ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡ್ಬೇಕು| ಸ್ವಪಕ್ಷೀಯ ಸಚಿವರ ವಿರುದ್ಧವೇ ಯತ್ನಾಳ್ ವ್ಯಂಗ್ಯ
ವಿಜಯಪುರ : ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆ ಗೃಹ ಸಚಿವರು ತೋರುತ್ತಿರುವ ಸಾಫ್ಟ್ ಕಾರ್ನರ್ ನೋಡಿದರೆ ರಾಜ್ಯಕ್ಕೆ ಗೃಹಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ಹೊರಡಿಸುವುದು ಉತ್ತಮ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದು, ಸ್ವಪಕ್ಷಿಯ ಸಚಿವರ ಮೇಲೆಯೇ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಒಂದಲ್ಲ ಒಂದು ಗಲಭೆಗಳು ನಡೆಯುತ್ತಲೇ ಇದೆ. ಎಲ್ಲೂ ಗಲಾಟೆ ಆಗ್ತಿಲ್ಲ ರಾಜ್ಯದಲ್ಲಿ ಮಾತ್ರ ಗಲಾಟೆ ಆಗ್ತಿದೆ. ಗೃಹ ಇಲಾಖೆ ಎಲ್ಲೆಲ್ಲಿ ವೀಕ್ ಇದೆಯೋ ಅಲ್ಲಲ್ಲಿ ಗಲಾಟೆಗಳು ನಡೆಯುತ್ತೆ. ನಿನ್ನೆ ಹೊಸಪೇಟೆಯಲ್ಲಿ ನಡೆದ ಬಿಜೆಪಿ […]









