ರಾಜ್ಯ

ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ/ ಜೂನ್ 14 ರವರೆಗೆ ಅವಧಿ ವಿಸ್ತರಣೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಗುರುತು ಚೀಟಿ ಪ್ರಾಧಿಕಾರವು (ಆಧಾರ್ ಪ್ರಾಧಿಕಾರ) ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆಗಾಗಿ ಇದ್ದ ಅವಧಿಯನ್ನು ಜೂನ್ 14 ರವರೆಗೆ ವಿಸ್ತರಿಸಿ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ಉಚಿತವಾಗಿ ಆಧಾರ್ ನವೀಕರಣ ಮಾಡಿಕೊಳ್ಳಲು ಮೈ ಆಧಾರ್ ಪೋರ್ಟಲ್‍ನಲ್ಲಿ ಡಿಸೆಂಬರ್ 14 ಕೊನೆ ದಿನ ನಿಗದಿ ಮಾಡಲಾಗಿತ್ತು. ನಂತರ ಶುಲ್ಕ ಸಹಿತ ನವೀಕರಣಕ್ಕೆ ಅವಕಾಶವಿತ್ತು. ಆದರೆ ಈಗ ಉಚಿತ ನವೀಕರಣ ಅವಧಿಯನ್ನು ಜೂ.14 ರವರೆಗೆ ವಿಸ್ತರಿಸಿದೆ. ಈ ಸೇವೆಯು ಮೈಆಧಾರ್ ಪೋರ್ಟಲ್‍ನಲ್ಲಿ ಮಾತ್ರ ಲಭ್ಯವಿದೆ.

ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ/ ಜೂನ್ 14 ರವರೆಗೆ ಅವಧಿ ವಿಸ್ತರಣೆ Read More »

ರಾಜ್ಯದಲ್ಲಿ ಬರ ಪರಿಸ್ಥಿತಿ/ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ

ಸಮಗ್ರ ನ್ಯೂಸ್: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ್ದು, ಈ ಬಾರಿ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ ಸಿಗಲಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬೇಸಿಗೆ ರಜೆಯಲ್ಲೂ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 11ರಿಂದ ಮೇ 28ರವರೆಗೆ 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರ ಈಗಾಗಳೇ ಬರ ಪೀಡಿತ ತಾಲ್ಲೂಕುಗಳ ಘೋಷಣೆ ಮಾಡಿದೆ. ಬರ ಪೀಡಿತ ತಾಲೂಕುಗಳಲ್ಲಿ ಬೇಸಿಗೆ

ರಾಜ್ಯದಲ್ಲಿ ಬರ ಪರಿಸ್ಥಿತಿ/ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ Read More »

ಉಡುಪಿ: ಬೆಳ್ಳಿ ಆಭರಣ ಮಳಿಗೆಗೆ ಮ್ಯಾನೇಜರ್‌ನಿಂದ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್: ಉಡುಪಿ ಒಳಕಾಡಿನಲ್ಲಿರುವ ಬೆಳ್ಳಿಯ ಆಭರಣಗಳ ಅಂಗಡಿಯ ಮ್ಯಾನೇಜರ್ ವಿಶಾಲ್ ಎಂಬಾತನು ತನ್ನ ಸಂಸ್ಥೆಗೆ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ. ಸೆ.25ರಂದು ಈತನ ಬಗ್ಗೆ ಅನುಮಾನಗೊಂಡು ಸಂಸ್ಥೆಯ ಮಾಲಕರು ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಆರೋಪಿಯು 17 ಲ.ರೂ.ಮೌಲ್ಯದ 25 ಕೆಜಿ 980 ಗ್ರಾಂ ತೂಕದ ಬೆಳ್ಳಿಯ ಬಗ್ಗೆ ಮೋಸ ಮಾಡಿ ನಷ್ಟ ಉಂಟು ಮಾಡಿದ್ದ. ಈ ಬಗ್ಗೆ ಆತನನ್ನು ದೂರವಾಣಿ ಮೂಲಕ ವಿಚಾರಿಸಿದಾಗ ತಪ್ಪನ್ನು ಒಪ್ಪಿಕೊಂಡು 10 ಲ.ರೂ.ಗಳನ್ನು ಮಾಲಕರಿಗೆ ನೀಡಿದ್ದ. ಬಳಿಕ ಉಳಿದ

ಉಡುಪಿ: ಬೆಳ್ಳಿ ಆಭರಣ ಮಳಿಗೆಗೆ ಮ್ಯಾನೇಜರ್‌ನಿಂದ ಲಕ್ಷಾಂತರ ರೂ. ವಂಚನೆ Read More »

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ| ಬಳ್ಳಾರಿಯಲ್ಲಿ ಓರ್ವ ಎನ್ಐಎ. ವಶಕ್ಕೆ

ಸಮಗ್ರ ನ್ಯೂಸ್: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಓರ್ವನನ್ನು ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ ಐ ಎ ಘೋಷಣೆ ಮಾಡಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ| ಬಳ್ಳಾರಿಯಲ್ಲಿ ಓರ್ವ ಎನ್ಐಎ. ವಶಕ್ಕೆ Read More »

