ರಾಜ್ಯ

ಬೆಂಗಳೂರಿನ ಬಾರ್ಟನ್ ಸೆಂಟರ್ ಕಚೇರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ

ಸಮಗ್ರ ನ್ಯೂಸ್: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬೆಂಗಳೂರಿನ MG ರಸ್ತೆಯ ಬಾರ್ಟನ್ ಸೆಂಟರ್ ಕಚೇರಿಗೆ ಸೆ.14 ರಂದು ಭೇಟಿ ನೀಡಿದರು. ತಮ್ಮ ಕಚೇರಿಗೆ ಆಗಮಿಸಿದ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರನ್ನು ಆತ್ಮೀಯವಾಗಿ ಸ್ವಾಗತಿಸಿ, ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ತುಳುಕೂಟ ಬೆಂಗಳೂರು ಅಧ್ಯಕ್ಷರಾದ ಸುಂದರ್ ರಾಜ್, ಅಕ್ಷಯ್ ರೈ ದಂಬೆಕಾನ, ಮುರಳೀಧರ ರೈ ಮಠಂತಬೆಟ್ಟು, ನವೀನ್ ಕಲ್ಲಡ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮತ್ತು

ಬೆಂಗಳೂರಿನ ಬಾರ್ಟನ್ ಸೆಂಟರ್ ಕಚೇರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ Read More »

ವಿಚಾರಣೆ ವೇಳೆ ಕುಸಿದು ಬಿದ್ದ ಚೈತ್ರಾ ಕುಂದಾಪುರ| ಬಾಯಲ್ಲಿ ನೊರೆ, ಅಸ್ವಸ್ಥ

ಸಮಗ್ರ ನ್ಯೂಸ್: ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ. ವಿಚಾರಣೆ ವೇಳೆ ಮೂರ್ಛೆ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೈತ್ರಾ ಬಾಯಿಯಲ್ಲಿ ನೊರೆ

ವಿಚಾರಣೆ ವೇಳೆ ಕುಸಿದು ಬಿದ್ದ ಚೈತ್ರಾ ಕುಂದಾಪುರ| ಬಾಯಲ್ಲಿ ನೊರೆ, ಅಸ್ವಸ್ಥ Read More »

ಎಲ್ಲಾ ಸರ್ಕಾರಿ‌ ಕೆಲಸಗಳಿಗೂ ಜನನ ಪ್ರಮಾಣವಷ್ಟೇ ಸಾಕು| ಅ.1ರಿಂದ ಅಧಿಕೃತ ಜಾರಿ

ಸಮಗ್ರ ನ್ಯೂಸ್: ಕಳೆದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023ಗೆ ತಿದ್ದುಪಡಿ ಮಾಡಲಾಗಿತ್ತು. ಇದಕ್ಕೆ ಅನುಮೋದನೆ ಕೂಡ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಇಂತಹ ಜನನ ಪ್ರಮಾಣ ಪತ್ರವೇ ಎಲ್ಲಾ ದಾಖಲೆಗಳಿಗೆ ಮೂಲ ದಾಖಲೆಯಾಗಿಸೋ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು, ಚಾಲನಾ ಪರವಾನಗಿ ನೀಡಲು, ಮತದಾರರ ಪಟ್ಟಿ ತಯಾರಿಕೆ, ಆಧಾರ್ ಸಂಖ್ಯೆ, ವಿವಾಹ ನೋಂದಣಿ ಅಥವಾ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿಗಾಗಿ ಜನನ ಪ್ರಮಾಣಪತ್ರವನ್ನು

ಎಲ್ಲಾ ಸರ್ಕಾರಿ‌ ಕೆಲಸಗಳಿಗೂ ಜನನ ಪ್ರಮಾಣವಷ್ಟೇ ಸಾಕು| ಅ.1ರಿಂದ ಅಧಿಕೃತ ಜಾರಿ Read More »

ಸಿಂಧೂರಿ ಬಳಿಕ ರೂಪಾ ಮೌದ್ಗಿಲ್ ಗೂ ಹುದ್ದೆ ಗೊತ್ತುಪಡಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ವೈಯಕ್ತಿಕ ಆರೋಪ-ಪ್ರತ್ಯಾರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹುದ್ದೆ ಇಲ್ಲದೆ ಇದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನೀಡಿದ ಮರುದಿನವೇ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೂ ಹುದ್ದೆ ದಯಪಾಲಿಸಿ ಸರ್ಕಾರ ಆದೇಶ ಹೊರಡಿಸಿದೆ. ರೂಪಾ ಸೇರಿದಂತೆ ನಾಲ್ವರು ಐಪಿಎಸ್‌ ಅಧಿಕಾರಿಗಳನ್ನು ಗುರುವಾರ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ರೂಪಾ ಅವರಿಗೆ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಐಜಿಪಿ ಹುದ್ದೆಗೆ ಸರ್ಕಾರ ನಿಯೋಜಿಸಿದೆ. ಇನ್ನುಳಿದಂತೆ ಮಂಗಳೂರು ಆಯುಕ್ತ ಹುದ್ದೆಯಿಂದ ವರ್ಗಗೊಂಡಿದ್ದ ಕುಲದೀಪ್ ಕುಮಾರ್ ಜೈನ್‌

