ರಾಜ್ಯ

ಕರ್ನಾಟಕದಲ್ಲಿ ಕನ್ನಡವೇ ಮೊದಲು| ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಆದರೆ ಇದೀಗ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸುದೀಪ್ ಪರ ನಿಂತಿದ್ದಾರೆ. ಭಾಷಾವಾರು, ಪ್ರಾಂತವಾರು ಆದ ಮೇಲೆ ಎಲ್ಲವೂ ಮಾತೃಭಾಷೆ ಆಗಿದೆ. ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ನಟ ಸುದೀಪ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯ ಕುರಿತು ಕಿಚ್ಚ ಸುದೀಪ್ ಮತ್ತು […]

ಕರ್ನಾಟಕದಲ್ಲಿ ಕನ್ನಡವೇ ಮೊದಲು| ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ Read More »

ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಕೆಗೆ ಕೇಂದ್ರದ ತೀರ್ಮಾನ

ಸಮಗ್ರ ನ್ಯೂಸ್: ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಬಂಪರ್‌ ಸುದ್ದಿ ಸಿಕ್ಕಿದೆ. ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ವೇಳೆ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಬಹುದೆಂಬ ಆತಂಕಕ್ಕೊಳಗಾಗಿದ್ದ ರೈತ ಸಮುದಾಯಕ್ಕೆ ಈ ಸುದ್ದಿ ನೆಮ್ಮದಿ ತಂದಿದೆ. ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ

ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಕೆಗೆ ಕೇಂದ್ರದ ತೀರ್ಮಾನ Read More »

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ

ಸಮಗ್ರ ನ್ಯೂಸ್: ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ. ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿ ಬಹುತೇಕ ಎಲ್ಲ ವೆಚ್ಚಗಳು ಶೇ.30 ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಿಎಂ ಬಳಿ ವಿನಂತಿಸಿಕೊಂಡಿದ್ದಾರೆ. ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ Read More »

ಸರಕಾರಿ ಸ್ವಾಮ್ಯದ ಎಲ್‌ಐಸಿ ಪ್ರತಿ ಶೇರಿಗೆ ₹902-₹949 ಬೆಲೆ?

ಸಮಗ್ರ ನ್ಯೂಸ್: ಐಪಿಒದ ಮೂಲಕ ಬಂಡವಾಳ ಕ್ರೋಢೀಕರಣ ಯೋಜಿಸಿರುವ ಎಲ್‌ಐಸಿ ಶೇರು ಮಾರುಕಟ್ಟೆಗೆ ಮೇ 4ರಂದು ಲಗ್ಗೆ ಇಡಲಿದೆ‌. ವರದಿಗಳ ಪ್ರಕಾರ ಪ್ರತಿ ಶೇರಿಗೆ ₹902-₹949 ಬೆಲೆ ನಿರ್ಧರಿಸುವ ಸಾಧ್ಯತೆಯಿದೆ. ತನ್ನ ವಿಮಾದಾರ ಶೇರು ಖರೀದಿಸುವುದನ್ನು ಬೆಂಬಲಿಸುವ ಸಲುವಾಗಿ ₹60 ವಿನಾಯಿತಿ ಲಭ್ಯವಾಗಲಿದೆ.

ಸರಕಾರಿ ಸ್ವಾಮ್ಯದ ಎಲ್‌ಐಸಿ ಪ್ರತಿ ಶೇರಿಗೆ ₹902-₹949 ಬೆಲೆ? Read More »

ಸಿಎಂ ಬೊಮ್ಮಯಿ ಮೇಲೆ ದಾಳಿಗೆ ಯತ್ನಿಸಿದ ಎತ್ತು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಎತ್ತು‌‌ ದಾಳಿಗೆ ಯತ್ನಿಸಿದ್ದು, ಸಿಎಂ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಳಿಕೋಟೆ ತಾಲೂಕಿನ ಕೊಡಗನೂರ ಗ್ರಾಮಕ್ಕೆ ಭೇಟಿ ನೀಡಿದ ಸಿಎಂಗೆ ಬರಮಾಡಿ‌ ರೈತರು ಜೋಡೆತ್ತುಗಳನ್ನು ನೀಡಿದರು. ಬಳಿಕ ಎತ್ತುಗಳಿಗೆ ಪೂಜಿಸೋ ವೇಳೆಯಲ್ಲಿ ಬೆದರಿ ಕೋಪಗೊಂಡು‌ ಎತ್ತು ತಿವಿಯುವ ಹಂತಕ್ಕೆ ಬಂದಿತ್ತು. ಘಟನೆಯಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬೊಮ್ಮಾಯಿ ಪಾರಾಗಿದ್ದಾರೆ. ಅಲ್ಲಿಯೇ ಇದ್ದಂತ ಎಎಸ್ಪಿಯವರು ಎತ್ತಿನ ಕೊಂಬನ್ನು ಇಡಿದು, ಬೊಮ್ಮಾಯಿಯನ್ನು ತಿವಿತದಿಂದ ಪಾರು ಮಾಡಿದರು. ಕೆಲ ಕಾಲ ಈ ಘಟನೆಯಿಂದ ಸ್ಥಳದಲ್ಲಿ ಆತಂಕ

ಸಿಎಂ ಬೊಮ್ಮಯಿ ಮೇಲೆ ದಾಳಿಗೆ ಯತ್ನಿಸಿದ ಎತ್ತು Read More »

