ರಾಜ್ಯ

8 ತಿಂಗಳ ಗರ್ಭಿಣಿ ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಪೋಲಿಸ್ ಅಧಿಕಾರಿ

ಸಮಗ್ರ ನ್ಯೂಸ್ : ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮಂಗಳವಾರ ತನ್ನ ಗರ್ಭಿಣಿ ಪತ್ನಿಯನ್ನು ಹೊಡೆದು ಕೊಂದಿರುವ ಘಟನೆಯೊಂದು ನಡೆದಿದ್ದು, ಇದೀಗ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕಥುವಾ ಜಿಲ್ಲಾ ಪೊಲೀಸ್ ಲೈನ್‌ನಲ್ಲಿ ನಿಯೋಜಿತರಾಗಿರುವ ಎಸ್‌ಪಿಒ ಮೋಹನ್ ಲಾಲ್ ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಮೃತ ಮಹಿಳೆಯನ್ನು ಆಶಾದೇವಿ (32) ಎಂದು ಗುರುತಿಸಲಾಗಿದೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದು, ಬಿಲ್ಲವರ್ ಪ್ರದೇಶದ ಧರಾಲ್ಟಾ ಗ್ರಾಮದ ನಿವಾಸಿಯಾಗಿದ್ದಾರೆ. […]

8 ತಿಂಗಳ ಗರ್ಭಿಣಿ ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಪೋಲಿಸ್ ಅಧಿಕಾರಿ Read More »

ಜೋಳಿಗೆ ಯಲ್ಲಿ ಮಲಗಿಸಿದ್ದ 9ತಿಂಗಳ ಮಗು ನಾಪತ್ತೆ

ಸಮಗ್ರ ನ್ಯೂಸ್ : ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಜೋಳಿಗೆಯಲ್ಲಿ ಮಲಗಿಸಿದ್ದ 9 ತಿಂಗಳ ಮಗು ನಾಪತ್ತೆಯಾದ ಘಟನೆಯೊಂದು ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ. ಬೀರಪ್ಪ (9 ತಿಂಗಳು) ನಾಪತ್ತೆಯಾದ ಮಗು. ಗೌಡಪ್ಪ ವಕ್ರಾಣಿ ಎಂಬವರ ಪತ್ನಿ ಶಾಂತಮ್ಮ ಮರಕ್ಕೆ ಕಟ್ಟಿದ ಜೋಳಿಗೆಯಲ್ಲಿ ಮಗುವನ್ನು ಮಲಗಿಸಿ ಹೊಲದಲ್ಲಿ ಕಳೆ ಕೀಳುವ ಕೆಲಸಕ್ಕೆಂದು ತೆರಳಿದ್ದರು. ಸ್ವಲ್ಪ ಸಮಯದ ಬಳಿಕ ನೀರು ಕುಡಿಯಲೆಂದು ಮರದ ಸನಿಹ ಬಂದು ಜೋಳಿಗೆ ಕಡೆ ನೋಡಿದಾಗ ಅದರಲ್ಲಿ ಮಗು ಇರಲಿಲ್ಲ. ಕೂಡಲೇ

ಜೋಳಿಗೆ ಯಲ್ಲಿ ಮಲಗಿಸಿದ್ದ 9ತಿಂಗಳ ಮಗು ನಾಪತ್ತೆ Read More »

ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಉರುಳಿ ಬಿದ್ದು, 30ಕ್ಕೂ ಹೆಚ್ಚು ಜನ ಸೇಫ್

ಹಂಸಭಾವಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್‌ ಉರುಳಿ ಬಿದ್ದು, ಶಾಲಾ ಮಕ್ಕಳನ್ನೊಳಗೊಂಡ 30ಕ್ಕೂ ಅಧಿಕ ಜನ ಪ್ರಾಣಾಪಾಯದಿಂದ ಪಾರಾದ ಘಟನೆಯೊಂದು ಕೋಡ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ. ಉರುಳಿ ಬಿದ್ದ ಬಸ್‌ ರಾಣೆಬೆನ್ನೂರಿನಿಂದ ಕೋಡ ಮಾರ್ಗವಾಗಿ ಹಿರೇಕೆರೂರಿಗೆ ಹೋಗುತ್ತಿದ್ದ ವೇಳೆ ಕೋಡ ಗ್ರಾಮದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಉರುಳಿಬಿದ್ದಿದೆ. ಬಸ್‌ ಬಿದ್ದ ಕೂಡಲೇ ಒಳಗಿದ್ದ ಪ್ರಯಾಣಿಕರು ಹೊರಬರಲು ಆಗದೇ ಪರದಾಡುತ್ತಿದ್ದರು. ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ

ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಉರುಳಿ ಬಿದ್ದು, 30ಕ್ಕೂ ಹೆಚ್ಚು ಜನ ಸೇಫ್ Read More »

ಬಿಪಿಎಲ್ ಕುಟುಂಬಗಳ ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಪ್ರಮಾಣ ಕಡಿತ

