ರಾಜ್ಯ

ಬದುಕಿರುವ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ವಿರಾಜಪೇಟೆ ಪುರಸಭೆಯಲ್ಲಿ ಅವಾಂತರ ಶಂಕೆ..!! ಕ್ರಮಕ್ಕೆ ಜೆಡಿಎಸ್ ಒತ್ತಾಯ

ಸಮಗ್ರ ನ್ಯೂಸ್: ವಿರಾಜಪೇಟೆ ಪುರಸಭೆಯ ಕಚೇರಿಯಲ್ಲಿ ವ್ಯಕ್ತಿಗಳು ಬದುಕಿದ್ದರು ಮರಣ ದೃಢೀಕರಣ ಪತ್ರ ನೀಡಿರೋ ಬಗೆ ಶಂಖೆ ಇದ್ದು ಕೂಡಲೇ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಜೆ.ಡಿ ಎಸ್.ನ ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಪಿ. ಎ ಅವರು ಆಗ್ರಹಿಸಿದ್ದಾರೆ. ವಿರಾಜಪೇಟೆ ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ಈ ರೀತಿಯ ದಂಧೆ ನಡೆಯುತ್ತಿರುವ ಶಂಖೆ ಇದೆ. ಕಳೆದ ಒಂದು ತಿಂಗಳಿನಿಂದ ಇದುವರೆಗಿನ ದಾಖಲಾತಿಗಳನ್ನು ಪರಿಶೀಲನೆ ಮಾಡಿದರೆ ಪ್ರಕರಣ ಬಯಲಾಗಬಹುದಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ವಿರಾಜಪೇಟೆ ಶಾಸಕರು ಅಧಿಕಾರಿಗಳನ್ನು ತನಿಖೆಗೊಳಪಡಿಸಬೇಕು.

ಬದುಕಿರುವ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ವಿರಾಜಪೇಟೆ ಪುರಸಭೆಯಲ್ಲಿ ಅವಾಂತರ ಶಂಕೆ..!! ಕ್ರಮಕ್ಕೆ ಜೆಡಿಎಸ್ ಒತ್ತಾಯ Read More »

ನಟ ಯಶ್ ಬರ್ತ್‌ಡೇ ಬ್ಯಾನರ್ ಕಟ್ಟುತ್ತಿದ್ದ ವೇಳೆ ಅವಘಡ| ಮೂವರು ಯುವಕರು ವಿದ್ಯುತ್ ಶಾಕ್ ಗೆ ಬಲಿ

ಸಮಗ್ರ ನ್ಯೂಸ್: ನಟ ಯಶ್​ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುತ್ತಿದ್ದಾಗ ಮೂವರು ಯುವಕರಿಗೆ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಹನಮಂತ ಹರಿಜನ (21), ಮುರಳಿ ನಡವಿನಮನಿ (20) ನವೀನ್ ಗಾಜಿ (19) ಮೃತ ಯುವಕರು ಎಂದು ಗುರುತಿಸಲಾಗಿದೆ. ಯಶ್​ ಬರ್ತ್​ ಡೇಗಾಗಿ ಅಭಿಮಾನಿಗಳು ಗ್ರಾಮದಲ್ಲಿ ಬ್ಯಾನರ್ ಕಟ್ಟಲು ಮುಂದಾಗಿದ್ದದ್ದಾರೆ. ಬ್ಯಾನರ್ ಮೇಲೆ ಎತ್ತುತ್ತಿದ್ದಾಗ ಮೇಲೆ ಹಾದು ಹೋಗಿದ್ದ ಯುವಕರಿಗೆ ವಿದ್ಯುತ್ ಶಾಕ್ ತಗುಲಿದೆ. ಈ ವೇಳೆ ಅಲ್ಲೇ ನಿಂತುಕೊಂಡಿದ್ದ

ನಟ ಯಶ್ ಬರ್ತ್‌ಡೇ ಬ್ಯಾನರ್ ಕಟ್ಟುತ್ತಿದ್ದ ವೇಳೆ ಅವಘಡ| ಮೂವರು ಯುವಕರು ವಿದ್ಯುತ್ ಶಾಕ್ ಗೆ ಬಲಿ Read More »