ಜೂನ್ ಕೊನೆವಾರದಲ್ಲಿ ಪಿಯುಸಿ ಫಲಿತಾಂಶ – ಆರ್ ರಾಮಚಂದ್ರನ್

ಸಮಗ್ರ ನ್ಯೂಸ್: ಕಳೆದ ವರ್ಷದಂತೆ ಈ ವರ್ಷ ಪಿಯು ಫಲಿತಾಂಶ ತಡವಾಗಲ್ಲ. ಜೂನ್ ಕೊನೆಯ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬರುವುದು ಪಕ್ಕಾ ಆಗಿದೆ. ಒಂದೊಂದು ವಿಷಯ ಪರೀಕ್ಷೆಗಾಗಿ ಆಗುತ್ತಿದ್ದಂತೆ ಮೌಲ್ಯಮಾಪನವು ‌ಆರಂಭವಾಗಿದೆ. ಜೂನ್ ಕೊನೆಯ ವಾರ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬರಲಿದ್ದು, ಮೇ. 20 ರಿಂದ ಜೂನ್ 15 ರೊಳಗೆ ಮೌಲ್ಯಮಾಪನ ಮುಗಿಯಲಿದೆ. ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ, ಆದಷ್ಟು ಬೇಗ ಫಲಿತಾಂಶ ನೀಡುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್ ರಾಮಚಂದ್ರನ್ ಹೇಳಿದ್ದಾರೆ.

ಜೂನ್ ಕೊನೆವಾರದಲ್ಲಿ ಪಿಯುಸಿ ಫಲಿತಾಂಶ – ಆರ್ ರಾಮಚಂದ್ರನ್ Read More »

ಮತ್ತೆ ಹೆಚ್ಚಾದ ಕೋವಿಡ್ |ಎ.27ರಿಂದ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಜಾರಿಗೆ ಚಿಂತನೆ – ಸಿಎಂ

ಸಮಗ್ರ ನ್ಯೂಸ್: ದೆಹಲಿಯಲ್ಲಿ ನಾಲ್ಕನೇ ಅಲೆ ಆರಂಭಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಏಪ್ರಿಲ್ 27ರಂದು ನಡೆಸಲಿದ್ದಾರೆ. ಈ ವೀಡಿಯೋ ಕಾನ್ಫೆರೆನ್ಸ್ ಬಳಿಕ, ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಈ ಕುರಿತು ಮಾಹಿತಿ, ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಅಲ್ಲದೇ ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫೆರೆನ್ಸ್

ಮತ್ತೆ ಹೆಚ್ಚಾದ ಕೋವಿಡ್ |ಎ.27ರಿಂದ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಜಾರಿಗೆ ಚಿಂತನೆ – ಸಿಎಂ Read More »

ಹಾವೇರಿಯಲ್ಲಿ ಜರುಗಲಿದೆ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಸಮಗ್ರ ನ್ಯೂಸ್: ಇದೇ ಸೆಪ್ಟೆಂಬರ್ ತಿಂಗಳ 23, 24 ಮತ್ತು 25ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಆಯೋಜಿಸಲಾಗುವುದು ಎಂದು ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ತಿಳಿಸಿದ್ದಾರೆ. ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರು ಒಲೆಕಾರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಮಹೇಶ್ ಜೋಶಿ,

ಹಾವೇರಿಯಲ್ಲಿ ಜರುಗಲಿದೆ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ Read More »

ಗುಡ್ ನ್ಯೂಸ್: ಎಸ್ಸಿ,ಎಸ್ಟಿ ಸಮುದಾಯಕ್ಕೆ 75 ಯುನಿಟ್ ಪ್ರೀ ವಿದ್ಯುತ್- ಸಿಎಂ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯದವರು ಪೂರಕ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಅಮ್ ಆದ್ಮಿಯ ಮುಖಂಡ ಮತ್ತು ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶದಲ್ಲಿ ಮಾತನಾಡುತ್ತಾ ತಮ್ಮ ರಾಜ್ಯದಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ಬಗ್ಗೆ ತಿಳಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಾಜ ಬೊಮ್ಮಾಯಿ ಎಸಿ ಎಸ್ಟಿ ಸಮುದಾಯಕ್ಕೆ ಉಚಿತ ವಿದ್ಯುತ್ ನೀಡುವ ಯೋಜನೆಯಿದೆ ಎಂದು ಘೋಷಿದ್ದಾರೆ. ಬಾಗಲಕೋಟೆಯ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೆ

ಗುಡ್ ನ್ಯೂಸ್: ಎಸ್ಸಿ,ಎಸ್ಟಿ ಸಮುದಾಯಕ್ಕೆ 75 ಯುನಿಟ್ ಪ್ರೀ ವಿದ್ಯುತ್- ಸಿಎಂ Read More »

ಇಂದಿನಿಂದ ಎಸ್ಎಸ್ಎಲ್ ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭ

ಸಮಗ್ರ ನ್ಯೂಸ್: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಈ ಬಾರಿಯ ಎಸ್ ಎಸ್ ಎಲ್‌ ಸಿ ಮುಖ್ಯ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜಿಲ್ಲಾಕೇಂದ್ರಗಳಲ್ಲಿ ಇಂದಿನಿಂದ ಆರಂಭಗೊಳ್ಳಲಿದೆ. ಮೇ ತಿಂಗಳ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ ಕೋವಿಡ್ ಕಾರಣದಿಂದಾಗಿ ಓಎಂಆರ್ ಆಧಾರಿತ ಉತ್ತರ ಪತ್ರಿಕೆಗಳಿದ್ದ ಕಾರಣ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನದ ವ್ಯವಸ್ಥೆ ಇರಲಿಲ್ಲ‌.ಈ ಬಾರಿ ಒಟ್ಟು 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಕಾರ್ಯಕ್ಕಾಗಿ 63,796 ಶಿಕ್ಷಕರನ್ನು ನಿಯೋಜಿಸಲಾಗಿದೆ.

ಇಂದಿನಿಂದ ಎಸ್ಎಸ್ಎಲ್ ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭ Read More »