ರಾಜ್ಯ

ಯಾರದೋ ಬಂಗಾರ ಮತ್ಯಾರಿಗೋ!| ಇದು ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು

ಸಮಗ್ರ ನ್ಯೂಸ್: ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟಿನಿಂದ ಯಾರದೋ ಬಂಗಾರ ಮತ್ಯಾರಿಗೋ ಹಸ್ತಾಂತರವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಜಗದೇವಿ ಮಾಳಿ ಕುಟುಂಬಸ್ಥರು ಇವರು ಕಳೆದ ವರ್ಷ ಮಣಪ್ಪುರಂ ಗೋಲ್ಡ್ ಲೋನ್‍ನಲ್ಲಿ, 37ಗ್ರಾಂ ಬಂಗಾರವನ್ನು ಇಟ್ಟು ಸಾಲ ಪಡೆದಿದ್ದರು. ಪಡೆದ ಸಾಲಕ್ಕೆ ಪ್ರತಿ ತಿಂಗಳು ಸಾಲದ ಕಂತನ್ನು ಸಹ ಪಾವತಿ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸದ ನಿಮಿತ್ತ ಸೊಲ್ಲಾಪುರ ಹೋಗಿದ್ದ ಈ ಕುಟುಂಬ ಬಡ್ಡಿ ಹಾಗೂ ಸಾಲದ ಪಾವತಿ ಮಾಡಿರಲಿಲ್ಲ. ಈಗ ಹಳೆಯ […]

ಯಾರದೋ ಬಂಗಾರ ಮತ್ಯಾರಿಗೋ!| ಇದು ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು Read More »

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ| ಏ. 10 ರಿಂದ ಬೇಸಿಗೆ ರಜೆ

ಸಮಗ್ರ ನ್ಯೂಸ್: ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನ 1 ರಿಂದ 9ನೇ ತರಗತಿಗಳ ವಾರ್ಷಿಕ ಪರೀಕ್ಷೆ ಮಾರ್ಚ್ 24ರಿಂದ ಆರಂಭಗೊಳ್ಳಲಿದೆ. ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ ಏಪ್ರಿಲ್ 10ರಿಂದ ಆರಂಭವಾಗಲಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಶೈಕ್ಷಣಿಕ ಚಟುವಟಿಕೆಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ| ಏ. 10 ರಿಂದ ಬೇಸಿಗೆ ರಜೆ Read More »

ಅಂತಿಮ ತೀರ್ಪು ಬರುವವರೆಗೆ ನಿಗದಿತ ಸಮವಸ್ತ್ರ ಧರಿಸಿ- ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸೂಚನೆ

ಸಮಗ್ರ ನ್ಯೂಸ್: ʻಹಿಜಾಬ್ʼ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಪೀಠ, ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳು ಸೂಚಿಸುವ ಸಮವಸ್ತ್ರವನ್ನು ಧರಿಸಬೇಕು ಎಂದು ಬುಧವಾರ ಸ್ಪಷ್ಟಪಡಿಸಿದೆ. ತ್ರಿಸದಸ್ಯ ಪೀಠದ ನೇತೃತ್ವದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು, ‘ಪದವಿ ಅಥವಾ ಪಿಯು ಕಾಲೇಜ್ ಆಗಿರಲಿ, ಅಂತಿಮ ತೀರ್ಪಿನವರೆಗೆ ಸಮವಸ್ತ್ರವನ್ನು ಅನುಸರಿಸಬೇಕು ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ’ ಎಂದು ಪುನರುಚ್ಚರಿಸಿದರು. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಮಧ್ಯಂತರ

ಅಂತಿಮ ತೀರ್ಪು ಬರುವವರೆಗೆ ನಿಗದಿತ ಸಮವಸ್ತ್ರ ಧರಿಸಿ- ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸೂಚನೆ Read More »

ದ.ಕ ಜಿಲ್ಲೆಯಾದ್ಯಂತ ಫೆ. 27ರಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಫೆ. 27ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಫೆ.27ರಂದು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬೆಳಗ್ಗೆ 8 ಗಂಟೆಗೆ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಐದು ವರ್ಷದೊಳಗನ

ದ.ಕ ಜಿಲ್ಲೆಯಾದ್ಯಂತ ಫೆ. 27ರಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ Read More »

