ರಾಜ್ಯ

ಕೊನೆಗೂ ಕುಸಿತ ಕಂಡ ಟೊಮ್ಯಾಟೊ ದರ| ಈವಾಗ ಮಾರ್ಕೆಟ್ ಹೇಗಿದೆ..?

ಸಮಗ್ರ ನ್ಯೂಸ್: ಚಿನ್ನದಷ್ಟೇ ಬೆಲೆ ಹೊಂದಿದ್ದ ಟೊಮ್ಯಾಟೋ ಬೆಲೆಯಲ್ಲಿ ಈಗ ಕುಸಿತ ಕಂಡಿದ್ದು, ಇದೀಗ ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ಜೂನ್ ತಿಂಗಳಿನಿಂದ ಮುಂಗಾರಿನ ಅಭಾವದಿಂದ ಟೊಮ್ಯಾಟೋ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಇದರಿಂದ ರೈತರಿಗೇನೋ ತುಂಬಾ ಲಾಭವಾಯಿತು ಆದರೆ ಗ್ರಾಹಕರಿಗೆ ಎಟುಕಲಾರದಂತಹ ದರದಲ್ಲಿ ಟೊಮೇಟೊ ಮಾರಾಟವಾಗಿತ್ತು. ಆದರೆ ಈಗ ಕಳೆದು ಒಂದು ವಾರದಿಂದ ಟೊಮ್ಯಾಟೋ ಬೆಲೆ ಕುಸಿತ ಕಂಡಿದ್ದು, ಇದೀಗ ಒಂದು ಬಾಕ್ಸ್‌ಗೆ 1000 ರೂಪಾಯಿ ಇಂದ 1200 ರೂಪಾಯಿಗೆ ಮಾರಾಟವಾಗುತ್ತಿದ್ದು, ಕೆಜಿಗೆ

ಕೊನೆಗೂ ಕುಸಿತ ಕಂಡ ಟೊಮ್ಯಾಟೊ ದರ| ಈವಾಗ ಮಾರ್ಕೆಟ್ ಹೇಗಿದೆ..? Read More »

ಮೈಸೂರು: ದಸರಾ ಗಜಪಡೆ ಪಟ್ಟಿ ಬಿಡುಗಡೆ: ಈ ಬಾರಿ ಜಂಬೂ ಸವಾರಿಯಲ್ಲಿ 9 ಗಜಗಳು

ಸಮಗ್ರ ನ್ಯೂಸ್:ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲು ದಸರಾ ಗಜಪಡೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ 9 ಗಜಪಡೆಯಲ್ಲಿ ಸ್ಥಾನ ನೀಡಲಾಗಿದೆ. ಬೆಂಗಳೂರಿನ ಅಶೋಕಪುರದಲ್ಲಿರುವ ಅರಣ್ಯಭವನದಲ್ಲಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಿ.ವಿ ರಂಗರಾವ್ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲ ತಂಡದಲ್ಲಿ 9 ಆನೆಗಳು ಪಾಲ್ಗೊಳ್ಳಲಿವೆ.

ಮೈಸೂರು: ದಸರಾ ಗಜಪಡೆ ಪಟ್ಟಿ ಬಿಡುಗಡೆ: ಈ ಬಾರಿ ಜಂಬೂ ಸವಾರಿಯಲ್ಲಿ 9 ಗಜಗಳು Read More »

