ರಾಜ್ಯ

ಇನ್ಫೋಸಿಸ್​ನ ಹುಬ್ಬಳ್ಳಿ ಕಚೇರಿಯಲ್ಲಿ ವಿವಿಧ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನ

ಇನ್ಫೋಸಿಸ್​ನ ಹುಬ್ಬಳ್ಳಿ ಕಚೇರಿಯಲ್ಲಿ ವಿವಿಧ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹುಬ್ಬಳ್ಳಿಯ ಇನ್ಫೋಸಿಸ್​ ಕಚೇರಿಯಲ್ಲಿ ಏರೋಸ್ಪೇಸ್​ ಇಂಜಿನಿಯರ್ (Aerospace Engineer)​ ಮತ್ತು ಜಾವ ಡೆವಲಪರ್ (Java Developer)​ ಹುದ್ದೆಗಳ ನೇಮಕಾತಿಗೆ ಸಂಸ್ಥೆ ಮುಂದಾಗಿದೆ. ಈ ಸಂಬಂಧ ಇನ್ಫೋಸಿಸ್​ ಕೆರಿಯರ್​ ಟ್ವೀಟ್​ ಮೂಲಕ ಅಭ್ಯರ್ಥಿಗಳಿಗೆ ಸಂಸ್ಥೆ ಮಾಹಿತಿ ನೀಡಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ. ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು […]

ಇನ್ಫೋಸಿಸ್​ನ ಹುಬ್ಬಳ್ಳಿ ಕಚೇರಿಯಲ್ಲಿ ವಿವಿಧ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನ Read More »

ಬಾಬಾ ಬುಡನ್ ಗಿರಿ ದರ್ಗಾದಲ್ಲಿ ವೈದಿಕ ಆಚರಣೆಗಳಿಗೆ ಅವಕಾಶ| ಸೌಹಾರ್ದ ಕೆಡಿಸುವ ಹುನ್ನಾರ ಎಂದ ಪಿಎಫ್ಐ

ಸಮಗ್ರ ನ್ಯೂಸ್: ಬಾಬಾ ಬುಡನ್ ಗಿರಿ ದರ್ಗಾದಲ್ಲಿ ವೈದಿಕ ಆಚರಣೆಗಳಿಗೆ ಅವಕಾಶ ನೀಡಿ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಕೆಡಿಸುವ ಬಿಜೆಪಿ ಸರಕಾರದ ಕೋಮುವಾದಿ ನಡೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ-ಸಂಘಪರಿವಾರವು ದಕ್ಷಿಣ ಭಾರತದಲ್ಲಿ ಹಿಂದುತ್ವ ಫ್ಯಾಶಿಸ್ಟ್ ಅಜೆಂಡಾವನ್ನು ಬಲಪಡಿಸಲು ಸರ್ವಧರ್ಮೀಯರ ಶ್ರದ್ಧಾ ಕೇಂದ್ರವಾದ ಬಾಬಾ ಬುಡನ್ ಗಿರಿಯನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡಿತು. ಆ ಬಳಿಕ ದತ್ತ ಮಾಲಾ, ದತ್ತ ಜಯಂತಿ ಹೆಸರಿನಲ್ಲಿ ಸಂಘಪರಿವಾರದ ಸಂಘಟನೆಗಳು ಕೋಮು ವೈಷಮ್ಯವನ್ನು

ಬಾಬಾ ಬುಡನ್ ಗಿರಿ ದರ್ಗಾದಲ್ಲಿ ವೈದಿಕ ಆಚರಣೆಗಳಿಗೆ ಅವಕಾಶ| ಸೌಹಾರ್ದ ಕೆಡಿಸುವ ಹುನ್ನಾರ ಎಂದ ಪಿಎಫ್ಐ Read More »

ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಇದೆಯೇ ಸ್ಥಾನಮಾನ ?

ಸಮಗ್ರ ನ್ಯೂಸ್: ಮೀಡಿಯಾ ಕಂಪನಿ ಬ್ಲೂಮ್‌ಬರ್ಗ್‌ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ರಾಜಧಾನಿ ಬೆಂಗಳೂರು ಕೂಡ ಒಂದಾಗಿದೆ. ಬೆಂಗಳೂರಿಗೆ ಭಾರತದ ನವೋದ್ಯಮಗಳ ರಾಜಧಾನಿ ಎಂಬ ಹಿರಿಮೆ ಇದೆ. ಒಂದು ಅಂದಾಜಿನ ಪ್ರಕಾರ ಲಂಡನ್‌ ಅಥವಾ ಸ್ಯಾನ್‌ ಫ್ರಾನ್ಸಿಸ್ಕೊಗೆ ಹೋಲಿಸಿದರೆ ಬಂಡವಾಳವು ಬೆಂಗಳೂರಿನತ್ತ ವೇಗವಾಗಿ ಹರಿದುಬರುತ್ತಿದೆ. ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನ ಶೈಲಿಯಿಂದ ಜಾಗತಿಕ ಸಮುದಾಯಕ್ಕೆ ಬೆಂಗಳೂರು ನೆಚ್ಚಿನ ನಗರಿಯಾಗಿದೆ. ಭದ್ರತೆಯ ಕಾರಣದಿಂದ ಬೆಂಗಳೂರು ಇಷ್ಟ ಎನ್ನುವ ಅಭಿಪ್ರಾಯವನ್ನು ಬಹುತೇಕ ಜನರು

ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಇದೆಯೇ ಸ್ಥಾನಮಾನ ? Read More »

ಕಾರಾಗೃಹ ಇಲಾಖೆಯಿಂದ ಖೈದಿಗಳಿಗೆ ಈ ಉದ್ಯೋಗಗಳ ಅವಕಾಶ

ಕರ್ನಾಟಕ ರಾಜ್ಯ ಕಾರಾಗೃಹಗಳ ಇಲಾಖೆಯು ಖೈದಿಗಳಿಂದ ಇಂಧನ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಈ ಕೇಂದ್ರಗಳನ್ನು ಕಾರಾಗೃಹಗಳಿಗೆ ಸಮೀಪವಿರುವ ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು. ನಾವು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿ) ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕೈದಿಗಳು ತಮ್ಮ ಅವಧಿಯನ್ನು ಪೂರೈಸಿ ಜೈಲಿನಿಂದ ಹೊರಬಂದಾಗ ಅವರು ಪೆಟ್ರೋಲ್ ಬಂಕ್‌ಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳಬಹುದು ಅಥವಾ ಸ್ವಂತವಾಗಿ ಬಂಕ್‌ಗಳನ್ನು ಪ್ರಾರಂಭಿಸಬಹುದು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ನಾವು ಈ ಬಗ್ಗೆ

ಕಾರಾಗೃಹ ಇಲಾಖೆಯಿಂದ ಖೈದಿಗಳಿಗೆ ಈ ಉದ್ಯೋಗಗಳ ಅವಕಾಶ Read More »

ಉಡುಪಿ: ಸಾವರ್ಕರ್ ವಿಚಾರದಲ್ಲಿ ಹೈಡ್ರಾಮಾ| ಪ್ರತಿಮೆ ಸ್ಥಾಪಿಸಲು ನಗರಸಭೆಗೆ ಪತ್ರ‌ಬರೆದ ಯಶ್ಪಾಲ್ ಸುವರ್ಣ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭುಗಿಲೆದ್ದಿದ್ದ ಸಾವರ್ಕರ್‌ ಭಾವಚಿತ್ರ ಕುರಿತು ಉಡುಪಿಯಲ್ಲಿ ಕಳೆದ ಎರಡು ದಿನದಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲೆಯ ಬ್ರಹ್ಮಗಿರಿ ಸರ್ಕಲ್‌ ಭಾರಿ ಹೈಡ್ರಾಮ ನಡೆಯುತ್ತಿದೆ. ನಿನ್ನೆಯಷ್ಟೇ ಸಾವರ್ಕರ್‌ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪಾರ್ಚನೆ ಮಾಡಲಾಗಿತ್ತು. ಆದರೆ ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ನಗರಸಭೆಗೆ ಪತ್ರ ಬರೆದಿದ್ದಾರೆ. ಬ್ರಹ್ಮಗಿರಿ ಸರ್ಕಲ್‌ ನಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಸಾವರ್ಕರ್‌ ಮತ್ತು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಫ್ಲೆಕ್ಸ್‌ ಹಾಕಿದ್ದರು. ಪಿಎಫ್‍ಐ ಮತ್ತು ಎಸ್ಡಿಪಿಐ ಅವರು ಇದರಿಂದ

ಉಡುಪಿ: ಸಾವರ್ಕರ್ ವಿಚಾರದಲ್ಲಿ ಹೈಡ್ರಾಮಾ| ಪ್ರತಿಮೆ ಸ್ಥಾಪಿಸಲು ನಗರಸಭೆಗೆ ಪತ್ರ‌ಬರೆದ ಯಶ್ಪಾಲ್ ಸುವರ್ಣ Read More »

ಮಗದೊಮ್ಮೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮಿಜಿ !

ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈ ಬಾರಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಜೀಣೋರ್ದ್ಧಾರವಾಗುತ್ತಿರುವ ಶ್ರೀ ಕುಮಾರ ಕಂಪಿನ ಸಿದ್ಧವೃಷಭೇಂದ್ರ ಕತೃ ಗದ್ದುಗೆಯ ಶಿಲಾಮಯ ಕಟ್ಟಡದ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ, ಕತೃ ಗದ್ದುಗೆಯ ದರ್ಶನ ಪಡೆದ ನಂತರ ಮಾತನಾಡಿದ್ದಾರೆ. ಶುಭಕೃತ ನಾಮಸಂವತ್ಸರ ದೇಶದಲ್ಲಿ ಅಶುಭವನ್ನುಂಟು ಮಾಡಲಿದೆ. ಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡ ಒಡೆದು ಗಾಯ ಮಾಡಿತು. ಪೂರ್ಣ ಪ್ರಮಾಣದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ

ಮಗದೊಮ್ಮೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮಿಜಿ ! Read More »

ಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ರಾಜ್ಯದ ಶಾಲೆಗಳಲ್ಲಿ ಖಾಲಿ ಇದ್ದ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಕುರಿತ ಪತ್ರಿಕಾ ಪ್ರಕಟಣೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಬಿಡುಗಡೆ ಮಾಡಿದ್ದು 2022ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಮೇ 21 ಮತ್ತು 22ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ವೈಯಕ್ತಿಕ ಅಂಕಗಳನ್ನು ಇಂದು(ಆ.17) ಇಲಾಖಾ ವೆಬ್ ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು

ಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶ ಪ್ರಕಟ Read More »

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಈ ಹುದ್ದೆಗೆ ನೇರ ನೇಮಕಾತಿ ಇಲ್ಲಿದೆ ವಿವರ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಆರಂಭವಾಗಿದ್ದು, ನಾಳೆ ಅಂದರೆ ಆಗಸ್ಟ್‌ 18ರಂದು ವಾಕ್ ಇನ್ ಇಂಟರ್ವ್ಯೂ ಮೂಲಕ ನೇರ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 18 ರಂದು ನಡೆಯುವ ವಾಕ್ ಇನ್ ಇಂಟರ್ವ್ಯೂ ನಲ್ಲಿ ಭಾಗವಹಿಸಬಹುದು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಈ ಹುದ್ದೆಗೆ ನೇರ ನೇಮಕಾತಿ ಇಲ್ಲಿದೆ ವಿವರ Read More »

ಸ್ಟಂಟ್ ಮಾಡಲು ಹೋಗಿ ಕಬಡ್ಡಿ ಆಟಗಾರ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೇ ಮೃತ್ಯು

ತಮಿಳುನಾಡು: ಇತ್ತೀಚೆಗೆ ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿ ಕಬಡ್ಡಿ ಆಟಗಾರ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದಲ್ಲಿರುವ ಮಾರಿಯಮ್ಮನ್ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಆಗಸ್ಟ್ 8 ರಂದು ಈ ಘಟನೆ ನಡೆದಿದೆ. 34 ವರ್ಷದ ವಿನೋದ್ ಕುಮಾರ್ ಕಬಡ್ಡಿ ಆಟಗಾರ ತನ್ನ ತಂಡದೊಂದಿಗೆ ಉತ್ಸವದಲ್ಲಿ ಭಾಗವಹಿಸಿದ್ದರು. ವಿನೋದ್ ಕುಮಾರ್ ಪಲ್ಟಿ ಹೊಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಪಲ್ಟಿ ಹೊಡೆಯುವಾಗ

ಸ್ಟಂಟ್ ಮಾಡಲು ಹೋಗಿ ಕಬಡ್ಡಿ ಆಟಗಾರ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೇ ಮೃತ್ಯು Read More »

ಇ‌ನ್ಮುಂದೆ ಪ್ರತಿಯೊಂದು ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ

ಬೆಂಗಳೂರು: ಇದೀಗ ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ನೀಡಿದ ಕರೆಯಂತೆ ಪ್ರತಿಯೊಂದು ಮನೆ ಮೇಲೂ ರಾಷ್ಟ್ರಧ್ವಜ ಹಾರಾಡಿದೆ. ಇದರ ಮಧ್ಯೆ ಕರ್ನಾಟಕದ ಕೆಲವು ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಪ್ರತಿನಿತ್ಯ ಹಾಡಿಸದಿರುವ ವಿಷಯ ಬಹಿರಂಗವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ. ಹೀಗಾಗಿ ಮದರಸಗಳು ಸೇರಿದಂತೆ ಪ್ರತಿಯೊಂದು ಶಾಲೆಗಳು ಇನ್ನು ಮುಂದೆ ರಾಷ್ಟ್ರಗೀತೆಯನ್ನು ಹಾಡುವುದು

ಇ‌ನ್ಮುಂದೆ ಪ್ರತಿಯೊಂದು ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ Read More »