ರಾಜ್ಯ

ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ| ಹಲವು ಇಂಗ್ಲೀಷ್ ಫಲಕಗಳ ನಾಶ

ಸಮಗ್ರ ನ್ಯೂಸ್: ಇಂಗ್ಲಿಷ್‌ ಫಲಕಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕಿಚ್ಚು ಮುಂದುವರೆದಿದ್ದು, ಬೆಂಗಳೂರಿನಲ್ಲಿ ರಾತ್ರಿ ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ಆರ್‌.ಆರ್‌ ನಗರದ ಗೋಪಾಲನ್‌ ಮಾಲ್‌ ನಲ್ಲಿ ಕರವೇ ಕಾರ್ಯಕರ್ತರು ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ. ನಾರಾಯಣಗೌಡ್ರು ಅರೆಸ್ಟ್‌ ಆದ್ರೆ ಏನು? ನಾವು ಕಾರ್ಯಕರ್ತರು ಹೊರಗೆ ಇದ್ದೇವೆ ಎಂದು ಹೇಳಿ ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ. ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ

ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ| ಹಲವು ಇಂಗ್ಲೀಷ್ ಫಲಕಗಳ ನಾಶ Read More »

ಚೆಕ್ ಬೌನ್ಸ್ ಪ್ರಕರಣ| ಜೈಲು ಪಾಲಾಗ್ತಾರಾ ಸಚಿವ ಮಧು ಬಂಗಾರಪ್ಪ? ನ್ಯಾಯಾಲಯ ನೀಡಿದ ತೀರ್ಪು ಏನಿದೆ?

ಸಮಗ್ರ ನ್ಯೂಸ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 6 ಕೋಟಿ 96 ಲಕ್ಷದ 70 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ. ಮಧು ಬಂಗಾರಪ್ಪ ಅವರು 2011 ರಲ್ಲಿ ರಾಜೇಶ್ ಎಕ್ಸ್​ಪೋರ್ಟ್ ಸಂಸ್ಥೆಗೆ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಎಕ್ಸ್​ಪೋರ್ಟ್ ಸಂಸ್ಥೆ ದೂರು ದಾಖಲಿಸಿತ್ತು.

ಚೆಕ್ ಬೌನ್ಸ್ ಪ್ರಕರಣ| ಜೈಲು ಪಾಲಾಗ್ತಾರಾ ಸಚಿವ ಮಧು ಬಂಗಾರಪ್ಪ? ನ್ಯಾಯಾಲಯ ನೀಡಿದ ತೀರ್ಪು ಏನಿದೆ? Read More »

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ| ವೇತನ ಹೆಚ್ಚಳ, ವಿಮೆ ಜಾರಿ ಘೋಷಣೆ

ಸಮಗ್ರ ವಾರ್ತೆ: ಅತಿಥಿ ಉಪನ್ಯಾಸಕರ ವೇತನವನ್ನು 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ವಿಕಾಸಸೌಧದಲ್ಲಿ ಇಂದು (ಡಿ. 29) ಸುದ್ದಿಗೋಷ್ಠಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದರು. ಅತಿಥಿ ಉಪನ್ಯಾಸಕರ ಪ್ರತಿಭಟನೆ ಸಂಬಂಧ ಮಾತನಾಡಿದ ಸುಧಾಕರ್, ನಾವು ಅವರ ಸಮಸ್ಯೆಗಳನ್ನು ಆಲಿಸಿದ್ದೇವೆ. ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಖಾಯಂ ಅವರ ಪ್ರಮುಖ ಬೇಡಿಕೆ

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ| ವೇತನ ಹೆಚ್ಚಳ, ವಿಮೆ ಜಾರಿ ಘೋಷಣೆ Read More »

ಫೆ.13ರಿಂದ ಪ್ರಥಮ ಪಿಯು ಪರೀಕ್ಷೆ: ವೇಳಾಪಟ್ಟಿ ಪ್ರಕಟ

ಸಮಗ್ರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2024ರ ಫೆ.13ರಿಂದ 28ರ ವರೆಗೆ ನಡೆಯಲಿದೆ. ಫೆ.13- ಕನ್ನಡ, ಅರೇಬಿಕ್, ಫೆ.14- ಹಿಂದಿ, ಫೆ.15- ರಾಜ್ಯಶಾಸ, ಸಂಖ್ಯಾಶಾಸ, ಫೆ.16- ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆೃಂಡ್ ವೆಲ್‌ವೆಸ್, ಫೆ.17- ಐಚ್ಛಿಕ ಕನ್ನಡ, ಲೆಕ್ಕಶಾಸ, ಭೂಗರ್ಭಶಾಸ, ಗೃಹ ವಿಜ್ಞಾನ, ಫೆ.19- ಇತಿಹಾಸ, ಭೌತಶಾಸ, ಫೆ.20- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ್ರೆಂಚ್, ಫೆ.21- ಹಿಂದೂಸ್ತಾನಿ

