ರಾಜ್ಯ

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರು ಒಂದಿಷ್ಟು ಸಮಾನಾಸಕ್ತ ತಂಡವನ್ನು ಕಟ್ಟಿಕೊಂಡು ಆರಂಭಿಸಿದ ಪ್ರಿಪೆಡ್‌ ಕಲಿಕಾ ಆಪ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ನರ್ಸಿಂಗ್‌, ಪ್ಯಾರಾಮೆಡಿಕಲ್‌ ಮತ್ತು ಅಲೈಡ್‌ ಹೆಲ್ತ್ ಕೇರ್‌ ವಿದ್ಯಾರ್ಥಿಗಳಿಗೆ, ಇಂಗ್ಲಿಷ್‌ನಲ್ಲಿ ಕಲಿಯುವುದು ಕಷ್ಟ ಎನ್ನುವವರಿಗೆ ಈ ವೈದ್ಯರ ತಂಡವು ಸರಳವಾಗಿ ಆಪ್‌ ಮೂಲಕ ಬೋಧಿಸುತ್ತಿದೆ. ಶೈಕ್ಷಣಿಕ ಹಬ್ ಆದ ಬಾಗಲಕೋಟೆಯ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ. […]

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? Read More »

ಮಡಿಕೇರಿ: ಬೀಟೆ ಮರ ಕಳವು | ಆರೋಪಿಗಳ ಬಂಧನ

ಮಡಿಕೇರಿ: ತೋಟದಲ್ಲಿ ಬೆಳೆದು ನಿಂತಿದ್ದ ಬೀಟೆ ಮರ ಕಡಿದು ಸಾಗಾಟ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಹಾಗೂ ಡಿಸಿಐಬಿ ಘಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಲ್ನೂರು-ತ್ಯಾಗತ್ತೂರಿನ ಇಬ್ರಾಹಿಂ(27), ಎಂ.ಕೆ.ಉಮ್ಮರ್(33), ವಾಸಿಂ ಅಕ್ರಂ(25) ಬಂಧಿತ ಆರೋಪಿಗಳು. ಚೇರಳ ಶ್ರೀಮಂಗಲ ಗ್ರಾಮದ ಬಿ.ಎಂ.ಬೋಪಯ್ಯ ಅವರ ತೋಟದಲ್ಲಿ ಕಳೆದ ವರ್ಷ 80 ಅಡಿ ಉದ್ದದ 5 ಅಡಿ ದಪ್ಪದ ಬೀಟೆ ಮರವನ್ನು ಕಳವು ಮಾಡಿದ್ದರು ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ಕೈಗೊಂಡ ಪೊಲೀಸರು

ಮಡಿಕೇರಿ: ಬೀಟೆ ಮರ ಕಳವು | ಆರೋಪಿಗಳ ಬಂಧನ Read More »

ಕರ್ನಾಟಕದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ತಾವರ್ ಚಂದ್ ಗೆಹ್ಲೋಟ್

ಬೆಂಗಳೂರು: ರಾಜ್ಯದ 19ನೇ ರಾಜ್ಯಪಾಲರಾಗಿ ಇಂದು ತಾವರ್ ಚಂದ್ ಗೆಹ್ಲೋಟ್ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನವನ್ನು ಹೈಕೋರ್ಟ್ ಮುಖ್ಯ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಬೋಧಿಸಿದ್ದಾರೆ. ಆ ಬಳಿಕ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದ್ದಾರೆ. ನಾನು ಶ್ರದ್ಧಾಪೂರ್ವಕವಾಗಿ ಕರ್ನಾಟಕ ರಾಜ್ಯಪಾಲ ಹುದ್ದೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆಂದು ಭರವಸೆ ಕೊಡುತ್ತೇನೆ. ವಿಧಿಬದ್ಧ ನಿಯಮಗಳ ಪಾಲನೆ ಮೂಲಕ

