ರಾಜ್ಯ

ಪುತ್ತೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಸಹಭಾಗಿತ್ವ ದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

ಸಮಗ್ರ ನ್ಯೂಸ್: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಮುಳಿಯ ಜ್ಯುವೆಲ್ಸ್ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಂಚೆ ಜನ ಸಂಪರ್ಕ ಅಭಿಯಾನವನ್ನು ಮಾ.9 ರಂದು ಪುತ್ತೂರಿನಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ಸಂಸ್ಥೆ ಯ ನಿರ್ದೇಶಕಿ ಕೃಷ್ಣ ವೇಣಿ ಪ್ರಸಾದ್ ಮುಳಿಯ ಹಾಗೂ ಅಶ್ವಿನಿ ಕೃಷ್ಣ ಮುಳಿಯ ವಹಿಸಿದ್ದರು. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಜನರ ಬಳಿಗೆ ಇಲಾಖೆ ಯೋಜನೆಯನ್ನು ಕೊಂಡೊಯ್ಯಲು ಯೋಜಿಸಲಾಗಿದೆ. ಇದರ ಭಾಗವಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇಲಾಖೆಯ ಇತರ ಸೇವೆಗಳನ್ನು

ಪುತ್ತೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಸಹಭಾಗಿತ್ವ ದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ Read More »

ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ: ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್:ಬೆಂಗಳೂರಿನ ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದು, ಗ್ಯಾರೇಜ್ ಮಾಲೀಕ ಜಾರ್ಜ್ ಹಾಗೂ ಕೆಲಸಗಾರ ಶಿವು ಸೇರಿದಂತೆ ನಾಲ್ವರಿಗೆ ಗಾಯವಾಗಿದೆ. ಸ್ಫೋಟದಿಂದ 2 ಅಂತಸ್ತಿನ ಮನೆಗೂ ಹಾನಿಯಾಗಿದ್ದು, ಸ್ವಿಫ್ಟ್ ಡಿಸೈರ್ ಕಾರು, ದ್ವಿಚಕ್ರ ವಾಹನ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಆವರಿಸಿದರಿಂದ ರಸ್ತೆಯಲ್ಲಿ ಹೋಗ್ತಿದ್ದ ಇಬ್ಬರಿಗೂ ಗಾಯವಾಗಿದೆ. ಘಟನೆ ಹಿನ್ನಲೆ ಗ್ಯಾರೇಜ್ ಪಕ್ಕದ ಮನೆ ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೂ ಹಾನಿಯಾಗಿದ್ದು, ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ: ನಾಲ್ವರಿಗೆ ಗಾಯ Read More »

ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ: ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆ

ಸಮಗ್ರ ನ್ಯೂಸ್: ಬೆಂಗಳೂರಿನ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜನರಿಗೆ ಕುಡಿಯಲು ನೀರಿಗೆ ಪರದಾಡುವ ಪರಿಸ್ಥಿತಿ ಈಗ ಬಂದೊದಗಿದೆ. ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ನಗರದಲ್ಲಿ ನೀರಿನ ಸಮಸ್ಯೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಧರಣಿ ಮಾಡಲಿದೆ. ಇನ್ನೂ ಈ ವಿಚಾರವಾಗಿ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್​ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ

ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ: ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆ Read More »

ಬೆಳಗಾವಿ: ನಿಪ್ಪಾಣಿಯ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಶ್ರೀರಾಮ ಮಂದಿರವನ್ನು ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರ ಬರೆದಿದ್ದಾರೆ. ಕಳೆದ ತಿಂಗಳು ಫೆಬ್ರವರಿ 7 ಹಾಗೂ 28 ರಂದು ಹಿಂದಿ ಭಾಷೆಯಲ್ಲಿ ಎರಡು ಪತ್ರಗಳು ಬಂದಿದ್ದು, ಮುಂದಿನ 20, 21 ತಾರೀಖಿನ ಒಳಗಡೆ ರಾಮ‌ ಮಂದಿರವನ್ನ ದೊಡ್ಡ ಪ್ರಮಾಣದಿಂದ ಸ್ಪೋಟಿಸುತ್ತೇವೆ. ಎಂದು ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ದುಷ್ಕರ್ಮಿಗಳ ಪತ್ರ ಸದ್ಯ ಸಂಚಲನ ಸೃಷ್ಟಿಸಿದು. ಆತಂಕ ಸೃಷ್ಟಿಯಾಗಿದೆ. 101 ವರ್ಷಗಳ ಇತಿಹಾಸ

ಬೆಳಗಾವಿ: ನಿಪ್ಪಾಣಿಯ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ Read More »

