ರಾಜ್ಯ

ಫೆ.11 ಕೇಂದ್ರ ಗೃಹ ಸಚಿವ ದ.ಕ ಜಿಲ್ಲಾ ಪ್ರವಾಸ| ಸಚಿವರ ರೋಡ್ ಶೋ ರದ್ದು; ಕೋರ್ ಕಮಿಟಿ ಸಭೆಯಷ್ಟೇ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೆ.11 ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಡ್ ಶೋ ವನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು, ಅಮಿತ್ ಶಾ ಅವರು ಪುತ್ತೂರಿನಿಂದ ಮಂಗಳೂರಿಗೆ ಬರುವ ಕಾರ್ಯಕ್ರಮದಲ್ಲಿ ಅರ್ಧ ಗಂಟೆ ವಿಳಂಬವಾಗಲಿದೆ. ಕತ್ತಲೆಯಾಗುವ ಕಾರಣ ಭದ್ರತಾ ದೃಷ್ಟಿಯಿಂದ ರೋಡ್ ಶೋ ರದ್ದುಪಡಿಸಲಾಗಿದೆ ಎಂದರು. ಅಲ್ಲದೆ ಅಮಿತ್ ಶಾ […]

ಫೆ.11 ಕೇಂದ್ರ ಗೃಹ ಸಚಿವ ದ.ಕ ಜಿಲ್ಲಾ ಪ್ರವಾಸ| ಸಚಿವರ ರೋಡ್ ಶೋ ರದ್ದು; ಕೋರ್ ಕಮಿಟಿ ಸಭೆಯಷ್ಟೇ Read More »

ಸರ್ಕಾರದಿಂದ ಮನೆಕಟ್ಟಲು ಬಂದ ಹಣದೊಂದಿಗೆ ಲವ್ವರ್ಸ್ ಜೊತೆ ಎಸ್ಕೇಪ್ ಆದ ಮಹಿಳೆಯರು| ಹಣ, ಹೆಂಡತಿ ಇಲ್ಲದೆ ಗಂಡಂದಿರಿಗೆ ಗಲಿಬಿಲಿ| ಹೀಗೊಂದು ವಿಚಿತ್ರ ಸ್ಟೋರಿ

ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ (ಪಿಎಂಎವೈ) ತಮ್ಮ ಅಕೌಂಟ್​ಗೆ ಬರುವ ಹಣವನ್ನು ತೆಗೆದುಕೊಂಡು ನಾಲ್ವರು ಮಹಿಳೆಯರು ತಮ್ಮ ಗಂಡಂದಿರನ್ನ ಬಿಟ್ಟು ಲವರ್​ ಜೊತೆ ಎಸ್ಕೇಪ್​ ಆಗಿದ್ದಾರೆ. ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ 4 ಪಂಚಾಯತಿ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆಗಳು ನಡೆದಿವೆ. ಆರ್ಥಿಕವಾಗಿ ಹಿಂದುಳಿದ ಬಡವರು ಮನೆ ನಿರ್ಮಿಸಿಕೊಳ್ಳಲೆಂದು ಕೇಂದ್ರ ಸರ್ಕಾರವು ಪಿಎಂಎವೈ ಯೋಜನೆಯಡಿ ಮಹಿಳೆಯರ ಹೆಸರಲ್ಲೇ ಮನೆ ನಿರ್ಮಿಸುತ್ತದೆ. ಅದರಂತೆ ಹಣವನ್ನು ಕೂಡ ಮಹಿಳೆಯರ ಹೆಸರಿನ ಖಾತೆಗೆ ಸಂದಾಯ ಮಾಡುತ್ತದೆ. ಈ ರೀತಿ ಸಂದಾಯ

ಸರ್ಕಾರದಿಂದ ಮನೆಕಟ್ಟಲು ಬಂದ ಹಣದೊಂದಿಗೆ ಲವ್ವರ್ಸ್ ಜೊತೆ ಎಸ್ಕೇಪ್ ಆದ ಮಹಿಳೆಯರು| ಹಣ, ಹೆಂಡತಿ ಇಲ್ಲದೆ ಗಂಡಂದಿರಿಗೆ ಗಲಿಬಿಲಿ| ಹೀಗೊಂದು ವಿಚಿತ್ರ ಸ್ಟೋರಿ Read More »

