ರಾಜ್ಯ

ಉಳ್ಳಾಲ: ಸಮುದ್ರ ಪಾಲಾದ ಮೈಸೂರಿನ ಮಹಿಳೆ

ಸಮಗ್ರ ನ್ಯೂಸ್: ಮಂಗಳೂರಿನ ಉಳ್ಳಾಲದ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೈಸೂರು ನಿವಾಸಿ ಭಾಗ್ಯಲಕ್ಷ್ಮೀ (45) ಮೃತ ದುರ್ದೈವಿ. ಭಾಗ್ಯಲಕ್ಷ್ಮೀ ದಂಪತಿ, ಅವರ ಮೂವರು ಪುತ್ರಿಯರು ಹಾಗೂ ಮೊಮ್ಮಗಳು ಮೈಸೂರಿನಿಂದ ಮಂಗಳೂರಿಗೆ ವಿಹಾರಕ್ಕೆಂದು ಬಂದಿದ್ದರು. ಪಂಪ್‌ವೆಲ್‌ ಬಳಿ ರೂಮಿನಲ್ಲಿ ತಂಗಿದ್ದ ಕುಟುಂಬ ಮೇ 28ರಂದು ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ಅಲ್ಲಿಂದ ಉಳ್ಳಾಲದ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಕುಟುಂಬದ ಪೈಕಿ ಭಾಗ್ಯಲಕ್ಷ್ಮೀ […]

ಉಳ್ಳಾಲ: ಸಮುದ್ರ ಪಾಲಾದ ಮೈಸೂರಿನ ಮಹಿಳೆ Read More »

ಬೆಳ್ತಂಗಡಿ: ಬಚ್ಚಲು ಕೋಣೆಯಲ್ಲಿ ಅಡಗಿದ್ದ ಕಾಳಿಂಗ!!

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲ್ಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಬಳಿಯ ಬನತ್ತಕೋಡಿ ಎಂಬಲ್ಲಿ ಕಂಡುಬಂದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಇಲ್ಲಿನ ಲೀಲಾವತಿಯವರ ಮನೆಯ ಬಚ್ಚಲು ಕೋಣೆಗೆ ನುಗ್ಗಿದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು‌ ಉರಗ ತಜ್ಞರಾದ ಪುತ್ತೂರಿನ ತೇಜಸ್ ಮತ್ತು ಪುನೀತ್ ರವರು ರಕ್ಷಣೆ ಮಾಡಿದ್ದು, ಕಾಡಿಗೆ ಬಿಟ್ಟ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿ: ಬಚ್ಚಲು ಕೋಣೆಯಲ್ಲಿ ಅಡಗಿದ್ದ ಕಾಳಿಂಗ!! Read More »

ದಾರಿಬಿಡಿ! ಬರ್ತಾ ಇದ್ದಾನೆ “ರಸ್ತೆಗಳ ರಾಜ”

ಸಮಗ್ರ ನ್ಯೂಸ್: ಕೆಲವು ದಶಕಗಳ ಹಿಂದೆ ದೇಶದ ಕಾರು ಮಾರು ಕಟ್ಟೆಯನ್ನು ಆಳಿ ಈಗ ತೆರೆಮರೆಗೆ ಸರಿದಿರುವ ಅಂಬಾಸಡರ್‌ ಕಾರು ಮತ್ತೆ ಹೊಸ ಅವತಾರದೊಂದಿಗೆ ಪ್ರತ್ಯಕ್ಷವಾಗಲಿದೆ. ಅಂದು ತನ್ನ ವಿಭಿನ್ನ ಗೆಟಪ್ ನಿಂದ ಎಲ್ಲರ ಮನಗೆದ್ದಿದ್ದ ಅಂಬಾಸಿಡರ್ ಮತ್ತೆ ಹೊಸ ವರಸೆಯೊಂದಿಗೆ ರಸ್ತೆಗಿಳಿಯಲಿದೆ. ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ವರ್ಷಗಳಲ್ಲಿ ಇದು ನಿಜವಾಗಲಿದೆ. ಹಿಂಡ್‌ ಮೋಟಾರ್‌ ಫೈನಾನ್ಶಿಯಲ್‌ ಕಾರ್ಪೊರೇಶನ್‌ ಆಫ್ ಇಂಡಿಯಾ (ಎಚ್‌ಎಂಎಫ್ಸಿಐ) ಮತ್ತು ಫ್ರೆಂಚ್‌ ಕಾರು ಕಂಪೆನಿ ಪಝೋಟ್‌ “ಆ್ಯಂಬಿ’ಯ ಹೊಸ ನೂತನ