ರಿಲಾಯನ್ಸ್ ಅನ್ನೇ ಹಿಂದಿಕ್ಕಿದ ಎಸ್ ಬಿಐ| ಎರಡನೇ ಬಾರಿಗೆ ಭಾರೀ ಲಾಭ ಗಳಿಸಿದ ಸರ್ಕಾರಿ ಬ್ಯಾಂಕ್

ಸಮಗ್ರ ನ್ಯೂಸ್: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿರುವ ಎಸ್​ಬಿಐ ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಭರ್ಜರಿ ಲಾಭ ಗಳಿಸಿದೆ. 2023ರ ಎಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 18,537 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಅಚ್ಚರಿ ಎಂದರೆ ಲಾಭದ ಓಟದಲ್ಲಿ ಎಸ್​ಬಿಐ ಭಾರತದ ಅತಿದೊಡ್ಡ ಕಂಪನಿ ಮತ್ತು ಅತಿಹೆಚ್ಚು ಲಾಭದಾಯಕ ಸಂಸ್ಥೆ ಎನಿಸಿದ ರಿಲಾಯನ್ಸ್ ಇಂಡಸ್ಟ್ರೀಸ್ ಅನ್ನೇ ಮೀರಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ಆರ್​ಐಎಲ್ (RIL) ಸಂಸ್ಥೆಯ ತ್ರೈಮಾಸಿಕ ಅವಧಿಯ

ರಿಲಾಯನ್ಸ್ ಅನ್ನೇ ಹಿಂದಿಕ್ಕಿದ ಎಸ್ ಬಿಐ| ಎರಡನೇ ಬಾರಿಗೆ ಭಾರೀ ಲಾಭ ಗಳಿಸಿದ ಸರ್ಕಾರಿ ಬ್ಯಾಂಕ್ Read More »

ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟ ಪುತ್ತೂರ ಮೂಲದ ಪಿಎಸೈ ಪ್ರದೀಪ್ ಪೂಜಾರಿ

ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರ ದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟು ಬೆಟ್ಟದಲ್ಲಿ ಇಳಿಸುವ ಮೂಲಕ ಪಿಎಸೈ ಪ್ರದೀಪ್ ಪೂಜಾರಿ ಹಾಗೂ ಸಿಬ್ಬಂದಿ ,ಸೈನಿಕರು ಮಾನವೀಯತೆ ಮೆರೆದಿದ್ದಾರೆ. ಜಾಲಾರಿ ದೇವಾಲಯದ ಬೆಟ್ಟದ ಬಳಿ ಸೈನಿಕರು ಕ್ಯಾಂಪ್ ಹಾಕಿ ಕೂಂಬಿಂಗ್ ನಡೆಸುತ್ತಿದ್ದಾಗ ಬೆಟ್ಟದಲ್ಲಿ ಸೈನಿಕರ ಕಣ್ಣಿಗೆ ಶವ ಕಾಣಿಸಿದೆ. ಈ ವಿಷಯವನ್ನು ಚಿಕ್ಕಬಳ್ಳಾಪುರ ಎಸ್‌ಪಿಯವರ ಗಮನಕ್ಕೆ ಸೈನಿಕರು ತಂದಿದ್ದಾರೆ. ಸುಮಾರು 50 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು ಗುರುತು ಪತ್ತೆಯಾಗಿಲ್ಲ. ಬಳಿಕ

ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟ ಪುತ್ತೂರ ಮೂಲದ ಪಿಎಸೈ ಪ್ರದೀಪ್ ಪೂಜಾರಿ Read More »

ರಾಜ್ಯದ ‘ಗೃಹಲಕ್ಷ್ಮಿ’ಯರೇ… ನಿಮಗೊಂದು ಮಹತ್ವದ ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದ್ದು, ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು. ಮುಖ್ಯವಾದ ವಿಚಾರ ಅಂದ್ರೆ ಗೃಹಲಕ್ಷ್ಮಿಗೆ’ ಅರ್ಜಿ ಸಲ್ಲಿಸದ ಮಾತ್ರಕ್ಕೆ ಹಣ ಜಮೆ ಆಗಲ್ಲ, ತಪ್ಪದೇ ನೀವು ಈ ಕೆಲಸ ಮಾಡಬೇಕು .ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೂ ಈ ಕೆಲಸ ಮಾಡದಿದ್ದರೆ ಅವರು ಯೋಜನೆಯಿಂದ ವಂಚಿತರಾಗಬಹುದು. ಯಾಕೆಂದರೆ ಯಜಮಾನಿಯರು