ಶಿವಮೊಗ್ಗ ವಿಮಾನನಿಲ್ದಾಣಕ್ಕೆ ನನ್ನ ಹೆಸರು ಬೇಡ, ಮಹನೀಯರ ಹೆಸರಿಡಿ| ಸಿಎಂಗೆ ಪತ್ರ ಬರೆದ ಮಾಜಿ‌ ಸಿಎಂ ಯಡಿಯೂರಪ್ಪ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪ ಅವರ ಹೆಸರಿಡುವುದಾಗಿ ಘೋಷಿಸಿದ್ದರು. ಅಲ್ಲದೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ತಮ್ಮ ಹೆಸರು ಇಡೋದು ಬೇಡ ಮಹನೀಯರ ಹೆಸರಿಡುವಂತೆ ಸಿಎಂಗೆ ಪತ್ರ ಬರೆದು ಯಡಿಯೂರಪ್ಪ ಕೋರಿದ್ದಾರೆ. ಈ ಕುರಿತಂತೆ ಸಿಎಂ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪತ್ರ ಬರೆದಿದ್ದು, ಶಿವಮೊಗ್ಗ ಜಿಲ್ಲೆಯ ಬಹು ದಿನಗಳ ಕನಸು ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣದ ಕಾಮಗಾರಿಯನ್ನು ಇತ್ತೀಚೆಗೆ

ಶಿವಮೊಗ್ಗ ವಿಮಾನನಿಲ್ದಾಣಕ್ಕೆ ನನ್ನ ಹೆಸರು ಬೇಡ, ಮಹನೀಯರ ಹೆಸರಿಡಿ| ಸಿಎಂಗೆ ಪತ್ರ ಬರೆದ ಮಾಜಿ‌ ಸಿಎಂ ಯಡಿಯೂರಪ್ಪ Read More »

“ಪಿಲಿ”ಗೆ ಕೋರ್ಟ್ ತಡೆ!!

ಸಮಗ್ರ ನ್ಯೂಸ್: ಫೆ.10 ರಂದು ಬಿಡುಗಡೆಯಾಗಲಿರುವ “ಪಿಲಿ”ತುಳು ಸಿನಿಮಾ ಥಿಯೇಟರ್ ಗಳಲ್ಲಿ ಪ್ರದರ್ಶಿಸದಂತೆ ನ್ಯಾಯಾಲಯ ತಡೆ ನೀಡಿದೆ. ಈ ಚಿತ್ರಕ್ಕೆ 40 ಲಕ್ಷ ರೂ.ಬಂಡವಾಳ ಹೂಡಿದ್ದ ನಿರ್ಮಾಪಕ ಮಂಜೀತ್ ನಾಗರಾಜ್ ಅವರ ಬದಲು ಪುತ್ತೂರಿನ ಭರತ್ ಭಂಡಾರಿ ಎಂಬಾತ ಬೇರೆ ನಿರ್ಮಾಪಕರ ಹೆಸರನ್ನು ಬಳಸಿಕೊಂಡು ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು ಇದಕ್ಕೆ ತಡೆ ನೀಡುವಂತೆ ನಿರ್ಮಾಪಕ ಮಂಜೀತ್ ನಾಗರಾಜ್ ಅವರು ನ್ಯಾಯಾಲಯದ ಮೊರೆಹೋಗಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ನಾಳೆ ಬಿಡುಗಡೆಗೊಳ್ಳಲಿರುವ “ಪಿಲಿ” ಚಿತ್ರದ ಪ್ರದರ್ಶನವನ್ನು ತಡೆ ಹಿಡಿದಿದೆ.

“ಪಿಲಿ”ಗೆ ಕೋರ್ಟ್ ತಡೆ!! Read More »

ಜಿಎಸ್ಟಿ ವಂಚನೆ ಆರೋಪ| ಅದಾನಿ ಗ್ರೂಪ್ಸ್ ಮೇಲೆ‌ ಅಧಿಕಾರಿಗಳಿಂದ ದಾಳಿ

ಸಮಗ್ರ ನ್ಯೂಸ್: ಜಿಎಸ್‌ಟಿ ಜಮಾ ಮಾಡಿಲ್ಲ ಎಂಬ ಆರೋಪದಡಿ ಗೌತಮ್​ ಅದಾನಿ ಒಡೆತನದ ಅದಾನಿ ಕಂಪನಿ ಮೇಲೆ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯ ತೆರಿಗೆ ಇಲಾಖೆಯು ಪರ್ವಾನೂರಿನಲ್ಲಿರುವ ಅದಾನಿ ಕಂಪನಿ ಮೇಲೆ ದಾಳಿ ಮಾಡಿದೆ. ಬುಧವಾರದಂದು ರಾತ್ರಿ ವೇಳೆ ಹಿಮಾಚಲ ಪ್ರದೇಶದಲ್ಲಿರುವ ಅದಾನಿ ವಿಲ್ಮಾರ್ ಗ್ರೂಪ್​ನ ಸಿ ಆಯಂಡ್​ ಎಫ್​ ಸ್ಟೋರ್​ಗಳ ಮೇಲೆ ​ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಕಳೆದ 5 ವರ್ಷದಿಂದ ಸರಕು ಮತ್ತು