ಸಿಂಧೂರಿ ಬಳಿಕ ರೂಪಾ ಮೌದ್ಗಿಲ್ ಗೂ ಹುದ್ದೆ ಗೊತ್ತುಪಡಿಸಿದ ರಾಜ್ಯ ಸರ್ಕಾರ Read More »

ಇಂದಿನಿಂದ ಶಾಲಾ – ಕಾಲೇಜುಗಳಲ್ಲಿ ‘ಸಂವಿಧಾನ ಓದು’ ಆರಂಭ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಈಗಾಗಲೇ ಸಂವಿಧಾನ ಪೀಠಿಕೆ ಓದು ಶಾಲಾ ಕಾಲೇಜುಗಳಲ್ಲಿ ಕಡ್ಡಾಯಗೊಳಿಸಿತ್ತು. ಅಲ್ಲದೇ ಸಂವಿಧಾನ ಪೀಠಿಕೆ ಓದು ಪರಿಪಾಠವನ್ನು ಸೆ.15ರಿಂದ ಆರಂಭಿಸೋದಾಗಿ ತಿಳಿಸಿತ್ತು. ಅದರಂತೆ ಇಂದಿನಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಓದು ಆರಂಭಗೊಳ್ಳಲಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆಯೇ ರಾಜ್ಯ ಸರ್ಕಾರ ಸುತ್ತೋಲೆ ಕೂಡ ಹೊರಡಿಸಿತ್ತು. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಫಲಕದಲ್ಲಿ ಅವಳಡಿಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿತ್ತು. ರಾಜ್ಯದ ಎಲ್ಲಾ

ಇಂದಿನಿಂದ ಶಾಲಾ – ಕಾಲೇಜುಗಳಲ್ಲಿ ‘ಸಂವಿಧಾನ ಓದು’ ಆರಂಭ Read More »

ದೇವಸ್ಥಾನಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ| ರಾಜ್ಯ ಮುಜುರಾಯಿ ಇಲಾಖೆಯಿಂದ ಅದೇಶ

ಸಮಗ್ರ ನ್ಯೂಸ್: ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಏಕಾಏಕಿ ಹೊಸ ರೂಲ್ಸ್ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದೇವಸ್ಥಾನಗಳ ಸುತ್ತಮುತ್ತ 100 ಮೀ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಡ್ಡಾಯವಾಗಿನಿಷೇಧಿಸಲಾಗಿದೆ ಎಂದು ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಇಲಾಖೆ, ದೇವಸ್ಥಾನದ ಆಸುಪಾಸು ದೈವಿಕಳೆ ಇರುವುದರಿಂದ ಅಲ್ಲಿ ಶುದ್ಧವಾಗಿ ಇರುವುದು ತುಂಬಾ ಮುಖ್ಯ. ಹಾಗೂ ಅಲ್ಲಿ ಪೂರಕವಾದ ವಾತಾವರಣ ಸೃಷ್ಟಿ ಮಾಡಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಧರ್ಮ ಎಂದರೆ

ದೇವಸ್ಥಾನಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ| ರಾಜ್ಯ ಮುಜುರಾಯಿ ಇಲಾಖೆಯಿಂದ ಅದೇಶ Read More »

ಚೈತ್ರಾ ಕುಂದಾಪುರ ವಂಚನೆ ಪ್ರಕರಣ| ಕಾಣೆಯಾಗಿರುವ ಹಾಲಶ್ರೀ ಸ್ವಾಮೀಜಿ ಜೊತೆ‌ ಸೂಲಿಬೆಲೆ!! | ವೈರಲ್ ಆಗ್ತಿದೆ ಫೋಟೋ

ಸಮಗ್ರ ನ್ಯೂಸ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಉದ್ಯಮಿ, ಬಿಜೆಪಿ ಮುಖಂಡರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಇನ್ನಷ್ಟು ಜನ‌ ಭಾಗಿಯಾಗಿರುವ ಶಂಕೆಯಿದೆ. ಇತ್ತ ಪ್ರಮುಖ ಆರೋಪಿ (A 3) ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.‌ ಈ ನಡುವೆ ಹಾಲಶ್ರೀ ಸ್ವಾಮೀಜಿ ಜೊತೆಗಿದ್ದ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ

ಚೈತ್ರಾ ಕುಂದಾಪುರ ವಂಚನೆ ಪ್ರಕರಣ| ಕಾಣೆಯಾಗಿರುವ ಹಾಲಶ್ರೀ ಸ್ವಾಮೀಜಿ ಜೊತೆ‌ ಸೂಲಿಬೆಲೆ!! | ವೈರಲ್ ಆಗ್ತಿದೆ ಫೋಟೋ Read More »

