ರಾಜ್ಯ

ಎರಡು ಲಾರಿಗಳ ನಡುವೆ ಭೀಕರ ಅಪಘಾತ; ಚಾಲಕರಿಬ್ಬರು ಸಾವು

ಸಮಗ್ರ ನ್ಯೂಸ್ : ಧಾರವಾಡ ಹೊರವಲಯದ ಯರಿಕೊಪ್ಪ ಬೈಪಾಸ್‌ನಲ್ಲಿ ಬೆಳಗ್ಗಿನ ವೇಳೆ ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚಾಲಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಲಾರಿ ಚಾಲಕರ ಮೃತದೇಹಗಳು ಛಿದ್ರ ಛಿದ್ರವಾಗಿದ್ದು, ಗುರುತು ಸಿಗುತ್ತಿಲ್ಲ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಲಾರಿಗಳ ನಡುವೆ ಭೀಕರ ಅಪಘಾತ; ಚಾಲಕರಿಬ್ಬರು ಸಾವು Read More »

ಆ.10ರಿಂದ 22ರವರೆಗೆ ಹಾಸನದಲ್ಲಿ ಅಗ್ನಿಪಥ್ ನೇಮಕಾತಿ

ಸಮಗ್ರ ನ್ಯೂಸ್: ಆಗಸ್ಟ್ 10 ರಿಂದ ಹಾಸನದಲ್ಲಿ ಅಗ್ನಿಪಥ್ ನೇಮಕಾತಿ ರ್ಯಾಲಿ ನಡೆಯಲಿದೆ.‌ಒಟ್ಟು ಹದಿನಾಲ್ಕು ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗಿಯಾಗಬಹುದು. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ‌ ಆಗಸ್ಟ್ 10 ರಿಂದ ಆಗಸ್ಟ್ 22 ರವರೆಗೂ ಅಗ್ನಿಪಥ್ ನೇಮಕಾತಿ ರ್ಯಾಲಿ ನಡೆಯಲಿದೆ. ಬೆಂಗಳೂರು ಅರ್ಬನ್, ಬೆಂಗಳೂರು ರೂರಲ್, ತುಮಕೂರು ಜಿಲ್ಲೆ, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಅಭ್ಯರ್ಥಿಗಳು ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಅಗ್ನಿವೀರ ಜನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್,

ಆ.10ರಿಂದ 22ರವರೆಗೆ ಹಾಸನದಲ್ಲಿ ಅಗ್ನಿಪಥ್ ನೇಮಕಾತಿ Read More »

ಸದಾನಂದ ಗೌಡರ ಜೊತೆಗಿದ್ದ ಮಧುಗಿರಿ ಮಧುವಿನ ಕಾಮಪುರಾಣ ಬಯಲು| ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ ಪೋಟೋ ವೈರಲ್

ಸಮಗ್ರ ನ್ಯೂಸ್: ಮಧುಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಪ್ರಚಾರ ಶುರುಮಾಡಿದ್ದಾರೆ. ಇದರ ಮಧ್ಯೆ ಮಹಿಳೆಯೊಂದಿಗಿನ ಲವ್ವಿಡವ್ವಿ ಫೋಟೋಗಳು ಮಧುಗೆ ಶಾಕ್ ನೀಡಿದೆ. ಮಧು ಮತ್ತು ಮಹಿಳೆಯ ನಡುವಿನ ಲವ್ವಿಡವ್ವಿ ಫೋಟೋಗಳು ವೈರಲ್ ಆಗಿವೆ. ಮಧುಗಿರಿ ತಾಲ್ಲೂಕಿನ ಬೇಡತ್ತೂರು ಗ್ರಾಮದ ಸದಸ್ಯೆ ಮಂಜುಳ ಜೊತೆಗೆ ಎಂಜಾಯ್ ಮಾಡುತ್ತಿರುವುದು ಹಾಗೂ ಇಬ್ಬರ ಚುಂಬನದ ಫೋಟೋಗಳು ಹರಿದಾಡುತ್ತಿವೆ. ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಕರೆದುಕೊಂಡು‌ ಹೋಗಿ ಎಂಜಾಯ್ ಮಾಡಿದ್ದಾರೆ. ಫೋಟೋ ವೈರಲ್ ಆದ ತಕ್ಷಣ,

