ರಾಜ್ಯ

80ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ| ರಾಜಾಹುಲಿಯ ರಾಜಕೀಯದ ಏಳುಬೀಳುಗಳೇನು?

ಸಮಗ್ರ ನ್ಯೂಸ್: ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ, ರೈತ ಬಂಧು, ಶಿಕಾರಿಪುರ ಎಂದಾಕ್ಷಣ ನೆನಪಿಗೆ ಬರುವುದು ಬಿ.ಎಸ್​ ಯಡಿಯೂರಪ್ಪ.‌ ಇವರು ಇಂದು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ ನಾಯಕ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಇತಿಹಾಸ ಬರೆದಿದ್ದಾರೆ. ಬಿಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರು ಉಳಿದು, ಪಕ್ಷ ಕಟ್ಟುವಲ್ಲಿ, ಅಧಿಕಾರಕ್ಕೆ ತರಲು ತಮ್ಮ ಕೊನೆ ಉಸಿರುವವರೆಗು […]

80ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ| ರಾಜಾಹುಲಿಯ ರಾಜಕೀಯದ ಏಳುಬೀಳುಗಳೇನು? Read More »

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ| ಉದ್ಘಾಟನೆಗೆ ಮೊದಲೇ‌ ಟೋಲ್ ಸಂಗ್ರಹ ಶುರು

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 11ರಂದು ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಅದಕ್ಕೂ ಮುನ್ನವೇ ಅಂದರೆ ನಾಳೆ(ಫೆ.28)ಯಿಂದಲೇ ಟೋಲ್ ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಟೋಲ್ ದರ ಕುರಿತಂತೆ ಆದೇಶ ಹೊರಡಿಸಲಾಗಿದ್ದು, ಇದು ಬಲು ದುಬಾರಿಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿರುವ ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಗ್ರಾಮದ ಸಮೀಪ ಕಿ.ಮೀ.23.900 ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಗ್ರಾಮದ

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ| ಉದ್ಘಾಟನೆಗೆ ಮೊದಲೇ‌ ಟೋಲ್ ಸಂಗ್ರಹ ಶುರು Read More »

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ

ಸಮಗ್ರ ನ್ಯೂಸ್: ಫೆಬ್ರವರಿ 27ರಂದು ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:35ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಳಗ್ಗೆ 11:45 ರಿಂದ 11:55 ರ ವರೆಗೆ ಶಿವಮೊಗ್ಗದಲ್ಲಿ ಟರ್ಮಿನಲ್ ಬಿಲ್ಡಿಂಗ್ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 1.15 ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1:30 ಕ್ಕೆ ಶಿವಮೊಗ್ಗದಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 2.20 ಕ್ಕೆ ಬೆಳಗಾವಿ ವಿಮಾನ

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ Read More »

ಮರ್ಯಾದಾ ಹತ್ಯೆ ಪ್ರಕರಣ| ಹೆತ್ತ ಮಗಳ ರುಂಡ ಮುಂಡ ಕತ್ತರಿಸಿದ ತಂದೆ

ಸಮಗ್ರ ನ್ಯೂಸ್: ತಂದೆಯೊಬ್ಬ, ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳ ರುಂಡ- ಮುಂಡವನ್ನು ಕತ್ತರಿಸಿ ಕೊಲೆ ಮಾಡಿ ಕಾಡಿನಲ್ಲಿ ಎಸೆದಿದ್ದಾನೆ. ಈ ಮರ್ಯಾದಾ ಹತ್ಯೆ ಪ್ರಕರಣ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಸನ್ನ (21) ಮೃತ ದುರ್ದೈವಿ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಮಗಳನ್ನು ಕೊಂದ ಆರೋಪಿ. ರೆಡ್ಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ ಪ್ರಸನ್ನಗೆ ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ಮದುವೆಯ

ಮರ್ಯಾದಾ ಹತ್ಯೆ ಪ್ರಕರಣ| ಹೆತ್ತ ಮಗಳ ರುಂಡ ಮುಂಡ ಕತ್ತರಿಸಿದ ತಂದೆ Read More »

ಹುಲಿಗಳು ಹಾದುಹೋಗಲೆಂದೇ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ| ಭಾರತೀಯ ಹೆದ್ದಾರಿ ಪ್ರಾಧಿಕಾರದ ಸೂಪರ್ ಐಡಿಯಾ

ಸಮಗ್ರ ನ್ಯೂಸ್: ಭೂಮಿ ಮೇಲೆ ಬದುಕಲು ಮನುಷ್ಯರಿಗೆಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಪ್ರಾಣಿಗಳಿಗಿದೆ. ಆದರೆ ಮನುಷ್ಯರು ಕಾಡಿನೊಳಕ್ಕೆ ನುಗ್ಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಮತ್ತೊಂದೆಡೆ ಅದರ ಆಹಾರವನ್ನು ಕಸಿದುಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಮತ್ತೊಂದೆಡೆ ಅದರ ವಾಸಸ್ಥಾನವಾದ ಕಾಡಿನತ್ತ ರಸ್ತೆಗಳು ಹಾದು ಹೋಗುತ್ತಿವೆ. ಇದರಿಂದ ವಾಹನಕ್ಕೆ ಸಿಲುಕಿ ವರ್ಷಕ್ಕೆ ಅದೆಷ್ಟೋ ಪ್ರಾಣಿಗಳು ಅಪಘಾತದಲ್ಲಿ ಸಾವನ್ನಪ್ಪುತ್ತಿವೆ. ಆದರೆ ಇಂತಹ ಸನ್ನಿವೇಷ ಎದುರಾಗಬಾರದು ಎಂಬ ಕಾರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಹಾದು ಹೋಗುವ

