತರುವ ಅಗತ್ಯವಿರಲಿಲ್ಲ. ಒಳ್ಳೆಯ ಅಪ್ಪ-ಅಮ್ಮನಿಗೆ ಹುಟ್ಟಿದವ ಈ ರೀತಿಯ ಭಾಷೆಗಳನ್ನು ಉಪಯೋಗಿಸುವುದಿಲ್ಲ. ಟೀಕೆ ಮಾಡಲು ನನಗೂ ಗೊತ್ತಿದೆ. ನಾನು ಜನಪ್ರತಿನಿಧಿಯಾಗಿ ಆ ರೀತಿ ಟೀಕೆ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ ಸುಮ್ಮನಿದ್ದೇನೆ.
ನನ್ನನ್ನು ವೈಯುಕ್ತಿಕವಾಗಿ ಟೀಕೆ ಮಾಡುವವರು ನನ್ನ ಮುಂದೆ ನಿಂತು ಟೀಕಿಸಲು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ಜಿಲ್ಲೆಯ ಸಂಸದರು ಅಭಿವೃದ್ಧಿ ಕೆಲಸ ಮಾಡಿತ್ತಿದ್ದಾರೆ. ಅದ್ದರಿಂದ ಅವರ ವಿರುದ್ಧ ಹೆಚ್ಚು ಮಾತನಾಡೋದಿಲ್ಲ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಬೇಗವಾಗಿ ಆರಂಭಿಸಿ ಮುಗಿಸುವ ಕೆಲಸವನ್ನು ಮಾಡೋಣ.ಅದು ಬಿಟ್ಟು ನನ್ನ ವಿಚಾರಕ್ಕೆ ಕೈ ಹಾಕಿದಲ್ಲಿ ನಿಮ್ಮಲ್ಲಿ ಕೇಳಲು ನಮಗೆ ನೂರಾರು ಪ್ರಶ್ನೆಗಳಿವೆ.
ಎಂಎಲ್ಸಿ ಕಿಶೋರ್ ಕುಮಾರ್ ಬೊಟ್ಯಾಡಿ ವಿಚಾರವನ್ನು ತಿಳಿಯದೆ ಮಾತನಾಡುತ್ತಾರೆ. ಕೇಂದ್ರದ ಪ್ರಸಾದಂ ಯೋಜನೆಯಿಂದ ರಾಜ್ಯದ ಒಂದೇ ಒಂದು ಕ್ಷೇತ್ರಕ್ಕೆ ಪ್ರಯೋಜನವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ತಮ್ಮ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ಹಕ್ಕುಪತ್ರ ವಂಚಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ. ಪುತ್ತೂರಿನಲ್ಲಿ ಮಾದ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಹಕ್ಕುಪತ್ರಕ್ಕೆ ಈ ಕುಟುಂಬಗಳು 2020 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಕಾನೂನು ಪ್ರಕಾರ ವಾಸವಿದ್ದ ಸ್ಥಳದಲ್ಲಿ 15 ವರ್ಷ ವಾಸವಿದ್ದರೆ ಮಾತ್ರ ಅವರಿಗೆ ಹಕ್ಕುಪತ್ರ ಬಿತರಿಸಲು ಅವಕಾಶವಿದೆ. ಆ ಕುಟುಂಬಗಳು ಆ ಸ್ಥಳದಲ್ಲಿ 15 ವರ್ಷ ಇದ್ದರು ಅನ್ನೋದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದ ಶಾಸಕರು ಆ ಕಾರಣಕ್ಕಾಗಿ ಆ ಐದು ಕುಟುಂಬಗಳ ಹಕ್ಕುಪತ್ರದ ಅರ್ಜಿಯನ್ನು ಪರಿಶೀಲಿಸಲಾಗುವುದು. ಬಿಜೆಪಿಯ ಪ್ರತಿಭಟನೆಯಿಂದಾಗಿ ಆ ಐದು ಬಡ ಕುಟುಂಬಗಳಿಗೆ ಹಕ್ಕುಪತ್ರ ಸಿಗದಂತಹ ಸ್ಥಿತಿ ಎದುರಾಯಿತು ಎಂದು ಅವರು ಸ್ಪಷ್ಟಪಡಿಸಿದರು. ಅಲ್ಲದೆ ಆ ಜಾಗದ ವಿಚಾರದಲ್ಲಿ ಈಗ ಮೂರು ಜನರು ಆಕ್ಷೇಪವನ್ನೂ ಸಲ್ಲಿಸಿದ್ದು, ಜಾಗದ ವಿಚಾರವು ತಹಶೀಲ್ದಾರ್, ಎಸಿ,ಡಿಸಿ ಮತ್ತು ನ್ಯಾಯಾಲಯದ ಹಂತಕ್ಕೂ ತಲುಪಿದೆ ಎಂದರು.