ಜಿಎಸ್ಟಿ ವಂಚನೆ ಆರೋಪ| ಅದಾನಿ ಗ್ರೂಪ್ಸ್ ಮೇಲೆ‌ ಅಧಿಕಾರಿಗಳಿಂದ ದಾಳಿ Read More »

ಕೊಟ್ಟಿಗೆಹಾರ: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

ಸಮಗ್ರ ನ್ಯೂಸ್:ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಾರ್ಮಾಡಿ ಘಾಟ್‌ನ ಮಲಯಮಾರುತ ಬಳಿ ಬುಧವಾರ ನಡೆದಿದೆ. ಶಿಕಾರಿ ಮಾಡುವವರ ಗುಂಡಿಗೆ ಕಡವೆ ಬಲಿಯಾಗಿರುವ ಸಾಧ್ಯತೆ ಇದ್ದು ಬುಧವಾರ ಚಾರ್ಮಾಡಿ ಘಾಟ್‌ನ ಮಲಯಮಾರುತದ ಬಳಿ ಹೆದ್ದಾರಿ ಬದಿಯ ಚರಂಡಿಯಲ್ಲಿ ಕಡವೆ ಮೃತದೇಹ ಪತ್ತೆಯಾಗಿದೆ. ಕಡವೆಯ ಕಿವಿ, ತೊಡೆ, ಹೊಟ್ಟೆ ಭಾಗದಲ್ಲಿ ಗುಂಡು ತಗುಲಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ವರ್ಷದ ಕಡವೆ ಇದಾಗಿದ್ದು ಚಾರ್ಮಾಡಿ ಘಾಟ್ ಹೆದ್ದಾರಿ ಮಾರ್ಗವಾಗಿ ಪ್ರಯಾಣಿಸುವ ವಾಹನ ಚಾಲಕರು ಕಡವೆ

ಕೊಟ್ಟಿಗೆಹಾರ: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ Read More »

ಪುತ್ತೂರು: ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ| ಫೆ.11 ರಂದು ಕೆಎಸ್ಆರ್‌ ಟಿಸಿ ಸಂಚಾರದಲ್ಲಿ ವ್ಯತ್ಯಯ

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಫೆ.11ರಂದು ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಸಚಿವರುಗಳು ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ KSRTC ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ನಿಯೋಜನೆ ಮಾಡಲು ಕಾರ್ಯಕ್ರಮದ ಸಂಯೋಜಕರಿಂದ ಬೇಡಿಕೆ ಬಂದಿದೆ. ಅದರಂತೆ ಪುತ್ತೂರು ವಿಭಾಗದಿಂದ ಸದರಿ ಕಾರ್ಯಕ್ರಮದ ಪ್ರಯುಕ್ತ ಗರಿಷ್ಠ ಸಂಖ್ಯೆಯಲ್ಲಿ ಬಸ್ಸುಗಳನ್ನು ನಿಯೋಜನೆ

ಪುತ್ತೂರು: ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ| ಫೆ.11 ರಂದು ಕೆಎಸ್ಆರ್‌ ಟಿಸಿ ಸಂಚಾರದಲ್ಲಿ ವ್ಯತ್ಯಯ Read More »

ಹಿಂದೂ ಕಾರ್ಯಕರ್ತರು ಅಣಬೆಗಳಿದ್ದಂತೆ, ಹೆಚ್ಚು ಬಾಳಿಕೆ ಇಲ್ಲ!! ವಿವಾದಾತ್ಮಕ ಹೇಳಿಕೆ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು| ಶಾಸಕರ ಹೇಳಿಕೆ ವಿರುದ್ದ ಕಾರ್ಯಕರ್ತರು ಗರಂ

ಸಮಗ್ರ ನ್ಯೂಸ್: ನಾಡಿನ ಹಿಂದೂ ಕಾರ್ಯಕರ್ತರನ್ನು ಅಣಬೆಗೆ ಹೋಲಿಸುವ ಮೂಲಕ ಪುತ್ತೂರು ಶಾಸಕ ಸಂಜೀವ ಮಠಂದೂರು ಚುನಾವಣೆ ಹೊತ್ತಿನಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇನ್ನು ಶಾಸಕರ ವಿರುದ್ದ ಹಿಂದೂ ಸಂಘಟನೆಗಳು ಕಿಡಿಕಿಡಿಕಾರಿವೆ. ಶಾಸಕ ಸಂಜೀವ ಮಠಂದೂರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹಿಂದೂಗಳನ್ನು ‘ಅಣಬೆ’ ಗೆ ಹೋಲಿಸಿ ಮಾತನಾಡಿದ್ದಾರೆ. ಈಗ ‘ಅಣಬೆ’ ಹೇಳಿಕೆ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪುತ್ತೂರಿಗೆ ಅಮಿತ್ ಶಾ ಭೇಟಿಗೆ ಶುಭಕೋರಿ ನಗರದಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಬೆಂಬಲಿಗರು ಕಟೌಟ್, ಬ್ಯಾನರ್

