ರಾಜ್ಯ

ಮಡಿಕೇರಿ: ಹುಲಿ ದಾಳಿಗೆ ಬಾಲಕ ಬಲಿ

ಸಮಗ್ರ ನ್ಯೂಸ್: 12 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿದ್ದು, ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ ನಡೆದಿದೆ. ಚೇತನ್(12) ಮೃತ ಬಾಲಕ. ದಾಳಿ ಮಾಡಿದ ಹುಲಿ ಬಾಲಕನನ್ನು ಕೊಂದು ತೊಡೆ ಭಾಗವನ್ನು ತಿಂದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಡಿಕೇರಿ: ಹುಲಿ ದಾಳಿಗೆ ಬಾಲಕ ಬಲಿ Read More »

ವ್ಯಾಲಂಟೈನ್ ಡೇ ದಿನ ಮರುಮದುವೆ ಆಗಲಿದ್ದಾರೆ ಹಾರ್ದಿಕ್ ಪಾಂಡ್ಯ!

ಸಮಗ್ರ ನ್ಯೂಸ್: ಟೀಂ ಇಂಡಿಯಾದ ಆಟಗಾರ ಹಾರ್ದಿಕ್​ ಪಾಂಡ್ಯ​ ಮರು ಮದುವೆಯಾಗಲು ಮುಂದಾಗಿದ್ದಾರೆ. ವ್ಯಾಲೆಂಟೈನ್ಸ್​ ಡೇ ದಿನ‌ ಅವರು ಮದುವೆಯಾಗಲಿದ್ದಾರಂತೆ. ಅಂದ ಹಾಗೆಯೇ, ಪ್ರೇಮಿಗಳ ದಿನಾಚರಣೆಗೆ ಒಂದೇ ದಿನ ಬಾಕಿ ಇದ್ದು, ಫೆಬ್ರವರಿ 13ರಂದು ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬಂದಿದೆ. ಹಾರ್ದಿಕ್ ಪಾಂಡ್ಯ ಬಾಲಿವುಡ್​ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಪ್ರೀತಿಸಿ ಬಳಿಕ ಗಂಡು ಮಗುವಿಗೆ ತಂದೆಯಾದ ಬಗ್ಗೆ ತಿಳಿದೇ ಇದೆ. ಅದರೀಗ ಮರು ಮದುವೆಯಾಗಲು ಈ ಕ್ರಿಕೆಟಿಗ ಮುಂದಾಗಿದ್ದಾರೆ. ಅಂದ ಹಾಗೆ ವಧು

ವ್ಯಾಲಂಟೈನ್ ಡೇ ದಿನ ಮರುಮದುವೆ ಆಗಲಿದ್ದಾರೆ ಹಾರ್ದಿಕ್ ಪಾಂಡ್ಯ! Read More »

ಅರಸೀಕೆರೆಗೆ ಹೊಸ ಅಭ್ಯರ್ಥಿ ಘೋಷಿಸಿದ ಜೆಡಿಎಸ್| ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಟಾಂಗ್

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದ್ದು, ಈ ಬಾರಿ ಹಾಸನ ಜಿಲ್ಲೆಯ ಅರಸಿಕೆರೆ ಕ್ಷೇತ್ರದ ಹಾಲಿ ಅಭ್ಯರ್ಥಿ ಶಿವಲಿಂಗೇಗೌಡರನ್ನು ಕೈಬಿಟ್ಟು ಹೊಸ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಲಾಗಿದೆ. ಅರಸಿಕೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬಾಣಾವರ ಅಶೋಕ್ ಗೆ ಅರಸಿಕೆರೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಸೆಡ್ಡು ಹೊಡೆದಿದ್ದಾರೆ. ಸಮಾವೇಶದಲ್ಲಿ ಹಾಲಿ ಶಾಸಕ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ

ಅರಸೀಕೆರೆಗೆ ಹೊಸ ಅಭ್ಯರ್ಥಿ ಘೋಷಿಸಿದ ಜೆಡಿಎಸ್| ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಟಾಂಗ್ Read More »

ಡಿಕೆ ಬ್ರದರ್ಸ್ ನ ಹಾಡಿ ಹೊಗಳಿದ ಸಚಿವ ಡಾ.ಸುಧಾಕರ್

ಸಮಗ್ರ ನ್ಯೂಸ್: ಕನಕಪುರದಲ್ಲಿ ನಡೆದ ತಾಯಿ ಮತ್ತು ಮಕ್ಕಳ ಅಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಾಡಿ ಹೊಗಳಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಡಿ.ಕೆ.ಶಿವಕುಮಾರ್ ಅವರು ಯಾಕೆ ಗೆಲ್ಲುತ್ತಾರೆ ಅಂತಾ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಮೊದಲು ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲುತ್ತಿದ್ದರು. ಬರುಬರುತ್ತಾ ಡಿ.ಕೆ.