ಸದಾನಂದ ಗೌಡರ ಜೊತೆಗಿದ್ದ ಮಧುಗಿರಿ ಮಧುವಿನ ಕಾಮಪುರಾಣ ಬಯಲು| ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ ಪೋಟೋ ವೈರಲ್ Read More »

ಗ್ರಾ.ಪಂ ಸದಸ್ಯ ಹಾಗೂ ಪಿಡಿಓ ಕಛೇರಿಯಲ್ಲಿ ಲವ್ವಿಡವ್ವಿ ; ಸಿಸಿಟಿವಿಯಲ್ಲಿ ಸೆರೆ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್

ಸಮಗ್ರ ನ್ಯೂಸ್ : ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ‌ ಜೆಸಿ ಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಗ್ರಾ .ಪಂ. ಸದಸ್ಯ ಹಾಗೂ ಪಿಡಿಓ ಲವ್ವಿಡವ್ವಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ‌ಆಗಿದೆ. ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪಿಡಿಓ ಕೋಕಿಲಾ , ಗ್ರಾಮ ಪಂಚಾಯತಿ ಕಚೇರಿಯನ್ನು ಪಲ್ಲಂಗವನ್ನಾಗಿ ಮಾಡಿಕೊಂಡು ಚೆಲ್ಲಾಟವಾಡಿದ ಪ್ರಸಂಗ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ‌ ಆಗಿದೆ.

ಗ್ರಾ.ಪಂ ಸದಸ್ಯ ಹಾಗೂ ಪಿಡಿಓ ಕಛೇರಿಯಲ್ಲಿ ಲವ್ವಿಡವ್ವಿ ; ಸಿಸಿಟಿವಿಯಲ್ಲಿ ಸೆರೆ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ Read More »

44 ನೇ ಹುಟ್ಟುಹಬ್ಬ ದ ಸಡಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ಸ್ಯಾಂಡಲ್​ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಜನುಮ ದಿನದ ಸಡಗರದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ. ಅವರು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜುಲೈ 2, 1980ರಲ್ಲಿ ಕಿಶನ್ ಮತ್ತು ಸುಲೋಚನ ಎಂಬ ದಂಪತಿಗಳ ಮೂರನೇ ಮಗನಾಗಿ ಗಣೇಶ್ ಜನಿಸಿದರು. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿದ್ದಾರೆ. ಇನ್ನೂ ಇವರು 99 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ

44 ನೇ ಹುಟ್ಟುಹಬ್ಬ ದ ಸಡಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ Read More »

ಅತಿಥಿ ಉಪನ್ಯಾಸಕರ ಗೌರವ ಧನ 15 ಸಾವಿರ ರೂ.ಗೆ ಹೆಚ್ಚಳ

ಸಮಗ್ರ ನ್ಯೂಸ್ : ಪ್ರಸಕ್ತ ಸಾಲಿನಲ್ಲಿ 3,500 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಸಂಭಾವನೆಯನ್ನು 9 ಸಾವಿರ ರೂ.ನಿಂದ 15 ಸಾವಿರ ರೂ.ಗೆ ಹೆಚ್ಚಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 3,500 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಅತಿಥಿ ಉಪನ್ಯಾಸಕರ ಗೌರವಧನವನ್ನು 15 ಸಾವಿರ ರೂ.ಗಳಿಗೆ ಏರಿಕೆ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ

ಅತಿಥಿ ಉಪನ್ಯಾಸಕರ ಗೌರವ ಧನ 15 ಸಾವಿರ ರೂ.ಗೆ ಹೆಚ್ಚಳ Read More »

ನಾಲ್ಕು ದಿನ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಅಲರ್ಟ್

ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದಲ್ಲಿ ಮೇಲ್ಮೆ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ 4 ದಿನ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯಲಿದೆ. ಉತ್ತರ‌ ಕರ್ನಾಟಕದಲ್ಲಿ ಇಂದಿನಿಂದ ಹಳದಿ ಅಲರ್ಟ್​ ಘೋಷಿಸಲಾಗಿದೆ. ಇಂದಿನಿಂದ ಜುಲೈ 5ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು

ನಾಲ್ಕು ದಿನ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಅಲರ್ಟ್ Read More »

ಊರಿಗೆ ಹಬ್ಬಕ್ಕೆಂದು ತೆರಳಿದ ವೇಳೆ ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ ಕದಿಮರು

ಸಮಗ್ರ ನ್ಯೂಸ್ : ಮನೆ ಬೀಗ ಮುರಿದು ಕಳ್ಳರು ತಮ್ಮ ಕೈ ಚಳಕ ತೋರಿಸಿದ ಘಟನೆಯೊಂದು ಯಶವಂತಪುರದ ಮತ್ತಿಕೆರೆಯಲ್ಲಿ ಘಟನೆ ನಡೆದಿದೆ. ಕನಗ್ ರತಿನಾಮ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಊರ ಹಬ್ಬಕ್ಕೆಂದು 2 ದಿನ ತಮಿಳುನಾಡಿಗೆ ತೆರಳಿದ್ದ ವೇಳೆ ಘಟನೆ ನಡೆದಿದ್ದು, ವಾಪಸ್ ಮನೆಗೆ ಬಂದು ನೋಡಿದ್ದಾಗ ದಂಪತಿ ಶಾಕ್ ಆಗಿದ್ದಾರೆ. ಮನೆಯಲ್ಲಿದ್ದ 30 ಗ್ರಾಂ ಚಿನ್ನಾಭರಣ, ಒಂದು , ದಾಖಲೆ ಪತ್ರಗಳನ್ನು ಕದ್ದುಕೊಂಡು ಖದೀಮರು ಎಸ್ಕೇಪ್ ಆಗಿದ್ದಾರೆ. ದಂಪತಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ

ಊರಿಗೆ ಹಬ್ಬಕ್ಕೆಂದು ತೆರಳಿದ ವೇಳೆ ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ ಕದಿಮರು Read More »

3 ವರ್ಷದ ಮಗುವಿನ ಕತ್ತು ಹಿಸುಕಿ ತಾಯಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಸಮಗ್ರ ನ್ಯೂಸ್ : ಮಗುವಿನ ಕತ್ತು ಹಿಸುಕಿ ಕೊಂದು ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಉಡುಪಿಯ ಬ್ರಹ್ಮಾವರ ನಿವಾಸಿ ಆದರ್ಶ್‌ ಅವರ ಪತ್ನಿ ದೀಪಾ (೩೧) ಹಾಗೂ ಮೂರುವರೆ ವರ್ಷದ ಹೆಣ್ಣು ಮಗು ರಿಯಾ ಮೃತಪಟ್ಟಿದ್ದಾರೆ. ರಾಜರಾಜೇಶ್ವರಿ ನಗರ ಚನ್ನಸಂದ್ರದ ಅಪಾರ್ಟ್‌ ಮೆಂಟ್‌ ನಲ್ಲಿ ದಂಪತಿ ಮದುವೆ ಆದಾಗಿನಿಂದ ವಾಸವಿದ್ದರು. ಒಂದು ವಾರದಿಂದ ಹೊಟ್ಟೆ ನೋವು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಾ ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್‌ ನೋಟ್‌ ಬರೆದಿಟ್ಟು

3 ವರ್ಷದ ಮಗುವಿನ ಕತ್ತು ಹಿಸುಕಿ ತಾಯಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ Read More »

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198ರೂ ಇಳಿಕೆ

ಬೆಂಗಳೂರು: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 198 ರೂ. ಇಳಿಕೆ ಮಾಡುವ ಮೂಲಕ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಹಿಂದೆ 2,219 ರೂ. ಗಳಿದ್ದ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2021 ರೂಪಾಯಿಗೆ ಇಳಿಕೆಯಾದಂತಾಗಿದೆ.

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198ರೂ ಇಳಿಕೆ Read More »