ರಾಜ್ಯ

‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ| ಇಂದಿನಿಂದ ಮಹಿಳೆಯರಿಗೆ ಬಸ್ಸ್ ನಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ

ಸಮಗ್ರ ನ್ಯೂಸ್: ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ವಿಧಾನಸೌಧ ಮುಂಭಾಗ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭ ನಡೆಯಿತು. ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವಿರುತ್ತದೆ. ಉಚಿತ ಪ್ರಯಾಣಕ್ಕೆ ಬಿಪಿಎಲ್​​, ಎಪಿಎಲ್​ ಎಂಬ ನಿಯಮವಿಲ್ಲ. ಯಾವುದಾದರೂ ಐಡಿ ತೋರಿಸಿದರೆ ಪ್ರಯಾಣ ಮಾಡಬಹುದು. ಸ್ಮಾರ್ಟ್​ ಕಾರ್ಡ್​ ಮಾಡಿಸಲು ಯಾರೂ ದುಡ್ಡು ಕೊಡಬೇಕಿಲ್ಲ. ಸ್ಮಾರ್ಟ್ ಕಾರ್ಡ್​​ ಮಾಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶವಿದೆ. ಶೇ.90 ಕ್ಕಿಂತ ಹೆಚ್ಚು ಬಸ್​​ ಗಳಲ್ಲಿ ರಾಜ್ಯದ ಯಾವುದೇ ಮೂಲೆಗೆ ಮಹಿಳೆಯರು ಹೋಗಬಹುದು

‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ| ಇಂದಿನಿಂದ ಮಹಿಳೆಯರಿಗೆ ಬಸ್ಸ್ ನಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ Read More »

ಇರಲಾರದೆ ಇರುವೆ ಬಿಟ್ಕೊಂಡ ಸುಳ್ಯ ಕಾಂಗ್ರೆಸ್| ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ 17 ಮಂದಿ ಅಮಾನತು

ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬ ಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಮಡಿಕೇರಿ, ಕೆಪಿಸಿಸಿ ಮುಖಂಡ ಎಂ. ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಅಲ್ಲದೇ ಸುಳ್ಯ ಮತ್ತು ಕಡಬ ಸೇರಿ ಸುಳ್ಯ ವಿಧಾನ ಸಭಾ ಕ್ಷೇತ್ರದ 17 ಮಂದಿ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ.

ಇರಲಾರದೆ ಇರುವೆ ಬಿಟ್ಕೊಂಡ ಸುಳ್ಯ ಕಾಂಗ್ರೆಸ್| ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ 17 ಮಂದಿ ಅಮಾನತು Read More »

ನಾಳೆಯಿಂದ ರಾಜ್ಯಾದ್ಯಂತ ‘ಶಕ್ತಿ’ ಯೋಜನೆ‌ ಅಧಿಕೃತ ಜಾರಿ| ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ಸಮಗ್ರ ನ್ಯೂಸ್: ರಾಜ್ಯ ಸರಕಾರದ ೫ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ನಾಳೆಯಿಂದಲೇ ಶುರುವಾಗಲಿದ್ದು, ಸ್ಟಿಕ್ಕರ್ ಇರುವ ಬಸ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಬೇಡ.ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು. ಆದರೆ 3 ತಿಂಗಳ ಬಳಿಕ ಸ್ಮಾರ್ಟ್ ಕಾರ್ಡ್ ಕಡ್ಡಾಯ. ಮೂರು ತಿಂಗಳ ಒಳಗಾಗಿ ಉಚಿತ ಪ್ರಯಾಣ ಮಾಡುವ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆದಿರಬೇಕು

ನಾಳೆಯಿಂದ ರಾಜ್ಯಾದ್ಯಂತ ‘ಶಕ್ತಿ’ ಯೋಜನೆ‌ ಅಧಿಕೃತ ಜಾರಿ| ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ Read More »

ಬೆಳ್ತಂಗಡಿ: ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ|ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ಕೊರತೆಯ ಬಗ್ಗೆ ಸಚಿವರಿಗೆ ಮನವಿ

ಸಮಗ್ರನ್ಯೂಸ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪರವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ಮಾಡಿದರು. ಈ ವೇಳೆ ತಾಲೂಕಿನ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವ ಬಗ್ಗೆ ಹಾಗೂ ಕೆಲ ಶಾಲೆಗಳಲ್ಲಿ ಮುಖ್ಯೋಪಧ್ಯಾಯರು, ಶಿಕ್ಷಕರು ದೈಹಿಕ ಶಿಕ್ಷಕರ ಕೊರತೆಯ ಬಗ್ಗೆ ಸಚಿವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪೆರ್ನಾಂಡಿಸ್ ಉಪಸ್ಥಿತರಿದ್ದರು.