ಬೆಂಗಳೂರು: ಬಿಪಿಎಲ್ ಕುಟುಂಬಗಳ ಅನ್ನಭಾಗ್ಯ ಯೋಜನೆ ಅಕ್ಕಿ ಪ್ರಮಾಣ ಕಡಿತವಾಗುವ ಸಾಧ್ಯತೆ ಇದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಮಾಧ್ಯಮದ ಜೊತೆಗೆ ಮಾತನಾಡಿ, ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಆಹಾರಧಾನ್ಯವನ್ನು ಸೆಪ್ಟಂಬರ್ ವರೆಗೆ ವಿತರಿಸಲಾಗುವುದು.ಸೆಪ್ಟೆಂಬರ್ ಗೆ ಅವಧಿ ಮುಗಿಯುವ ಕಾರಣ ಬಿಪಿಎಲ್ ಕುಟುಂಬದ ತಲಾ ಸದಸ್ಯರಿಗೆ 5 ಕೆಜಿ ಅಕ್ಕಿ ಕಡಿತವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಕೊರೋನಾ ಹಿನ್ನೆಲೆ ಬಡವರಿಗೆ ಆಹಾರ ಭದ್ರತೆ ಒದಗಿಸಲು ಕಳೆದ ಎರಡು ವರ್ಷಗಳಿಂದ ಕೇಂದ್ರ

ಬಿಪಿಎಲ್ ಕುಟುಂಬಗಳ ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಪ್ರಮಾಣ ಕಡಿತ Read More »

ಅಂಗನವಾಡಿ ಕಾರ್ಯಕರ್ತೆ,ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಉದ್ಯೋಗ ಸಮಾಚಾರ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 3 ಅಂಗನವಾಡಿ ಕಾರ್ಯಕರ್ತೆ ಹಾಗೂ 9 ಅಂಗನವಾಡಿ ಸಹಾಯಕಿಯರು ಸೋಮವಾರಪೇಟೆ ತಾಲ್ಲೂಕಿನ 16 ಅಂಗನವಾಡಿ ಸಹಾಯಕಿಯರು ಮತ್ತು ಪೊನ್ನಂಪೇಟೆ ತಾಲ್ಲೂಕಿನ 9 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 25 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಆನ್‍ಲೈನ್ ಮೂಲಕ ಭರ್ತಿ ಮಾಡಲು (Jobs In Kodagu) ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಕೆಲಸಗಳ ವಿವರಗಳೇನು? ಸಂಬಳ ಎಷ್ಟಿರುತ್ತೆ? ಏನೆಲ್ಲ ಜವಾಬ್ದಾರಿಗಳಿರುತ್ತೆ? ಎಲ್ಲ

ಅಂಗನವಾಡಿ ಕಾರ್ಯಕರ್ತೆ,ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ Read More »

ರಾಜ್ಯದಲ್ಲಿ ಇನ್ನೊಂದು ವಾರ ಭಾರೀ ಮಳೆ ಸಂಭವ| ಕರಾವಳಿಯಲ್ಲಿ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್ : ರಾಜ್ಯದಲ್ಲಿ ಕೆಲ ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಹೆಚ್ಚಾಗಲಿದೆ. ಇನ್ನೊಂದು ವಾರ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಕಾರಣದಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ವಾರ ರಾಜ್ಯದ ಬಹುತೇಕ ಕಡೆ ಉತ್ತಮ‌ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಈ ವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ ಹಗುರ ಮಳೆಯಾಗಲಿದೆ. ರಾಜ್ಯದ ಬಹುತೇಕ ಕಡೆ

ರಾಜ್ಯದಲ್ಲಿ ಇನ್ನೊಂದು ವಾರ ಭಾರೀ ಮಳೆ ಸಂಭವ| ಕರಾವಳಿಯಲ್ಲಿ ಅಲರ್ಟ್ ಘೋಷಣೆ Read More »

ಡ್ರಾಮ ಜೂನಿಯರ್ ಸೀಸನ್ 4ರ ವಿಜೇತೆ ಸಮೃದ್ಧಿ ಎಸ್ ಮೊಗವೀರ್

ಬೆಂಗಳೂರು: ಜೀ ಕನ್ನಡ ವಾಹಿನಿಯ ಡ್ರಾಮ ಜೂನಿಯರ್ ಸೀಸನ್ 4ರ ವಿಜೇತರಾಗಿ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್ ರವರು ಹೊರಹೊಮ್ಮಿದ್ದಾರೆ. ತಮ್ಮ ಅದ್ಭುತ ಅಭಿನಯದ ಮೂಲಕ ಮನಸೂರೆಗೊಂಡಿದ್ದ 15 ಮಕ್ಕಳು ಫೈನಲ್ ಗೆ ಆಯ್ಕೆಯಾಗಿದಿದ್ದು ವಿಶೇಷವಾಗಿತ್ತು. ಅವರಲ್ಲಿ ನಾಲ್ಕು ಮಕ್ಕಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದು ತ್ರಿವಳಿ ರತ್ನಗಳು ಉತ್ತಮರಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಗುಣಮಟ್ಟ ಹಾಗು ವಿಶೇಷತೆಗೆ ಸಾಕ್ಷಿಯಂತೆ ಇಬ್ಬರು

