ರಾಜ್ಯ

ಭಾರೀ ಮಳೆಗೆ ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗುರುಳಿದ ಮರ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆಯಿಂದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮ ಸಮೀಪ ಚಾರ್ಮಾಡಿ ಘಾಟ್‌ನ 8ನೇ ತಿರುವಿನಲ್ಲಿ 3 ಮರಗಳು ರಸ್ತೆಗುರುಳಿವೆ. ಮೂರು ಯಂತ್ರಗಳಿಂದ ಪೊಲೀಸರ ಜೊತೆ ಸ್ಥಳೀಯರ ನಿರಂತರ ಕಾರ್ಯಾಚರಣೆಯಿಂದ ಮರ ತೆರವು ಮಾಡಿದ್ದಾರೆ. ಮಳೆ ಇಲ್ಲದೆ ಜನ ಕಂಗಾಲಾಗಿದ್ದರು, ಅದರೆ ಮಲೆನಾಡಿಗರ ಮೇಲೆ ವರುಣ ಕೃಪೆ ತೋರಿದ್ದಾನೆ. ಹನಿ ಹನಿ ನೀರಿಗೂ ಸಂಕಷ್ಟವಾಗುವ ಆತಂಕದಲ್ಲಿದ್ದ ಮಲೆನಾಡಿಗರಿಗೆ ನಿನ್ನೆಯಿಂದ ಸುರಿಯುತ್ತಿರುವ ವರುಣ ಆತಂಕ ದೂರ ಮಾಡಿದ್ದು, ಇನ್ನೊಂದೆಡೆ ಈ ಮಳೆಯಿಂದಾಗಿ ಮರಗಳು ಧರೆಗುರುಳಿವೆ.

ಭಾರೀ ಮಳೆಗೆ ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗುರುಳಿದ ಮರ Read More »

ಕೊಟ್ಟಿಗೆಹಾರ:ಪ್ರತಿಭಾ ಕಾರಂಜಿಯು ಮಕ್ಕಳಿಗೆ ಮಹತ್ವಾಕಾಂಕ್ಷೆಯ ಯೋಜನೆ: ಬಿ.ಬಿ.ಮಂಜುನಾಥ್|ಬಾಳೂರು ಹೊರಟ್ಟಿ ಪ್ರಾಥಮಿಕ ಶಾಲೆ ವತಿಯಿಂದ ನಡೆದ ಪ್ರತಿಭಾ ರಂಜಿಯಲ್ಲಿ ನಿಡುವಾಳೆ ಕ್ಲಸ್ಟರ್ ನ 13 ಪ್ರಾಥಮಿಕ ಶಾಲೆಗಳು ಭಾಗಿ

ಸಮಗ್ರ ನ್ಯೂಸ್: ಪ್ರತಿಭಾ ಕಾರಂಜಿಯು ಮಕ್ಕಳಿಗೆ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಸಹ ಪಠ್ಯ ಚಟುವಟಿಕೆಗಳ ಮೂಲಕ ಮಕ್ಕಳು ಹೆಚ್ಚು ಜ್ಞಾನ ಗಳಿಸುವ ಕಾರ್ಯಕ್ರಮವಾಗಿದೆ’ ಎಂದು ಬಾಳೂರು ಗ್ರಾ.ಪಂ. ಅಧ್ಯಕ್ಷ ಬಿ.ಬಿ.ಮಂಜುನಾಥ್ ಹೇಳಿದರು. ಅವರು ಬಾಳೂರು ಹೊರಟ್ಟಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವತಿಯಿಂದ ನಡೆದ ನಿಡುವಾಳೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಭಾ ಕಾರಂಜಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸೂಕ್ತ ಪ್ರತಿಭೆ ಬೆಳಗಿಸಲು ಪ್ರತಿಭಾ ಕಾರಂಜಿ ಪ್ರಾಥಮಿಕ ಮೆಟ್ಟಿಲಾಗಿದೆ’

ಕೊಟ್ಟಿಗೆಹಾರ:ಪ್ರತಿಭಾ ಕಾರಂಜಿಯು ಮಕ್ಕಳಿಗೆ ಮಹತ್ವಾಕಾಂಕ್ಷೆಯ ಯೋಜನೆ: ಬಿ.ಬಿ.ಮಂಜುನಾಥ್|ಬಾಳೂರು ಹೊರಟ್ಟಿ ಪ್ರಾಥಮಿಕ ಶಾಲೆ ವತಿಯಿಂದ ನಡೆದ ಪ್ರತಿಭಾ ರಂಜಿಯಲ್ಲಿ ನಿಡುವಾಳೆ ಕ್ಲಸ್ಟರ್ ನ 13 ಪ್ರಾಥಮಿಕ ಶಾಲೆಗಳು ಭಾಗಿ Read More »

ಚಿಕ್ಕಮಗಳೂರು: ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆ| ಹೈರಾಣಾದ ರೈತರು

