ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ಅರಣ್ಯ ಪ್ರದೇಶದ ಚಿತ್ರ ಹಂಚಿಕೊಂಡ ಆನಂದ್‌ ಮಹೀಂದ್ರ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ-ಗುಂಡ್ಯ ನಡುವೆ ಸಾಗುವ ಅರಣ್ಯ ಪ್ರದೇಶದ ಚಿತ್ರವೊಂದನ್ನು ಮಹೀಂದ್ರ ಗ್ರೂಪ್‌ನ ಚೇರ್‌ರ್ಮೆನ್‌ ಆಗಿರುವ ಆನಂದ್‌ ಮಹೀಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿ ವೈರಲ್‌ ಆಗಿದೆ. ಕೆಲವು ದಿನಗಳ ಹಿಂದೆ ವಿಸಿಟ್‌ ಉಡುಪಿ ಎಂಬ ಟ್ವಿಟರ್‌ ಖಾತೆಯವರು ಈ ಚಿತ್ರವನ್ನು ಟ್ವೀಟ್‌ ಮಾಡಿದ್ದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರಣ್ಯ ಪ್ರದೇಶ ಮಧ್ಯೆ ಸಾಗುವ ಗುಂಡ್ಯ ಬಳಿಯ ಹೆದ್ದಾರಿಯ ಚಿತ್ರವನ್ನು ಜಗತ್ತಿನ ಅತ್ಯಂತ ಸುಂದರ ಕಾಡಿನ ಪ್ರಯಾಣ ಎಂಬ ಶೀರ್ಷಿಕೆಯಡಿ ಅಪ್‌ಲೋಡ್‌ ಮಾಡಿದ್ದರು. ಇದೀಗ […]

ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ಅರಣ್ಯ ಪ್ರದೇಶದ ಚಿತ್ರ ಹಂಚಿಕೊಂಡ ಆನಂದ್‌ ಮಹೀಂದ್ರ Read More »

ಒಂದೇ ಟ್ವೀಟ್; ಕೂಡಲೇ ಪ್ರಾಬ್ಲಂ ಕ್ಲಿಯರ್| ಪ್ರಧಾನಿ ಮೋದಿ ಸ್ಪಂದನೆಗೆ ಮಂಡ್ಯದ ಯುವಕ ಫುಲ್ ಖುಷ್

ಸಮಗ್ರ ನ್ಯೂಸ್: ಎರಡು ವರ್ಷದಿಂದ ಬಗೆಹರಿಯದೇ ಉಳಿದಿದ್ದ ಸಮಸ್ಯೆಯನ್ನು ಪ್ರಧಾನಮಂತ್ರಿ ಮೋದಿ ಎರಡೇ ದಿನಕ್ಕೆ ಬಗೆಹರಿಸಿದ್ದಾರೆ. ಮಂಡ್ಯದ ತಂಡಸನಹಳ್ಳಿಯ ಯುವಕ ಚರ್ಮ ರೋಗದಿಂದ ಬಳಲುತ್ತಿದ್ದು, ಆಧಾರ್ ಕಾರ್ಡ್ ನಲ್ಲಿ ಥಂಬ್ ಇಂಪ್ರೆಷನ್ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ, ಆಧಾರ್ ಕಾರ್ಡ್ ಬ್ಲಾಕ್ ಆಗಿತ್ತು. ಮಂಡ್ಯದ ತಂಡಸನಹಳ್ಳಿಯ ಯುವಕ ನೂತನ್‌ಗೆ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದರು. ನೂತನ್ ಗೆ ಈ ಹಿಂದೆ ಯೇ ಆಧಾರ್ ಕಾರ್ಡ್ ಮಾಡಿಸಲಾಗಿತ್ತು. ಆದರೆ ಚರ್ಮ ರೋಗವಿದ್ದ ಕಾರಣ ಆಧಾರ್ ಕಾರ್ಡ್ ಮಾಡಿಸುವ ವೇಳೆ ಥಂಬ್