ಡಿಕೆ ಬ್ರದರ್ಸ್ ನ ಹಾಡಿ ಹೊಗಳಿದ ಸಚಿವ ಡಾ.ಸುಧಾಕರ್ Read More »

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ‘ವಿಶ್ವಮಾನವ ಕುವೆಂಪು’ ಹೆಸರು – ಬಿ.ಎಸ್. ಯಡಿಯೂರಪ್ಪ

ಸಮಗ್ರ ನ್ಯೂಸ್: ಶಿವಮೊಗ್ಗ ಏರ್ ಪೋರ್ಟ್ ಗೆ ವಿಶ್ವಮಾನವ ಕುವೆಂಪು ಹೆಸರಿಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.‌ ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ ಶಿವಮೊಗ್ಗ ಏರ್ ಪೋರ್ಟ್ ಗೆ ನನ್ನ ಹೆಸರು ಇಡಬೇಡಿ ಎಂದು ಈಗಾಗಲೇ ಮನವಿ ಮಾಡಿದ್ದೇನೆ. ಶಿವಮೊಗ್ಗ ಏರ್ ಪೋರ್ಟ್ ಗೆ ಕುವೆಂಪು ಹೆಸರಿಡುವಂತೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಫೆ.27 ರಂದು ಶಿವಮೊಗ್ಗ ಏರ್ ಪೋರ್ಟ್ ಗೆ ಮೋದಿ ಬರುತ್ತಾರೆ. ಮೋದಿ ಅವರೇ ಕುವೆಂಪು ಹೆಸರನ್ನು ಘೋಷಣೆ ಮಾಡುತ್ತಾರೆ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ‘ವಿಶ್ವಮಾನವ ಕುವೆಂಪು’ ಹೆಸರು – ಬಿ.ಎಸ್. ಯಡಿಯೂರಪ್ಪ Read More »

ಇಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ| ನಾಳೆ ಏರೋ ಇಂಡಿಯಾ-2023 ಉದ್ಘಾಟನೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ನಾಳೆ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಐದು ದಿನಗಳ ಕಾಲ ನಡೆಯುವ ಏರೋ ಇಂಡಿಯಾ-2023ರ 14 ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಇಂದು ರಾತ್ರಿ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ತಂಗಲಿದ್ದಾರೆ. ಫೆಬ್ರವರಿ 13 ರ ಸೋಮವಾರ ಬೆಳಗ್ಗೆ 9.30 ಕ್ಕೆ ಐದು ದಿನಗಳ ಕಾಲ ನಡೆಯುವ ಏರೋ ಇಂಡಿಯಾ-2023ರ 14 ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ

ಇಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ| ನಾಳೆ ಏರೋ ಇಂಡಿಯಾ-2023 ಉದ್ಘಾಟನೆ Read More »

ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಆರೀಫ್ ಅರೆಸ್ಟ್| ಗೃಹ‌ಸಚಿವ ಆರಗ‌ ಜ್ಞಾನೇಂದ್ರ ಹೇಳಿಕೆ

ಸಮಗ್ರ ನ್ಯೂಸ್: ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ರಾಜ್ಯ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬಂಧಿತ ಆರೀಫ್ ಎಂಬಾತ ವಿದೇಶ ಪ್ರಯಾಣಕ್ಕೆ ತಯಾರಿ ನಡೆಸಿದ್ದ ಎನ್ನಲಾಗಿದ್ದು, ಅದಕ್ಕೂ ಮುನ್ನವೇ ಪೊಲೀಸರು ಈತನನ್ನು ವಶಕ್ಕೆ ಪಡೆದಿರುವುದಕ್ಕೆ ಪೊಲೀಸರನ್ನು ಅಭಿನಂದಿಸಿದ್ದಾರೆ.ರಾಜ್ಯ ಪೊಲೀಸರು ಕೇಂದ್ರದ ಬೇಹುಗಾರಿಕಾ ಸಂಸ್ಥೆಯ ಅಧಿಕಾರಿಗಳ ಸಹಾಯದಿಂದ ಈತನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆದಿದೆ. ದೇಶದಲ್ಲಿ ಕೋಮು ಭಾವನೆ ಕೆರಳಿಸಿ ಅಸ್ಥಿರತೆ ಉಂಟು ಮಾಡುತ್ತಿರುವ ಸಂಘಟನೆಗಳು

ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಆರೀಫ್ ಅರೆಸ್ಟ್| ಗೃಹ‌ಸಚಿವ ಆರಗ‌ ಜ್ಞಾನೇಂದ್ರ ಹೇಳಿಕೆ Read More »

ನೆಹರೂ ಹೆಸರನ್ನು ಸರ್ ನೇಮ್ ಅಲ್ಲಿ ಯಾಕೆ ಬಳಸಲ್ಲ ಎಂದ ಮೋದಿ| ಪ್ರಧಾನಿ ಮೋದಿಗೆ ಭಾರತೀಯ ಸಂಸ್ಕೃತಿಯ ಕನಿಷ್ಠ ತಿಳುವಳಿಕೆಯೂ ಇಲ್ಲ ಎಂದು ಕಾಂಗ್ರೆಸ್ ವ್ಯಂಗ್ಯ