ರಾಜ್ಯ ಶಿಕ್ಷಣ ಸಚಿವರಿಂದ ನಾಳೆ(ಜ. 8) ಪೊನ್ನಂಪೇಟೆಯಲ್ಲಿ ಸಾರ್ವಜನಿಕರ ಭೇಟಿ

ಸಮಗ್ರ ನ್ಯೂಸ್: ರಾಷ್ಟ್ರೀಯ ಬಾಲಕಿಯರ ಹಾಕಿ ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಆಗಮಿಸುವ ರಾಜ್ಯ ಶಿಕ್ಷಣ ಸಚಿವ ಎಸ್. ಮದು ಬಂಗಾರಪ್ಪನವರು ನಾಳೆ ಬೆಳಿಗ್ಗೆ (ಜ.8) ಪೊನ್ನಂಪೇಟೆಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರಿಂದ ಶಿಕ್ಷಣ ಇಲಾಖೆ ಸಂಬಂಧಿಸಿದಂತೆ ಅಹ್ವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ದೂರು ಹಾಗೂ ಸಮಸ್ಯೆಗಳಿದ್ದರೆ ಸಚಿವರನ್ನು ನಾಳೆ ಭೇಟಿಯಾಗಬಹುದಾಗಿದೆ. ಮಧ್ಯಾಹ್ನ 2 ಗಂಟೆಗೆ ಸಚಿವರು ಹಾಕಿ ಟೂರ್ನಿ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯ ಶಿಕ್ಷಣ ಸಚಿವರಿಂದ ನಾಳೆ(ಜ. 8) ಪೊನ್ನಂಪೇಟೆಯಲ್ಲಿ ಸಾರ್ವಜನಿಕರ ಭೇಟಿ Read More »

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯ| ರಾಜ್ಯ ಸರ್ಕಾರದಿಂದ ಸುಗ್ರಿವಾಜ್ಞೆ

ಸಮಗ್ರ ನ್ಯೂಸ್: ರಾಜ್ಯದ ಅಂಗಡಿ ಮುಂಗಟ್ಟು ಮತ್ತು ವ್ಯಾಪಾರ ಮಳಿಗೆಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ (Kannada) ಬಳಕೆ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಹಾಗೂ ಜಾಹೀರಾತು, ಸೂಚನಾ ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜ. 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯ| ರಾಜ್ಯ ಸರ್ಕಾರದಿಂದ ಸುಗ್ರಿವಾಜ್ಞೆ Read More »

ನಮ್ಮ ಮೆಟ್ರೋ ಹಳಿಯಲ್ಲಿ ಬೆಕ್ಕು ಪ್ರತ್ಯಕ್ಷ!

ಸಮಗ್ರ ನ್ಯೂಸ್: ನಮ್ಮ ಮೆಟ್ರೋ ದಿನೇ ದಿನೇ ಒಂದಿಲ್ಲೊಂದು ಘಟನೆಯಲ್ಲಿ ಸುದ್ದಿಯಾಗುತ್ತಲೇ ಇದೆ.ಇದೀಗ ಜೆ.ಪಿ.ನಗರ ಮೆಟ್ರೋ ಹಳಿಗೆ ಬೆಕ್ಕು ನುಗ್ಗಿದ ವಿಚಿತ್ರ ಘಟನೆ ನಡೆದಿದೆ. ನಮ್ಮ ಮೆಟ್ರೋ ಹಳಿಯ ಮೇಲೆ ಬೆಕ್ಕು ಕಾಣಿಸಿಕೊಂಡ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಟ್ರ್ಯಾಕ್ನಲ್ಲಿ ಬೆಕ್ಕು ಕಾಣಿಸಿಕೊಂಡಿರುವ ಕುರಿತು ಪ್ರಯಾಣಿಕರು ಮೆಟ್ರೋ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಮ್ಮ ಮೆಟ್ರೋ ಸಿಬ್ಬಂದಿ ಟ್ರ್ಯಾಕ್‌ನಲ್ಲಿದ್ದ ಬೆಕ್ಕನ್ನ ಓಡಿಸಿ ಅಪಾಯವನ್ನು ತಡೆಗಟ್ಟಿದ್ದಾರೆ. ಹೀಗೆ ಹಲವು ಘಟನೆಗಳು ಮೆಟ್ರೋದಲ್ಲಿ ನಡೆಯುತ್ತಲೆ

