ಸೆಂಚುರಿ ಬಾರಿಸಿದ ಟೊಮೊಟೊ| ಈ ಕೆಂಪು ಸುಂದರಿಯನ್ನು ಮುಟ್ಟೋರಿಲ್ಲ!

. Ad Widget . Ad Widget . Ad Widget

ಸಮಗ್ರ ನ್ಯೂಸ್: ತೈಲದರ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ‌ ಎದುರಾಗಿದೆ. ದಿನಬಳಕೆಯ ಅಗತ್ಯ ತರಕಾರಿಯಾದ ಟೊಮೊಟೊ ಬೆಲೆ ರಾಜ್ಯ ರಾಜಧಾನಿಯಲ್ಲಿ 100 ರೂಪಾಯಿ ಗಡಿ ಮುಟ್ಟಿದ್ದು, ಇನ್ನುಳಿದ ನಗರಗಳಲ್ಲೂ ಸಹ 100 ರೂ. ಆಸುಪಾಸಿನಲ್ಲಿದೆ.

. Ad Widget .

ಚಂಡಮಾರುತದ ಕಾರಣಕ್ಕೆ ಭಾರಿ ಮಳೆಯಾಗಿರುವ ಕಾರಣ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ರೈತರು ಬೆಳೆದ ಟೊಮೊಟೊ ಬೆಳೆ ಹಾಳಾಗಿದೆ. ಇದೀಗ ಮಾರುಕಟ್ಟೆಗೆ ಟೊಮೆಟೊ ಅತಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಇದರ ಬೆಲೆ ಮುಗಿಲು ಮುಟ್ಟುವಂತಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ‌ಟೊಮ್ಯಾಟೋ ಬೆಲೆ 100 ರ ಗಡಿದಾಟಿದ್ದರೆ, ಇನ್ನುಳಿದ ಕಡೆ 80 ರಿಂದ 90 ರ ಆಸುಪಾಸಿನಲ್ಲಿದೆ. ಇದರಿಂದ ಗ್ರಾಹಕರು ಹೈರಾಣಾಗಿದ್ದಾರೆ. ಬೇಡಿಕೆಗೆ ತಕ್ಕ ಪೂರೈಕೆಯ ಕೊರತೆಯಿಂದ ಟೊಮ್ಯಾಟೊ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.

Leave a Comment

Your email address will not be published. Required fields are marked *