ಕರ್ನಾಟಕದ ಮೀನುಗಾರಿಕಾ ಬೋಟ್ ವಶ|25 ಲಕ್ಷ ರೂ. ದಂಡ

ಸಮಗ್ರ ನ್ಯೂಸ್ : ಕಾಸರಗೋಡು ಜಿಲ್ಲೆಯ ಸಮುದ್ರ ಕಿನಾರೆಯಲ್ಲಿ ರಾತ್ರಿ ವೇಳೆ ಅನಧಿಕೃತವಾಗಿ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕದ ಯಾಂತ್ರೀಕೃತ ಬೋಟನ್ನು ಕುಂಬಳೆ-ಬೇಕಲ- ಅಳಿತ್ತಲ ಕರಾವಳಿ ಪೊಲೀಸ್ ಠಾಣೆಗಳ ಪೊಲೀಸರು ಮತ್ತು ಮರೈನ್ ಎನ್‌ಫೋರ್ಸ್ಮೆಂಟ್ ವಿಭಾಗ ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಬೋಟ್‌ಗೆ 25 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕರ್ನಾಟಕದ ಮೀನುಗಾರಿಕಾ ಬೋಟ್ ವಶ|25 ಲಕ್ಷ ರೂ. ದಂಡ Read More »

ಕಾಂಗ್ರೆಸ್ ಹಣಕಾಸಿನ ವಿಚಾರದಲ್ಲಿ ವಿಫಲ: ಪ್ರತಾಪ್ ಸಿಂಹ ನಾಯಕ್

ಸಮಗ್ರ ನ್ಯೂಸ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ 5 ಖಾತ್ರಿ ಯೋಜನೆಗಳ ಅನುಷ್ಠಾನಕ್ಕೆ ಆದಾಯ ತರುವ ಕ್ರಮಗಳನ್ನು ಹೊರತುಪಡಿಸಿದರೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳನ್ನು ನೀಡುವುದಿಲ್ಲ ಎಂದು ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಮಾರ್ಚ್ 8 ರಂದು ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ್, ಕಾಂಗ್ರೆಸ್ ಹಣಕಾಸಿನ ವಿಚಾರದಲ್ಲಿ ವಿಫಲವಾಗಿದೆ ಮತ್ತು ಅಧಿಕಾರಕ್ಕೆ ಬರಲು ಐದು ಭರವಸೆಗಳನ್ನು ಘೋಷಿಸಿದೆ. ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಹಣ ಮಂಜೂರು ಮಾಡಿಲ್ಲ ಎಂದರು.

ಕಾಂಗ್ರೆಸ್ ಹಣಕಾಸಿನ ವಿಚಾರದಲ್ಲಿ ವಿಫಲ: ಪ್ರತಾಪ್ ಸಿಂಹ ನಾಯಕ್ Read More »

ಭಯೋತ್ಪಾದನೆ ಗೀಚುಬರಹ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ವಿರುದ್ಧ ಎನ್‍ಐಎ ಆರೋಪ ಪಟ್ಟಿ ಸಲ್ಲಿಕೆ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಭಯೋತ್ಪಾದಕರ ಪರ ಗೀಚುಬರಹ ಬರೆದಿದ್ದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಐಸಿಸ್ ಸಂಚು ಪ್ರಕರಣದ ಮತ್ತೊಬ್ಬ ಆರೋಪಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಗುರುವಾರ ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಕೇಂದ್ರೀಯ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯು ಇತರ ಇಬ್ಬರ ವಿರುದ್ಧ ಹೆಚ್ಚುವರಿ ಆರೋಪಗಳನ್ನು ದಾಖಲಿಸಿದೆ. ತನ್ನ ಎರಡನೇ ಪೂರಕ ಚಾರ್ಜ್‍ಶೀಟ್‍ನಲ್ಲಿ, ಎನ್‍ಐಎ ಆರೋಪಿ ಅರಾಫತ್ ಅಲಿ ವಿರುದ್ಧ ಆರೋಪ ಹೊರಿಸಿದೆ ಮತ್ತು ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್

ಭಯೋತ್ಪಾದನೆ ಗೀಚುಬರಹ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ವಿರುದ್ಧ ಎನ್‍ಐಎ ಆರೋಪ ಪಟ್ಟಿ ಸಲ್ಲಿಕೆ Read More »

