ರಾಜ್ಯ

ಉಡುಪಿ: ಪವರ್ ಮ್ಯಾನ್ ಗಳಿಗೆ ಜೀವವಿಮೆ‌ ಮೌಲ್ಯ ಹೆಚ್ಚಳ – ಸಚಿವ ಸುನಿಲ್ ಕುಮಾರ್

ಸಮಗ್ರ ನ್ಯೂಸ್: ರಾಜ್ಯದ ಪವರ್ ಮನ್ ಗಳ ಜೀವವಿಮೆ ಪರಿಹಾರ ಮೊತ್ತವನ್ನು 25 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಪವರ್ ಮ್ಯಾನ್ ಗಳು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ಜೀವ ಪರಿಹಾರ ಮೊತ್ತವನ್ನು 50 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಗುಜರಾತ್ ಮಾದರಿಯಲ್ಲಿ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳನ್ನು ಒಳಗೊಂಡ ಹೋಲ್ಡಿಂಗ್ ಕಂಪನಿ ನಿರ್ಮಾಣ ಪ್ರಸ್ತಾವನೆ ಇದೆ. ಇಲಾಖೆಯ […]

ಉಡುಪಿ: ಪವರ್ ಮ್ಯಾನ್ ಗಳಿಗೆ ಜೀವವಿಮೆ‌ ಮೌಲ್ಯ ಹೆಚ್ಚಳ – ಸಚಿವ ಸುನಿಲ್ ಕುಮಾರ್ Read More »

ಅಡುಗೆ ಎಣ್ಣೆಗೂ ಕಾಡಿದ ಯುದ್ಧ ಭೀತಿ| ಸ್ಥಗಿತಗೊಂಡ ಆಮದು; ಏರಿದ ಬೆಲೆ

ಸಮಗ್ರ ನ್ಯೂಸ್: ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಪ್ರತಿಯಾಗಿ ದಿಂಡುಗಲ್‌ನಲ್ಲಿ ಅಡುಗೆ ಎಣ್ಣೆಯ ಬೆಲೆ ತೀವ್ರವಾಗಿ ಏರಿದೆ. ಹೀಗಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಅಪಾಯವಿದೆ. ಭಾರತಕ್ಕೆ ಸುಮಾರು 70 ಪ್ರತಿಶತ ಅಡುಗೆ ಸೂರ್ಯಕಾಂತಿ ಎಣ್ಣೆ ಉಕ್ರೇನ್‌ನಿಂದ ಮತ್ತು 20 ಪ್ರತಿಶತ ರಷ್ಯಾದಿಂದ ಆಮದಾಗುತ್ತಿದ್ದು, ಇವು ಈಗ ಸ್ಥಗಿತಗೊಂಡಿವೆ. ಇದರಿಂದ ಅಡುಗೆಗೆ ಬಳಸಬಹುದಾದ ರಿಫೈನ್ಡ್ ಎಣ್ಣೆ, ತಾಳೆ ಎಣ್ಣೆ, ಸೀಮೆಎಣ್ಣೆ ಬೆಲೆ ಗಗನಕ್ಕೇರಿದೆ. 15 ಕೆಜಿ ತೂಕದ ಸೂರ್ಯಕಾಂತಿ ಎಣ್ಣೆಯ ಟಿನ್ ಉಕ್ರೇನ್‌ನಲ್ಲಿ ಯುದ್ಧದ ಮೊದಲು 2,150 ಕ್ಕೆ

ಅಡುಗೆ ಎಣ್ಣೆಗೂ ಕಾಡಿದ ಯುದ್ಧ ಭೀತಿ| ಸ್ಥಗಿತಗೊಂಡ ಆಮದು; ಏರಿದ ಬೆಲೆ Read More »

ಮಡಿಕೇರಿ: ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ. ಅರೆಭಾಷೆ ಕಥಾ ಸ್ಪರ್ಧೆ ವಿಜೇತರು:ಪ್ರಥಮ: ಕಥೆ ಶೀರ್ಷಿಕೆ: ಕಾಲ್ ದಾರಿಲಿ ಹೆಜ್ಜೆ ಮೂಡಿಕನ- ಕುಕ್ಕುನೂರು ರೇಷ್ಮ ಮನೋಜ್ದ್ವಿತೀಯ: ಕಥೆ ಶೀರ್ಷಿಕೆ : ಬದ್ಕಿಗೆ ಅರ್ಥ ಬಾಕನ – ವಿಶ್ವನಾಥ್ ಎಡಿಕೇರಿ.ಜಿ, ತೃತೀಯ: ಕಥೆ: ಶೀರ್ಷಿಕೆ : ಸಿಟ್ಟೆನೂ ಇಲ್ಲೆ ಸೀತೆಗೆ- ಲೀಲಾ ದಾಮೋದರ, ತೃತೀಯಕಥೆ:

ಮಡಿಕೇರಿ: ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ Read More »

ರಾಯಚೂರು: ಮೃತ ಹರ್ಷ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಧನ ಸಹಾಯ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷ ಅವರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಪ್ರಸಾದ ರೂಪದಲ್ಲಿ ₹ 50 ಸಾವಿರ ನೀಡಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ‘ಸನಾತನ ಧರ್ಮ ಸಂರಕ್ಷಿಸುವ ಸಲುವಾಗಿ ಭಜರಂಗದಳದ ಕಾರ್ಯಕರ್ತ ತನ್ನ ಪ್ರಾಣ ಅರ್ಪಿಸಿದ್ದು, ಆತನ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಧ್ಯೋತಕವಾಗಿ ಭಕ್ತರ ಮೂಲಕ ನೆರವು ನೀಡಲಾಗುತ್ತಿದೆ’ ಎಂದು ಶ್ರೀಗಳು ತಿಳಿಸಿದ್ದಾರೆ.

