ರಾಜ್ಯ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ‌ ಆಗಸ್ಟ್ 1ರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ನಿಷೇಧ

ಸಮಗ್ರ ನ್ಯೂಸ್: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳ ಹಿನ್ನೆಲೆ ಅಪಘಾತಗಳಿಗೆ ಕಡಿವಾಣ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್ ವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಕೆಲ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಬೈಕ್, ಆಟೋ, ಟ್ರ್ಯಾಕ್ಟರ್‌ಗಳು ಮಂಗಳವಾರದಿಂದ ಸರ್ವಿಸ್ ರಸ್ತೆಯಲ್ಲೇ ಸಂಚಾರ ಮಾಡಬೇಕಾಗಿದೆ. ಮೋಟಾರು ವಾಹನ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರವು ಜುಲೈ 12ರಂದೇ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್ ವೇಗೆ ಹೊಸ ನಿಯಮ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ‌ ಆಗಸ್ಟ್ 1ರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ನಿಷೇಧ Read More »

ಉಗ್ರ ಅಫ್ಸರ್ ಪಾಷಾ ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ – ಶಾರೀಕ್‌ಗೆ ಜೈಲಿನಲ್ಲೇ ತರಬೇತಿ

ಸಮಗ್ರ ನ್ಯೂಸ್: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಸದ್ಯ ಬಂಧನದಲ್ಲಿರುವ ಲಷ್ಕರ್ ಎ ತೋಯ್ಬದ ಸದಸ್ಯ ಅಫ್ಸರ್ ಪಾಷಾ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಶಾರಿಖ್ ಹಾಗೂ ಪಾಷಾನಿಗೆ ಸಂಬಂಧ ಇರುವುದು ತನಿಖೆ ವೇಳೆ ಬಯಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿಯಿಂದ ಬಂದಿದ್ದ ಜೀವ ಬೆದರಿಕೆ ಕರೆ ಪ್ರಕರಣದಲ್ಲಿ ಪಾಷನ್ನು ಜುಲೈ ೧೪ ರಂದು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ತನಿಖೆ ವೇಳೆ

ಉಗ್ರ ಅಫ್ಸರ್ ಪಾಷಾ ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ – ಶಾರೀಕ್‌ಗೆ ಜೈಲಿನಲ್ಲೇ ತರಬೇತಿ Read More »

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

ಸಮಗ್ರ ನ್ಯೂಸ್: ಮಂಗಳೂರು ನಗರದ ಪಡೀಲ್ ಅಳಪೆ ಪಡ್ಪು ರೈಲ್ವೇ ಬ್ರಿಡ್ಜ್ ಸಮೀಪ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಜು. 30 ರಂದು ನಡೆದಿದೆ. ಅಳಪೆ ಪಡ್ಪುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತಪಟ್ಟ ಯುವಕರು. ಜು.30 ರಂದು ಸಂಜೆ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು Read More »

ಹಾಸನ: ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದು ಬಾಲಕಿ ಸಾವು

ಸಮಗ್ರ ನ್ಯೂಸ್: ಜೋಕಾಲಿ ಆಡಲು ಹೋಗಿ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕುಣಿಕೇರಿ ಗ್ರಾಮದಲ್ಲಿ ನಡೆದಿದೆ. ಬಸವರಾಜು ಮತ್ತು ಬೇಬಿ ದಂಪತಿಯ ಪುತ್ರಿ ಸಾನಿತ (9) ಮೃತಪಟ್ಟ ದುರ್ದೈವಿಯಾಗಿದ್ದು, ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಮನೆಯ ಒಳಗೆ ಸೀರೆಯಲ್ಲಿ ಜೋಕಾಲಿ ಆಡುಲು ಸೀರೆ ಕಟ್ಟಿದ್ದು, ಅದರಲ್ಲಿ ಆಡುವ ಸಂದರ್ಭದಲ್ಲಿ ಆಯತಪ್ಪಿ ಕುತ್ತಿಗೆಗೆ ಸೀರೆ ಬಿಗಿದು ಬಾಲಕಿ ಸಾವನ್ನಪ್ಪಿದ್ದಾಳೆ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ

ಹಾಸನ: ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದು ಬಾಲಕಿ ಸಾವು Read More »

ಮೈಸೂರು:ಗಗನಕ್ಕೇರಿದ ಶುಂಠಿ ಬೆಲೆ | 8 ಮೂಟೆ ಶುಂಠಿಯನ್ನೇ ಕದ್ದೊಯ್ದ ಕಳ್ಳರು

ಸಮಗ್ರ ನ್ಯೂಸ್:ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರಿದೆ. ಟೊಮೆಟೊ ಬೆಲೆಗೆ ಬಂಗಾರದ ರೇಟ್ ಬಂದ ಬೆನ್ನಲ್ಲೇ ಟೊಮೆಟೊ ತೋಟಕ್ಕೆ ಸಿಸಿಟಿವಿ ಕಣ್ಗಾವಲು, ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆಯೊದಗಿಸಿದ್ದಾಯಿತು. ಈಗ ಶುಂಠಿ ಸರದಿ ಆರಂಭವಾಗಿದೆ. ಶುಂಠಿ ಬೆಲೆಯಲ್ಲೂ ಒಂದೇ ಸಮನೇ ಏರಿಕೆಯಾಗುತ್ತಿದೆ. ಟೊಮೆಟೊ ಬೆಲೆ ಹೆಚ್ಚಳವಾಗುತ್ತಿದ್ದಂತೆ ಮಾರ್ಕೆಟಿಗೆ ಸಾಗಿಸುತ್ತಿದ್ದ ಟೊಮೆಟೊ ವಾಹನಗಳನ್ನೇ ಕಳ್ಳತನ ಮಾಡಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಕಟಾವು ಮಾಡಿಟ್ಟಿದ್ದ ಶುಂಠಿಯನ್ನೇ ಕಳ್ಳರು ಕದ್ದೊಯ್ದಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಶುಂಠಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಂಠಿ

ಮೈಸೂರು:ಗಗನಕ್ಕೇರಿದ ಶುಂಠಿ ಬೆಲೆ | 8 ಮೂಟೆ ಶುಂಠಿಯನ್ನೇ ಕದ್ದೊಯ್ದ ಕಳ್ಳರು Read More »

21 ಲಕ್ಷ ಮೌಲ್ಯದ ಟೊಮೆಟೊ ತುಂಬಿಕೊಂಡು ಹೊರಟಿದ್ದ ಲಾರಿ ನಾಪತ್ತೆ

ಸಮಗ್ರ ನ್ಯೂಸ್: ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆಯಾಗಿ ರೈತ ಕಂಗಾಲಾಗಿರುವ ಘಟನೆ ನಡೆದಿದೆ. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು ಇದರಿಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದು, ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

21 ಲಕ್ಷ ಮೌಲ್ಯದ ಟೊಮೆಟೊ ತುಂಬಿಕೊಂಡು ಹೊರಟಿದ್ದ ಲಾರಿ ನಾಪತ್ತೆ Read More »

ಚಿಕ್ಕಮಗಳೂರು: 20 ಅಡಿ ಆಳಕ್ಕೆ ಬಿದ್ದ ಕಾರು

ಸಮಗ್ರ ನ್ಯೂಸ್: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೂವ ಕಾರೊಂದು 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದಿರುವ ಘಟನೆ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಸಂಭವಿಸಿದೆ. ಕೋಲಾರದಿಂದ ಹೊರನಾಡಿಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದ್ದು ಗಾಯಗೊಂಡ ಪ್ರವಾಸಿಗರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.

