ರಾಜ್ಯ

ಕೊಟ್ಟಿಗೆಹಾರ: ಅಂತರಾಷ್ಟೀಯ ಪ್ಯಾರಾ ಅಥ್ಲೆಟಿಕ್| ರಾದಾಗೆ ಚಿನ್ನ, ರಕ್ಷಿತಾರಾಜುಗೆ ಬೆಳ್ಳಿ

ಸಮಗ್ರ ನ್ಯೂಸ್: ದುಬೈಯ ಶಾರ್ಜಾದಲ್ಲಿ ಬುಧವಾರ ನಡೆದ ಅಂತರಾಷ್ಟ್ರೀಯ ಪ್ಯಾರಾ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿಕ್ಕಮಗಳೂರಿನ ಆಶಾ ಕಿರಣ ಅಂಧ ಶಾಲೆಯ ವಿದ್ಯಾರ್ಥಿನಿಯರಾದ ರಾಧಾ ವೆಂಕಟೇಶ್ ಪ್ರಥಮ ಹಾಗೂ ರಕ್ಷಿತಾರಾಜು ದ್ವಿತೀಯ ಸ್ಥಾನ ಪಡೆದು ಅಕ್ಟೋಬರ್ ನಲ್ಲಿ ಚೀನಾದಲ್ಲಿ ನಡೆಯುವ ಪ್ಯಾರಾ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಸಾಯಿ ಕ್ರೀಡಾ ಹಾಸ್ಟೆಲ್ ನಲ್ಲಿ ಕ್ರೀಡಾಭ್ಯಾಸ ಮಾಡುತ್ತಿರುವ ಈ ಇಬ್ಬರು ವಿದ್ಯಾರ್ಥಿನಿಯರು ಕೋಚ್ ರಾಹುಲ್ ಬಾಲಕೃಷ್ಣ, ಗೋವಿಂದ್, ಸೌಮ್ಯ ಸಾವಂತ್,ಗೈಡ್ ರನ್ನರ್ ತಬರೇಶ್ ಗರಡಿಯಲ್ಲಿ ಕ್ರೀಡೆಯಲ್ಲಿ ಸಾಧನೆ […]

ಕೊಟ್ಟಿಗೆಹಾರ: ಅಂತರಾಷ್ಟೀಯ ಪ್ಯಾರಾ ಅಥ್ಲೆಟಿಕ್| ರಾದಾಗೆ ಚಿನ್ನ, ರಕ್ಷಿತಾರಾಜುಗೆ ಬೆಳ್ಳಿ Read More »

ಬಿಜೆಪಿ ನಾಯಕರು ಬೆಳಿಗ್ಗೆ ಮುಸ್ಲಿಮರನ್ನು ಟೀಕಿಸಿ ಸಂಜೆ ಮನೆಗೆ ಭೇಟಿ ನೀಡ್ತಾರೆ – ಯು.ಟಿ ಖಾದರ್

ಸಮಗ್ರ ನ್ಯೂಸ್: ಬಿಜೆಪಿ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಬೆಳಗ್ಗೆ ಮೈಕ್ ಮುಂದೆ ಮುಸ್ಲಿಮರನ್ನು ಟೀಕಿಸಿ, ಸಂಜೆ ಮನೆಗೆ ಗುಟ್ಟಾಗಿ ಬಂದು ಮಾತುಕತೆ ನಡೆಸುತ್ತಾರೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಕಾಂಗ್ರೆಸ್ ಸದಸ್ಯ ಡಾ.ರಂಗನಾಥ್ ವಿಷಯ ಪ್ರಸ್ತಾಪಿಸಿ, ‘ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ನಮಗೆ ಬೇಡ ಎಂದು ಬಹಿರಂಗವಾಗಿ ಬಿಜೆಪಿಗರು ಹೇಳುತ್ತಾರೆ. ಇವರು ಮಾನವೀಯತೆ ಮರೆತಿರುವ ಹಾಗೆಯೇ ವರ್ತನೆ ಮಾಡುತ್ತಾರೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಖಾದರ್ ಅವರು,

