ರಾಜ್ಯ

ಉಡುಪಿ: ಅಲೆಗಳ ರಭಸಕ್ಕೆ ಮುಳುಗಿದ ದೋಣಿ, ಓರ್ವ ಮೃತ್ಯು

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಅಲೆಗಳ ರಭಸಕ್ಕೆ 8 ಮಂದಿ ಇದ್ದ ದೋಣಿ ಮುಳುಗಡೆಯಾದ ಘಟನೆ ಜು.31 ರಂದು ನಡೆದಿದೆ, ಈ ವೇಳೆ ಓರ್ವ ಮೀನುಗಾರ ಸಮುದ್ರದಲ್ಲಿ ಮೃತ ಪಟ್ಟಿರುವುದು ತಿಳಿದುಬಂದಿದೆ. ಈ ದೋಣಿಯು ಸಚಿನ್ ಮೊಗವೀರ ಎಂಬವರಿಗೆ ಸೇರಿದ್ದು, ಮಾಸ್ತಿ ಮರ್ಲ ಚಿಕ್ಕು ಎಂಬ ಹೆಸರನ್ನು ಹೊಂದಿತ್ತು. ನಾಡ ದೋಣಿಯಲ್ಲಿ ಒಟ್ಟು 8 ಮಂದಿ ಮೀನುಗಾರರು ಇದ್ದರು, ಅದರಲ್ಲಿ ಆರು ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ, ಆದರೆ ಇಬ್ಬರು ಮೀನುಗಾರರು ಸಮುದ್ರ

ಉಡುಪಿ: ಅಲೆಗಳ ರಭಸಕ್ಕೆ ಮುಳುಗಿದ ದೋಣಿ, ಓರ್ವ ಮೃತ್ಯು Read More »

ಕೇದಾರನಾಥ ಯಾತ್ರೆಗೆ‌ ತೆರಳಿದ್ದ ಚಿಕ್ಕಮಗಳೂರಿನಿಂದ ಯುವಕ ಸಾವು

ಸಮಗ್ರ ನ್ಯೂಸ್: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ನಿವಾಸಿ ಗಿರೀಶ್ (25) ಎಂದು ಗುರುತಿಸಲಾಗಿದೆ. ಈತ ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಮೃತದೇಹವನ್ನು ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕಳೆದ ವಾರವಷ್ಟೇ ಮೂಡಿಗೆರೆಯಿಂದ ಕೇದಾರನಾಥ ಯಾತ್ರೆಗೆ ಗಿರೀಶ್ ತೆರಳಿದ್ದಾಗಿ ತಿಳಿದುಬಂದಿದೆ. ಕೇದಾರನಾಥ ಪೊಲೀಸರಿಂದ ಗಿರೀಶ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.

ಕೇದಾರನಾಥ ಯಾತ್ರೆಗೆ‌ ತೆರಳಿದ್ದ ಚಿಕ್ಕಮಗಳೂರಿನಿಂದ ಯುವಕ ಸಾವು Read More »

ಸೇತುವೆ ನಿರ್ಮಾಣ ವೇಳೆ ಕುಸಿದ ಕ್ರೇನ್| 14 ಮಂದಿ ಕಾರ್ಮಿಕರು ಸಾವು ; ಹಲವರು ಗಂಭೀರ

ಸಮಗ್ರ ನ್ಯೂಸ್: ಕ್ರೇನ್ ಕುಸಿತಗೊಂಡ ಪರಿಣಾಮ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಇಂದು (ಆ.1) ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಸಮೃದ್ಧಿ ಎಕ್ಸ್ಪ್ರೆಸ್ವೇಯ ಮೂರನೇ ಹಂತದ ನಿರ್ಮಾಣದ ಸಂದರ್ಭದಲ್ಲಿ ಗರ್ಡರ್ ಯಂತ್ರ ಬಿದ್ದು ಕನಿಷ್ಠ 14 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಯಂತ್ರವು ಸೇತುವೆ ನಿರ್ಮಾಣದಲ್ಲಿ ಬಳಸುವ ವಿಶೇಷ ಉದ್ದೇಶದ ಮೊಬೈಲ್ ಗ್ಯಾಂಟ್ರಿ ಕ್ರೇನ್ ಆಗಿದೆ. ಇದು ದಿಢೀರ್ ಕುಸಿದು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ, 14 ಮಂದಿ ಸಾವನ್ನಪ್ಪಿ, ಹಲವರು