ಚಿಕ್ಕಮಗಳೂರು: 20 ಅಡಿ ಆಳಕ್ಕೆ ಬಿದ್ದ ಕಾರು Read More »

ಪಿರಿಯಾಪಟ್ಟಣ: ಗಾಂಜಾ ಮಾರಾಟ| ಕೊಡಗಿನ ವ್ಯಕ್ತಿ ಬಂಧನ

ಸಮಗ್ರ ನ್ಯೂಸ್: ಪಿರಿಯಾಪಟ್ಟಣ ತಾಲೂಕಿನ ಆಯುರ್ಬೀಡು ಸಮೀಪದ ಲಿಂಗಪುರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗಿನ ವ್ಯಕ್ತಿಯನ್ನು ಬೈಲುಕುಪ್ಪೆ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಿವಾಸಿ ಅಜೀಜ್ ಬಂಧಿತ ಆರೋಪಿ. ಖಚಿತ ಮಾಹಿತಿಯ ಆದರದ ಮೇಲೆ ಭಾನುವಾರ ಬೆಳಿಗ್ಗೆ ಆರೋಪಿಯನ್ನು ಸೆರೆ ಹಿಡಿದು 5 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆಯಲ್ಲಿ ಪಿಎಸ್ಐ ಅಜಯ್ ಕುಮಾರ್, ಗುಪ್ತಚರ ಸಬ್ ಇನ್ಸ್ಪೆಕ್ಟರ್ ಮಹಾಲಿಂಗ

ಪಿರಿಯಾಪಟ್ಟಣ: ಗಾಂಜಾ ಮಾರಾಟ| ಕೊಡಗಿನ ವ್ಯಕ್ತಿ ಬಂಧನ Read More »

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕರಾಗಿ ಪೃಥ್ವಿಕುಮಾರ್.ಟಿ. ಆಯ್ಕೆ

ಸಮಗ್ರ ನ್ಯೂಸ್: ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪರ ಗೃಹ ಕಚೇರಿಯಲ್ಲಿ ಇವರ ಆಪ್ತ ಸಹಾಯಕರಾಗಿ ಸುಳ್ಯ ಕ್ಷೇತ್ರದ ಶಿಕ್ಷಣಾಧಿಕಾರಿ ಕಚೇರಿ ಉದ್ಯೋಗಿಯಾಗಿರುವ , ಮತ್ತು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಪೃಥ್ವಿಕುಮಾರ್. ಟಿ. ಆಯ್ಕೆಯಾಗಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕರಾಗಿ ಪೃಥ್ವಿಕುಮಾರ್.ಟಿ. ಆಯ್ಕೆ Read More »

ಕುಕ್ಕೆ ದೇವಳಕ್ಕೆ ನಿಯಮ ಬಾಹಿರ ದಿನಸಿ ಖರೀದಿಯ ಆರೋಪ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕಳೆದ ಮೂರು ವರ್ಷಗಳಿಂದ ದೇವಳಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಯಾವುದೇ ಟೆಂಡರ್ ನಡೆಸದೇ ನಿಯಮ ಬಾಹಿರವಾಗಿ ಮಂಗಳೂರಿನಿ ಜನತಾ ಬಜಾರ್‌ನಿಂದ ಖರೀದಿಸಲಾಗಿದ್ದು, ಇದರಿಂದ ಪ್ರತೀ ವರ್ಷ ಸುಮಾರು ೫ ಕೋಟಿ ಹೆಚ್ಚುವರಿ ಪಾವತಿಯಾಗಿ ನಷ್ಟ ಉಂಟಾಗುತ್ತಿದೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್‌ಇಂಜಾಡಿ ಆರೋಪಿಸಿದರು. ಅವರು ಸುಬ್ರಹ್ಮಣ್ಯದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಟೆಂಡರ್ ನಡೆಸದೇ ಸಾಮಾಗ್ರಿ ಖರೀದಿ ಬಗ್ಗೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಧಿವೇಶನದಲ್ಲಿ

ಕುಕ್ಕೆ ದೇವಳಕ್ಕೆ ನಿಯಮ ಬಾಹಿರ ದಿನಸಿ ಖರೀದಿಯ ಆರೋಪ Read More »