ರಾಯಚೂರು: ಮೃತ ಹರ್ಷ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಧನ ಸಹಾಯ Read More »

ವಿವಿಧ ಬೇಡಿಕೆಗಳಿಗೆ ಒತ್ತಾಯ| ಮಾರ್ಚ್ 4ರಂದು ರಾಜ್ಯಾದ್ಯಂತ ಅನುದಾನಿತ ಶಾಲಾ-ಕಾಲೇಜುಗಳು ಬಂದ್

ಸಮಗ್ರ ನ್ಯೂಸ್: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೀಗ ರಾಜ್ಯ ಅನುದಾನಿತ ಶಾಲಾ- ಕಾಲೇಜುಗಳ ನೌಕರರ ಸಂಘ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಮಾರ್ಚ್ 4ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನ ಬಂದ್ ಮಾಡಿ, ಮೆಜೆಸ್ಟಿಕ್​​ನಿಂದ ವಿಧಾನಸೌಧದ ತನಕ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಅನಿರ್ದಿಷ್ಟ ಅಹೋರಾತ್ರಿ ಧರಣಿಗೂ ಸಿದ್ದವಾಗಿರುವುದಾಗಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಗೋಪಿನಾಥ್ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಳೆದ 2014ರಿಂದಲ್ಲೂ ಅನೇಕ ಮನವಿಯನ್ನ ಸಲ್ಲಿಸಿದ್ದರೂ, ಹೋರಾಟಗಳನ್ನ ನಡೆಸಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು

ವಿವಿಧ ಬೇಡಿಕೆಗಳಿಗೆ ಒತ್ತಾಯ| ಮಾರ್ಚ್ 4ರಂದು ರಾಜ್ಯಾದ್ಯಂತ ಅನುದಾನಿತ ಶಾಲಾ-ಕಾಲೇಜುಗಳು ಬಂದ್ Read More »

ಬೆಂಗಳೂರು: ಇಂದಿನಿಂದ ಮೇಕೆದಾಟು ಪಾದಯಾತ್ರೆ ಸೀಸನ್-2| ಮಾ.03ಕ್ಕೆ ಅಂತ್ಯ

ಸಮಗ್ರ ನ್ಯೂಸ್: ಇಂದು ಬೆಳಿಗ್ಗೆಯಿಂದ ಮೇಕೆದಾಟು ನದಿ ನೀರಿಗಾಗಿ ಕಾಂಗ್ರೆಸ್ ಪಕ್ಷದಿಂದ 2ನೇ ಹಂತದ ಪಾದಯಾತ್ರೆಯನ್ನು ರಾಮನಗರದಿಂದ ಪುನರಾರಂಭಿಸಲಾಗುತ್ತಿದೆ. ಈ ಪಾದಯಾತ್ರೆಯ ಸಮಾರೋಪ ಸಮಾರಂಭದ ಬೃಹತ್ ಸಮಾರಂಭಕ್ಕೆ, ಬಿಬಿಎಂಪಿಯಿಂದ ಅನುಮತಿ ದೊರೆತಿದೆ. ಮಾರ್ಚ್ 3ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆಯ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದಿಂದ ಬಿಬಿಎಂಪಿಗೆ ಅನುಮತಿಗಾಗಿ ಕೋರಲಾಗಿತ್ತು. ಇದೀಗ ಬಿಬಿಎಂಪಿ ಕೋವಿಡ್ ನಿಯಮಗಳನ್ನು ಪಾಲಿಸಿ, ಸಮಾವೇಶ ನಡೆಸೋದಕ್ಕೆ ಅನುಮತಿಸಿದೆ. ನ್ಯಾಷನಲ್ ಕಾಲೇಜು ಮೈದಾನಕ್ಕೆ ಡಿ.ಕೆ. ಶಿವಕುಮಾರ್

ಬೆಂಗಳೂರು: ಇಂದಿನಿಂದ ಮೇಕೆದಾಟು ಪಾದಯಾತ್ರೆ ಸೀಸನ್-2| ಮಾ.03ಕ್ಕೆ ಅಂತ್ಯ Read More »

ಹಿಜಾಬ್ ವಿವಾದ ವಿಚಾರಣೆ ಅಂತ್ಯ| ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್|