ಸೇತುವೆ ನಿರ್ಮಾಣ ವೇಳೆ ಕುಸಿದ ಕ್ರೇನ್| 14 ಮಂದಿ ಕಾರ್ಮಿಕರು ಸಾವು ; ಹಲವರು ಗಂಭೀರ Read More »

ರಾಜ್ಯದಲ್ಲಿ ಹೆಚ್ಚಿದ ʻಮದ್ರಾಸ್ ಐʼ ಪ್ರಕರಣ|ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ʻಮದ್ರಾಸ್‌ ಐʼ (Madras Eye) ವೈರಾಣುವಿನಿಂದ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಕಂಜಕ್ಟಿವೈಟಿಸ್ (Conjunctivitis) ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ `ಕಣ್ಣು’ ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟುಮಾಡುತ್ತದೆ. ಈ ಬಾರಿ ರಾಜ್ಯದಲ್ಲಿ ಮಳೆಗಾಲಕ್ಕೂ ಮುನ್ನವೇ ʻಮದ್ರಾಸ್‌ ಐʼ ಪ್ರಕರಣ ಕಾಲಿಟ್ಟಿತ್ತು. ಈ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ

ರಾಜ್ಯದಲ್ಲಿ ಹೆಚ್ಚಿದ ʻಮದ್ರಾಸ್ ಐʼ ಪ್ರಕರಣ|ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ Read More »

ನಾಳೆಯಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ

ಸಮಗ್ರ ನ್ಯೂಸ್: ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದರಿಂದ ರಾಜ್ಯದ ಸಾಮಾನ್ಯ ಜನರ ದೈನಂದಿನ ಜೀವನ ತತ್ತರಿಸಿ ಹೋಗಿದೆ. ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋ ದರ 100ರೂ ಗಡಿದಾಟಿದೆ. ಹೀಗಿರುವಾಗ, ಸರಕಾರವು ಮತ್ತೊಂದು ಶಾಕ್ ಕೊಟ್ಟಿದೆ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ. 3 ಹೆಚ್ಚಳ ಮಾಡಲಾಗಿದೆ. ನಾಳೆಯಿಂದ ಯಾವ ಹಾಲಿನ ಬೆಲೆ ಎಷ್ಟೆಷ್ಟು ಹೆಚ್ಚಳ ಎನ್ನುವುದನ್ನು ನೋಡುವುದಾದ್ರೆ ,ನಂದಿನಿ ಟೋನ್ಡ್ ಮಿಲ್ಕ್ 1 ಲೀಟರ್‌ಗೆ 37-40ರೂ., ಅರ್ಧ ಲೀಟರ್‌ಗೆ

ನಾಳೆಯಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ Read More »

50 ವರ್ಷಗಳ ನಂದಿನಿ ತುಪ್ಪ ಮತ್ತು ತಿರುಪತಿ ಲಡ್ಡಿನ ಅವಿನಾಭಾವ ಸಂಬಂಧಕ್ಕೆ ತೆರೆ| ಇನ್ಮುಂದೆ ತಿರುಪತಿ ಲಡ್ಡಿನಲ್ಲಿ ಕೆಎಂಎಫ್ ತುಪ್ಪದ ಘಮ ಘಮ ಇರಲ್ಲ..!!