ಬೆಳ್ತಂಗಡಿ: ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ|ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ಕೊರತೆಯ ಬಗ್ಗೆ ಸಚಿವರಿಗೆ ಮನವಿ Read More »

ಬೆಳ್ತಂಗಡಿ: ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿ

ಸಮಗ್ರನ್ಯೂಸ್: ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ಸವಣಾಲು ರಸ್ತೆಯ ಪುಲ್ತಡ್ಕ ಎಂಬಲ್ಲಿ ಜೂ.10 ರಂದು ನಡೆದಿದೆ. ಇಂದು ಬೆಳಗ್ಗಿನಿಂದ ತಾಲೂಕಿನ ಹಲವೆಡೆಗಳಲ್ಲಿ ‌ಸುರಿದ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಸವಣಾಲು ಹೋಗುವ ರಸ್ತೆಯ ಲಾಯಿಲ ಗ್ರಾಮದ ಪುಲ್ತಡ್ಕದಲ್ಲಿ ಬೃಹತ್ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಕಂಬ ಮುರಿದು ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿದೆ. ಈ ಬಗ್ಗೆ ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಕಿಟ್ಟಣ

ಬೆಳ್ತಂಗಡಿ: ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿ Read More »

ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಜಡಿಮಳೆ

ಸಮಗ್ರ ನ್ಯೂಸ್: ಬಣಕಲ್,ಚಾರ್ಮಾಡಿ ಘಾಟ್,ಕೊಟ್ಟಿಗೆಹಾರ ಸುತ್ತಮುತ್ತ ಮಳೆಗಾಲದಂತೆ ಮೋಡ ಕವಿದ ವಾತಾವರಣ ಉಂಟಾಗಿ ದಿನವಿಡೀ ದಾರಾಕಾರ ಮಳೆಯಾಗುತ್ತಿದೆ. ಕೊಟ್ಟಿಗೆಹಾರ,ಚಾರ್ಮಾಡಿ ಘಾಟ್ ಭಾಗದಲ್ಲೂ ಮಂಜುಮುಸುಕಿನ ವಾತಾವರಣವಿದ್ದು ಮುಂಗಾರು ಮಳೆ ಆರಂಭವಾದಂತೆ ಭಾಸವಾಗಿದೆ. ಸುರಿಯುತ್ತಿರುವ ಜಡಿ ಮಳೆಯಿಂದ ವಾತಾವರಣ ತಂಪಾಗಿದ್ದು ಕೃಷಿಗೆ ಅನುಕೂಲವಾಗಿದೆ.ಹದ ಮಳೆಯಾಗುತ್ತಿರುವುದರಿಂದ ಮನೆ ನಿರ್ಮಾಣ ಕಾರ್ಯಗಳು ವಿಳಂಬವಾಗಿದೆ. ಕೊಟ್ಟಿಗೆಹಾರದಲ್ಲಿ ಜಡಿ ಮಳೆ ಸುರಿಯುತ್ತಿರುವುದರಿಂದ ಕಾಫಿ ತೋಟಗಳಿಗೆ ಗೊಬ್ಬರ ಹಾಕಲು ಸಕಾಲವಾಗಿದೆ.ಚಾರ್ಮಾಡಿ ಘಾಟ್ನಲ್ಲೀ ಮಂಜು ಮುಸುಕಿನ ವಾತಾವರಣ ಇರುವುದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.ಚಂಡ ಮಾರುತದ ವೈಪರೀತ್ಯದಿಂದ ಮಳೆಯಾಗುತ್ತಿದ್ದು ಜನರು

ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಜಡಿಮಳೆ Read More »

ಚಿರತೆ ಓಡಿಸಲು ಬಾವಿಗೆ ಬೆಂಕಿ ಹಾಕಿದ ಅರಣ್ಯ ಇಲಾಖೆಯ ಸಿಬ್ಬಂದಿ..!

ಸಮಗ್ರ ನ್ಯೂಸ್: ಬಾವಿಗೆ ಬಿದ್ದ ಚಿರತೆಯೊಂದುಮೇಲೆ‌ ಬಾರದೇ ಇದ್ದಾಗ ಬೆಂಕಿಯಿಂದ ಬೆದರಿಸಿ ಚಿರತೆಯನ್ನು ಓಡಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೆಂಜೂರು ಎಂಬಲ್ಲಿ ನಡೆದಿದೆ. ಕಾಡಿನಿಂದ ನಾಡಿಗೆ ಆಹಾರ ಹುಡುಕಿಕೊಂಡು ಬಂದ ಚಿರತೆ ಬ್ರಹ್ಮಾವರದ ಕೆಂಜೂರಿನ ಮನೆಯೊಂದರ ಬಾವಿಗೆ ಬಿದ್ದಿತ್ತು. ಕೂಡಲೇ ಮನೆಯವರು ಅರಣ್ಯ ಇಲಾಖೆಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬಂದಿ ದೊಡ್ಡ ಏಣಿಯೊಂದನ್ನು ಇಟ್ಟು ಚಿರತೆ ಮೇಲೆ ಬರಬಹುದು ಎಂದು ತುಂಬಾ ಹೊತ್ತು ಕಾದು ನೋಡಿದರು. ಆದರೆ ಭಯಗೊಂಡ ಚಿರತೆ ಬಾವಿಯಿಂದ ಮೇಲಕ್ಕೆ