ಒಂದೇ ಟ್ವೀಟ್; ಕೂಡಲೇ ಪ್ರಾಬ್ಲಂ ಕ್ಲಿಯರ್| ಪ್ರಧಾನಿ ಮೋದಿ ಸ್ಪಂದನೆಗೆ ಮಂಡ್ಯದ ಯುವಕ ಫುಲ್ ಖುಷ್ Read More »

ಇಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆಗಳ ಮುಟ್ಟುಗೋಲಿಗೆ ಖಂಡನೆ

ಸಮಗ್ರ ನ್ಯೂಸ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಡಿ) ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದನ್ನು ಸಂಘದ ಮುಖಂಡರು ಖಂಡಿಸಿದ್ದಾರೆ. ಇಡಿಯು ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ವಿರುದ್ಧ ಧಮನಕಾರಿ ನೀತಿಯನ್ನು ಪ್ರಕಟಿಸುತ್ತಿದ್ದು ಅದರ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಂಡಿದೆ. ಜನಪರ ಚಳವಳಿಗಳು, ಎನ್‌ಜಿಒಗಳು, ಮಾನವ ಹಕ್ಕುಗಳ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ಪಕ್ಷವನ್ನು ಟೀಕಿಸುವ ದೇಶದ ಯಾವುದೇ ಪ್ರಜಾಸತ್ತಾತ್ಮ ಧ್ವನಿಗಳನ್ನು ಗಮನಿಸುವ ಮೂಲಕ ಏಜೆನ್ಸಿಯು

ಇಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆಗಳ ಮುಟ್ಟುಗೋಲಿಗೆ ಖಂಡನೆ Read More »

ಮೊಬೈಲ್ ಗ್ರಾಹಕರ ಜೇಬಿಗೆ ಕತ್ತರಿ ಸಾಧ್ಯತೆ| ಕರೆ ದರಗಳು ಮತ್ತೆ ದುಬಾರಿ!

ಸಮಗ್ರ ನ್ಯೂಸ್: ಹಣದುಬ್ಬರ ಏರಿಕೆಯ ನಡುವೆ ಟೆಲಿಕಾಂ ಸೇವೆಗಳು ಮತ್ತೊಮ್ಮೆ ದುಬಾರಿಯಾಗಬಹುದು. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ. ವಾಸ್ತವವಾಗಿ, ಕೆಲವು ತಿಂಗಳ ಹಿಂದೆ ಸುಂಕದ ಹೆಚ್ಚಳದಿಂದಾಗಿ ಮೂರು ಖಾಸಗಿ ವಲಯದ ಟೆಲಿಕಾಂಗಳ ಒಟ್ಟು ಚಂದಾದಾರರ ಬೇಸ್ 37 ಮಿಲಿಯನ್ ಕಡಿಮೆಯಾಗಿದೆ. ಆದರೆ, ಅವರ ಸಕ್ರಿಯ ಚಂದಾದಾರರ ಬೇಸ್ 3% ರಷ್ಟು ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಸೇವಾ ಸುಂಕಗಳಲ್ಲಿ ಮತ್ತೊಂದು ಹೆಚ್ಚಳದ ಬಗ್ಗೆ ಯೋಚಿಸಬಹುದು ಎನ್ನಲಾಗಿದೆ. CRISIL ನ ವರದಿಯ ಪ್ರಕಾರ, ಆಗಸ್ಟ್

ಮೊಬೈಲ್ ಗ್ರಾಹಕರ ಜೇಬಿಗೆ ಕತ್ತರಿ ಸಾಧ್ಯತೆ| ಕರೆ ದರಗಳು ಮತ್ತೆ ದುಬಾರಿ! Read More »