ಡ್ರಾಮ ಜೂನಿಯರ್ ಸೀಸನ್ 4ರ ವಿಜೇತೆ ಸಮೃದ್ಧಿ ಎಸ್ ಮೊಗವೀರ್ Read More »

4 ವರ್ಷದ ಮಗುವನ್ನು ನೀರಿನ ಟಬ್ ನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಎಚ್‌ಎಎಲ್‌ ಸಮೀಪದ ದೊಡ್ಡನೆಕ್ಕುಂದಿಯಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೃಹಿಣಿ ತನ್ನ ನಾಲ್ಕು ವರ್ಷದ ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ನಡೆದಿದೆ. ಮೃತ ಮಗುವನ್ನು ಸಂಯುಕ್ತಾ (4) ಎಂದು ಗುರುತಿಸಲಾಗಿದ್ದು, ಕೊಲೆಗೈದು ನೇಣು ಬಿಗಿದುಕೊಂಡಿದ್ದ ಗಾಯತ್ರಿ ದೇವಿ (23) ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಯುಕ್ತ ಜೊತೆ ದೊಡ್ಡನೆಕ್ಕುಂದಿಯ ಅಪಾರ್ಟ್‌ಮೆಂಟ್‌ನಲ್ಲಿ ತಮಿಳುನಾಡು ಮೂಲದ ನರೇಂದ್ರ ಹಾಗೂ ಗಾಯತ್ರಿ ದೇವಿ ದಂಪತಿ, ಮಗು ವಾಸವಾಗಿದ್ದು, ಕೆಲಸದ ನಿಮಿತ್ತ ಪತಿ ನರೇಂದ್ರ ಭಾನುವಾರ

4 ವರ್ಷದ ಮಗುವನ್ನು ನೀರಿನ ಟಬ್ ನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆಗೆ ಯತ್ನ Read More »

ಮೈಕ್ ನಲ್ಲಿ ಅಜಾನ್ ಕೂಗುವುದಕ್ಕೆ ನಿರ್ಬಂಧ ವಿಧಿಸಲಾಗದು| ಪಿಐಎಲ್ ಪುರಸ್ಕರಿಸಲು ಹೈಕೋರ್ಟ್ ನಕಾರ

ಸಮಗ್ರ ನ್ಯೂಸ್: ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದನ್ನು ನಿರ್ಬಂಧಿಸುವಂತೆ ಕೋರಿದ್ದ ಪಿಐಎಲ್ ಅನ್ನು ಪುರಸ್ಕರಿಸಲು ನಿರಾಕರಿಸಿರುವ ಹೈಕೋರ್ಟ್ ಅಜಾನ್ ನಿಂದ ಜನರ ಮೂಲಭೂತ ಹಕ್ಕು ಮೊಟಕುಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಬೆಂಗಳೂರಿನ ಆರ್. ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಅರ್ಜಿದಾರರ ಪರ ವಕೀಲರು ಅಜಾನ್ ನಲ್ಲಿರುವ ವಿಚಾರಗಳು ಇತರ ಧರ್ಮಗಳ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಧ್ವನಿವರ್ಧಕಗಳ ಮೂಲಕ ಕೂಗುವುದನ್ನು ತಡೆಯಬೇಕು.

ಮೈಕ್ ನಲ್ಲಿ ಅಜಾನ್ ಕೂಗುವುದಕ್ಕೆ ನಿರ್ಬಂಧ ವಿಧಿಸಲಾಗದು| ಪಿಐಎಲ್ ಪುರಸ್ಕರಿಸಲು ಹೈಕೋರ್ಟ್ ನಕಾರ Read More »

ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು

ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು ಹುಬ್ಬಳ್ಳಿ ಜಿಲ್ಲೆ ಕಲಘಟಗಿ ತಾಲ್ಲೂಕು ರಾಮನಾಳ ಕ್ರಾಸ್ ಬಳಿ ಕ್ರೂಸರ್ ವಾಹನ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾನೆ. ಕಿಮ್ಸ್ ನಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಕ್ರೂಸರ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ರಾಮನಾಳ ಕ್ರಾಸ ಬಳಿ ಅಪಘಾತ ಸಂಭವಿಸಿದೆ.ಮೃತರಾದವರು ಹಳಿಯಾಳ ತಾಲ್ಲೂಕಿನ ನಂದಿಗಟ್ಟ ಗ್ರಾಮದ ಶಿವನಗೌಡ ಪಾಟೀಲ, ಅಮೃತ ಪಾಟೀಲ ಮೃತಪಟ್ಟವರು. ಚಾಲಕ ಮಾರುತಿ ಎಂಬ

ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು Read More »