ಬಿಜೆಪಿ ನಾಯಕರು ಬೆಳಿಗ್ಗೆ ಮುಸ್ಲಿಮರನ್ನು ಟೀಕಿಸಿ ಸಂಜೆ ಮನೆಗೆ ಭೇಟಿ ನೀಡ್ತಾರೆ – ಯು.ಟಿ ಖಾದರ್ Read More »

‘ಅಲ್ಲಾ’ ಪದವು ಸಂಸ್ಕೃತದ ಉತ್ಪತ್ತಿ; ದುರ್ಗೆಯ ಆರಾಧನೆಯಲ್ಲಿ ಬಳಸಲಾಗುತ್ತೆ – ನಿಶ್ಚಲಾನಂದ ಸರಸ್ವತಿ

ಸಮಗ್ರ ನ್ಯೂಸ್: ‘ಅಲ್ಲಾ’ ಪದವು ಪ್ರಾಚೀನ ಸಂಸ್ಕೃತ ಭಾಷೆಯಿಂದ ಬಂದಿದೆ ಎಂದು ವಾರಾಣಸಿಯ ದೇವಮಾನವ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ವಾರಾಣಸಿಯ ಗೋವರ್ಧನಪುರಿ ಮಠದ ಮುಖ್ಯಸ್ಥರಾಗಿರುವ ಸ್ವಾಮೀಜಿ, ಅಲ್ಲಾ ಪದವು ಹೆಣ್ತನದ ಶಕ್ತಿಯನ್ನು ಸೂಚಿಸುತ್ತದೆ ಮತ್ತು ಇದನ್ನು ದುರ್ಗಾ ದೇವಿಗೆ ಪ್ರಾರ್ಥಿಸಲು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಜಗತ್ತಿನಲ್ಲೇ ಇರುವುದು ಒಂದೇ ಧರ್ಮ ಅದು ಹಿಂದೂ ಸನಾತನ ಧರ್ಮ. ಉಳಿದೆಲ್ಲ ಧರ್ಮಗಳು ಪಂಥಗಳಷ್ಟೇ. ಯಾರು ಧರ್ಮದ ಬಗ್ಗೆ ಅನುಮಾಗಳನ್ನು ಹೊಂದಿದ್ದಾರೋ, ಪ್ರಶ್ನೆಗಳನ್ನು ಕೇಳುತ್ತೀರೋ ಅವರು ಮೊದಲಿಗೆ

‘ಅಲ್ಲಾ’ ಪದವು ಸಂಸ್ಕೃತದ ಉತ್ಪತ್ತಿ; ದುರ್ಗೆಯ ಆರಾಧನೆಯಲ್ಲಿ ಬಳಸಲಾಗುತ್ತೆ – ನಿಶ್ಚಲಾನಂದ ಸರಸ್ವತಿ Read More »

5 ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಮಾ.13ರಿಂದ ಪರೀಕ್ಷೆಗಳು ಆರಂಭ

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ 5 ಮತ್ತು 8ನೇ ತರಗತಿಯ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ವೇಳಾಪಟ್ಟಿಯಂತೆ ಮಾರ್ಚ್ 13ರಿಂದ 5 ಮತ್ತು 8ನೇ ತರಗತಿಯ ಪರೀಕ್ಷೆಗಳು ಆರಂಭಗೊಳ್ಳಲಿವೆ. ದಿನಾಂಕ 06-03-2023ಯ ಸೋಮವಾರದಿಂದ ದಿನಾಂಕ 10-03-2023ರ ಶುಕ್ರವಾರದವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಳೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶ್ತೋತ್ತರ ಪತ್ರಿಕೆಗಳನ್ನೇ ಬಳಸಿ, ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸುವುದು ದು ತಿಳಿಸಿದೆ.

5 ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಮಾ.13ರಿಂದ ಪರೀಕ್ಷೆಗಳು ಆರಂಭ Read More »

ಬಿರುಬಿಸಿಲಿಗೆ ಬಸವಳಿಯಲಿದೆ ಕರುನಾಡು| ದಿನೇ ದಿನೇ ತಾಪಮಾನ‌ ಏರಿಕೆ; ಮಾರ್ಚ್ ನಲ್ಲಿ ಭಾರೀ ಹೆಚ್ಚಳ ಸಾಧ್ಯತೆ