ವಾಟ್ಸಪ್ ನಲ್ಲಿ‌ ಬಂದಿದ್ದ ಆಕ್ರೋಶದ ಬರಹ ಹಂಚಿಕೊಂಡಿದ್ದೆ ಹೊರತು ಅದು ನನ್ನಿಂದ ರಚಿತವಾಗಿದ್ದಲ್ಲ – ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ಸಮಗ್ರ ನ್ಯೂಸ್: ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಅವಹೇಳನಕಾರಿ ಆಗಿ ಬಿಂಬಿಸಿರುವ ಆರೋಪ ಕುರಿತು ಪ್ರತಿಕ್ರಿಯಿಸಿರುವ ವಿವಾದಿತ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಆಕ್ರೋಶದ ಒಂದು ಭಾಗವಾಗಿ ಬಂದಿದ್ದ ಆ ಬರಹವನ್ನು ನಾನು ಹಂಚಿಕೊಂಡಿದ್ದೆ ಎಂದಿದ್ದಾರೆ. ಮಂಗಳವಾರ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ, 2017ರಲ್ಲಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷವು ಆಡಳಿತಾರೂಢವಾಗಿದ್ದಾಗ ಸಚಿವರೊಬ್ಬರು ‘ಕನ್ನಡ ಶಾಲೆಗಳಲ್ಲಿ ಅರೇಬಿಕ್’ ಭಾಷೆ ಕಲಿಸುತ್ತೇವೆ ಎಂಬ ಹೇಳಿಕೆ ಕೊಟ್ಟಾಗ ಅವರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.

ವಾಟ್ಸಪ್ ನಲ್ಲಿ‌ ಬಂದಿದ್ದ ಆಕ್ರೋಶದ ಬರಹ ಹಂಚಿಕೊಂಡಿದ್ದೆ ಹೊರತು ಅದು ನನ್ನಿಂದ ರಚಿತವಾಗಿದ್ದಲ್ಲ – ರೋಹಿತ್ ಚಕ್ರತೀರ್ಥ ಸ್ಪಷ್ಟನೆ Read More »

ಬೆಳಗಾವಿ: ಶ್ಯಾವಿಗೆ ಒಣಗಿಸಲು ಸುವರ್ಣಸೌಧ ಮುಂಭಾಗ ಬಳಕೆ| ಜಾಲತಾಣಗಳಲ್ಲಿ ಆಕ್ರೋಶ

ಸಮಗ್ರ ನ್ಯೂಸ್: ಕರ್ನಾಟಕದ ಎರಡನೇ ಶಕ್ತಿ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ಬೆಳಗಾವಿ ಸುವರ್ಣಸೌಧದ ಮುಂದೆ ಶಾವಿಗೆ ಒಣಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲೆಂಬ ಕಾರಣಕ್ಕೆ 400ಕ್ಕೂ ಅಧಿಕ ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಆದರೆ ಸುವರ್ಣಸೌಧದಲ್ಲಿ ಸಂಡಿಗೆ, ಶಾವಿಗೆ ಒಣಗಿಸಲು ಹಾಕಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

ಬೆಳಗಾವಿ: ಶ್ಯಾವಿಗೆ ಒಣಗಿಸಲು ಸುವರ್ಣಸೌಧ ಮುಂಭಾಗ ಬಳಕೆ| ಜಾಲತಾಣಗಳಲ್ಲಿ ಆಕ್ರೋಶ Read More »

ಮಂಡ್ಯ : 5ರೂ. ಡಾಕ್ಟರ್ ಆಸ್ಪತ್ರೆಯಿಂದ ಬಿಡುಗಡೆ

ಸಮಗ್ರ ನ್ಯೂಸ್: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ 5 ರೂ. ಡಾಕ್ಟರ್ .ಸಿ.ಎಸ್. ಶಂಕರೇಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 23 ರಂದು ಶಂಕರೇಗೌಡರಿಗೆ ಹೃದಯಾಘಾತವಾಗಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಪೋರ್ಟಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಅವರು ಇದೀಗ ಚೇತರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಮಂಡ್ಯ : 5ರೂ. ಡಾಕ್ಟರ್ ಆಸ್ಪತ್ರೆಯಿಂದ ಬಿಡುಗಡೆ Read More »

ಇದು ಅಮೇಜಾನ್ ಆಫರ್ ..! ಪ್ಲಾಸ್ಟಿಕ್ ಬಕೆಟ್ ಗೆ 26 ಸಾವಿರ, ಮಗ್ ಗೆ 10 ಸಾವಿರ! EMI ಕೂಡ ಲಭ್ಯ..!!