ತನ್ನ ಕೈಯಿಂದ ಹಣ ಹೋದರೂ ಬೇರೆಯೊಬ್ಬರ ಹಣಕ್ಕೆ ಆಸೆಪಟ್ಟವಳಲ್ಲ-ಚೈತ್ರಾ ಕುಂದಾಪುರ ತಾಯಿ

ಸಮಗ್ರ ನ್ಯೂಸ್: ಕೋಟಿಗಟ್ಟಲೆ ಹಣ ವಸೂಲಿ ಮಾಡಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿರುವ ಚೈತ್ರಾ ಕುಂದಾಪುರ ಬಗ್ಗೆ ಅವರ ತಾಯಿ ರೋಹಿಣಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗಳನ್ನು ಬಳಸಿಕೊಂಡು ಅವಳನ್ನು ಈ ಸ್ಥಿತಿಗೆ ತರಲಾಗಿದೆ ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಗಳನ್ನ ಪೊಲೀಸರು ವಶಕ್ಕೆ ಪಡೆದ ದಿನವೇ ಪೊಲೀಸರು ಕರೆ ಮಾಡಿದ್ದರು. ಮಗಳನ್ನ ವಶಕ್ಕೆ ಪಡೆದ ಮಾಹಿತಿ ಜೊತೆಗೆ ಮಗಳೊಂದಿಗೆ ಫೋನ್​ನಲ್ಲೇ ಮಾತನಾಡಿಸಿದ್ದಾರೆ. ಮಗಳು ಧೈರ್ಯ ತೆಗೆದುಕೊಳ್ಳುವಂತೆ ಹೇಳಿದ್ದಾಳೆ.ಇನ್ನು ಮಗಳ ಸ್ಥಿತಿ ಕಂಡು ಬಹಳ ಬೇಸರ

ತನ್ನ ಕೈಯಿಂದ ಹಣ ಹೋದರೂ ಬೇರೆಯೊಬ್ಬರ ಹಣಕ್ಕೆ ಆಸೆಪಟ್ಟವಳಲ್ಲ-ಚೈತ್ರಾ ಕುಂದಾಪುರ ತಾಯಿ Read More »

ʼʼಇಂದಿರಾ ಕ್ಯಾಂಟಿನ್ ಬಿಲ್‌ ಗೂ ಚೈತ್ರಾ ಕುಂದಾಪುರ ಪ್ರಕರಣಕ್ಕೇನು ಸಂಬಂಧ| ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದು ಹೀಗೆ

ಸಮಗ್ರ ನ್ಯೂಸ್: ಗುರುವಾರ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತರುವ ವೇಳೆ ಆರೋಪಿ ಚೈತ್ರಾ ಕುಂದಾಪುರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ʼಇಂದಿರಾ ಕ್ಯಾಂಟಿನ್ ಬಿಲ್‌ ಗೂ ಈ ಪ್ರಕರಣಕ್ಕೆ ಸಂಬಂಧ ಇದೆ ಎಂದಿದ್ದರು. ಆದರೆ ಇದೀಗ ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಗುರುವಾರ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತರುವ ವೇಳೆ ಆರೋಪಿ ಚೈತ್ರಾ ಕುಂದಾಪುರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ʼʼಇಂದಿರಾ ಕ್ಯಾಂಟಿನ್ ಬಿಲ್ ಬಾಕಿ ಇರೋ ಕಾರಣ ಷಡ್ಯಂತ್ರ ರಚನೆ ಮಾಡಲಾಗಿದೆʼ

ʼʼಇಂದಿರಾ ಕ್ಯಾಂಟಿನ್ ಬಿಲ್‌ ಗೂ ಚೈತ್ರಾ ಕುಂದಾಪುರ ಪ್ರಕರಣಕ್ಕೇನು ಸಂಬಂಧ| ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದು ಹೀಗೆ Read More »

ಚೈತ್ರಾ ಕುಂದಾಪುರ ಪ್ರಕರಣ| ಆ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ: ಬಸವರಾಜ್ ಬೊಮ್ಮಾಯಿ

ಸಮಗ್ರ ನ್ಯೂಸ್: ವಂಚನೆ ಪ್ರಕರಣದಲ್ಲಿ ಸಿಸಿಬಿ ಬಂಧನದಲ್ಲಿರುವ ಚೈತ್ರಾ ಕುಂದಾಪುರ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಬಸವರಾದ್ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಲವು ಸಂಘಟನೆಗಳು ಹೋರಾಟ ಮಾಡುತ್ತಿರತ್ತವೆ, ಅವರಿಗೂ ಪಕ್ಷಕ್ಕೆ ಸಂಬಂಧ ಇಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು. ಟಕೆಟ್ ಕೊಡಿಸುತ್ತೇವೆ ಅಂತ ಹಣ ಪಡೆದಿರೋದನ್ನ ನಾವು ಗಂಭೀರವಾಗಿ ಪರಿಗಣಿಸ್ತೇವೆ. ಬಿಜೆಪಿಗೆ

ಚೈತ್ರಾ ಕುಂದಾಪುರ ಪ್ರಕರಣ| ಆ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ: ಬಸವರಾಜ್ ಬೊಮ್ಮಾಯಿ Read More »