ರಾಜ್ಯ

ಮಹಿಳೆ ಜತೆ ಬಸ್ ಏರಿದ ಶ್ವಾನ…!

ಸಮಗ್ರ ನ್ಯೂಸ್: ನಿತ್ಯ ಪ್ರೀತಿಯಿಂದ ಆರೈಕೆ ಮಾಡುವ ಮನೆ ಕೆಲಸದ ಮಹಿಳೆಯೊಂದಿಗೆ ಶ್ವಾನವು ಬಸ್ ಏರಿದ ಘಟನೆ ಬ್ರಹ್ಮಾವರದ ಉಳ್ಳೂರು ಅಮ್ಮುಂಜೆ ಬಳಿ ನಡೆದಿದೆ. ನಿತ್ಯ ಅನ್ನ ಹಾಕುವ ಮಹಿಳೆಯ ಮೇಲಿನ ಪ್ರೀತಿ ಹಾಗೂ ನಿಷ್ಠೆಯಿಂದ ಮನೆಯಿಂದ ತೆರಳುವಾಗ ಶ್ವಾನವೂ ಬಸ್‌ ನಿಲ್ದಾಣಕ್ಕೆ ಬಂದಿದೆ. ಮಹಿಳೆ ಬಸ್‌ ಏರಿದಾಗ ತಾನೂ ಹತ್ತಿದ್ದು ನಿರ್ವಾಹಕರು, ಪ್ರಯಾಣಿಕರು ಗದರಿಸಿದರೂ ಬಗ್ಗಲಿಲ್ಲ. ಜೋರು ಮಾಡಿದಾಗ ವಿರೋಧಿಸಿ ಬೊಗಳಿತು ಏನಃ ಇಳಿಯಲು ಒಪ್ಪಲಿಲ್ಲ. ಕೊನೆಗೆ ಮಹಿಳೆಯೇ ಇಳಿದಾಗ ಆಕೆಯೊಂದಿಗೆ ಶ್ವಾನ ಖುಷಿಯಿಂದ ಕೆಳಗಿಳಿದ

ಮಹಿಳೆ ಜತೆ ಬಸ್ ಏರಿದ ಶ್ವಾನ…! Read More »

ಸಿದ್ದರಾಮಯ್ಯ ಸಂಪುಟ ಭರ್ತಿ| 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರಾಗಿ 24 ಮಂದಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ರಾಜ್ಯ ಸರ್ಕಾರದ ಸಂಪೂರ್ಣ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋಟ್ ಅವರು ಪ್ರಮಾಣವಚನ ಭೋದಿಸಿದರು. ಶಾಸಕರಾದ ಎಚ್.ಕೆ.ಪಾಟೀಲ, ಕೃಷ್ಣ ಬೈರೇಗೌಡ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್.ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಎಸ್.ಎಸ್.ಮಲ್ಲಿಕಾರ್ಜುನ,ಶಿವರಾಜ ತಂಗಡಗಿ, ಶರಣ ಪ್ರಕಾಶ ಪಾಟೀಲ, ಮಂಕಾಳ ಸುಬ್ಬ

ಸಿದ್ದರಾಮಯ್ಯ ಸಂಪುಟ ಭರ್ತಿ| 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ Read More »

ಸಂಪಾದಕೀಯ; ಕರಾವಳಿಗೆ ಕೈ ಕೊಟ್ಟ ಕಾಂಗ್ರೆಸ್

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆ ಕಳೆದು ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಸೇರಿದಂತೆ 10 ಮಂದಿ ಈಗಾಗಲೇ ಸಂಪುಟ ರಚನೆ ಮಾಡಿದ್ದು, ಇಂದು(ಮೇ.27) 24 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಮಂತ್ರಿ ಸ್ಥಾನದ ಆಕಾಂಕ್ಷಿಗಳ ದಂಡು ಜಾಸ್ತಿನೇ ಇದ್ದರೂ ಕರಾವಳಿಗೆ ಒಂದಾದರೂ ಮಂತ್ರಿ ಸ್ಥಾನ ಲಭಿಸುವ ನಿರೀಕ್ಷೆ ಇತ್ತು. ಅವಿಭಜಿತ ದ.ಕ ಜಿಲ್ಲೆಯಲ್ಲಿ ಎರಡೇ ಸ್ಥಾನ ಗೆದ್ದಿರುವ ಕಾಂಗ್ರೆಸ್ ಉಳ್ಳಾಲ

ಸಂಪಾದಕೀಯ; ಕರಾವಳಿಗೆ ಕೈ ಕೊಟ್ಟ ಕಾಂಗ್ರೆಸ್ Read More »

