ನನ್ನ ಹೆಸರಿನಲ್ಲಿ ದುಡ್ಡು ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ ಎಂದ ದೈವ| ಕಾಂತಾರ ಕುರಿತು ದೈವದ ಮುಂದೆ ಅಸಮಾಧಾನ ನೋಡಿಕೊಂಡ ದೈವಾರಾಧಕರು
ಸಮಗ್ರ ನ್ಯೂಸ್: ‘ಕಾಂತಾರ’ ಸಿನಿಮಾಗಳ ಬಗ್ಗೆ ಕೆಲ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇಂದು ದೈವದ ಮುಂದೆಯೇ ಈ ಬಗ್ಗೆ ದೂರು ಹೇಳಿದ್ದಾರೆ. ಕಾಂತಾರ ಸಿನಿಮಾದ ಮೂಲಕ ದೈವಾರಾಧನೆಗೆ ಅಪಚಾರ ಮಾಡಲಾಗಿದೆ ಎಂದು ಪಿಲಿಚಂಡಿ, ಬಲವಂಡಿ ದೈವದ ಮೊರೆ ಹೋದ ದೈವ ನರ್ತಕರು, ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದು, ಮಂಗಳೂರು ಹೊರವಲಯದ ಬಜಪೆ ಸಮೀಪದ ಶ್ರೀ ಕ್ಷೇತ್ರ ಪೆರಾರ, ಬ್ರಹ್ಮದೇವರು,ಇಷ್ಟ ದೇವತಾ ಬಲವಂಡಿ, ಪಿಲಿಚಂಡಿ ದೈವಸ್ಥಾನ, ಬಲವಂಡಿ, ಪಿಲಿಚಂಡಿ ದೈವದ ಮುಂದೆ ದೈವಾರಾಧನೆಯ ಅಪಹಾಸ್ಯದ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. […]