ಸಮಗ್ರ ನ್ಯೂಸ್: ಭಾರೀ ಬಿಸಿಲಿನ ತಾಪಕ್ಕೆ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಮಾರ್ಚ್ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಉಷ್ಣಾಂಶ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್‍ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು ಆದರೆ, ಫೆಬ್ರವರಿ ಮಧ್ಯಭಾಗದಲ್ಲೇ ತಾಪಮಾನ ಹೆಚ್ಚಾಗುತ್ತಿದೆ. ಏಪ್ರಿಲ್ ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಿನ

ಬಿರುಬಿಸಿಲಿಗೆ ಬಸವಳಿಯಲಿದೆ ಕರುನಾಡು| ದಿನೇ ದಿನೇ ತಾಪಮಾನ‌ ಏರಿಕೆ; ಮಾರ್ಚ್ ನಲ್ಲಿ ಭಾರೀ ಹೆಚ್ಚಳ ಸಾಧ್ಯತೆ Read More »

ಕಡಬ: ಆಪರೇಷನ್ ಕಾಡಾನೆ ಯಶಸ್ವಿ| ನರಹಂತಕನ ಸೆರೆಹಿಡಿದ ಅಭಿಮನ್ಯು ಪಡೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಕೊನೆಗೂ ಯಶಸ್ಸು ಕಂಡಿದೆ. ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿದೆ. ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52 ವ) ಮೃತಪಟ್ಟಿದ್ದರು. ಅಂದು ರಾತ್ರಿಯೇಮೈಸೂರು ದುಬಾರೆಯಿಂದ ಅಭಿಮನ್ಯು

ಕಡಬ: ಆಪರೇಷನ್ ಕಾಡಾನೆ ಯಶಸ್ವಿ| ನರಹಂತಕನ ಸೆರೆಹಿಡಿದ ಅಭಿಮನ್ಯು ಪಡೆ Read More »

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯಗೊಳಿಸಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಸಮಗ್ರ ನ್ಯೂಸ್: ಶಾಲೆಗಳಲ್ಲಿ ಒಂದನೇ ತರಗತಿಯ ಪ್ರವೇಶಾತಿಯ ಕನಿಷ್ಠ ವಯಸ್ಸನ್ನು 6ಕ್ಕೆ ಏರಿಕೆ ಮಾಡಿ ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಎಲ್ಲ ರಾಜ್ಯಗಳಲ್ಲೂ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸು ೬ ಇರಬೇಕು ಎಂಬುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ. “ದೇಶದ 14 ರಾಜ್ಯಗಳಲ್ಲಿ 6 ವರ್ಷ ತುಂಬುವ ಮೊದಲೇ ಒಂದನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ. ಆದರೆ,

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯಗೊಳಿಸಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ Read More »

ಕೊಟ್ಟಿಗೆಹಾರ: ಜೆಡಿಎಸ್ ಸಭೆಗೆ ಪಕ್ಷದ ಮುಖಂಡ ಕಾರ್ಯಕರ್ತರ ಕಡೆಗಣನೆಗೆ ಅಸಮಾಧಾನ

ಸಮಗ್ರ ನ್ಯೂಸ್: ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮದ ಅಂಗವಾಗಿ ಕೊಟ್ಟಿಗೆಹಾರದಲ್ಲಿ ನಡೆದ ಬಣಕಲ್ ಹೋಬಳಿ ಘಟಕದ ಸಭೆಗೆ ಸ್ಥಳೀಯ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರನ್ನು ಕರೆಯದೇ ಸಭೆ ನಡೆಸಿರುವುದರಿಂದ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಜೆಡಿಎಸ್ ಮುಖಂಡ ತನುಕೊಟ್ಟಿಗೆಹಾರ ತಿಳಿಸಿದ್ದಾರೆ. ಕೊಟ್ಟಿಗೆಹಾರದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ತಿಳಿಸಿರುವ ಅವರು ‘ಜೆಡಿಎಸ್ ಪಕ್ಷಕ್ಕೆ ಹಲವು ವರ್ಷಗಳಿಂದ ಗುರುತಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಪಕ್ಷದ ಮೇಲೆ ಅಭಿಮಾನ ಇಟ್ಟು ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದೇವೆ.ಆದರೆ ಮಾರ್ಚ್ 1 ರಂದು