ಚಿರತೆ ಓಡಿಸಲು ಬಾವಿಗೆ ಬೆಂಕಿ ಹಾಕಿದ ಅರಣ್ಯ ಇಲಾಖೆಯ ಸಿಬ್ಬಂದಿ..! Read More »

ಅರಮನೆಗಯ: ಅಂಬೇಡ್ಕರ್ ರಕ್ಷಣಾ ಸಮಿತಿಯಿಂದ ಸೇತುವೆ ನಿರ್ಮಿಸುವಂತೆ ಮನವಿ| ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ಸಮಗ್ರ ನ್ಯೂಸ್: ಜೂ.10ರಂದು ಅಡ್ತಲೆಯಲ್ಲಿ ನಡೆದ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ವೇಳೆ ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಅರಮನೆಗಯ ಸೇತುವೆ ನಿರ್ಮಿಸುವಂತೆ ಅಂಬೇಡ್ಕರ್ ರಕ್ಷಣಾ ಸಮಿತಿಯಿಂದ ಮನವಿ ನೀಡಲಾಯಿತು ಈ ವೇಳೆ ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಸರಕಾರದಿಂದ ಬರುವ ಮೊದಲ ಅನುದಾನದಲ್ಲಿ ಸೇತುವೆ ನಿರ್ಮಿಸುವ ಭರವಸೆಯನ್ನು ನೀಡಿದರು. ಹಾಗೂ ಈ ವರ್ಷದ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ದುರಸ್ಥಿ ಕಾರ್ಯವನ್ನು ಪಂಚಾಯತ್ ಮುಖಾಂತರ ಮಾಡಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬಿ. ಜೆ. ಪಿ. ಮಂಡಲ

ಅರಮನೆಗಯ: ಅಂಬೇಡ್ಕರ್ ರಕ್ಷಣಾ ಸಮಿತಿಯಿಂದ ಸೇತುವೆ ನಿರ್ಮಿಸುವಂತೆ ಮನವಿ| ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ Read More »

ಮರ್ಕಂಜ: ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮನವಿ

ಸಮಗ್ರ ನ್ಯೂಸ್:‌ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮ ಮತ್ತು ಇದರಿಂದ ಹಲವು ಜನ ಸಾಮನ್ಯರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನಲೆ ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮರ್ಕಂಜ ಗ್ರಾಮಸ್ಥರು ಜೂ.09 ರಂದು ಮನವಿ ಸಲ್ಲಿಸಿದರು. ಮರ್ಕಂಜ ಪ್ರದೇಶದಲ್ಲಿ ಈಗಾಗಲೇ ಗಣಿ ಇಲಾಖೆಯು ಗಣಿಗಾರಿಕೆಗೆ ಪರವಾನಿಗೆ ನೀಡಿದ್ದು ಈ ಪ್ರದೇಶದ ಆತೀ ಸಮೀಪದಲ್ಲಿ ಸರಕಾರಿ ಶಾಲೆ, ದೇವಸ್ಥಾನ, ಪೋಸ್ಟ್ ಆಫೀಸ್, ಸೊಸೈಟಿ, ಪರಿಶಿಷ್ಟ ಕಾಲೊನಿ, ಜನವಸತಿ, ಮತ್ತು ಸಮೃದ್ಧ ಕೃಷಿ ಪ್ರದೇಶವನ್ನು

ಮರ್ಕಂಜ: ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮನವಿ Read More »

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್

ಸಮಗ್ರ ನ್ಯೂಸ್: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ಮಾಡಿ ಬೈಕ್ ಜಖಂ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುತ್ತಿದ್ದ ಬೈಕ್ ಸವಾರನ ಮೇಲೆ ಮರಿ ಆನೆಯೊಂದು ದಾಳಿ ಮಾಡಲು ಮುಂದಾಗಿದೆ. ಭಯಭೀತರಾದ ಬೈಕ್ ಸವಾರ ತಮ್ಮ ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಆನೆ ಬೈಕ್ ತುಳಿಯುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಳಿಕ, ಜನರ ಕಿರುಚಾಟ ಕೇಳಿ ಕಾಡಿಗೆ

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್ Read More »