ಹಿಂದೂ ಕಾರ್ಯಕರ್ತರು ಅಣಬೆಗಳಿದ್ದಂತೆ, ಹೆಚ್ಚು ಬಾಳಿಕೆ ಇಲ್ಲ!! ವಿವಾದಾತ್ಮಕ ಹೇಳಿಕೆ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು| ಶಾಸಕರ ಹೇಳಿಕೆ ವಿರುದ್ದ ಕಾರ್ಯಕರ್ತರು ಗರಂ Read More »

ಸುರತ್ಕಲ್ ಹಲ್ಲೆ ಪ್ರಕರಣ; ಇತ್ತಂಡಗಳಿಂದ‌ ದೂರು ದಾಖಲು

ಸಮಗ್ರ‌ ನ್ಯೂಸ್: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಸುರತ್ಕಲ್‌ ಕಾಟಿಪಳ್ಳ ನಿವಾಸಿ ಫಾಝಿಲ್ ಸಹೋದರ ಆದಿಲ್ ಮೇಲೆ ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದು ಇಬ್ಬರು ಯುವಕರು ಹಲ್ಲೆ ನಡೆಸಿರುವ ಘಟನೆ ಕಾಟಿಪಳ್ಳ ಬಳಿಯ ಗಣೇಶಪುರದಲ್ಲಿ ಫೆ.8ರ ರಾತ್ರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳಿಂದ ದೂರು‌ ದಾಖಲಾಗಿದೆ. ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಆದಿಲ್ ಮತ್ತು ನಾಗೇಶ್ ಎಂಬವರ ನಡುವೆ ವಾಗ್ವಾದ ನಡೆದಿತ್ತು. ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದು ನಾಗೇಶ್ ಮತ್ತು ಆತನ ಜೊತೆಗಿದ್ದವರು

ಸುರತ್ಕಲ್ ಹಲ್ಲೆ ಪ್ರಕರಣ; ಇತ್ತಂಡಗಳಿಂದ‌ ದೂರು ದಾಖಲು Read More »

ಪುತ್ತೂರಿಗೆ ಅಮಿತ್ ಶಾ ಭೇಟಿ ಹಿನ್ನೆಲೆ ಅರಂತೋಡು- ಎಲಿಮಲೆ ರಸ್ತೆ ಕಾಮಗಾರಿ ಸ್ಥಗಿತ| ಅಪೂರ್ಣ ರಸ್ತೆಯಲ್ಲಿ ಸಾರ್ವಜನಿಕರ ಪರದಾಟ

ಸಮಗ್ರ ನ್ಯೂಸ್: ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಅರಂತೋಡು ಎಲಿಮಲೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿದ್ದು, ಸಾರ್ವಜನಿಕರು ಅಪೂರ್ಣ ರಸ್ತೆಯಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಗುದ್ದಲಿ ಪೂಜೆ ನಡೆಸಿ ಕಾಮಗಾರಿ ಪ್ರಾರಂಭಿಸಿ ರಸ್ತೆಯುದ್ದಕ್ಕೂ ಜಲ್ಲಿ ಹಾಕಲಾಗಿತ್ತು. ಆದರೆ ಇದೀಗ ಪುತ್ತೂರಿಗೆ ಕಾರ್ಯಕ್ರಮದ ಹಿನ್ನಲೆ ಕೇಂದ್ರ ಮಂತ್ರಿ ಅಮಿತ್ ಶಾ ಬರುವ ಕಾರಣ ಪುತ್ತೂರಿನ ಕೆಲ ರಸ್ತೆಗಳನ್ನು ಸರಿಪಡಿಸಲು ಕಾಂಟ್ರಾಕ್ಟರ್ ಅರಂತೋಡು ಎಲಿಮಲೆ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ

ಪುತ್ತೂರಿಗೆ ಅಮಿತ್ ಶಾ ಭೇಟಿ ಹಿನ್ನೆಲೆ ಅರಂತೋಡು- ಎಲಿಮಲೆ ರಸ್ತೆ ಕಾಮಗಾರಿ ಸ್ಥಗಿತ| ಅಪೂರ್ಣ ರಸ್ತೆಯಲ್ಲಿ ಸಾರ್ವಜನಿಕರ ಪರದಾಟ Read More »