ಕುಂದಾಪುರ:ವಿದ್ಯುತ್ ತಂತಿ ತಗುಲಿ ದಂಪತಿ ಮೃತ್ಯು

ಸಮಗ್ರ ನ್ಯೂಸ್: ಮನೆ ಕೆಲಸಕ್ಕೆ ಹೋಗುವ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಸುಳ್ಳೆ ಭಟ್ರು ಮನೆ ತೋಟದ ಜಮೀನಿನಲ್ಲಿ ನಡೆದಿದೆ.

Ad Widget ... ..

ಮಹಾಬಲ ದೇವಾಡಿಗ (58) ಮತ್ತು ಲಕ್ಷ್ಮಿ ಮಹಾಬಲ ದೇವಾಡಿಗ (48) ಅವರು ಮಧ್ಯಾಹ್ನದ ವೇಳೆ ಮನೆ ಕೆಲಸಕ್ಕೆ ಹೋಗುವಾಗ ಪತ್ನಿಗೆ ವಿದ್ಯುತ್ ತಗುಲಿದೆ. ಒದ್ದಾಡುತಿದ್ದ ಪತ್ನಿಯನ್ನು ರಕ್ಷಿಸಲು ಹೋದ ಮಹಾಬಲ ಅವರು ಕೂಡಾ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದಾರೆ.

Ad Widget

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ್ ಡಿ. ಗೌಡ, ಕಂದಾಯ ನಿರೀಕ್ಷಕ ಆರ್.ಐ. ರಾಘವೇಂದ್ರ ದೇವಾಡಿಗ, ಸುಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ್ ಪುತ್ರನ್, ಶೇಖರ್ ಬಳೆಗಾರ, ಗಂಗೊಳ್ಳಿ JE ದಿನೇಶ್ ಶೆಟ್ಟಿ, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಂಡೂರು ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.

Leave a Comment

Your email address will not be published. Required fields are marked *