ಕರ್ನಾಟಕದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ತಾವರ್ ಚಂದ್ ಗೆಹ್ಲೋಟ್ Read More »

ಪೆಟ್ರೋಲಿಯಂ ಬೆಲೆ ಜಾಸ್ತಿ ಆದ್ರೆ‌ ನಾನೇನ್ ಮಾಡ್ಲಿ? ಸೈಕಲ್‌ನಲ್ಲಿ ಓಡಾಡಿ – ಸಂಸದ ಸಿದ್ದೇಶ್ವರ್ ಉಡಾಫೆ ಮಾತು

ದಾವಣಗೆರೆ; ದಿನೇದಿನೇ ಪೆಟ್ರೋಲಿಯಂ ‌ಉತ್ಪನ್ನಗಳ ಬೆಲೆ‌ ಜಾಸ್ತಿ ಆಗ್ತಿದೆ.‌ ಇದರ ಬಗ್ಗೆ‌ ನೀವ್ಯಾಕೆ ಪ್ರಶ್ನೆ ‌ಮಾಡ್ಬಾರ್ದು, ಅಂತ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರರನ್ನು ಕೇಳಿದ್ರೆ ಅವ್ರು ಹೇಳೋ ಉತ್ತರ ಕೇಳಿದ್ರೆ ಇವ್ರೇನಾ ನಮ್ಮ ಸಂಸದರು ಅನ್ನೋ ಪ್ರಶ್ನೆ ಉಂಟಾಗುತ್ತೆ. ಹೌದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ದಾವಣಗೆರೆ ಬಿಜೆಪಿ ಸಂಸದ ಜಿ.ಎಮ್. ಸಿದ್ದೇಶ್ವರ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಜನರು ಸೈಕಲ್ ಏರುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ

ಪೆಟ್ರೋಲಿಯಂ ಬೆಲೆ ಜಾಸ್ತಿ ಆದ್ರೆ‌ ನಾನೇನ್ ಮಾಡ್ಲಿ? ಸೈಕಲ್‌ನಲ್ಲಿ ಓಡಾಡಿ – ಸಂಸದ ಸಿದ್ದೇಶ್ವರ್ ಉಡಾಫೆ ಮಾತು Read More »

ಕಾಡಾನೆ ದಾಳಿಗೆ ಮಹಿಳೆ ಬಲಿ

ಕೋಲಾರ: ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗುಲ್ಲಹಳ್ಳಿ ಗ್ರಾಮದ ಕಾಮಸಮುದ್ರ ಬಳಿ ನಡೆದಿದೆ. ಆನೆಯ ಏಕಾಏಕಿ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಸಿದ್ದಮ್ಮ (50) ಸಾವಿಗೀಡಾದ ದುರ್ದೈವಿ. ಇವರು ಬೆಳಗ್ಗಿನ ಜಾವ ಮೊಮ್ಮಗನನ್ನು ನೋಡಲೆಂದು ಗುಲ್ಲಹಳ್ಳಿ ಗ್ರಾಮದಿಂದ ಗೊಡಗಮಂದೆ ಗ್ರಾಮಕ್ಕೆ ತೆರಳುತ್ತಿದ್ದರು. ಆದರೆ, ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಕಾಡಾನೆ ಎದುರಾಗಿದೆ. ದಿಢೀರ್ ಎಂದು ಆನೆ ದಾಳಿ ನಡೆಸಿದ ಪರಿಣಾಮ ಸಿದ್ದಮ್ಮರಿಗೆ ಅಲ್ಲಿಂದ ಓಡಿಹೋಗಲು ಅವಕಾಶವೂ ಸಿಕ್ಕಿಲ್ಲ. ಈ ಪರಿಣಾಮ ಆನೆ ದಾಳಿ ನಡೆಸಿದ್ದರಿಂದ ಸಾವನಪ್ಪಿದ್ದಾರೆ.