ರಾಜ್ಯದ ‘ಗೃಹಲಕ್ಷ್ಮಿ’ಯರೇ… ನಿಮಗೊಂದು ಮಹತ್ವದ ಸೂಚನೆ Read More »

ಅಬ್ಬರಿಸಿದ ಸೂರ್ಯಕುಮಾರ್; ಭಾರತಕ್ಕೆ 7 ವಿಕೆಟ್ ಗಳ ಜಯ

ಸಮಗ್ರ ನ್ಯೂಸ್: ಸ್ಪೋಟಕ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಅಬ್ಬರದ ಆಟದಿಂದ ಭಾರತ ತಂಡ 7 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಟಿ-20 ಸರಣಿಯಲ್ಲಿ 1-2ರಿಂದ ಹಿನ್ನಡೆ ಅಂತರ ತಗ್ಗಿಸಿಕೊಂಡಿದೆ. ಪ್ರಾವಿನೆನ್ಸ್ ನಲ್ಲಿ ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು.ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 18 ಓವರ್

ಅಬ್ಬರಿಸಿದ ಸೂರ್ಯಕುಮಾರ್; ಭಾರತಕ್ಕೆ 7 ವಿಕೆಟ್ ಗಳ ಜಯ Read More »

ಬೆಂಗಳೂರಿಗೆ ಆಗಮಿಸಿದ ಸ್ಪಂದನಾ ಪಾರ್ಥಿವ ಶರೀರ| ಇಂದು ಮಧ್ಯಾಹ್ನ ಬಳಿಕ ಅಂತ್ಯಕ್ರಿಯೆ

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್‌ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಪಾರ್ಥಿವ ಶರೀರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಅಂಬ್ಯಲೆನ್ಸ್‌ ಮೂಲಕ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಕೆಂಪೇಗೌಡ ವಿಮಾನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ಗೆ ಸ್ಪಂದನಾ ಅವರ ಮೃತದೇಹ ಆಗಮಿಸಿದೆ. ನಿಯಮಾನುಸಾರ ಪಾರ್ಥಿವ ಶರೀರದ ಸ್ಕ್ಯಾನಿಂಗ್‌ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಧಿಕಾರಿಗಳು ಸರ್ಟಿಫಿಕೆಟ್‌ ನೀಡುತ್ತಾರೆ. ಕಸ್ಟಮ್ಸ್‌ ಅಧಿಕಾರಿಗಳು ಕ್ಲಿಯರೆನ್ಸ್‌

ಬೆಂಗಳೂರಿಗೆ ಆಗಮಿಸಿದ ಸ್ಪಂದನಾ ಪಾರ್ಥಿವ ಶರೀರ| ಇಂದು ಮಧ್ಯಾಹ್ನ ಬಳಿಕ ಅಂತ್ಯಕ್ರಿಯೆ Read More »

ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲ್ಲ ಎಸ್ಎಸ್ಎಲ್ ಸಿ ಎಕ್ಸಾಂ

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇನ್ಮುಂದೆ ಗ್ರಾಮೀಣ ಪ್ರದೇಶದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸದಂತೆ ಮಹತ್ವದ ಸೂಚನೆ ನೀಡಿದೆ. ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಪ್ರಕರಣಗಳಿಗೆ ಪೋಷಕರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದು, ಹೀಗಾಗಿ ನಕಲು ತಡೆಗಟ್ಟಲು 2024 ರ ಮಾರ್ಚ್/ಏಪ್ರಿಲ್ ನಲ್ಲಿ ಎಸ್‌ಎಸ್ ಎಲ್ ಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ

ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲ್ಲ ಎಸ್ಎಸ್ಎಲ್ ಸಿ ಎಕ್ಸಾಂ Read More »

ಸುಳ್ಯ: ಬೇರೇನೂ ಬೇಡ, ನನ್ನ ಮಗಳ ಸಾವಿಗೆ ನ್ಯಾಯ ಕೊಡಿ‌| ಸೆರಗೊಡ್ಡಿ ಅಂಗಲಾಚಿದ ಸೌಜನ್ಯ ತಾಯಿ!!