ಹರ್ಷ ಕೊಲೆಯ‌ ಹಿಂದೆ‌ ಯುವತಿಯರ ಕೈವಾಡ!? ಸಹಾಯ ಕೇಳುವ ನೆಪದಲ್ಲಿ ಇಬ್ಬರಿಂದ ವಿಡಿಯೋ ಕಾಲ್|

ಸಮಗ್ರ ನ್ಯೂಸ್ ಡೆಸ್ಕ್: ಶಿವಮೊಗ್ಗದ ಸೀಗೆಹಳ್ಳಿಯಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿಂದೆ‌ ಯುವತಿಯರ ಕೈವಾಡ ಇರುವ ವಿಚಾರ‌ ತನಿಖೆ ವೇಳೆ ಬಹಿರಂಗಗೊಂಡಿದೆ. ಇಬ್ಬರು ಯುವತಿಯರು ವಿಡಿಯೋ ಕಾಲ್ ಮೂಲಕ ಹರ್ಷನನ್ನು ಸಂಪರ್ಕಿಸಿದ್ದು, ಸಹಾಯ ಕೇಳುವ ನೆಪದಲ್ಲಿ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಂಶಗಳು ಹೊರಬಿದ್ದಿದ್ದು, ಪ್ರಮುಖ ಆರೋಪಿಗಳು ಕೊಲೆಯಲ್ಲಿ ಹೇಗೆ ಭಾಗಿಯಾಗಿದ್ದರು. ಹೇಗೆ ಪ್ಲಾನ್ ಮಾಡಿ,

ಹರ್ಷ ಕೊಲೆಯ‌ ಹಿಂದೆ‌ ಯುವತಿಯರ ಕೈವಾಡ!? ಸಹಾಯ ಕೇಳುವ ನೆಪದಲ್ಲಿ ಇಬ್ಬರಿಂದ ವಿಡಿಯೋ ಕಾಲ್| Read More »

ರಾಜ್ಯದ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆ

ಸಮಗ್ರ ನ್ಯೂಸ್: ರಾಜ್ಯದ ವಿವಿಧ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಮಕ್ಕಳನ್ನು ಇದುವರೆಗೆ ಪತ್ತೆ ಹಚ್ಚಲಾಗಿಲ್ಲ. ಹೀಗಾಗಿ ಕೆರಳಿರುವ ಹೈಕೋರ್ಟ್, ಮಕ್ಕಳ ಪತ್ತೆಗಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೆ.ಸಿ ರಾಜಣ್ಣ ಎಂಬುವರು ಸಲ್ಲಿಸಿದ್ದಂತ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದಂತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿಯವರ ವಿಭಾಗೀಯ ಪೀಠವು, 141 ಮಕ್ಕಳನ್ನು ಪತ್ತೆ ಹಚ್ಚಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ

ರಾಜ್ಯದ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆ Read More »

ದೇವಾಲಯಕ್ಕೆ ಆನ್‌ಲೈನ್ ಮೂಲಕ ಕಾಣಿಕೆ ವ್ಯವಸ್ಥೆಗೆ ಸಿಎಂ ಚಾಲನೆ| ಏನಿದು ಯೋಜನೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ.23ರಂದು ಲೋಕಾರ್ಪಣೆ ಮಾಡಲಿದ್ದಾರೆ. ಐಟಿಎಂಎಸ್ ಯೋಜನೆಯಿಂದ ಒಂದೇ ವೆಬ್‌ಸೈಟ್‌ನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿಗಳು ಜನರ ಬೆರಳ ತುದಿಯಲ್ಲೇ ಲಭ್ಯವಿರಲಿವೆ. ಅಲ್ಲದೇ ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರಲಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಸಾರ್ವಜನಿಕರಿಗೆ/ಭಕ್ತಾದಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐಟಿಎಂಎಸ್ ತಂತ್ರಾಂಶದಲ್ಲಿ ಮಾಹಿತಿಗಳನ್ನು

ದೇವಾಲಯಕ್ಕೆ ಆನ್‌ಲೈನ್ ಮೂಲಕ ಕಾಣಿಕೆ ವ್ಯವಸ್ಥೆಗೆ ಸಿಎಂ ಚಾಲನೆ| ಏನಿದು ಯೋಜನೆ? ಇಲ್ಲಿದೆ ಮಾಹಿತಿ Read More »