ಹುಲಿಗಳು ಹಾದುಹೋಗಲೆಂದೇ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ| ಭಾರತೀಯ ಹೆದ್ದಾರಿ ಪ್ರಾಧಿಕಾರದ ಸೂಪರ್ ಐಡಿಯಾ Read More »

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್| ಮದ್ಯಂತರ ವರದಿ ತರಿಸಿ ಏಳನೇ ವೇತನ ಆಯೋಗ ಜಾರಿ – ಸಿಎಂ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದು, ಮಧ್ಯಂತರ ವರದಿ ತರಿಸಿಕೊಂಡು ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 1 ಲಕ್ಷ ಜನ ಸರ್ಕಾರಿ ನೌಕರರ ಹುದ್ದೆ ಮುಂದಿನ ವರ್ಷ ಭರ್ತಿ ಮಾಡಲಾಗುತ್ತದೆ. ಅಗತ್ಯ ಸೇವೆ ನೋಡಿಕೊಂಡು ಶಿಕ್ಷಕರ, ಉಪನ್ಯಾಸ ಹುದ್ದೆಗಳ ಭರ್ತಿಗೆ ಕ್ರಮ ವಹಿಸುತ್ತೇವೆ. ಹಣಕಾಸು ಲಭ್ಯತೆ ನೋಡಿ ಪರಿಷತ್ ಸದಸ್ಯರ ಅನುದಾನ ಹೆಚ್ಚಳ ಪರಿಗಣಿಸಲಾಗುತ್ತದೆ.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್| ಮದ್ಯಂತರ ವರದಿ ತರಿಸಿ ಏಳನೇ ವೇತನ ಆಯೋಗ ಜಾರಿ – ಸಿಎಂ Read More »

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ಬಸವನಾಡಿನ ಜನತೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ, ಘೋಣಸಗಿ, ಟಕ್ಕಳಕಿ, ಹುಬನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು, ನಡುರಾತ್ರಿ ಮಲಗದೆ ಹಲವು ಗ್ರಾಮಗಳ ಜನರ ರಸ್ತೆ ಬದಿ ಕುಳಿತು ಕಾಲ ಕಳೆದಿದ್ದಾರೆ. ತಮಗೆ ಕೇಳಿ ಬಂದ ಶಬ್ದದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭೂಕಂಪ ಸಂಭವಿಸಿದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಪ್ರಕೃತಿ ವಿಕೋಪ

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ಬಸವನಾಡಿನ ಜನತೆ Read More »

ಐಪಿಎಸ್ ಡಿ.ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವಿಚಾರಣೆಗೆ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಹಿರಿಯ ಮಹಿಳಾ ಅಧಿಕಾರಿಗಳ ಕಿತ್ತಾಟ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಇಲಾಖಾ ವಿಚಾರಣೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಅವರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಫೋಟೋಗಳು ಸಿವಿಲ್‌ ಸೇವಾ ನಿಯಮಾವಳಿಯ ಉಲ್ಲಂಘನೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಇಲಾಖಾ ವಿಚಾರಣೆಗೆ ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಮಹಿಳಾ ಅಧಿಕಾರಿಗಳ

ಐಪಿಎಸ್ ಡಿ.ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವಿಚಾರಣೆಗೆ ರಾಜ್ಯ ಸರ್ಕಾರ ಆದೇಶ Read More »

‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ – ಬಿ.ಎಸ್ ಯಡಿಯೂರಪ್ಪ ಘೋಷಣೆ

ಸಮಗ್ರ ನ್ಯೂಸ್: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಸಿಸುವ ಮಾತೇ ಇಲ್ಲ ಎಂದು . ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ತರಲು ಪ್ರಯತ್ನಿಸಲಾಗುವುದು. ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಎಂದು ಹೇಳಿದ್ದಾರೆ. ನಮ್ಮೆಲ್ಲರಿಗೂ ಹೆಚ್.ದೇವೇಗೌಡರೇ ಆದರ್ಶವಾಗಿದ್ದಾರೆ. ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು

‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ – ಬಿ.ಎಸ್ ಯಡಿಯೂರಪ್ಪ ಘೋಷಣೆ Read More »

ಬೆಂಗಳೂರು: ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ದಿನಾಂಕ ನಿಗದಿಯಾಗಿದ್ದು, ಮೇ 20ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಆರಂಭವಾಗಲಿವೆ. ಮೇ. 20 ಮತ್ತು 21ರಂದು ಸಿಇಟಿ ಕನ್ನಡ ಕಡ್ಡಾಯ ಪರೀಕ್ಷೆ ನಡೆಯಲಿದೆ. ಹೊರನಾಡು, ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಸಲಾಗುತ್ತೆ. ಮೇ.22ರಂದು ಸಿಇಟಿ ಅಂಗವಾಗಿ ಕನ್ನಡ ಪರೀಕ್ಷೆ ನಡೆಸಲಾಗುವುದು. ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದ್ರೆ ಬಿಎಸ್ಸಿ(ಕೃಷಿ), ಬಿ.ಎಸ್.ಸಿ (ರೇಷ್ಮೆ ಕೃಷಿ), ಬಿಎಸ್ಸಿ (ತೋಟಗಾರಿಕೆ), ಬಿಎಸ್ಸಿ (ಅರಣ್ಯ)

ಬೆಂಗಳೂರು: ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ Read More »