ರಾಜ್ಯ

ಪೋಷಕರ ಜೊತೆ ಕೋಪಕೊಂಡು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು : ಪೋಷಕರ ಜೊತೆ ಕೋಪಕೊಂಡು 5ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ತಂದೆ, ಪೇಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ, ಗೃಹಿಣಿ. ದಂಪತಿಗೆ ಮೂವರು ಮಕ್ಕಳಿದ್ದು, ಮೃತ ವಿದ್ಯಾರ್ಥಿನಿಯೇ ಹಿರಿಯವಳು. ‘ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ, ವಿದ್ಯಾಭ್ಯಾಸದಲ್ಲಿ ಚುರುಕಿದ್ದಳು. ಶಾಲೆಯಲ್ಲಿ ಶನಿವಾರ ಪೋಷಕರ ಸಭೆ ಇತ್ತು. ಮಗಳ ಜೊತೆ ತಂದೆ ಸಭೆಗೆ ಹೋಗಿ ವಾಪಸು ಮನೆಗೆ ಬಂದಿದ್ದರು. ಊರ ಹಬ್ಬದ ನಿಮಿತ್ತ ಮಗಳಿಗೆ ಹೊಸ ಬಟ್ಟೆ ಕೊಡಿಸಿದ್ದರು. ಆಕೆಯನ್ನು ಮನೆಯಲ್ಲೇ ಬಿಟ್ಟು ಉಳಿದ […]

ಪೋಷಕರ ಜೊತೆ ಕೋಪಕೊಂಡು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ; ಕಾಲೇಜು ಪ್ರಾಚಾರ್ಯ ಹಾಗೂ ಅವರ ಪುತ್ರ ಸೂತ್ರದಾರರು

ಗದಗ : ಇಲ್ಲಿನ ಮುನ್ಸಿಪಲ್ ಕಾಲೇಜ್‌ನಲ್ಲಿ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಗದಗದ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆಯ ಸೂತ್ರದಾರರಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಾಗಿ ನಡೆಸಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. 2022ರ ಆಗಸ್ಟ್

ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ; ಕಾಲೇಜು ಪ್ರಾಚಾರ್ಯ ಹಾಗೂ ಅವರ ಪುತ್ರ ಸೂತ್ರದಾರರು Read More »

ಖಾಸಗಿ ಬಸ್ ಮತ್ತು ಕ್ರೂಸರ್ ನಡುವೆ ಅಪಘಾತ; ಇಬ್ಬರು ಸಾವು

ಧಾರವಾಡ : ಧಾರವಾಡ ಜಿಲ್ಲೆಯ ಕಲಘಟಗಿ ಬಳಿ ಖಾಸಗಿ ಬಸ್ ಹಾಗೂ ಕ್ರೂಸರ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹಳಿಯಾಳದ ನಂದಿಗಟ್ಟ ಗ್ರಾಮದಿಂದ ಹುಬ್ಬಳ್ಳಿಗೆ ಕ್ರೂಸರ್ ವಾಹನ ಬರುತಿದ್ದು, ರಾಮನಾಳ ಕ್ರಾಸ್ ಬಳಿ ಅಪಘಾತ ನಡೆದಿದೆ. ಶಿವನಗೌಡ ಮತ್ತು ಅಮೃತ ಪಾಟೀಲ ಮೃತರಾಗಿದ್ಧಾರೆ. ಚಾಲಕ ಮಾರುತಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್​ಗೆ ದಾಖಲು ಮಾಡಲಾಗಿದೆ. ಕಲಘಟಗಿ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಖಾಸಗಿ ಬಸ್ ಮತ್ತು ಕ್ರೂಸರ್ ನಡುವೆ ಅಪಘಾತ; ಇಬ್ಬರು ಸಾವು Read More »