ಹಿಜಾಬ್ ತೆಗೆದಿಡಲು ಪ್ರತ್ಯೇಕ ಸ್ಥಳ ಕಲ್ಪಿಸಿ| ಪ.ಪೂ ಇಲಾಖೆಗೆ ಹೈಕೋರ್ಟ್ ಸೂಚನೆ

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರು, ಹಿಜಾಬ್ ತೆಗೆದು, ತರಗತಿಗೆ ಪ್ರವೇಶಿಸಲು ಅನುಕೂಲವಾಗುವಂತೆ, ಪ್ರತ್ಯೇಕ ಸ್ಥಳದಲ್ಲಿ ಹಿಜಾಬ್ ಇರಿಸಲು ವ್ಯವಸ್ಥೆ ಕಲ್ಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ. ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಹೈಕೋರ್ಟ್ ಮಧ್ಯಂತರ ತೀರ್ಪಿನನ್ವಯ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ

ಹಿಜಾಬ್ ತೆಗೆದಿಡಲು ಪ್ರತ್ಯೇಕ ಸ್ಥಳ ಕಲ್ಪಿಸಿ| ಪ.ಪೂ ಇಲಾಖೆಗೆ ಹೈಕೋರ್ಟ್ ಸೂಚನೆ Read More »

ಲ್ಯಾಪ್ ಟಾಪ್ ಖರೀದಿಸುವವರಿಗೆ ಶುಭಸುದ್ದಿ| ಅಮೆಜಾನ್‌ ಸೇಲ್‌ನಲ್ಲಿದೆ 30% ಡಿಸ್ಕೌಂಟ್ !

ಸಮಗ್ರ ಡಿಜಿಟಲ್ ಡೆಸ್ಕ್: ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಸಾಮಾನ್ಯ ದಿನಗಳಲ್ಲಿಯೂ ಸಹ ವಿಶೇಷ ರಿಯಾಯಿತಿ ನೀಡಲಿದೆ. ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಇತರೆ ಗ್ಯಾಜೆಟ್ಸ್‌ಗಳು ಕೂಡ ನಿಮಗೆ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ. ಸದ್ಯ ಇದೀಗ ಅಮೆಜಾನ್‌ ಲ್ಯಾಪ್‌ಟಾಪ್‌ಗಳ ಮೇಲೆ 30% ತನಕ ಡಿಸ್ಕೌಂಟ್‌ ನೀಡುತ್ತಿದೆ. ಹೊಸ ಲ್ಯಾಪ್‌ಟಾಪ್‌ ಖರೀದಿಸಬೇಕೆಂದು ಕೊಂಡವರಿಗೆ ಅತ್ಯುತ್ತಮ ರಿಯಾಯಿತಿಗಳನ್ನು ಕೊಡುತ್ತಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ಪಡೆದಿರುವ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಡೆಲ್‌ 15 (2021)ಡೆಲ್‌ ಕಂಪೆನಿಯ ಡೆಲ್‌ 15 (2021) ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 30%

ಲ್ಯಾಪ್ ಟಾಪ್ ಖರೀದಿಸುವವರಿಗೆ ಶುಭಸುದ್ದಿ| ಅಮೆಜಾನ್‌ ಸೇಲ್‌ನಲ್ಲಿದೆ 30% ಡಿಸ್ಕೌಂಟ್ ! Read More »

ಬಿಎಸ್ಎನ್ಎಲ್ ನಲ್ಲಿ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಡಿಪ್ಲೋಮಾ ಆದವರು Apply ಮಾಡಿ

ಸಮಗ್ರ ನ್ಯೂಸ್: ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24 ಟೆಕ್ನಿಕಲ್​​ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್​​ 9, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ.ಹುದ್ದೆಯ ಮಾಹಿತಿ:ಅಮೃತಸರ- 03ಚಂಡೀಗರ್-04ಫಿರೋಜ್​ಪುರ-03ಹೊಶಿಯಾರ್​ಪುರ್-03ಜಲಂಧರ್-04ಲೂಧಿಯಾನ-03ಪಾಟಿಯಾಲ-04ಒಟ್ಟು 24 ಹುದ್ದೆಗಳು ವಿದ್ಯಾರ್ಹತೆ:ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್

ಬಿಎಸ್ಎನ್ಎಲ್ ನಲ್ಲಿ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಡಿಪ್ಲೋಮಾ ಆದವರು Apply ಮಾಡಿ Read More »