ದಾರಿಬಿಡಿ! ಬರ್ತಾ ಇದ್ದಾನೆ “ರಸ್ತೆಗಳ ರಾಜ” Read More »

ಎಲ್ ನಿನೋ ಎಫೆಕ್ಟ್; ಮುಂಗಾರು ವಿಳಂಬ ಸಾಧ್ಯತೆ

ಸಮಗ್ರ ನ್ಯೂಸ್ : ಎಲ್ ನಿನೋ ಎಫೆಕ್ಟ್ ಕಾರಣ ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶ ನಾಲ್ಕು ದಿನ ವಿಳಂಬವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ ಮೊದಲ ವಾರದಲ್ಲಿ ಕೇರಳ, ಕರ್ನಾಟಕವನ್ನು ಮುಂಗಾರು ಮಾರುತಗಳು ಪ್ರವೇಶ ಮಾಡಬಹುದು ಎಂದಿದೆ. ಈ ಮೊದಲು ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಪ್ರವೇಶಿಸಬಹುದು ಎಂದು ಐಎಂಡಿ ತಿಳಿಸಿತ್ತು. ಈಗಾಗಲೇ ಅಂಡಮಾನ್ ದ್ವೀಪಗಳನ್ನು ತಲುಪಿರುವ ಮುಂಗಾರು ಮಾರುತಗಳು ಈಗ ಅರಬ್ಬಿ ಸಮುದ್ರದ ಕಡೆ ಚಲಿಸ್ತಿವೆ. ಮುಂಜಾಗ್ರತಾ ಕ್ರಮವಾಗಿ ಕೇರಳದ ಬಹುತೇಕ ಜಿಲ್ಲೆಗಳಲ್ಲಿ

ಎಲ್ ನಿನೋ ಎಫೆಕ್ಟ್; ಮುಂಗಾರು ವಿಳಂಬ ಸಾಧ್ಯತೆ Read More »

ಮಗುವಿಗೆ ಹುಷಾರಿಲ್ಲವೆಂದು ಚರ್ಚ್ ಬಳಿ ಬಿಟ್ಟು ಪರಾರಿಯಾದ ಪೋಷಕರು| ಅನಾಥವಾಯ್ತು ಹಾಲುಗಲ್ಲದ ಹಸುಳೆ

ಸಮಗ್ರ ನ್ಯೂಸ್: ಜಗತ್ತೇ ಎದುರಾದರೂ ಜನ್ಮ ಕೊಟ್ಟವರು ಮಾತ್ರ ನಮ್ಮ ಕೈ ಬಿಡಲ್ಲ. ಕಷ್ಟವೋ ಸುಖವೋ ಮಕ್ಕಳು ಚೆನ್ನಾಗಿರಲಿ ಅಂತ ತಮ್ಮ ಇಡೀ ಜೀವನ ಮುಡಿಪಾಗಿಡ್ತಾರೆ. ಆದ್ರೆ ಮಂಡ್ಯದಲ್ಲಿ ಮಗುವಿಗೆ ಖಾಯಿಲೆ ಇದೆ ಎಂಬ ಕಾರಣಕ್ಕೆ ಚರ್ಚ್‌ನಲ್ಲಿ ಮಗು ಬಿಟ್ಟು ಪೋಷಕರು ಪರಾರಿಯಾಗಿದ್ದಾರೆ. ಹೆತ್ತವರ ಪ್ರೀತಿಯಿಂದ ವಂಚಿತವಾದ ಮಗು ಈಗ ಅನಾಥವಾಗಿದೆ. ಕಲ್ಲು ಹೃದಯದ ಪೋಷಕರು ಮಾಡಿದ ತಪ್ಪಿಗೆ 8-9 ತಿಂಗಳ ಗಂಡು ಮಗು ಅನಾಥವಾಗಿದೆ. ಅನಾರೋಗ್ಯ ಪೀಡಿತ ಮಗು ಎಂಬ ಕಾರಣಕ್ಕೆ ಜನ್ಮ ನೀಡಿದ ತಂದೆ

