ಸಂಪಾಜೆಯ ಮನೆಯೊಂದರಿಂದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಕಳ್ಳರು ಕೊಡಗಿನಲ್ಲಿ ಬಲೆಗೆ..!! ತ್ರಿಮೂರ್ತಿ ಕಳ್ಳರಿಗಿದೆಯೇ ಕಲ್ಲುಗುಂಡಿಯ ವ್ಯಕ್ತಿಯ ನಂಟು..?
ಸಮಗ್ರ ನ್ಯೂಸ್: ಕೊಡಗು ಸಂಪಾಜೆಯ ಮನೆಯೊಂದರಿಂದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಕಳ್ಳರ ತಂಡವನ್ನು ಹಿಡಿದು ಮಡಿಕೇರಿ ಗ್ರಾಮಾಂತರ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬಂಧಿತರನ್ನು ಬಲಮುರಿ ನಿವಾಸಿ ಸುದೀಪ್ ಟಿ.ಎಸ್.(23), ಎಂ.ಬಾಡಗ ನಿವಾಸಿ ನಿಶಾಂತ್ ಎಂ.ಎಂ. (27) ಹಾಗೂ ನಾಪೋಕ್ಲು ಹಳೇ ತಾಲ್ಲೂಕು ನಿವಾಸಿ ಇಬ್ರಾಹಿಂ (29) ಎಂದು ಗುರುತಿಸಲಾಗಿದೆ. ಕೊಡಗು ಸಂಪಾಜೆಯ ನಿವಾಸಿ ವಿಜಯ್ ಕುಮಾರ್ ಕೆ.ಕೆ. ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರ ತಂಡವೊಂದು ನುಗ್ಗಿತ್ತು. 47 ಗ್ರಾಂ ತೂಕದ ಚಿನ್ನಾಭರಣ