ಕೊಟ್ಟಿಗೆಹಾರ: ಜೆಡಿಎಸ್ ಸಭೆಗೆ ಪಕ್ಷದ ಮುಖಂಡ ಕಾರ್ಯಕರ್ತರ ಕಡೆಗಣನೆಗೆ ಅಸಮಾಧಾನ Read More »

ಪೊಲೀಸರು ವಾಟ್ಸಪ್‌ ಡಿಪಿಗೆ ಫೋಟೋ ಬದಲು ಕ್ಯೂ ಆರ್ ಕೋಡ್ ಹಾಕಿಕೊಳ್ಳಲು ಅದೇಶ

ಸಮಗ್ರ ನ್ಯೂಸ್: ಪೊಲೀಸ್‌ ಅಧಿಕಾರಿಗಳಿಗೆ ಹೊಸ ರೂಲ್ಸ್‌ ತಂದಿದ್ದು ಇನ್ಮುಂದೆ ವಾಟ್ಸಪ್‌ ಡಿಪಿಗೆ ಅವರ ಫೋಟೋ ಹಾಕಿಕೊಳ್ಳುವಂತಿಲ್ಲ ಆದೇಶ ನೀಡಿದ್ದಾರೆ. ಆಗ್ನೇಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಕೆಲ ದಿನಗಳಲ್ಲಿ ಸಾರ್ವಜನಿಕರ ಸಮಸ್ಯೆಗೆ ಪೊಲೀಸರು ತಕ್ಷಣ ಸಂದಿಸುತ್ತಿಲ್ಲ, ಫೋನ್ ರಿಸಿವ್ ಮಾಡಲ್ಲ ಎನ್ನುವ ಆರೋಪಗಳು ಕೇಳಿಬಂದಿದೆ. ಈ ಬೆನ್ನಲ್ಲೇ ಸಿಂಗಂ ರೀತಿಯಲ್ಲಿ ವಾಟ್ಸಪ್‌ ಡಿಪಿಗಳಲ್ಲಿ ಪೋಟೋ ಹಾಕಿ ಮಿಂಚುತ್ತಿದ್ದ ಪೊಲೀಸರಿಗೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾರಿಂದ ಹೊಸ ರೂಲ್ಸ್‌ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಇಂದಿನಿಂದ ಪೊಲೀಸ್ ಅಧಿಕಾರಿಗಳು

ಪೊಲೀಸರು ವಾಟ್ಸಪ್‌ ಡಿಪಿಗೆ ಫೋಟೋ ಬದಲು ಕ್ಯೂ ಆರ್ ಕೋಡ್ ಹಾಕಿಕೊಳ್ಳಲು ಅದೇಶ Read More »

ಮಾಂಸಾಹಾರ ಸೇವಿಸಿ ನಾಗಬನ ಪ್ರವೇಶಿಸಿದ್ರಾ ಸಿ.ಟಿ ರವಿ| ಫೋಟೋ ವೈರಲ್

ಸಮಗ್ರ ನ್ಯೂಸ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ. ರವಿ ಈಗ ವಿವಾದವೊಂದಕ್ಕೆ ಸಿಲುಕಿದ್ದಾರೆ. ಮಾಂಸಹಾರ ಸೇವಿಸಿ ಅವರು ನಾಗಬನಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದ್ದು, ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ ರವಿ ಭೇಟಿ ನೀಡಿದ ಸಂದರ್ಭದಲ್ಲಿ ಕಾರವಾರದಲ್ಲಿ ಶಾಸಕ ಸುನಿಲ್ ನಾಯಕ್ ಅವರ ಮನೆಯಲ್ಲಿ ಮಾಂಸಹಾರ ಸೇವನೆ ಮಾಡಿದ್ದರು. ಅದಾದ ಬಳಿಕ ಅವರು ನಾಗಬನ ಹಾಗೂ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೂರು ದಿನಗಳ ಹಿಂದೆ ಅಂದರೆ ಫೆಬ್ರವರಿ

ಮಾಂಸಾಹಾರ ಸೇವಿಸಿ ನಾಗಬನ ಪ್ರವೇಶಿಸಿದ್ರಾ ಸಿ.ಟಿ ರವಿ| ಫೋಟೋ ವೈರಲ್ Read More »