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಮಣ್ಣಸಂಕ ಬಳಿ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಸೌಜನ್ಯಳ ನ್ಯಾಯಕ್ಕಾಗಿ ಸುಳ್ಯದಲ್ಲಿ ಪ್ರತಿಭಟನಾ ಸಭೆಯಲ್ಲಿ ಮನಕಲಕುವ ಘಟನೆ ನಡೆದಿದೆ. ನೋವಿನ ನಡುವೆ ಮಗಳ ಸಾವಿನ ನ್ಯಾಯಕ್ಕಾಗಿ ದಿ. ಸೌಜನ್ಯಳ ತಾಯಿ ಕುಸುಮಾವತಿ ಸೆರಗೊಡ್ಡಿ ಬೇಡಿದ್ದು ಸೇರಿದ ಮಂದಿ ಕಣ್ಣೀರಾದರು. ತಮ್ಮ ಮಗಳ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯ ಕ್ಷಣವನ್ನು ನೆನೆದು ಗದ್ಗದಿತರಾಗಿ ಮಾತು ಆರಂಭಿಸಿದ ಕುಸುಮಾವತಿ, ನನ್ನ ಮಗಳ ಪ್ರಾಣ ಹೋಗುವ ಸಂದರ್ಭ ಆ ಮಗು ಅಮ್ಮ ಎಂದು ಎಷ್ಟು ಬಾರಿ

ಸುಳ್ಯ: ಬೇರೇನೂ ಬೇಡ, ನನ್ನ ಮಗಳ ಸಾವಿಗೆ ನ್ಯಾಯ ಕೊಡಿ‌| ಸೆರಗೊಡ್ಡಿ ಅಂಗಲಾಚಿದ ಸೌಜನ್ಯ ತಾಯಿ!! Read More »

ಕೊಟ್ಟಿಗೆಹಾರ: ಅಟ್ಟಿಸಿಕೊಂಡು ಬಂದ ಕಾಡಾನೆ| ಕೂದಲೆಳೆ ಅಂತರದಲ್ಲಿ ಪಾರಾದ ಅರಣ್ಯ ಅಧಿಕಾರಿಗಳು

ಸಮಗ್ರ ನ್ಯೂಸ್: ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು ಅರಣ್ಯ ಅಧಿಕಾರಿಗಳು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಮೇಗೂರಿನ ಅತ್ತಿಗುಣಿ ಹರದಲ್ಲಿ ನಡೆದಿದೆ. ಮಲೆಮನೆ, ಮೇಗೂರು, ಆಲೇಕಾನ್ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಆನೆ ಕಾರ್ಯ ಪಡೆಯ ಉಪವಲಯ ಅರಣ್ಯಾಧಿಕಾರಿ ಸುಹಾಸ್, ಕಿರಣ್ ಕುಮಾರ್, ದೀಕ್ಷಿತ್, ಕಾರ್ತಿಕ್, ಅಶ್ವಿನ್, ಕರ್ಣ, ಗಸ್ತು ಅಧಿಕಾರಿ ಪರಮೇಶ್ ಗ್ರಾಮಸ್ಥರೊಂದಿಗೆ ಸೋಮವಾರ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುವ ವೇಳೆ ಮೇಗೂರಿನ ಅತ್ತಗುಣಿ

ಕೊಟ್ಟಿಗೆಹಾರ: ಅಟ್ಟಿಸಿಕೊಂಡು ಬಂದ ಕಾಡಾನೆ| ಕೂದಲೆಳೆ ಅಂತರದಲ್ಲಿ ಪಾರಾದ ಅರಣ್ಯ ಅಧಿಕಾರಿಗಳು Read More »