ಸಮಗ್ರ ನ್ಯೂಸ್: ರಾಜ್ಯಸಭೆಯಲ್ಲಿ ಗಾಂಧಿಗಳು ನೆಹರೂ ಹೆಸರನ್ನು ಬಳಸುವುದಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷ ಕಾಂಗ್ರೆಸ್, ಭಾರತದಲ್ಲಿ ಯಾರಾದರೂ ತಮ್ಮ ತಾಯಿಯ ಅಜ್ಜನ ಸರ್ನೇಮ್ ಅನ್ನು ಬಳಸುತ್ತಾರೆಯೇ?ಎಂದು ಪ್ರಶ್ನಿಸಿದೆ. ಪ್ರಧಾನಿ ಮೋದಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಕನಿಷ್ಟ ತಿಳುವಳಿಕೆಯೂ ಇಲ್ಲ. ದೇಶವನ್ನು ದೇವರೇ ಕಾಪಾಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರು, ನೆಹರೂ ಸರ್ ನೇಮ್ ಬಳಸುವುದಕ್ಕೆ ಗಾಂಧಿಗಳು ಏಕೆ ನಾಚಿಕೆಪಡುತ್ತಾರೆ ಎಂದು ಪ್ರಶ್ನಿಸಿದರು.

ನೆಹರೂ ಹೆಸರನ್ನು ಸರ್ ನೇಮ್ ಅಲ್ಲಿ ಯಾಕೆ ಬಳಸಲ್ಲ ಎಂದ ಮೋದಿ| ಪ್ರಧಾನಿ ಮೋದಿಗೆ ಭಾರತೀಯ ಸಂಸ್ಕೃತಿಯ ಕನಿಷ್ಠ ತಿಳುವಳಿಕೆಯೂ ಇಲ್ಲ ಎಂದು ಕಾಂಗ್ರೆಸ್ ವ್ಯಂಗ್ಯ Read More »

ನಂದಿನಿ ಈಗ ಮತ್ತಷ್ಟು ತುಟ್ಟಿ| ಹಾಲಿನ ದರ ₹3 ಹೆಚ್ಚಿಸಿ‌ ಕೆಎಂಎಫ್ ಆದೇಶ

ಸಮಗ್ರ ನ್ಯೂಸ್: ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ನಿಂದ ಹೆಚ್ಚಳ ಮಾಡಲಾಗಿತ್ತು. ಈಗ ನಂದಿನಿ ಜಂಬೋ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಿ ಆದೇಶಿಸಿದೆ.ಈ ದರ ಇಂದಿನಿಂದ ಜಾರಿಗೆ ಬರಲಿದೆ ಎಂಬುದಾಗಿ ಹೇಳಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಕೆಎಂಎಫ್, ಜಂಬೋ ಪ್ಯಾಕೇಟ್ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದ ಹಿನ್ನಲೆಯಲ್ಲಿ ನಂದಿನಿ ಜಂಬೂ ಪ್ಯಾಕೇಟ್ ಹಾಲಿನ ದರಗಳು ಫೆಬ್ರವರಿ 11 ರ ಇಂದಿನಿಂದ

ನಂದಿನಿ ಈಗ ಮತ್ತಷ್ಟು ತುಟ್ಟಿ| ಹಾಲಿನ ದರ ₹3 ಹೆಚ್ಚಿಸಿ‌ ಕೆಎಂಎಫ್ ಆದೇಶ Read More »

ಮೂಡಿಗೆರೆ: ಪರಿಹಾರಕ್ಕಾಗಿ ಕಾದು ಸುಸ್ತಾದ ನಿರಾಶ್ರಿತರಿಂದ ತಾ.ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ!

ಸಮಗ್ರ ನ್ಯೂಸ್: ಪರಿಹಾರಕ್ಕಾಗಿ ನಾಲ್ಕು ವರ್ಷದಿಂದ ಕಾದು ಕಾದು ಸುಸ್ತಾದ ನಿರಾಶ್ರಿತರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದಿದೆ. 2019ರ ಆಗಸ್ಟ್ 9ರಂದು ಧಾರಾಕಾರ ಮಳೆಯಾಗಿದ್ದು, ಮಲೆಮನೆ-ಮಧುಗುಂಡಿ ಗ್ರಾಮಗಳು ಅಸ್ತವ್ಯಸ್ತಗೊಂಡಿದ್ದವು. ಈ ಗ್ರಾಮದಲ್ಲಿ ಮನೆಗಳು ಇರುವ ಕುರುಹುಗಳು ಇರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಗುಡ್ಡದ ಮಣ್ಣು ಕುಸಿದು ಬಿದ್ದು ಊರಿಗೆ ಊರೇ ನೆಲಸಮವಾಗಿತ್ತು. ಈ ವೇಳೆ ಜನರು ರಾತ್ರೋರಾತ್ರಿ ಮನೆಯಿಂದ ಓಡಿಬಂದು ಜೀವ ಉಳಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ,

ಮೂಡಿಗೆರೆ: ಪರಿಹಾರಕ್ಕಾಗಿ ಕಾದು ಸುಸ್ತಾದ ನಿರಾಶ್ರಿತರಿಂದ ತಾ.ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ! Read More »