ಮಗುವಿಗೆ ಹುಷಾರಿಲ್ಲವೆಂದು ಚರ್ಚ್ ಬಳಿ ಬಿಟ್ಟು ಪರಾರಿಯಾದ ಪೋಷಕರು| ಅನಾಥವಾಯ್ತು ಹಾಲುಗಲ್ಲದ ಹಸುಳೆ Read More »

ದ್ವೇಷ ಪ್ರಚೋದನೆ; ಕನ್ನಡ ಸುದ್ದಿವಾಹಿನಿಗಳ ವಿರುದ್ಧ 17 ದೂರು ನೀಡಿದರೂ ಪೊಲೀಸರಿಂದ ಸಿಗದ ಪ್ರತಿಕ್ರಿಯೆ- ಸಿಎಎಚ್‌ಎಸ್

ಸಮಗ್ರ ನ್ಯೂಸ್: ಹೋರಾಟಗಾರರ ಗುಂಪಾದ ಕ್ಯಾಂಪೇನ್ ಎಗೇನ್‌ಸ್ಟ್‌‌ ಹೇಟ್ ಸ್ಪೀಚ್ (ಸಿಎಎಚ್‌ಎಸ್) ದ್ವೇಷ ಪ್ರಚೋದಿತ ವರದಿಗಳನ್ನು ಖಂಡಿಸಿ ಒಂದು ವರ್ಷದ ಅವಧಿಯಲ್ಲಿ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ 17 ದೂರುಗಳನ್ನು ನೀಡಿದ್ದು, ಇದರಲ್ಲಿ ಯಾವುದನ್ನೂ ಪೊಲೀಸರು ಸ್ವೀಕರಿಸಿಲ್ಲ ಎಂದು ಗುಂಪಿನ ಸದಸ್ಯರು ಹೇಳಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ. ಬೆಂಗಳೂರಿನಲ್ಲಿ ವೈಯಕ್ತಿಕ ವೈಷಮ್ಯದ ಕಾರಣ ನಡೆದ ಅಪರಾಧ ಕೃತ್ಯದ ವರದಿಯನ್ನು ತಿರುಚಿದ ಸಂಬಂಧ ಕನ್ನಡ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ವಿರುದ್ಧ ಇತ್ತೀಚೆಗೆ ದೂರು ನೀಡಲಾಗಿದೆ.

ದ್ವೇಷ ಪ್ರಚೋದನೆ; ಕನ್ನಡ ಸುದ್ದಿವಾಹಿನಿಗಳ ವಿರುದ್ಧ 17 ದೂರು ನೀಡಿದರೂ ಪೊಲೀಸರಿಂದ ಸಿಗದ ಪ್ರತಿಕ್ರಿಯೆ- ಸಿಎಎಚ್‌ಎಸ್ Read More »