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಅಕ್ಕ ತಮ್ಮ ದುರ್ಮರಣ

ಬೆಂಗಳೂರು ಗ್ರಾಮಾಂತರ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಕ್ಕ-ತಮ್ಮ ದುರ್ಮರಣ ಹೊಂದಿರುವಂತಹ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅಟ್ಟೂರು ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಶಾಜಿಯಾ ಭಾನು(26) ಇಬ್ರಾಹಿಂ ಸಾಬ್(16) ಮೃತರು. ಡಾಬಾ ಬಳಿ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾಗುತ್ತಿದ್ದಂತೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮುರುಗಮಲ್ಲ ದರ್ಗಾಗೆ ಹೋಗಿ, ಚಿಂತಾಮಣಿಯಿಂದ ಬೈಲನರಸಾಪುರಕ್ಕೆ ಬಂದು ಟೀ ಕುಡಿದು ನಂತರ ಕೋಲಾರ ಹೆದ್ದಾರಿ ಮೂಲಕ

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಅಕ್ಕ ತಮ್ಮ ದುರ್ಮರಣ Read More »

ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ವಿಧಿವಶ

ಸಮಗ್ರ ನ್ಯೂಸ್: ಮುಖ್ಯ ಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ(45) ವಿಧಿವಶರಾಗಿದ್ದಾರೆ. ಗುರುಲಿಂಗ ಸ್ವಾಮಿ ಹೋಳಿಮಠ ಅವರು ಮುಖ್ಯಮಂತ್ರಿ ಮಾಧ್ಯಮ ಸಂಯೋಜಕಯಾಗಿ ಕೆಲಸ ಮಾಡುತ್ತಿದ್ದರು, ಇದಲ್ಲದೇ ಇವರು ಕನ್ನಡದ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದರು. ಇಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಇದೇ ವೇಳೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ವಿಧಿವಶ Read More »

ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅಪಾಯದಿಂದ ಪಾರು

ಉಪ್ಪುಂದ:‌ ಚಾಲಕನ ನಿಯಂತ್ರಣ ತಪ್ಪಿ ರಾ.ಹೆದ್ದಾರಿ 66 ಬಿಜೂರುನಲ್ಲಿ ಪಲ್ಟಿ ಹೊಡೆದು ಸವಾರ ಅಪಾಯದಿಂದ ಪಾರಾದ ಘಟನೆಯೊಂದು ಶನಿವಾರ ಸಂಜೆ ಸಂಭವಿಸಿದೆ. ಬಿಜೂರು ಸುಮಾನವತಿ ನದಿಯ ಸೇತುವೆ ಸಮೀಪ ರಾ.ಹೆದ್ದಾರಿ 66ರಲ್ಲಿ ಬೈಂದೂರಿನಿಂದ ಉಪ್ಪುಂದ ಕಡೆಗೆ ಹೋಗುತ್ತಿದ್ದ ಫಾರ್ಚೂನರ್ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯೊಡೆದು ಪಕ್ಕದ ಹೊಂಡಕ್ಕೆ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅಪಾಯದಿಂದ ಪಾರು Read More »

ರಸ್ತೆ ಅಪಘಾತದಲ್ಲಿ ಕಾಲೇಜಿನ ಪ್ರಾಂಶುಪಾಲ ಸಾವು

ಚಿಂತಾಮಣಿ: ನಗರದ ಚೇಳೂರು ವೃತ್ತದ ಬಳಿ ಶನಿವಾರ ಬೆಳಿಗ್ಗೆ ಕ್ಯಾಂಟರ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು, ದ್ವಿಚಕ್ರವಾಹನ ಸವಾರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಲ್ಲಿನ ಚೇಳೂರು ರಸ್ತೆಯಲ್ಲಿರುವ ಲಕ್ಷ್ಮೀ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕರೆಡ್ಡಿ(40) ಮೃತರು. ಚೇಳೂರು ವೃತ್ತದ ಸಮೀಪದಲ್ಲಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅಶೋಕರೆಡ್ಡಿ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಸ್ತೆ ಅಪಘಾತದಲ್ಲಿ ಕಾಲೇಜಿನ ಪ್ರಾಂಶುಪಾಲ ಸಾವು Read More »