ಫೆ.13ರಿಂದ ಪ್ರಥಮ ಪಿಯು ಪರೀಕ್ಷೆ: ವೇಳಾಪಟ್ಟಿ ಪ್ರಕಟ Read More »

ಸ್ಟೂಡೆಂಟ್ ಜೊತೆ ಶಿಕ್ಷಕಿ ರೊಮ್ಯಾಂಟಿಕ್‌ ಫೋಟೋಶೂಟ್‌…!

ಸಮಗ್ರ ನ್ಯೂಸ್: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಹದಿಹರೆಯದ ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್‌ ಆಗಿ ಫೋಟೊ ಶೂಟ್‌ ಮಾಡಿಸಿದ ಘಟನೆ ನಡೆದಿದೆ. ಸದ್ಯ ಸ್ಟೂಡೆಂಟ್ ಟೀಚರ್ ರೊಮ್ಯಾಂಟಿಕ್ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು. ಮುಖ್ಯ ಶಿಕ್ಷಕಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ‌ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಹೈಸ್ಕೂಲ್‌ ವಿದ್ಯಾರ್ಥಿ ಜೊತೆ ಮುಖ್ಯ ಶಿಕ್ಷಕಿ ಪುಷ್ಪಲತಾ ಎಂಬುವವರು

ಸ್ಟೂಡೆಂಟ್ ಜೊತೆ ಶಿಕ್ಷಕಿ ರೊಮ್ಯಾಂಟಿಕ್‌ ಫೋಟೋಶೂಟ್‌…! Read More »

ರೈತ ಬಾಂಧವರೇ ಗಮನಿಸಿ| ಡಿ.31ರೊಳಗೆ ಅರ್ಜಿ ಸಲ್ಲಿಸದಿದ್ರೆ ಈ ಯೋಜನೆ ಕಳೆದುಕೊಳ್ತೀರಿ…

ಸಮಗ್ರ ನ್ಯೂಸ್: ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್‌ 31 ಕೊನೆಯ ದಿನವಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಸಹಾಯಧನದಡಿ ಒದಗಿಸಲಾಗುವ ಘಟಕಗಳು: ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲುಡೀಸೆಲ್ ಅಥವಾ ಸೋಲಾರ್ ಪಂಪ್‍ಸೆಟ್, ನೀರನ್ನು ಬೆಳೆಗೆ ಹಾಯಿಸಲು ಹನಿ, ತುಂತುರು ನೀರಾವರಿ ಪರಿಕರಗಳ ವಿತರಣೆ ಮಾಡಲಾಗುತ್ತದೆ.

ರೈತ ಬಾಂಧವರೇ ಗಮನಿಸಿ| ಡಿ.31ರೊಳಗೆ ಅರ್ಜಿ ಸಲ್ಲಿಸದಿದ್ರೆ ಈ ಯೋಜನೆ ಕಳೆದುಕೊಳ್ತೀರಿ… Read More »

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ

ಸಮಗ್ರ ನ್ಯೂಸ್: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ತುಮಕೂರಿನ ನಂದಿಹಳ್ಳಿ ಬಳಿ ಅಪಘಾತಕ್ಕೀಡಾಗಿದೆ. ಸಚಿವರು ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಬುಧವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸಚಿವರಿಗೆ ಏನೂ ಸಮಸ್ಯೆಯಾಗಿಲ್ಲ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಸಚಿವ ಮಧು ಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಕಾರನ್ನು ಉಜ್ಜಿಕೊಂಡು ಹೋಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಸಚಿವರು ಬೇರೆ

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ Read More »

ಇಂಗ್ಲಿಷ್ ಬೋರ್ಡ್ ವಿರುದ್ಧ ಕರವೇ ಮೆಗಾ ಸಮರ… ಫೆ. 28ರ ಒಳಗೆ ಕನ್ನಡ ಬೋರ್ಡ್ ಹಾಕಿಸುವುದಾಗಿ ಪಾಲಿಕೆ ಭರವಸೆ..!