‘ಪೋಷಕರಿಗೆ ಕಿರುಕುಳ ನೀಡುವ ಮಕ್ಕಳನ್ನು ಮನೆಯಿಂದ ಹೊರಹಾಕಿ’ ಎಂದ ನ್ಯಾಯಾಲಯ

ಸಮಗ್ರ ನ್ಯೂಸ್: ಪೋಷಕರಿಗೆ ಕಿರುಕುಳ ನೀಡುವ ಮತ್ತು ನಿಂದಿಸುವ ಮಕ್ಕಳನ್ನು ಮನೆಯಿಂದ ಹೊರಹಾಕಬೇಕು ಎಂದು ಹರಿದ್ವಾರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೇಳಿದೆ. ಪೋಷಕರಿಗೆ ಕಿರುಕುಳ ನೀಡುವ ಮಕ್ಕಳು ಒಂದೇ ತಿಂಗಳಲ್ಲಿ ಮನೆ ಖಾಲಿ ಮಾಡಬೇಕು. ಒಂದು ವೇಳೆ ಆದೇಶ ಪಾಲಿಸದಿದ್ದರೆ ಪೊಲೀಸರು ಕ್ರಮ ಕೈಗೊಳ್ಳುವಂತೆ ಹರಿದ್ವಾರ ಎಸ್‌ಡಿಎಂ ನ್ಯಾಯಾಲಯ ಸೂಚಿಸಿದೆ. ಉತ್ತರಾಖಂಡ ಹರಿದ್ವಾರದ ಜ್ವಾಲಾಪುರ, ಕಂಖಾಲ್ ಮತ್ತು ರಾವ್ಲಿ ಮೆಹದುದ್ ಸೇರಿ 6 ವೃದ್ಧ ದಂಪತಿ ತಮ್ಮ ಮಕ್ಕಳೇ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಮತ್ತು ಹಲ್ಲೆ

‘ಪೋಷಕರಿಗೆ ಕಿರುಕುಳ ನೀಡುವ ಮಕ್ಕಳನ್ನು ಮನೆಯಿಂದ ಹೊರಹಾಕಿ’ ಎಂದ ನ್ಯಾಯಾಲಯ Read More »

ಮೇ.27ರಿಂದ ಮತ್ತೆ ಮುಂಗಾರಿನ ಸಿಂಚನ| ನಾಳೆ ಕೇರಳದ ಕದ ತಟ್ಟಲಿದ್ದಾನೆ ವರುಣ

ಸಮಗ್ರ ನ್ಯೂಸ್: ಮುಂಗಾರು ಮಳೆಯು ಮೇ 27ರಂದು ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಬುಧವಾರ ತಿಳಿ ಸಿದೆ. ರಾಜ್ಯದಲ್ಲಿ ಶನಿವಾರದವರೆಗೆ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಯಾಗುವ ಎಚ್ಚರಿಕೆಯನ್ನೂ ಕೊಡಲಾಗಿದೆ. ಕೇರಳ ಮತ್ತು ಲಕ್ಷದ್ವೀಪ ಕರಾವಳಿ ಭಾಗದಲ್ಲಿ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಅದು 60 ಕಿ.ಮೀ.ವರೆಗೂ ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.ಕರ್ನಾಟಕಕ್ಕೂ ಎಚ್ಚರಿಕೆ: ಕರ್ನಾಟಕ, ಲಕ್ಷದ್ವೀಪ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು

ಮೇ.27ರಿಂದ ಮತ್ತೆ ಮುಂಗಾರಿನ ಸಿಂಚನ| ನಾಳೆ ಕೇರಳದ ಕದ ತಟ್ಟಲಿದ್ದಾನೆ ವರುಣ Read More »