ಬಸ್​ನಿಂದ ಆಯತಪ್ಪಿ ಬಿದ್ದು ನಿರ್ವಾಹಕ ಸಾವು

ಸಮಗ್ರ ನ್ಯೂಸ್: ಚಲಿಸುತ್ತಿದ್ದ KSRTC ಬಸ್​ನಿಂದ ಆಯತಪ್ಪಿ ಬಿದ್ದು ನಿರ್ವಾಹಕ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ. ಚಾಮರಾಜನಗರ ತಾಲೂಕಿನ ಹಳೇಪುರ ನಿವಾಸಿ ಮಹದೇವಸ್ವಾಮಿ (35) ಮೃತ ನಿರ್ವಾಹಕ. ನಿರ್ವಾಹಕ ಮಹದೇವಸ್ವಾಮಿ ಕೆಎಸ್​ಆರ್​ಟಿಸಿ ಬಸ್​ನ ಫುಟ್​ ಬೋರ್ಡ್​​ನಲ್ಲಿ ನಿಂತಿದ್ದರು. ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಂಜನಗೂಡು ಡಿವೈಎಸ್​​ಪಿ ರಘು, ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್​ನಿಂದ ಆಯತಪ್ಪಿ ಬಿದ್ದು ನಿರ್ವಾಹಕ ಸಾವು Read More »

ರಾಜ್ಯ ಸಭಾ ಸದಸ್ಯೆಯಾಗಿ ಸುಧಾ ಮೂರ್ತಿ/ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸದೆ

ಸಮಗ್ರ ನ್ಯೂಸ್: ರಾಜ್ಯ ಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಸುಧಾಮೂರ್ತಿ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸದೆಯಾಗಲಿದ್ದಾರೆ. ಸದ್ಯ ಅವರು 5586 ಕೋಟಿ ರು.ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ಫೋಸಿಸ್‍ನಲ್ಲಿ ಅವರಿಗೆ 3.45 ಕೋಟಿ ಷೇರು ಇದೆ. ಗುರುವಾರ ಇನ್ಫೋಸಿಸ್‍ನ ಪ್ರತಿ ಷೇರಿನ ಬೆಲೆ 1617 ರು. ಇತ್ತು. ಅದರ ಆಧಾರದಲ್ಲಿ ಸುಧಾ ಅವರ ಒಟ್ಟು ಆಸ್ತಿ 5586 ಕೋಟಿ ರು. ಆಗಲಿದೆ. ಇನ್ನು ಇನ್ಫೋಸಿಸ್‍ನಲ್ಲಿ ಸಂಸ್ಥಾಪಕ ನಾರಾಯಣ ಮೂರ್ತಿ 2691 ಕೋಟಿ ರು. ಮೌಲ್ಯದ 1.66

ರಾಜ್ಯ ಸಭಾ ಸದಸ್ಯೆಯಾಗಿ ಸುಧಾ ಮೂರ್ತಿ/ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸದೆ Read More »

ಗೋಬಿ ಪ್ರಿಯರಿಗೆ ಬಿಗ್ ಶಾಕ್…! ಬ್ಯಾನ್ ಆಗುತ್ತಾ ಗೋಬಿ, ಕಾಟನ್ ಕ್ಯಾಂಡಿ?

ಸಮಗ್ರ ನ್ಯೂಸ್: ಗೋಬಿ ಹಾಗೂ ಕಾಟನ್ ಕ್ಯಾಂಡಿ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಎದುರಾಗಿದೆ. ಗೋವಾದಲ್ಲಿ ಗೋಬಿ ಬ್ಯಾನ್ ಹಿನ್ನೆಲೆ ರಾಜ್ಯದಲ್ಲೂ ಬ್ಯಾನ್ ಆಗುವ ಸಾಧ್ಯತೆ ಇದೆ. ಇಗಾಗಲೇ ರಾಜ್ಯದಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಗೋಬಿ ತಯಾರಿಕೆಯಲ್ಲಿ ಬಳಸುವ ರುಚಿಕಾರಕ, ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್ ಆರೋಗ್ಯದ ಬೆಲೆ ಪರಿಣಾಮ ಬೀರುತ್ತಿದೆ. ಈ ಹಿತ ದೃಷ್ಟಿಯಿಂದ ಆಹಾರ ಸುರಕ್ಷತೆ, ಗುಣಮಟ್ಟ ಆಯುಕ್ತಾಲಯದಿಂದ ಪರೀಕ್ಷೆ ನಡೆಸಲಾಗಿದೆ. ಗೋಬಿ ಪರೀಕ್ಷೆಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಕ್ಯಾನ್ಸರ್ ತಂದೊಡ್ಡುವ ಅಂಶಗಳು

ಗೋಬಿ ಪ್ರಿಯರಿಗೆ ಬಿಗ್ ಶಾಕ್…! ಬ್ಯಾನ್ ಆಗುತ್ತಾ ಗೋಬಿ, ಕಾಟನ್ ಕ್ಯಾಂಡಿ? Read More »