ಕೈತಪ್ಪಿದ ಸಚಿವ ಸ್ಥಾನ| ರಾಜೀನಾಮೆಗೆ ಮುಂದಾದ ಬಿ.ಕೆ ಹರಿಪ್ರಸಾದ್

ಸಮಗ್ರ ನ್ಯೂಸ್: ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಕೆ. ಹರಿಪ್ರಸಾದ್‌ಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಇದರಿಂದ ಕೆಂಡಾಮಂಡಲವಾಗಿರುವ ಅವರು ರಾಜೀನಾಮೆಗೆ ಮುಂದಾಗಿದ್ದಾರೆ. ಬಿಜೆಪಿ ವಿರುದ್ಧ ಸೈದ್ಧಾಂತಿಕವಾಗಿ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ‌ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು, ಅದರಂತೆ ಮೊದಲ ಸಚಿವ ಸಂಪುಟ ರಚನೆಯಲ್ಲಿಯೇ ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಮೊದಲ ಸಂಪುಟ ರಚನೆಯಲ್ಲೂ

ಕೈತಪ್ಪಿದ ಸಚಿವ ಸ್ಥಾನ| ರಾಜೀನಾಮೆಗೆ ಮುಂದಾದ ಬಿ.ಕೆ ಹರಿಪ್ರಸಾದ್ Read More »

ಹವಾಮಾನ ವರದಿ| ಕರಾವಳಿ ಮತ್ತು ದ. ಒಳನಾಡಿನ ಹಲವೆಡೆ ಮಳೆ ಸಾಧ್ಯತೆ

ಸಮಗ್ರ ನ್ಯೂಸ್’: ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ತಿಂಗಳಾಂತ್ಯದಿಂದ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 30 ಹಾಗೂ 31ರಂದು ಹೆಚ್ಚಿನ ಮಳೆಯಾಗಲಿದ್ದು, ಮೇ 31ರಿಂದ ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅತಿ ಹೆಚ್ಚು 5 ಸೆಂ.ಮೀ. ಮಳೆಯಾದ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹಾಸನದ ಕೊಣನೂರು, ವಿಜಯ ನಗರದ

ಹವಾಮಾನ ವರದಿ| ಕರಾವಳಿ ಮತ್ತು ದ. ಒಳನಾಡಿನ ಹಲವೆಡೆ ಮಳೆ ಸಾಧ್ಯತೆ Read More »

ಬದಲಾದ ಸರ್ಕಾರ; ಕೆಲಸ ಕಳೆದುಕೊಂಡ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ

ಸಮಗ್ರ ನ್ಯೂಸ್: ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಪ್ರವೀಣ್ ಹತ್ಯೆಯಾದ ಬಳಿಕ ಈ ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರ ಬಳಸಿ ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು

ಬದಲಾದ ಸರ್ಕಾರ; ಕೆಲಸ ಕಳೆದುಕೊಂಡ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ Read More »

ಬೆಳ್ತಂಗಡಿ: ಪ್ರಯಾಣಿಕರ ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಡಿಕ್ಕಿ

ಸಮಗ್ರನ್ಯೂಸ್: ಇಲ್ಲಿಯ ಚಾರ್ಮಾಡಿಯ ಕೃಷ್ಣನಗರ ಪಾಂಡಿಕಟ್ಟೆಯಲ್ಲಿ ಪ್ರಯಾಣಿಕರ ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವರು ಗಂಭೀರ ಗಾಯಗೊಂಡ ಘಟನೆ ಮೇ.26 ರಂದು ಮಧ್ಯಾಹ್ನ ನಡೆದಿದೆ.ಸಾಗರ ಕಡೆಯಿಂದ ಕುಟುಂಬವೊಂದು ಕಾರಿನಲ್ಲಿ ಬರುತ್ತಿರುವ ಸಮಯ ಕಾರು ಬ್ರೇಕ್ ಫೈಲ್ ಆಗಿ ಘಾಟಿಯ ಧರೆಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನಲ್ಲಿದ್ದ ವಿನೋದ್ ಸಾಗರ ಎಂಬುವವರು ಗಂಭೀರ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ಕು ಮಂದಿ ಮಹಿಳೆಯರಿಗೂ ಗಾಯಗಳಾಗಿದೆ. ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ತಕ್ಷಣ ದಾಖಲಿಸಿದ್ದು, ವಿನೋದ್ ಅವರನ್ನು

ಬೆಳ್ತಂಗಡಿ: ಪ್ರಯಾಣಿಕರ ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಡಿಕ್ಕಿ Read More »

ಜಿ.ಪಂ, ತಾ.ಪಂ ಚುನಾವಣೆಗೆ ಸಿದ್ದತೆ| ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಸೂಚನೆ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಬಳಿಕ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಗೆ ಸಿದ್ಧತೆ ಆರಂಭವಾಗಿದೆ. ಮತದಾರರ ಪಟ್ಟಿ ಸಿದ್ಧತೆ, ಮತದಾನ ಕೇಂದ್ರಗಳ ಸ್ಥಾಪನೆ ಸಂಬಂಧ ಕಾರ್ಯಪ್ರವೃತ್ತರಾಗವಂತೆ ರಾಜ್ಯ ಚುನಾವಣಾ ಆಯೋಗದಿಂದ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಚುನಾವಣೆ ಆಯೋಗದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಮೇ 29 ರಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕ್ಷೇತ್ರದ ಮತದಾರರನ್ನು ಗುರುತಿಸುವ ಕಾರ್ಯ ಆರಂಭಿಸಲು ತಿಳಿಸಲಾಗಿದೆ. ಜೂನ್