ರಾಯಚೂರಿನ ಈ ಊರುಗಳಿಗೆ ತೆಪ್ಪವೇ ಗತಿ! 20 ವರ್ಷಗಳ ಹೋರಾಟಕ್ಕೆ ಸಿಕ್ಕಿಲ್ಲ ಮುಕ್ತಿ

ಸಮಗ್ರ ನ್ಯೂಸ್: ತಾಲ್ಲೂಕಿನ ನಾಲ್ಕೈದು ಗ್ರಾಮಗಳು ಈಗಲೂ ಕೃಷ್ಣಾ ನದಿ ದಾಟಲು ಸೇತುವೆ ಇಲ್ಲದೆ ತೆಪ್ಪಗಳ ಮೂಲಕ ಜೀವಭಯದಲ್ಲಿ ಸಾಗುತ್ತಾರೆ. 20 ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದರೂ ಪ್ರಯೋಜನವಾಗದೆ ಇದೀಗ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ. ಶಾಲೆ ಆರಂಭವಾಯಿತು ಅಂದರೆ ಸಾಕು ಮಕ್ಕಳಿಗೆ ಹಾಗೂ ಪೋಷಕರಿಗೆ ಜೀವಭಯ ಕಾಡಲು ಆರಂಭವಾಗುತ್ತದೆ. ಮೊಸಳೆಗಳು, ಪ್ರವಾಹ, ಬಿರುಗಾಳಿ ಎಂಬ ಭಯದ ನಡುವೆ ತೆಪ್ಪಗಳ ಮೂಲಕ ಸಾಗುತ್ತಾರೆ. ಸದ್ಯ ಶಾಲಾ ಕಾಲೇಜುಗಳು ಅರಂಭವಾಗಿದ್ದು, ಮತ್ತೆ ಮಕ್ಕಳ ಸ್ಥಿತಿ ಕರಾಳತೆಗೆ

ರಾಯಚೂರಿನ ಈ ಊರುಗಳಿಗೆ ತೆಪ್ಪವೇ ಗತಿ! 20 ವರ್ಷಗಳ ಹೋರಾಟಕ್ಕೆ ಸಿಕ್ಕಿಲ್ಲ ಮುಕ್ತಿ Read More »

ಮೈಸೂರು: ಮಗನ ಜೊತೆಗೆ ಎಸ್ಎಸ್ಎಲ್ ಸಿ ಪಾಸಾದ ತಂದೆ

ಸಮಗ್ರ ನ್ಯೂಸ್: ಬರೋಬ್ಬರಿ 28 ವರ್ಷಗಳು ಮತ್ತು ಮೂರು ವಿಫಲ ಪ್ರಯತ್ನಗಳ ನಂತರ, 42 ವರ್ಷದ ರಹಮತುಲ್ಲಾ ಅಂತಿಮವಾಗಿ ರಾಜ್ಯದಲ್ಲಿ ಫಲಿತಾಂಶಗಳು ಪ್ರಕಟವಾದಾಗ ತನ್ನ ಹತ್ತನೇ ತರಗತಿ ಪರೀಕ್ಷೆಯನ್ನು ತೇರ್ಗಡೆ ಮಾಡುವ ತನ್ನ ಜೀವಿತಾವಧಿಯ ಕನಸನ್ನು ಸಾಧಿಸಿದರು ಮತ್ತು ಅವರು 333 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾರೆ. ಶೇ.98 ರಷ್ಟು ಅಂಕ ಗಳಿಸಿದ ತನ್ನ ಮಗ ಮೊಹಮ್ಮದ್ ಫರಾನ್‌ನೊಂದಿಗೆ ಸಾಧನೆಯನ್ನು ಹಂಚಿಕೊಂಡಿರುವುದು ಈ ಸಾಧನೆಯನ್ನು ಸಿಹಿಗೊಳಿಸಿದೆ. ‘ನಾನು 10ನೇ ತರಗತಿಯಲ್ಲಿ ತೇರ್ಗಡೆಯಾಗಬೇಕೆಂದು ನನ್ನ ತಂದೆ ಯಾವಾಗಲೂ ಒತ್ತಾಯಿಸುತ್ತಿದ್ದರು. ನಾನು ಅದನ್ನು

ಮೈಸೂರು: ಮಗನ ಜೊತೆಗೆ ಎಸ್ಎಸ್ಎಲ್ ಸಿ ಪಾಸಾದ ತಂದೆ Read More »