ಕಾಡಾನೆ ದಾಳಿಗೆ ಮಹಿಳೆ ಬಲಿ Read More »

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ

ಮಂಡ್ಯ: ತನ್ನ ಹೆಗಲ ಮೇಲೆ ಕೈ ಇಟ್ಟರು ಎಂಬ ಕಾರಣಕ್ಕೆ ಸ್ವಪಕ್ಷದ ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ ಕಾಪಾಳಮೋಕ್ಷ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಈ ನಡೆ ಭಾರೀ ವೈರಲ್ ಆಗಿದ್ದು ಇದು ಇದೀಗ ಬಿಜೆಪಿಗರಿಗೆ ಕಾಂಗ್ರೆಸ್ ನ್ನು ಟೀಕಿಸಲು ಬಂಡವಾಳ ಸಿಕ್ಕಿದಂತಾಗಿದೆ. ಡಿಕೆಶಿ, ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಿಂದಿನಿಂದ ಬಂದ ಕಾರ್ಯಕರ್ತ ಅಣ್ಣಾ ಎನ್ನುತ್ತಾ ಡಿಕೆಶಿ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ Read More »

ಪರಪ್ಪನ ಅಗ್ರಹಾರಕ್ಕೆ ಬೆಳ್ಳಂಬೆಳಗ್ಗೆ ಸಿಸಿಬಿ ದಾಳಿ | ಮಾರಕಾಸ್ತ್ರ, ಡ್ರಗ್ಸ್, ಮೊಬೈಲ್ ವಶ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ವಾಸನೆ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಗಾಂಜಾ, ಮಾರಕಾಸ್ತ್ರ, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲವನ್ನು ಸಂಪೂರ್ಣವಾಗಿ ಹೆಡೆಮುರಿಕಟ್ಟಲು ಕಳೆದೊಂದು ವರ್ಷಗಳಿಂದ ಪಣತೊಟ್ಟಿರುವ ಪೊಲೀಸರು ನಟ-ನಟಿಯರು ಸೇರಿದಂತೆ ಅನೇಕ ಡ್ರಗ್ ಪೆಡ್ಲರ್ ಗಳನ್ನು ಈಗಾಗಲೇ ಜೈಲಿಗಟ್ಟಿದ್ದಾರೆ. ಇನ್ನು ನಗರದಾದ್ಯಂತವಿರುವ ಪೊಲೀಸರು ಡ್ರಗ್ಸ್ ಜಾಲದ ಬೆನ್ನುಬಿದ್ದಿದ್ದರೆ, ಇತ್ತ ಪರಪ್ಪನ ಅಗ್ರಹಾರದಲ್ಲಿರುವ ಪೊಲೀಸರೇ ಕೈದಿಗಳಿಗೆ ಡ್ರಗ್ಸ್ ಪೂರೈಕೆ

ಪರಪ್ಪನ ಅಗ್ರಹಾರಕ್ಕೆ ಬೆಳ್ಳಂಬೆಳಗ್ಗೆ ಸಿಸಿಬಿ ದಾಳಿ | ಮಾರಕಾಸ್ತ್ರ, ಡ್ರಗ್ಸ್, ಮೊಬೈಲ್ ವಶ Read More »