ಸಮಗ್ರ ನ್ಯೂಸ್: ಅಮೇಜಾನ್ ನಲ್ಲಿ ಮಾರಾಟಕ್ಕೆ ಇರುವ ಹಾಗೂ ಈಗಾಗಲೇ ಸೋಲ್ಡ್ ಔಟ್ ಆಗಿರುವ ಬಕೆಟ್ ನ ಫೋಟೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಈ ಬಕೆಟ್ ನ ಫೋಟೋ ಕಂಡು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಲು ಕಾರಣ, ಅದಕ್ಕೆ ನಿಗದಿಯಾಗಿರುವ ಬೆಲೆ. “ಪ್ಲಾಸ್ಟಿಕ್ ಬಕೆಟ್ ಫಾರ್ ಹೋಮ್ ಅಂಡ್ ಬಾತ್‌ರೂಮ್ ಸೆಟ್ ಆಫ್ 1” ಎಂಬ ಶೀರ್ಷಿಕೆಯ ಐಟಂ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಅಮೇಜಾನ್ ನಲ್ಲಿ ದಾಖಲೆಯ ₹ 25,999 ಗೆ ಮಾರಾಟ ಮಾಡಲಾಗುತ್ತಿದೆ. ಇದು

ಇದು ಅಮೇಜಾನ್ ಆಫರ್ ..! ಪ್ಲಾಸ್ಟಿಕ್ ಬಕೆಟ್ ಗೆ 26 ಸಾವಿರ, ಮಗ್ ಗೆ 10 ಸಾವಿರ! EMI ಕೂಡ ಲಭ್ಯ..!! Read More »

ಜೂ.2 ರಿಂದ ರಾಜ್ಯದಲ್ಲಿ ಮುಂಗಾರು ಆರಂಭ| ಹಲವೆಡೆ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕೇರಳಕ್ಕೆ ಭಾನುವಾರ ಮುಂಗಾರು ಪ್ರವೇಶವಾಗಿದೆ. ಜೂನ್ 2ಕ್ಕೆ ಕರ್ನಾಟಕಕ್ಕೂ ಮಾನ್ಸೂನ್ ಪ್ರವೇಶವಾಗಲಿದ್ದು, ಮಳೆಯ ಆರ್ಭಟ ಹೆಚ್ಚಾಗಲಿದೆ. ಜೂನ್ 2ರೊಳಗೆ ಕರ್ನಾಟಕದ ಕೆಲವು ಭಾಗಗಳಿಗೆ ನೈಋತ್ಯ ಮಾನ್ಸೂನ್ ಅಪ್ಪಳಿಸಲು ಸಿದ್ಧವಾಗಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ. ಜೂನ್ 2ರಿಂದ ಕರ್ನಾಟಕದಲ್ಲಿ ವರುಣನ ಅಬ್ಬರ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ

ಜೂ.2 ರಿಂದ ರಾಜ್ಯದಲ್ಲಿ ಮುಂಗಾರು ಆರಂಭ| ಹಲವೆಡೆ ಭಾರೀ ಮಳೆ ಮುನ್ಸೂಚನೆ Read More »

ಭಾರತೀಯ ಅಂಚೆ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು 38,926 ಗ್ರಾಮೀಣ ಡಾಕ್ ಸೇವಕರ(GDS) ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 5, 2022 ರವರೆಗೆ ಇಂಡಿಯಾ ಪೋಸ್ಟ್‌ ನ ಅಧಿಕೃತ ವೆಬ್‌ ಸೈಟ್(indiapostgdsonline.gov.in) ಮೂಲಕ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ವಯಸ್ಸಿನ ಮಿತಿ ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು. ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಜೂನ್ 5,

ಭಾರತೀಯ ಅಂಚೆ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ Read More »