ಸಮಗ್ರ ನ್ಯೂಸ್: ಕನ್ನಡ ನಾಡು ನುಡಿಯನ್ನು ಹೊತ್ತ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಕಡೆಗಣನೆಯಾಗಿದೆ.ಬೋರ್ಡ್​ಗಳಲ್ಲಿ ಕನ್ನಡ ಬಳಕೆ ಕಡ್ಡಾಯಕ್ಕೆ ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಧರಣಿ ಮಾಡಿದೆ.ನಗರದೆಲ್ಲೆಡೆ ಕನ್ನಡ ಇಲ್ಲದ ಬೋರ್ಡ್ ಗಳಿಗೆ ಮಸಿ, ಕಲ್ಲು ತೂರಾಟ ದೃಶ್ಯಗಳು ಇಂದು ಕಂಡುಬಂದಿದೆ. ಕನ್ನಡ ನಾಮಫಲಕಗಳಲ್ಲಿ ಶೇಕಡಾ 60% ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕೆಂಬ ನಿಯಮವಿದ್ದರೂ ಪರಭಾಷಿಕ ಉದ್ಯಮಿಗಳ ಕನ್ನಡ ವಿರೋಧಿ ಧೋರಣೆ ಮುಂದುವರೆದಿದೆ. ಬೆಳ್ಳಂಬೆಳಗೆ ಕನ್ನಡ ಬಾವುಟ ಹಿಡಿದು ರಸ್ತೆಗಿಳಿದ ಸಾವಿರಾರು ಚಳವಳಿಗಾರರು ಮಾಲ್, ವಾಣಿಜ್ಯ ಕಟ್ಟಡ, ಸೂಪರ್

ಇಂಗ್ಲಿಷ್ ಬೋರ್ಡ್ ವಿರುದ್ಧ ಕರವೇ ಮೆಗಾ ಸಮರ… ಫೆ. 28ರ ಒಳಗೆ ಕನ್ನಡ ಬೋರ್ಡ್ ಹಾಕಿಸುವುದಾಗಿ ಪಾಲಿಕೆ ಭರವಸೆ..! Read More »

ಪಕ್ಷದಿಂದ ಉಚ್ಛಾಟಿಸಿದ್ರೆ 40 ಸಾವಿರ ಕೋಟಿ ಅಕ್ರಮದ ದಾಖಲೆ ಬಿಡುಗಡೆ| ಯತ್ನಾಳ್ ರಿಂದ ಹೊಸ ಬಾಂಬ್

ಸಮಗ್ರ ನ್ಯೂಸ್: ಬಿಜೆಪಿಯಿಂದ ನನ್ನನ್ನು ಉಚ್ಚಾಟಿಸಿದರೆ ಕೊರೊನಾ ಸಾಂಕ್ರಾಮಿಕದ ವೇಳೆ ನಡೆದಿರುವ 40 ಸಾವಿರ ಕೋಟಿ ರೂ. ಅವ್ಯವಹಾರದ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿರುವ ಯತ್ನಾಳ್, ಸ್ವಪಕ್ಷೀಯರ ವಿರುದ್ಧ ಮತ್ತೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಬಿಜೆಪಿಯ ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ಅವರು, ‘ನಾನು ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 40

ಪಕ್ಷದಿಂದ ಉಚ್ಛಾಟಿಸಿದ್ರೆ 40 ಸಾವಿರ ಕೋಟಿ ಅಕ್ರಮದ ದಾಖಲೆ ಬಿಡುಗಡೆ| ಯತ್ನಾಳ್ ರಿಂದ ಹೊಸ ಬಾಂಬ್ Read More »

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ವ್ಯಕ್ತಿ ಸಜೀವ ದಹನವಾಗಿರುವಂತ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯದ ಬಳಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಘಟನೆಯಿಂದ ಮಾರ್ಗದುದ್ದಕೂ ಟ್ರಾಫಿಕ್‌ ಜಾಮ್​​ ಉಂಟಾಗಿತ್ತು. ಸದ್ಯ ನೆಲಮಂಗಲ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ Read More »