ನಮ್ಮ ಮೆಟ್ರೋ ಹಳಿಯಲ್ಲಿ ಬೆಕ್ಕು ಪ್ರತ್ಯಕ್ಷ! Read More »

ರಾಮ ಮಂದಿರ ಉದ್ಘಾಟನೆ/ ಡಿಕೆಶಿಗೆ ಇಲ್ಲ ಆಹ್ವಾನ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿಲ್ಲ. ಮುಖ್ಯಮಂತ್ರಿಗಳನ್ನ ಸಹ ಕರೆದಿಲ್ಲ. ನಾನು ಶಿವ ಭಕ್ತ, ಎಲ್ಲ ದೇವರುಗಳು ನನ್ನ ಹೃದಯದಲ್ಲಿದೆ. ನಮ್ಮ ಅಕ್ಕಿಯನ್ನ ಮಂತ್ರಾಕ್ಷತೆಗೆ ಉಪಯೋಗಿಸಿಕೊಳ್ತಿದ್ದಾರೆ, ಅನ್ನಭಾಗ್ಯ ಯೋಜನೆ ಅಕ್ಕಿ ಬಳಸ್ತಿದ್ದಾರೆ ಎಂದರು. ಅರಿಶಿನ ಅಕ್ಕಿ ಸೇರಿಯೇ ಮಂತ್ರಾಕ್ಷತೆ. ನಮ್ಮ ಅನ್ನಭಾಗ್ಯ ಯೋಜನೆಯಿಂದಲೇ ಅಕ್ಷತೆ ಆಗುತ್ತಿದೆ. ಇದು

ರಾಮ ಮಂದಿರ ಉದ್ಘಾಟನೆ/ ಡಿಕೆಶಿಗೆ ಇಲ್ಲ ಆಹ್ವಾನ Read More »

ಯುವನಿಧಿ ಜತೆ ಜಾಬ್ ಗ್ಯಾರಂಟಿ| ನಿರುದ್ಯೋಗ ಸಮಸ್ಯೆ ನೀಗಿಸಲು ತಜ್ಞರ ಸ್ಕಿಲ್ ಕೌನ್ಸಿಲ್ ರಚನೆ

ಸಮಗ್ರ ನ್ಯೂಸ್: ನಾವು ‘ಯುವನಿಧಿ’ ನಿರುದ್ಯೋಗ ಭತ್ಯೆ ನೀಡುವುದು ಮಾತ್ರವಲ್ಲ, ಯುವಕರಿಗೆ ಅಗತ್ಯ ಕೌಶಲ ಕೊಡಿಸಿ ಉದ್ಯೋಗವನ್ನೂ ನೀಡಲು ಸಂಕಲ್ಪಿಸಿದ್ದೇವೆ. ಈ ಸಂಬಂಧ ಮಹತ್ವದ ಕಾರ್ಯಕ್ರಮ ರೂಪಿಸಿದ್ದು, ನೀತಿಯನ್ನೂ ತರುತ್ತಿದ್ದೇವೆ ಎಂದು ಕೌಶಲಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸರ್ಕಾರದ ಮಹತ್ವಾಕಾಂಕ್ಷೆಯನ್ನು ಹೊರಗೆಡಹಿದ್ದಾರೆ. ವಿಜಯವಾಣಿ ಕಚೇರಿಯಲ್ಲಿ ಜ. 6ರಂದು ಆಯೋಜಿಸಿದ್ದ ಸಂವಾದದಲ್ಲಿ ಈ ವಿಚಾರ ತಿಳಿಸಿದರು. ಯುವನಿಧಿ ಯೋಜನೆಗೆ ಸ್ವಾಮಿ ವಿವೇಕಾನಂದರ ಜಯಂತಿ ದಿನವಾದ ಜ.12ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುತ್ತಿದೆ. ಸರ್ಕಾರದ ಉದ್ದೇಶ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ

ಯುವನಿಧಿ ಜತೆ ಜಾಬ್ ಗ್ಯಾರಂಟಿ| ನಿರುದ್ಯೋಗ ಸಮಸ್ಯೆ ನೀಗಿಸಲು ತಜ್ಞರ ಸ್ಕಿಲ್ ಕೌನ್ಸಿಲ್ ರಚನೆ Read More »

ಸೋಮವಾರಪೇಟೆ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ತಡೆಗೋಡೆಗೆ ಡಿಕ್ಕಿ

ಸಮಗ್ರ ನ್ಯೂಸ್:ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ನಿಲ್ದಾಣದ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ. ಡಿಕ್ಕಿಯಾದ ಪರಿಣಾಮ ತಡೆಗೋಡಯ ಒಂದು ಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಇದರ ಬದಿಯಲ್ಲಿದ್ದ ಕೆಲವು ದ್ವಿಚಕ್ರ ವಾಹನಗಳಿಗೂ ಕೂಡ ಹಾನಿ ಉಂಟಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಬಸ್ಸಿನ ಮುಂಭಾಗ ಜಖಂ ಗೊಂಡಿದೆ.

ಸೋಮವಾರಪೇಟೆ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ತಡೆಗೋಡೆಗೆ ಡಿಕ್ಕಿ Read More »

ಬೆಳಗಾವಿ:ಪ್ರೇಮಿಗಳೆಂದು ಭಾವಿಸಿ ಸಹೋದರ-ಸಹೋದರಿ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಸಮಗ್ರ ನ್ಯೂಸ್: ಪ್ರೇಮಿಗಳೆಂದು ಭಾವಿಸಿ ಸಹೋದರ ಮತ್ತು ಸಹೋದರಿ ಮೇಲೆ ಅನ್ಯಕೋಮಿನ ಯುವಕರು ನೈತಿಕ ಪೊಲೀಸಗಿರಿ ನಡೆಸಿರುವ ಘಟನೆ ಬೆಳಗಾವಿಯ ಕೋಟೆ ಕರೆ ಆವರಣದಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ನಿವಾಸಿಗಳಾದ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದರು. ಯುವತಿ ಮುಖಕ್ಕೆ ಬಟ್ಟೆ ಕಟ್ಟಿದ್ದಳು, ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದನು. ಇವರನ್ನು ಕಂಡ ಅನ್ಯಕೋಮಿನ 16ಜನ ಯುವಕರ ಗ್ಯಾಂಗ್​ ಹಿಂದೂ‌ ಯುವಕ, ಮುಸ್ಲಿಂ ಯುವತಿ ಪ್ರೇಮಿಗಳೆಂದು ಥಳಿಸಿದ್ದಾರೆ. ನಂತರ ಹತ್ತಿರವೊಂದರ ಕೊಠಡಿಯಲ್ಲಿ

ಬೆಳಗಾವಿ:ಪ್ರೇಮಿಗಳೆಂದು ಭಾವಿಸಿ ಸಹೋದರ-ಸಹೋದರಿ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ Read More »

ಪೊನ್ನಂಪೇಟೆ:ಹಾಕಿ ಟರ್ಫ್ ಮೈದಾನದಲ್ಲಿ ಜ. 8ರಂದು ಬಾಲಕಿಯರ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭ

ಸಮಗ್ರ ನ್ಯೂಸ್: ರಾಷ್ಟ ಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ರಾಷ್ಟ ಮಟ್ಟದ ಹಾಕಿ ಪಂದ್ಯಾವಳಿಯ 3ನೇ ಸ್ಥಾನ ಮತ್ತು 4ನೇ ಸ್ಥಾನಕ್ಕೆ ಬೆಳಿಗ್ಗೆ 11 ಗಂಟೆಗೆ ಪಂದ್ಯ ನಡೆಯಲಿದೆ. ಸಭಾ ಕಾರ್ಯಕ್ರಮ 2 ಗಂಟೆಗೆ ನಡೆಯಲಿದೆ. ಮದ್ಯಾಹ್ನ 2.20ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ನಂತರ ಪ್ರಶಸ್ತಿ ವಿತರಣೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವ

ಪೊನ್ನಂಪೇಟೆ:ಹಾಕಿ ಟರ್ಫ್ ಮೈದಾನದಲ್ಲಿ ಜ. 8ರಂದು ಬಾಲಕಿಯರ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭ Read More »