ತುಮಕೂರಿನಲ್ಲಿ ಹಣಕ್ಕಾಗಿ ಬಾಲಕಿಗೆ ಇಸ್ತ್ರಿಯಿಂದ ಸುಟ್ಟ ದೊಡ್ಡಮ್ಮ

ಸಮಗ್ರ ನ್ಯೂಸ್: ಹಣಕ್ಕಾಗಿ ಬಾಲಕಿಗೆ ಇಸ್ತ್ರಿಯಿಂದ ಸುಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದು, ಬ್ಯಾಂಕ್​ನಲ್ಲಿದ್ದ ಹಣಕ್ಕಾಗಿ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಐದನೇ ತರಗತಿಯಲ್ಲಿ ಓದುತ್ತಿದ್ದ ಮಗಳ ತೊಡೆ ಸುಟ್ಟಿದ್ದಾಳೆ. ತುಮಕೂರು ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿ ಲಕ್ಷ್ಮೀಗೆ ದೊಡ್ಡಮ್ಮ ನರಸಮ್ಮ ಕಿರುಕುಳ ನೀಡಿದ್ದಾರೆ. ಲಕ್ಷ್ಮೀಯ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ

ತುಮಕೂರಿನಲ್ಲಿ ಹಣಕ್ಕಾಗಿ ಬಾಲಕಿಗೆ ಇಸ್ತ್ರಿಯಿಂದ ಸುಟ್ಟ ದೊಡ್ಡಮ್ಮ Read More »

ಕಾಂಗ್ರೆಸ್ ಸೇರಿದ ಕೆ. ಜಯಪ್ರಕಾಶ್ ಹೆಗ್ಡೆ

ಸಮಗ್ರ ನ್ಯೂಸ್: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಮತ್ತಿತರರನ್ನು, ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ, ಕೆ ಜೆ ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಳರ್, ಉಡುಪಿ ಮತ್ತು ಚಿಕ್ಕಮಗಳೂರಿನ ಹಲವು ನಾಯಕರು ಪಾಲ್ಗೊಂಡಿದ್ದರು. ಜಯಪ್ರಕಾಶ್ ಹೆಗ್ಡೆ ಅವರನ್ನು ಉಡುಪಿ ಚಿಕ್ಕಮಗಳೂರಿಗೆ

ಕಾಂಗ್ರೆಸ್ ಸೇರಿದ ಕೆ. ಜಯಪ್ರಕಾಶ್ ಹೆಗ್ಡೆ Read More »

ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ/ ನೀರು ಪೂರೈಕೆ 20% ರಷ್ಟು ಕಡಿತ

ಸಮಗ್ರ ನ್ಯೂಸ್: ಬೃಹತ್ ಪ್ರಮಾಣದಲ್ಲಿ ನೀರನ್ನು ಬಳಸುವ ಕಂಪನಿಗಳು, ಆಸ್ಪತ್ರೆಗಳು, ರೈಲ್ವೆ, ವಿಮಾನ ನಿಲ್ದಾಣಗಳಿಗೆ 20% ರಷ್ಟು ನೀರು ಪೂರೈಕೆಯನ್ನು ಕಡಿತಗೊಳಿಸುವ ಮೂಲಕ ರಾಜಧಾನಿಯಲ್ಲಿನ ಕುಡಿಯುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಬೆಂಗಳೂರು ನೀರು ಸರಬರಾಜು ಮಂಡಳಿ ನಿರ್ಧರಿಸಿದೆ. ಮಂಡಳಿಯು ಬೆಂಗಳೂರಿನಲ್ಲಿ ದೊಡ್ಡ ನೀರು ಸರಬರಾಜು ಜಾಲಗಳನ್ನು ಹೊಂದಿರುವ ಗ್ರಾಹಕರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದು, ಬೃಹತ್ ಪ್ರಮಾಣದಲ್ಲಿ ನೀರನ್ನು ಪಡೆಯುವ 3 ಲಕ್ಷ ಸಂಸ್ಥೆಗಳಿದ್ದು ಏಪ್ರಿಲ್ 1 ರಿಂದ 20% ರಷ್ಟು ನೀರು ಪೂರೈಕೆಯನ್ನು ಸಂಪೂರ್ಣವಾಗಿ

ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ/ ನೀರು ಪೂರೈಕೆ 20% ರಷ್ಟು ಕಡಿತ Read More »

ಇಂದಿನಿಂದ ಸ್ವಯಂಚಾಲಿತ ಮ್ಯುಟೇಶನ್ ಮಾಹಿತಿ ಪರಿಷ್ಕರಣೆ ಜಾರಿ| ಎ.1 ರಿಂದ RTC ಗೆ ಆಧಾರ್ ಜೋಡಣೆ ಕಡ್ಡಾಯ

