ಸುಳ್ಯ: ಬೇರೇನೂ ಬೇಡ, ನನ್ನ ಮಗಳ ಸಾವಿಗೆ ನ್ಯಾಯ ಕೊಡಿ‌| ಸೆರಗೊಡ್ಡಿ ಅಂಗಲಾಚಿದ ಸೌಜನ್ಯ ತಾಯಿ!!

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಮಣ್ಣಸಂಕ ಬಳಿ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಸೌಜನ್ಯಳ ನ್ಯಾಯಕ್ಕಾಗಿ ಸುಳ್ಯದಲ್ಲಿ ಪ್ರತಿಭಟನಾ ಸಭೆಯಲ್ಲಿ ಮನಕಲಕುವ ಘಟನೆ ನಡೆದಿದೆ. ನೋವಿನ ನಡುವೆ ಮಗಳ ಸಾವಿನ ನ್ಯಾಯಕ್ಕಾಗಿ ದಿ. ಸೌಜನ್ಯಳ ತಾಯಿ ಕುಸುಮಾವತಿ ಸೆರಗೊಡ್ಡಿ ಬೇಡಿದ್ದು ಸೇರಿದ ಮಂದಿ ಕಣ್ಣೀರಾದರು.

. Ad Widget . Ad Widget . Ad Widget .

ತಮ್ಮ ಮಗಳ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯ ಕ್ಷಣವನ್ನು ನೆನೆದು ಗದ್ಗದಿತರಾಗಿ ಮಾತು ಆರಂಭಿಸಿದ ಕುಸುಮಾವತಿ, ನನ್ನ ಮಗಳ ಪ್ರಾಣ ಹೋಗುವ ಸಂದರ್ಭ ಆ ಮಗು ಅಮ್ಮ ಎಂದು ಎಷ್ಟು ಬಾರಿ ನನ್ನನ್ನು ಕರೆದಿರಬಹುದು. ಆ ಪ್ರಾಣ ಹೋಗುವ ಸಂದರ್ಭದಲ್ಲಿ ಎಷ್ಟು ವೇದನೆಯನ್ನು ಅನುಭವಿಸಿರಬಹುದು. ನನ್ನ ಮಗಳನ್ನು ಕೊಂದವರಿಗೆ ಅವಳನ್ನು ತಿನ್ನಬಹುದಿತ್ತಲ್ಲವೇ? ಯಾಕಾಗಿ ಅವಳನ್ನು ಅಲ್ಲಿ ಅರ್ಧ ಬಿಟ್ಟು ಹೋಗಿದ್ದಾರೆ?, ಎಂದು ಕಣ್ಣೀರು ಹಾಕುತ್ತಾ ಮಗಳನ್ನು ನೆನೆದು ನ್ಯಾಯ ಕೊಡಿ ಎಂದು ಅಂಗಲಾಚಿ ಭಿಕ್ಷೆಯನ್ನು ಬೇಡಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ತನ್ನ ಸೆರಗನ್ನು ಒಡ್ಡಿ ಕೇಳುತ್ತಿದ್ದೇನೆ, ನನ್ನ ಮಗಳಿಗೆ ನ್ಯಾಯ ಕೊಡಿಸಿ, ಬೇರೇನೂ ಬೇಡ, ಎಂದು ಅತ್ತಾಗ ಸಭೆಯಲ್ಲಿ ಸೇರಿದ್ದ ಅಷ್ಟೂ ಮಂದಿ ಕಣ್ಣೀರು ಹಾಕಿದ್ದು ನಿಜಕ್ಕೂ ಮನ ಮಿಡಿಯುವಂತಿತ್ತು.

Leave a Comment

Your email address will not be published. Required fields are marked *