ಶಿಕ್ಷಣ ಸೊರಗದಿರಲಿ, ಶಿಕ್ಷಕ ಬಲಿಷ್ಠನಾಗಲಿ| ಶಿಕ್ಷಕರ ದಿನಾಚರಣೆಯ ಶುಭಾಶಯಗಳು – ಡಾ| ಮುರಲೀ ಮೋಹನ್ ಚುಂತಾರು
ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೇ ದೈವ| ಕಲ್ಲಲ್ಲಿ ಕಲೆಯ ನಿಲ್ಲಿಸಿದ ಗುರುವಿನ ಸೊಲ್ಲಲ್ಲೇ ದೈವ ಸರ್ವಜ್ಞ || ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿಗಳು ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆತಂದು ಹೊಗಳಿ ಹೊನ್ನಶೂಲಕ್ಕೆ ಏರಿಸಿ ಸನ್ಮಾನ ಮಾಡುವುದು ಸಂಪ್ರದಾಯವಾಗಿ ಬಿಟ್ಟಿದೆ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ ಹಾಕಿ ಪಾಠ ಮಾಡುವಂತೆ ಮಾಡುವುದು. ಶಿಕ್ಷಕರಿಗೆ ಶಾಲೆಯಲ್ಲಿ ಪಾಠಮಾಡುವುದೊಂದು ಬಿಟ್ಟು ಉಳಿದೆಲ್ಲಾ ಜವಾಬ್ದಾರಿ ಹಂಚಿ ಕೈ ತೊಳೆದುಕೊಳ್ಳುವುದು. […]