ಸಮಗ್ರ ನ್ಯೂಸ್: ಆಸ್ತಿ ಮೇಲೆ ಸಾಲ ಪಡೆಯುವುದು ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ದಾಖಲಿಸುವ ಮ್ಯುಟೇಷನ್‌ ಕ್ರಮವನ್ನು ಸ್ವಯಂಚಾಲಿತ ವ್ಯವಸ್ಥೆ ಇಂದಿನಿಂದ ಜಾರಿಯಾಗುತ್ತಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕಂದಾಯ ಇಲಾಖೆಯ ಸೇವೆಯಾಗಿರುವ ಪಹಣಿಯಲ್ಲಿ ರಾಜ್ಯದ ರೈತರ ಬ್ಯಾಂಕ್ ಸಾಲ, ತೀರುವಳಿ ಸೇರಿದಂತೆ ವಿವಿಧ ಮಾಹಿತಿಗಳು ಗ್ರಾಮಾಧಿಕಾರಿಗಳು ದೃಢೀಕರಣದ ನೀಡಿದ ನಂತರ ದಾಖಲಾಗುತ್ತಿದ್ದವು. ಆದರೇ ಇನ್ನು ಮುಂದೆ ಪಹಣಿಯಲ್ಲಿ ಈ ಎಲ್ಲಾ ವಿವರಗಳು ಸ್ವಯಂಚಾಲಿತವಾಗಿ ದಾಖಲಾಗಲಿವೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ,

ಇಂದಿನಿಂದ ಸ್ವಯಂಚಾಲಿತ ಮ್ಯುಟೇಶನ್ ಮಾಹಿತಿ ಪರಿಷ್ಕರಣೆ ಜಾರಿ| ಎ.1 ರಿಂದ RTC ಗೆ ಆಧಾರ್ ಜೋಡಣೆ ಕಡ್ಡಾಯ Read More »

ಸಿಂಹ ಸೆರೆಗೆ ಬೋನು ಇಡ್ತಾರಾ ‘ಕೈ’ ಟ್ರಬಲ್ ಶೂಟರ್ |ಕುತೂಹಲ ಮೂಡಿಸಿದ ಮೈಸೂರು ಟಿಕೆಟ್ ಫೈಟ್

ಸಮಗ್ರ ನ್ಯೂಸ್: ರಾಜ್ಯದ ಟ್ರಬಲ್ ಶೂಟರ್ ಇದೀಗ ಮೈಸೂರಿನ ಚುನಾವಣೆ ಅಖಾಡಕ್ಕೆ ಇಳಿದಿದ್ದು, ಟಿಕೆಟ್ ವಂಚಿತ ಪ್ರಭಾವಿ ಒಕ್ಕಲಿಗ ಯುವ ನಾಯಕ ಪ್ರತಾಪ್ ಸಿಂಹರನ್ನು ಕಾಂಗ್ರೆಸ್ ಗೆ ಕರೆತರಲು ಪ್ಲ್ಯಾನ್ ರೆಡಿಯಾಗ್ತಿರುವ ಸುದ್ದಿ ಹರಿದಾಡ್ತಿದೆ. ಈ ನಡುವೆ ತವರು ನೆಲದಲ್ಲಿನ ಬೆಳವಣಿಗೆ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವಂತಹ ಮಾಸ್ಟರ್ ಸ್ಟ್ರೋಕ್ ಗೆ ಕೈ ಹಾಕಿರುವುದು ಕಾಂಗ್ರೆಸ್ ಆಪ್ತವಲಯದಿಂದ ಮಾಹಿತಿ ಹೊರಬಿದ್ದಿದೆ. ಸಿದ್ದರಾಮಯ್ಯರನ್ನು ಮಟ್ಟಹಾಕಲು ಅವರ ಹುಟ್ಟೂರಿನಲ್ಲೇ ಓರ್ವ

ಸಿಂಹ ಸೆರೆಗೆ ಬೋನು ಇಡ್ತಾರಾ ‘ಕೈ’ ಟ್ರಬಲ್ ಶೂಟರ್ |ಕುತೂಹಲ ಮೂಡಿಸಿದ ಮೈಸೂರು ಟಿಕೆಟ್ ಫೈಟ್ Read More »

ಕುಂದಾಪುರ: ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಸಾವು

ಸಮಗ್ರ ನ್ಯೂಸ್: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ಕುಂದಾಪುರದ ಹೆಂಗವಳ್ಳಿ ಗ್ರಾಮದ ಒಳಗುಡ್ಡೆ ತೊಂಬತ್ತು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಕೃಷ್ಣ ಎಂಬವರ ಮಗಳು 10 ನೇ ತರಗತಿ ವಿದ್ಯಾರ್ಥಿನಿ ಅಕ್ಷಯ (16) . ಅಮಾಸೆಬೈಲು ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಕ್ಷಯ ಎಂದಿನಂತೆ ನಿನ್ನೆ ಸಂಜೆ ಶಾಲೆ ಮುಗಿಸಿ ವಾಪಾಸ್ಸು ಮನೆಗೆ ಬಂದು ಮನೆಯ ಪಕ್ಕದಲ್ಲಿರುವ ಬಾವಿಯ ನೀರನ್ನು ಕೃಷಿ ಅಡಿಕೆ ತೋಟಕ್ಕೆ ಬೀಡಲು ಬಾವಿಯ

ಕುಂದಾಪುರ: ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಸಾವು Read More »