ನಮ್ಮ ಮೆಟ್ರೋ ಹಳಿಯಲ್ಲಿ ಬೆಕ್ಕು ಪ್ರತ್ಯಕ್ಷ!

ಸಮಗ್ರ ನ್ಯೂಸ್: ನಮ್ಮ ಮೆಟ್ರೋ ದಿನೇ ದಿನೇ ಒಂದಿಲ್ಲೊಂದು ಘಟನೆಯಲ್ಲಿ ಸುದ್ದಿಯಾಗುತ್ತಲೇ ಇದೆ.
ಇದೀಗ ಜೆ.ಪಿ.ನಗರ ಮೆಟ್ರೋ ಹಳಿಗೆ ಬೆಕ್ಕು ನುಗ್ಗಿದ ವಿಚಿತ್ರ ಘಟನೆ ನಡೆದಿದೆ.

. Ad Widget . Ad Widget

ನಮ್ಮ ಮೆಟ್ರೋ ಹಳಿಯ ಮೇಲೆ ಬೆಕ್ಕು ಕಾಣಿಸಿಕೊಂಡ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಟ್ರ್ಯಾಕ್ನಲ್ಲಿ ಬೆಕ್ಕು ಕಾಣಿಸಿಕೊಂಡಿರುವ ಕುರಿತು ಪ್ರಯಾಣಿಕರು ಮೆಟ್ರೋ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಮ್ಮ ಮೆಟ್ರೋ ಸಿಬ್ಬಂದಿ ಟ್ರ್ಯಾಕ್‌ನಲ್ಲಿದ್ದ ಬೆಕ್ಕನ್ನ ಓಡಿಸಿ ಅಪಾಯವನ್ನು ತಡೆಗಟ್ಟಿದ್ದಾರೆ.

. Ad Widget . . Ad Widget . Ad Widget

ಹೀಗೆ ಹಲವು ಘಟನೆಗಳು ಮೆಟ್ರೋದಲ್ಲಿ ನಡೆಯುತ್ತಲೆ ಇದೆ ಇತ್ತೀಚಿಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಮೊಬೈಲ್ ಫೋನ್ ಅನ್ನು ಹಳಿಗಳ ಮೇಲೆ ಬೀಳಿಸಿಕೊಂಡಿದ್ದರು. ಇದು ಮೆಟ್ರೋ ಸೇವೆಯ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿತ್ತು.
ಇನ್ನೋರ್ವ ವ್ಯಕ್ತಿ ಮೆಟ್ರೋ ಹಳಿಗಳ ಮೇಲೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ, ಇಂದು ಮತ್ತೆ ಯುವತಿಗೆ ಲೈಂಗಿಕ ಕಿರುಕುಳ ಆರೋಪದ ವಿಡಿಯೋವು ವೈರಲ್ ಆಗಿದೆ.

Leave a Comment

Your email address will not be published. Required fields are marked *