ಸಮಗ್ರ ನ್ಯೂಸ್: ಇನ್ಮುಂದೆ ತಿರುಪತಿ ತಿಮ್ಮಪ್ಪನ ಲಡ್ಡಿ(Tirupati laddus)ನಲ್ಲಿ ಕರ್ನಾಟಕದ ನಂದಿನಿ ತುಪ್ಪದ (Nandini ghee) ಘಮ ಮರೆಯಾಗಲಿದೆ. ಸುಮಾರು 50 ವರ್ಷಗಳ ನಂತರ ತಿರುಪತಿ ತಿರುಮಲ ಟ್ರಸ್ಟ್ (TTD) ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತುಪ್ಪ ಖರೀದಿಸುವುದನ್ನು ಸ್ಥಗಿತಗೊಳಿಸಿದೆ. ಕೆಎಂಎಫ್ ನೀಡಿರುವ ಬೆಲೆಯನ್ನು ಒಪ್ಪಿಕೊಳ್ಳದ ಟಿಟಿಡಿ ಮತ್ತೊಂದು ಕಂಪನಿಯೊಂದಿಗೆ ತುಪ್ಪ ಖರೀದಿಸಲು ಮುಂದಾಗಿರುವುದು ಬಹುತೇಕ ಪಕ್ಕಾ ಆಗಿದೆ. ಆಗಸ್ಟ್ 1 ರಿಂದ ಹಾಲಿನ ಸಂಗ್ರಹಣೆ ಬೆಲೆ ಹೆಚ್ಚಾಗುವುದರಿಂದ ತುಪ್ಪ ಖರೀದಿಸಲು ಹೆಚ್ಚಿನ ಬೆಲೆಯ

50 ವರ್ಷಗಳ ನಂದಿನಿ ತುಪ್ಪ ಮತ್ತು ತಿರುಪತಿ ಲಡ್ಡಿನ ಅವಿನಾಭಾವ ಸಂಬಂಧಕ್ಕೆ ತೆರೆ| ಇನ್ಮುಂದೆ ತಿರುಪತಿ ಲಡ್ಡಿನಲ್ಲಿ ಕೆಎಂಎಫ್ ತುಪ್ಪದ ಘಮ ಘಮ ಇರಲ್ಲ..!! Read More »

ವಿಶ್ವವಿಖ್ಯಾತ ಮೈಸೂರು ಅರಮನೆಗೆ ಆಗಸ್ಟ್ 1 ಮತ್ತು 2ರಂದು ಪ್ರವೇಶ ನಿರ್ಬಂಧ

ಸಮಗ್ರ ನ್ಯೂಸ್: ಆಗಸ್ಟ್ 1 ಹಾಗೂ 2ರಂದು G20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶದ ಗಣ್ಯರು ಮೈಸೂರು ಅರಮನೆ ವೀಕ್ಷಣೆಗೆ ಭೇಟಿ ನೀಡಲಿದ್ದಾರೆ. ಈ ಕಾರಣ ಎರಡು ದಿನಗಳ ಕಾಲ ಮೈಸೂರು ಅರಮನೆ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಆಗಸ್ಟ್ 2ರಂದು ರಾತ್ರಿ 7 ರಿಂದ 8ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದ್ದು. ಈ ಕಾರ್ಯಕ್ರಮದ ವೀಕ್ಷಣೆಗೂ ಕೂಡ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ವಿದೇಶಿ ಗಣ್ಯರ ಅಗತ್ಯ ಮುಂಜಾಗ್ರತಾ ದೃಷ್ಟಿಯಲ್ಲಿ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರ ಪ್ರವೇಶಕ್ಕೆ

ವಿಶ್ವವಿಖ್ಯಾತ ಮೈಸೂರು ಅರಮನೆಗೆ ಆಗಸ್ಟ್ 1 ಮತ್ತು 2ರಂದು ಪ್ರವೇಶ ನಿರ್ಬಂಧ Read More »