ಇನ್ನು ಮುಂದೆ ಆನ್ ಲೈನ್ ನಲ್ಲೇ‌ ಪಡೆಯಬಹುದು ಋಣಭಾರ ಪ್ರಮಾಣ ಪತ್ರ

ಬೆಂಗಳೂರು : ಋಣಭಾರ ಪ್ರಮಾಣ ಪತ್ರ ವನ್ನು ಆನ್ ಲೈನ್ ನಲ್ಲೇ‌ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಆಸ್ತಿ ತೆರಿಗೆದಾರರಿಗೆ ಸರಕಾರ ಸಿಹಿಸುದ್ದಿ ನೀಡಿದೆ. ಆಸ್ತಿಗಳ ಋಣಭಾರ ಪ್ರಮಾಣ ಪತ್ರ (ಇ.ಸಿ) ಪಡೆಯಲು ಸಬ್ ರಿಜಿಸ್ಟಾರ್ ಕಚೇರಿಗೆ ಹೋಗಿ ಕ್ಯೂ ನಿಲ್ಲಬೇಕಿತ್ತು. ಆದರೆ ಮುಂದಿನ ದಿನಗಳಲ್ಲಿ ಇದಕೆಲ್ಲಾ ಅವಕಾಶ ನೀಡದೆ ತಮ್ಮ ತಮ್ಮ ಮನೆ, ಕಚೇರಿಗಳಲ್ಲೇ ಕುಳಿತು ಆನ್ ಲೈನ್ ಮೂಲಕ ಇ.ಸಿ. ಪಡೆಯಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು

ಇನ್ನು ಮುಂದೆ ಆನ್ ಲೈನ್ ನಲ್ಲೇ‌ ಪಡೆಯಬಹುದು ಋಣಭಾರ ಪ್ರಮಾಣ ಪತ್ರ Read More »

ಕೆ-ಸೆಟ್ ಪರೀಕ್ಷೆಗೆ ಮರುದಿನಾಂಕ ನಿಗದಿ – ಮೈಸೂರು ವಿವಿ ಪ್ರಕಟಣೆ

ಮೈಸೂರು: ಕೊರೋನಾ ಕಾರಣದಿಂದ ಮುಂದೂಡಲಾಗಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್)ಯ ದಿನಾಂಕವನ್ನು ಮರು ನಿಗದಿಗೊಳಿಸಲಾಗಿದೆ. ಜುಲೈ 25ರಂದು ಪರೀಕ್ಷೆಯು ನಡೆಯಲಿದೆ ಎಂದು ಪರೀಕ್ಷೆಯನ್ನು ಆಯೋಜಿಸುವ ಮೈಸೂರು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊದಲು ಏಪ್ರಿಲ್ 11ರಂದು ಕೆ- ಸೆಟ್ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ದೇಶದಲ್ಲಿ ಕರೊನಾ ಸೋಂಕು ಹೆಚ್ಚಾದ ಕಾರಣ ಎರಡನೇ ಹಂತದ ಲಾಕ್​ಡೌನ್​ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿ ವಿಶ್ವವಿದ್ಯಾಲಯವು ಆದೇಶಹೊರಡಿಸಿತ್ತು. ಈಗ ಮತ್ತೆ ದಿನಾಂಕವನ್ನು ನಿಗದಿ ಮಾಡಿ ಮೈಸೂರು ವಿವಿ

ಕೆ-ಸೆಟ್ ಪರೀಕ್ಷೆಗೆ ಮರುದಿನಾಂಕ ನಿಗದಿ – ಮೈಸೂರು ವಿವಿ ಪ್ರಕಟಣೆ Read More »

ಕೊರೊನದಿಂದ ಮೃತಪಟ್ಟ ರೈತರ ಸಾಲಮನ್ನಾಕ್ಕೆ ನಿರ್ಧಾರ – ಸಚಿವ ಸೋಮಶೇಖರ್

ಬೆಂಗಳೂರು ; ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿರುವ ರೈತರ 1 ಲಕ್ಷವರೆಗಿನ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಿದ್ದು, ಈ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟ ರೈತರ 1 ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ರಾಜ್ಯದಲ್ಲಿ ಎಷ್ಟು ರೈತರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಸಾಲಮನ್ನಾ ಮಾಡಲಾಗುವುದು ಈ ಬಗ್ಗೆ

ಕೊರೊನದಿಂದ ಮೃತಪಟ್ಟ ರೈತರ ಸಾಲಮನ್ನಾಕ್ಕೆ ನಿರ್ಧಾರ – ಸಚಿವ ಸೋಮಶೇಖರ್ Read More »