ಸಮಗ್ರ ನ್ಯೂಸ್: ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು 11ನೇ ದಿನದ ಹಿಜಾಬ್ ಅನುಮತಿ ಕೋರಿದ ಅರ್ಜಿಯ ವಿಚಾರಣೆ ನಡೆಸಲಾಯಿತು. ಹಿಜಾಬ್ ವಿವಾದ ವಾದ ಮಂಡನೆ ಮುಕ್ತಾಯಗೊಂಡಿದ್ದು, ಹೈಕೋರ್ಟ್ ತ್ರಿಸದಸ್ಯ ಪೂರ್ಣಪೀಠವು, ತನ್ನ ತೀರ್ಪನ್ನು ಕಾಯ್ದಿರಿಸಿದೆ. ಹಿಜಾಬ್ ಧರಿಸಿದ್ದಕ್ಕಾಗಿ ಸರ್ಕಾರಿ ಪಿಯು ಕಾಲೇಜಿನ ಪ್ರವೇಶವನ್ನು ನಿರಾಕರಿಸಿದ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಗಳಲ್ಲಿ ಕರ್ನಾಟಕ ಹೈಕೋರ್ಟ್ ನ ಪೂರ್ಣ ಪೀಠವು ಇಂದು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್

ಹಿಜಾಬ್ ವಿವಾದ ವಿಚಾರಣೆ ಅಂತ್ಯ| ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್| Read More »

ಮಂಗಳೂರು: ಹೆರಿಗೆ ವೇಳೆ ತಾಯಿ – ಮಗು ಸಾವು

ಸಮಗ್ರ ನ್ಯೂಸ್: ಚೊಚ್ಚಲ ಹೆರಿಗೆ ಸಂದರ್ಭ ಗರ್ಭದಲ್ಲಿದ್ದ ಮಗು ಸಹಿತ ತಾಯಿ ಮೃತಪಟ್ಟ ಘಟನೆ ಫೆ. 24 ರಂದು ನಡೆದಿದೆ. ಮಾಣಿ ಸಮೀಪದ ಕಡೆಶಿವಾಲಯ ಬುಡೋಳಿ ನಿವಾಸಿಯಾಗಿದ್ದ ವಕೀಲೆ ಗಾಯತ್ರಿ (38) ಎಂಬವರುಮೃತರು. ಅವರು ಪುತ್ತೂರಿನಲ್ಲಿ ಸುಮಾರು 8 ವರ್ಷ ವಕೀಲ ವೃತ್ತಿ ಮಾಡಿದ್ದ ಗಾಯತ್ರಿಗೆ 2010ರಲ್ಲಿ ಪೆರ್ಲದ ಆನಡ್ಕ ಕಾಡಮನೆ ಸುಧಾಕರ್ ಅವರೊಂದಿಗೆ ವಿವಾಹವಾಗಿತ್ತು. 2017ರಿಂದ ನಗರದ ಲೇಡಿಹಿಲ್ ಸಮೀಪ ವಾಸ್ತವ್ಯ ಹೊಂದಿದ್ದರು. ಅಲ್ಲದೆ ವಕೀಲ ವೃತ್ತಿ ಪುನರಾರಂಭಿಸಿದ್ದರು. ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು

ಮಂಗಳೂರು: ಹೆರಿಗೆ ವೇಳೆ ತಾಯಿ – ಮಗು ಸಾವು Read More »

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

ಸಮಗ್ರ ನ್ಯೂಸ್: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ ಬೆನ್ನಲ್ಲೇ ‘ದೇಶಭಕ್ತರ ಕುಟುಂಬದ ಸದಸ್ಯರಿಗೆ ಎಂಎಲ್‌ಎ ಟಿಕೆಟ್‌ ನೀಡಬೇಕು’ ಎಂಬ ಹೊಸ ಅಭಿಯಾನವನ್ನು ದೇಶಭಕ್ತ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದು, ಬಿಜೆಪಿಗೆ ಮುಜುಗರ ತಂದಿದೆ. ‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ Read More »

ಸುಳ್ಯ : ಚಂದನ ಸಾಹಿತ್ಯ ವೇದಿಕೆ ವತಿಯಿಂದ ಚಂದನ ಕವಿ ಕಾವ್ಯ ಸಮ್ಮೇಳನ -2022

ಸಾಹಿತಿ,ಜ್ಯೋತಿಷಿ, ಸಂಘಟಕ, ಗಾಯಕ , ನಟ , ಚಿತ್ರ ನಿರ್ದೇಶಕರೂ ಆದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸಾಹಿತ್ಯ ಸಮಾರಂಭವು ಫೆ20 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬಹಳ ಅದ್ದೂರಿಯಿಂದ ಅರ್ಥಪೂರ್ಣವಾಗಿ ಜರುಗಿತು. ರಾಜ್ಯ ಮಟ್ಟದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಂದನ ಕವಿಗೋಷ್ಠಿ ಹಾಗೂ ಚಂದನ ಸೌರಭ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು .

ಸುಳ್ಯ : ಚಂದನ ಸಾಹಿತ್ಯ ವೇದಿಕೆ ವತಿಯಿಂದ ಚಂದನ ಕವಿ ಕಾವ್ಯ ಸಮ್ಮೇಳನ -2022 Read More »