ಗೃಹಜ್ಯೋತಿ ಕರೆಂಟ್ ಬಿಲ್ ಮಾದರಿ ಹೇಗಿದೆ ಗೊತ್ತಾ?|ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಲಾಭ ಫಲಾನುಭವಿಗಳಿಗೆ ಸಿಗಲಿದೆ ಶೂನ್ಯ ದರದ ಕರೆಂಟ್ ಬಿಲ್. ಮೀಟರ್ ರೀಡಿಂಗ್ ಕಾರ್ಯ ನಾಳೆಯಿಂದ ಆರಂಭವಾಗಲಿದ್ದು, ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗ ಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಬಿಲ್ ಮುಂಭಾಗ ಹಾಗೂ ಹಿಂಭಾಗ ಮುದ್ರಣದಲ್ಲಿ ಬದಲಾವಣೆ ಮಾಡಲಾಗಿದ್ದು ಗೃಹಜ್ಯೋತಿಯ ಕರೆಂಟ್ ಬಿಲ್ ಮಾದರಿ ನ್ಯೂಸ್ 18ಗೆ ದೊರೆತಿದೆ. ಈ ಬಿಲ್ ನ ಮುಂಭಾಗ ಹಾಗೂ ಹಿಂಭಾಗ ಮುದ್ರಣದಲ್ಲಿ ಬದಲಾವಣೆ ಮಾಡಲಾಗಿದೆ. ವಿದ್ಯುತ್ ಬಿಲ್ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು

ಗೃಹಜ್ಯೋತಿ ಕರೆಂಟ್ ಬಿಲ್ ಮಾದರಿ ಹೇಗಿದೆ ಗೊತ್ತಾ?|ಇಲ್ಲಿದೆ ಪೂರ್ಣ ಮಾಹಿತಿ Read More »

ಮಂಗಳೂರು: ಮಾಜಿ ಉಪಕುಲಪತಿ ಕೆ.ಬೈರಪ್ಪ ನಿಧನ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಕೆ.ಬೈರಪ್ಪ(69) ಅವರು ಜು .31 ರಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು 2014 ಜೂನ್ ನಿಂದ 2019 ಜೂನ್ ವರೆಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಉಪ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ ನಿವೃತ್ತಿ ಹೊಂದಿ ಆದಿ ಚುಂಚನ ಗಿರಿಯಲ್ಲಿ ಸಹಕುಲಪತಿಗಳಾಗಿ ಕಾರ್ಯ ನಿರ್ವಹಿಸುತಿದ್ದರು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತಗೊಂಡು ಕೊನೆಯುಸಿರೆಳೆದಿದ್ದಾರೆ.

ಮಂಗಳೂರು: ಮಾಜಿ ಉಪಕುಲಪತಿ ಕೆ.ಬೈರಪ್ಪ ನಿಧನ Read More »

ಉಡುಪಿ: ಟಾಯ್ಲೆಟ್ ವಿಡಿಯೋ ಚಿತ್ರೀಕರಣ ಪ್ರಕರಣ| ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ

ಸಮಗ್ರ ನ್ಯೂಸ್: ಉಡುಪಿ ಟಾಯ್ಲೆಟ್ ವಿಡಿಯೋ ಚಿತ್ರೀಕರಣ ಘಟನೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೇಳಿಕೆ ನೀಡಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆ ಬಂದಿರುವ ಬಗ್ಗೆ ವರದಿಯಾಗಿದೆ. ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿ ನೇತ್ರಜ್ಯೋತಿ ಕಾಲೇಜಿನ ಅವ್ಯವಸ್ಥೆ ವಿರುದ್ಧ ಮಾತನಾಡಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾದ ನಂತರ ಜುಲೈ 28 ರಂದು ಜಿಗರ್ ಕೋಬ್ರಾ ಹೆಸರಿನ ಖಾತೆಯಿಂದ ವಿದ್ಯಾರ್ಥಿನಿಯ ಇನ್‌ಸ್ಟಾ ಖಾತೆಗೆ ಭಯಪಡಿಸುವ ರೀತಿಯ ಮೆಸೇಜ್‌ ಬರಲು ಆರಂಭವಾಗಿದೆ.ಮಾನಸಿಕ ನೆಮ್ಮದಿಗೆ ಭಂಗ ಉಂಟು ಮಾಡಲಾಗಿದೆ ಎಂದು ವಿದ್ಯಾರ್ಥಿನಿ ಹೇಳಿದ ಹಿನ್ನೆಲೆಯಲ್ಲಿ

ಉಡುಪಿ: ಟಾಯ್ಲೆಟ್ ವಿಡಿಯೋ ಚಿತ್ರೀಕರಣ ಪ್ರಕರಣ| ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ Read More »