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಮೂವರು ಸಾವು

ತುಮಕೂರು: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 28 ವರ್ಷದ ಅವಿನಾಶ್, 5 ವರ್ಷದ ಪ್ರಣಂತಿ, 3 ವರ್ಷದ ಸೌಖ್ಯಾ ಮೃತ ದುರ್ದೈವಿಗಳಾಗಿದ್ದಾರೆ. ಮುಂದೆ ಚಲಿಸುತ್ತಿದ್ದ ಲಾರಿಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿದೆ. ಲಾರಿಗೆ ಸ್ವಿಫ್ಟ್ ಕಾರು ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಮೂವರು ಸಾವು Read More »

ಪುತ್ತೂರು ಉಪವಿಭಾಗದ
ಡಿವೈಎಸ್ಪಿ ಡಾ. ಗಾನಾ ಪಿ.ಕುಮಾರ್ ವರ್ಗಾವಣೆ

ಪುತ್ತೂರು: ಕಳೆದೆರಡು ವರ್ಷಗಳಿಂದ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಗಾನಾ ಪಿ.ಕುಮಾರ್‌ ರವರನ್ನು ವರ್ಗಾವಣೆ ಮಾಡಲಾಗಿದೆ.  ಪ್ರಸ್ತುತ ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ ಹಿರೇಮಠ ಎಂಬವರನ್ನು ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ. ಪ್ರಾಯೋಗಿಕ ತರಬೇತಿ ಪೂರ್ಣಗೊಳಿಸಿ ತಿಂಗಳ ಹಿಂದೆಯಷ್ಟೆ ಸಿಐಡಿಗೆ ತಾತ್ಕಾಲಿಕವಾಗಿ ನಿಯುಕ್ತಿಗೊಂಡಿದ್ದ ವೀರಯ್ಯ ಹಿರೇಮಠ ರವರನ್ನು ಇದೀಗ ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಡಾ.ಗಾನಾ

ಪುತ್ತೂರು ಉಪವಿಭಾಗದ
ಡಿವೈಎಸ್ಪಿ ಡಾ. ಗಾನಾ ಪಿ.ಕುಮಾರ್ ವರ್ಗಾವಣೆ
Read More »

ಮಗನನ್ನು ಉಳಿಸಿಜೊಡಲು ಸಿಎಂಗೆ ಮನವಿ ಸಲ್ಲಿಸಲು ಬಂದ ಮಹಿಳೆ ಅಸ್ವಸ್ಥ

ಸಮಗ್ರ ನ್ಯೂಸ್; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ, ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆಯಿತು. ಗೋಕುಲ ರಸ್ತೆಯ ಗಾಂಧಿನಗರದ ಭಾರತಿ ಅಸ್ವಸ್ಥಗೊಂಡವರು. ಅಸ್ಥಿಮಜ್ಜೆ ಸಮಸ್ಯೆಯಿಂದ ಬಳಲುತ್ತಿದ್ದ 31 ವರ್ಷದ ತಮ್ಮ ಏಕೈಕ ಪುತ್ರ ಸೂರಜ್‌ನನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿರುವ ಅವರು, ಚಿಕಿತ್ಸೆಗೆ ಸಿಎಂ ಬಳಿ ನೆರವು ಕೋರಲು ಬಂದಿದ್ದರು. ಭಾರತಿ ಅವರಿಂದ ಮನವಿ ಸ್ವೀಕರಿಸಿದ್ದ ಸಿಎಂ, ಚಿಕಿತ್ಸೆಗೆ ನೆರವಾಗುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದರು. ನಂತರ, ಅವರ

ಮಗನನ್ನು ಉಳಿಸಿಜೊಡಲು ಸಿಎಂಗೆ ಮನವಿ ಸಲ್ಲಿಸಲು ಬಂದ ಮಹಿಳೆ ಅಸ್ವಸ್ಥ Read More »