ಸಮಗ್ರ ನ್ಯೂಸ್: ಬಣಕಲ್, ಕೊಟ್ಟಿಗೆಹಾರ ,ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಸೆ.28 ರಿಂದ ಧಾರಾಕಾರ ಹಾಗೂ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುತ್ತಿದೆ. ಇನ್ನು ಕಾಫಿನಾಡಿನಲ್ಲಿ ಚಳಿಯ ವಾತಾವರಣ ನಿರ್ಮಾಣಗೊಂಡಿದೆ. ಕೊಟ್ಟಿಗೆಹಾರದಲ್ಲಿ ಗುರುವಾರ ಬೆಳಿಗ್ಗೆಯಿಂದ ಶನಿವಾರದವರೆಗೆ ಬೆಳಿಗ್ಗೆ ವರೆಗೆ 164.2ಮಿ.ಮೀ (16ಸೆ.ಮೀ)ಮಳೆ ದಾಖಲಾಗಿದೆ. ಶನಿವಾರವೂ ಮಳೆ ಮುಂದುವರೆದಿದ್ದು ರೈತರ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ರೈತರು ಮಳೆಯಿಂದ ಹೈರಾಣಾದ್ದಾರೆ.ಕಾಫಿ ನಾಡಿನಲ್ಲಿ ಈಗ ಅರೆಬಿಕಾ ಕಾಫಿ ಕೆಲವು ಕಡೆ ಹಣ್ಣಾಗುತ್ತಿದ್ದು ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ. ತೀರಾ ಮಳೆಯಿಂದ ರೊಬಸ್ಟ ಕಾಫಿ ಕೂಡ

ಚಿಕ್ಕಮಗಳೂರು: ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆ| ಹೈರಾಣಾದ ರೈತರು Read More »

ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲು ಮುಂದಾದ ಮಾಜಿ ಶಾಸಕ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದು, ಇದರಿಂದ ಎರಡೂ ಪಕ್ಷದಲ್ಲೂ ಒಂದಿಷ್ಟು ಡ್ಯಾಮೇಜ್​ ಆಗುತ್ತಿದೆ. ಇನ್ನು ವಿಧಾನಸಭೆ ಚುನಾವಣೆ ಸಮಯದಲ್ಲಿ ಹಲವು ಬಿಜೆಪಿ ನಾಯಕರಿಗೆ ಟಿಕೆಟ್​ ಕೈ ತಪ್ಪಿದ್ದರಿಂದ ಕೆಲವು ನಾಯಕರು ಮುನಿಸಿಕೊಂಡಿದ್ದಾರೆ. ಈ ಎರಡೂ ಕಾರಣದಿಂದ ಎರಡೂ ಪಕ್ಷದ ಹಲವು ನಾಯಕರು ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ. ಅದರಂತೆ ಇದೀಗ ಬಿಜೆಪಿ ಮಾಜಿ ಶಾಸಕ ಪಕ್ಷ ತೊರೆಯಲು ಸಿದ್ದರಾಗಿದ್ದಾರೆ. ಶಿರಹಟ್ಟಿಯಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ರಾಮಣ್ಣ ಲಮಾಣಿ ಬಿಜೆಪಿಗೆ ಗುಡ್​ಬೈ

ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲು ಮುಂದಾದ ಮಾಜಿ ಶಾಸಕ Read More »

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ| ಮ್ಯಾಜಿಸ್ಟ್ರೇಟ್ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಅಂಗೀಕರಿಸಿದೆ. ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪಗಳನ್ನು ಮಾಡಿತ್ತು. ಘಟನೆಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಬಿಜೆಪಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿತ್ತು. ಸದ್ಯ ಈಗ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ| ಮ್ಯಾಜಿಸ್ಟ್ರೇಟ್ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರ Read More »

ಕಾವೇರಿ ನೀರು‌ ಹಂಚಿಕೆ ವಿವಾದ/ ಇಂದು ಮರುಪರಿಶೀಲನಾ ಅರ್ಜಿ ಸಲ್ಲಿಕೆ

ಸಮಗ್ರ ನ್ಯೂಸ್: ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ಕರ್ನಾಟಕಕ್ಕೆ ಸತತ ಶಾಕ್ ನೀಡುತ್ತಿದ್ದು, ಆಕ್ಟೋಬರ್ 15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ನೀಡಿದೆ. ಇದಕ್ಕೆ ಕರ್ನಾಟಕ ಸರ್ಕಾರವು ಪ್ರತಿರೋಧ ವ್ಯಕ್ತಪಡಿಸಿದ್ದು ಇಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಸುಪ್ರೀಂಕೋರ್ಟ್ ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ. ಜಲಾಶಯದಲ್ಲಿ ನೀರಿನ‌ ಸಮಸ್ಯೆ ಇದೆ. ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ

ಕಾವೇರಿ ನೀರು‌ ಹಂಚಿಕೆ ವಿವಾದ/ ಇಂದು ಮರುಪರಿಶೀಲನಾ ಅರ್ಜಿ ಸಲ್ಲಿಕೆ Read More »