ಜಿ.ಪಂ, ತಾ.ಪಂ ಚುನಾವಣೆಗೆ ಸಿದ್ದತೆ| ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಸೂಚನೆ Read More »

ರಾಜ್ಯ ಸಚಿವ ಸಂಪುಟ ವಿಸ್ತರಣೆ| 24 ನೂತನ ಸಚಿವರಿಂದ ಇಂದು ಪ್ರಮಾಣವಚನ| ಅಂತಿಮ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರುವ 24 ಸಚಿವರ ಪಟ್ಟಿ ಅಂತಿಮಗೊಂಡಿದೆ. ನೂತನ ಸಚಿವರ ಪಟ್ಟಿ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ತಲುಪಿದೆ. ಪಟ್ಟಿಯಲ್ಲಿ ಹೆಸರಿದ್ದಂತಹ ಶಾಸಕರು ಇಂದು (ಮೇ.27) ರಂದು ರಾಜಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 11:30 ನಿಮಿಷಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಪುಟಕ್ಕೆ ಸೇರುವ ಸಚಿವರ ಪಟ್ಟಿ…ಹೆಚ್.ಕೆ.ಪಾಟೀಲ್​​​​ಕೃಷ್ಣಭೈರೇಗೌಡಚಲುವರಾಯಸ್ವಾಮಿಪಿರಿಯಾಪಟ್ಟಣ ವೆಂಕಟೇಶ್​ಡಾ.ಹೆಚ್.ಸಿ.ಮಹದೇವಪ್ಪಈಶ್ವರ ಖಂಡ್ರೆಕೆ.ಎನ್.ರಾಜಣ್ಣದಿನೇಶ್ ಗುಂಡೂರಾವ್​​ಶರಣಬಸಪ್ಪ ದರ್ಶನಾಪುರಶಿವಾನಂದ ಪಾಟೀಲ್ಆರ್.ಬಿ.ತಿಮ್ಮಾಪುರಎಸ್.ಎಸ್.ಮಲ್ಲಿಕಾರ್ಜುನಶಿವರಾಜ ತಂಗಡಗಿಡಾ.ಶರಣ ಪ್ರಕಾಶ್ ಪಾಟೀಲ್​​​ಮಂಕಾಳು ವೈದ್ಯಲಕ್ಷ್ಮೀ ಹೆಬ್ಬಾಳ್ಕರ್​ರಹೀಂ ಖಾನ್​​ಡಿ.ಸುಧಾಕರ್​​ಸಂತೋಷ್ ಲಾಡ್​ಬೋಸರಾಜುಬಿ.ಎಸ್.ಸುರೇಶ್​ಮಧು ಬಂಗಾರಪ್ಪಎಂ.ಸಿ.ಸುಧಾಕರ್​ಬಿ.ನಾಗೇಂದ್ರ ಸಿದ್ದರಾಮಯ್ಯ ಸಂಪುಟದಲ್ಲಿ ಜಾತಿವಾರು ಬಲಾಬಲ ವಿವರ ಹೀಗಿದೆ..ಒಕ್ಕಲಿಗ 4, ಲಿಂಗಾಯತ

ರಾಜ್ಯ ಸಚಿವ ಸಂಪುಟ ವಿಸ್ತರಣೆ| 24 ನೂತನ ಸಚಿವರಿಂದ ಇಂದು ಪ್ರಮಾಣವಚನ| ಅಂತಿಮ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್ Read More »

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಗ್ರಾ.ಪಂ ಸಿಬ್ಬಂದಿ ಅಮಾನತು

ಸಮಗ್ರ ನ್ಯೂಸ್: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಪಿಡಿಓ ಆದೇಶ ಹೊರಡಿಸಿದ್ದಾರೆ. ನಾಗೇಶ್ ಅಮಾನತಾದ ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಚುನಾವಣಾ ಪ್ರಚಾರ ಹಾಗೂ ವಿಜಯೋತ್ಸವದಲ್ಲಿ ಪಂಚಾಯಿತಿ​​ ಸಿಬ್ಬಂದಿ ನಾಗೇಶ್ ಬಿಜೆಪಿ ಬಾವುಟ ಹಿಡಿದು ತಿರುಗುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆ ಸೇವೆಯಿಂದ ಅಮಾನತು ಮಾಡಿ ಪಿಡಿಓ ಪ್ರಕಾಶ್ ಶೆಟ್ಟಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಗ್ರಾ.ಪಂ ಸಿಬ್ಬಂದಿ ಅಮಾನತು Read More »