ನೀರಿಗಾಗಿ ಹೋರಾಟದ ಬದಲು ಸೊರಗಿದ ಕಾವೇರಿಗೆ ಮರುಜೀವ ತುಂಬಿ – ಸದ್ಗುರು

ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕದ ರೈತರು, ಕನ್ನಡಿಗರು ಬಂದ್ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದರೆ, ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ ಅವರು, ”ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡ ಬೇಡಿ,” ಎಂದು ಕರೆ ನೀಡಿದ್ದಾರೆ. ಈ ಹಿಂದೆ ಸದ್ಗುರು ಜಗ್ಗಿ ವಾಸುದೇವ ಅವರು ‘ಕಾವೇರಿ ಕಾಲಿಂಗ್’ ಚಳವಳಿ ನಡೆಸಿದ್ದರು. ”ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡುವ ಬದಲು ಕಾವೇರಿ ನದಿಯನ್ನು ಬಲಪಡಿಸಿ, ಬಲಪಡಿಸಬೇಕು. ಕಾವೇರಿ ಮಾತೆ ಯಾವ ರಾಜ್ಯಕ್ಕೆ

ನೀರಿಗಾಗಿ ಹೋರಾಟದ ಬದಲು ಸೊರಗಿದ ಕಾವೇರಿಗೆ ಮರುಜೀವ ತುಂಬಿ – ಸದ್ಗುರು Read More »

ಚಿಕ್ಕಮಗಳೂರು: ಅರಣ್ಯ ರಕ್ಷಕ ಮೋಸಿನ್ ಅವರಿಗೆ ಮುಖ್ಯಮಂತ್ರಿ ಪದಕ

ಸಮಗ್ರ ನ್ಯೂಸ್: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ಭಾರತೀಬೈಲ್ ವಲಯದ ಅರಣ್ಯ ರಕ್ಷಕ ಮೋಸಿನ್ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸೆ. 29ರಂದು ಬ್ಯಾಂಕ್ವಿಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೊದಲೇ ಈ ಕಾರ್ಯಕ್ರಮ ನಿಗದಿಪಡಿಸಿದ್ದರಿಂದ 2021-22 ಸಾಲಿನಲ್ಲಿ ನೀಡಬೇಕಾಗಿದ್ದ ಮುಖ್ಯಮಂತ್ರಿ ಪದಕವನ್ನು ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಿದ ಗಣ್ಯರಿಗೆ ವಿಧಾನ ಸೌದದ ಬ್ಯಾಂಕ್ವಿಟ್ ಹಾಲ್ ನಲ್ಲಿ ಸೆ. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಹಾಗೂ

ಚಿಕ್ಕಮಗಳೂರು: ಅರಣ್ಯ ರಕ್ಷಕ ಮೋಸಿನ್ ಅವರಿಗೆ ಮುಖ್ಯಮಂತ್ರಿ ಪದಕ Read More »

ಪುತ್ತೂರು: ಪುತ್ತೂರು ಸುಳ್ಯ ಮಡಿಕೇರಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ.

ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್‌ನ ಈ ಯೋಜನೆ ನನಸು ಮಾಡಲಿದೆ. ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ!?ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರ್, ಇಷ್ಟು ಮಾಹಿತಿಯನ್ನು 8310148064 ಈ ನಂಬರ್‌ಗೆ ವಾಟ್ಸಪ್ ಮಾಡಬಹುದು ಅಥವಾ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಏನಿದು ಬ್ರೈಟ್ ಭಾರತ್!?ಬ್ರೈಟ್ ಭಾರತ್ ಅನ್ನುವುದು, ಬಡವರ ಕನಸಿಗೆ ಬೆಳಕಾಗುವ

ಪುತ್ತೂರು: ಪುತ್ತೂರು ಸುಳ್ಯ ಮಡಿಕೇರಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ. Read More »

ಕುಂದಾಪುರ:ವಿದ್ಯುತ್ ತಂತಿ ತಗುಲಿ ದಂಪತಿ ಮೃತ್ಯು

ಸಮಗ್ರ ನ್ಯೂಸ್: ಮನೆ ಕೆಲಸಕ್ಕೆ ಹೋಗುವ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಸುಳ್ಳೆ ಭಟ್ರು ಮನೆ ತೋಟದ ಜಮೀನಿನಲ್ಲಿ ನಡೆದಿದೆ. ಮಹಾಬಲ ದೇವಾಡಿಗ (58) ಮತ್ತು ಲಕ್ಷ್ಮಿ ಮಹಾಬಲ ದೇವಾಡಿಗ (48) ಅವರು ಮಧ್ಯಾಹ್ನದ ವೇಳೆ ಮನೆ ಕೆಲಸಕ್ಕೆ ಹೋಗುವಾಗ ಪತ್ನಿಗೆ ವಿದ್ಯುತ್ ತಗುಲಿದೆ. ಒದ್ದಾಡುತಿದ್ದ ಪತ್ನಿಯನ್ನು ರಕ್ಷಿಸಲು ಹೋದ ಮಹಾಬಲ ಅವರು ಕೂಡಾ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದಾರೆ. ಘಟನಾ

ಕುಂದಾಪುರ:ವಿದ್ಯುತ್ ತಂತಿ ತಗುಲಿ ದಂಪತಿ ಮೃತ್ಯು Read More »