ರಾಜ್ಯ

ದೇವರಮನೆಯಲ್ಲಿ ಕಾಡಾನೆ ದಾಳಿ|ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು

ಸಮಗ್ರ ನ್ಯೂಸ್: ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ಸಮೀಪದ ದೇವರಮನೆಯಲ್ಲಿ ಕಾಡಾನೆಯೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರಾದ ಘಟನೆ ಸೋಮವಾರ ಸಂಜೆ ನಡೆದಿದೆ. ಮೂಡಿಗೆರೆ ಪಟ್ಟಣದ ನಿವಾಸಿ ಲೋಕೇಶ್ ಮತ್ತು ಅವರ ಸಹೋದರಿ ದೇವರಮನೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂದಿರುವಾಗ ದೇವರಮನೆ ರಸ್ತೆಯಲ್ಲಿ ಕಾಡಾನೆ ಬೈಕಿಗೆ ಅಡ್ಡ ಬಂದು ಅಟ್ಟಿಸಿಕೊಂಡು ಬಂದಿದೆ. ತಕ್ಷಣ ಬೈಕ್ ಸವಾರರು ಓಡಿ ಹೋಗಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು

ದೇವರಮನೆಯಲ್ಲಿ ಕಾಡಾನೆ ದಾಳಿ|ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು Read More »

ಚುನಾವಣೆ ಸಂದರ್ಭದಲ್ಲಿ ಬರುವವರು ನಮಗೆ ಬೇಡ| ಡಿವಿ ಎಸ್ ಕಾಂಗ್ರೆಸ್ ಸೇರ್ಪಡೆಗೆ ಸಿಎಂ ಸಿದ್ದರಾಮಯ್ಯ ತಡೆ!?

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕಾಂಗ್ರೆಸ್‌ ಸೇರ್ಪಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಣ್ಣೀರು ಎರಚಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಸಮಾಧಾನಿತ ನಾಯಕರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಬರುವುದು ಬೇಡ ಎಂದು ಸಿದ್ದರಾಮಯ್ಯ ಖಡಕ್‌ ಆಗಿ ಹೇಳಿದ್ದಾರೆ. ಹೀಗಾಗಿ ಸದಾನಂದ ಗೌಡ ಸಹಿತ ಬಿಜೆಪಿಯ ಹಲವು ಅತೃಪ್ತ ನಾಯಕರ ಕಾಂಗ್ರೆಸ್‌ ಸೇರುವ ಯೋಜನೆ ಠುಸ್‌ ಆಗಿದೆ ಎಂದು ಮೂಲವೊಂದು ತಿಳಿಸಿದೆ. ಮೈಸೂರು ಕ್ಷೇತ್ರದಿಂದ ಸದಾನಂದ ಗೌಡರನ್ನು ಕಾಂಗ್ರೆಸ್‌ ಕಣಕ್ಕಿಳಿಸುವ ವದಂತಿ ದಟ್ಟವಾಗಿ ಹರಡಿತ್ತು. ಈ ಪ್ರಸ್ತಾವಕ್ಕೆ ಒಂದೇ ಮಾತಿನಲ್ಲಿ

ಚುನಾವಣೆ ಸಂದರ್ಭದಲ್ಲಿ ಬರುವವರು ನಮಗೆ ಬೇಡ| ಡಿವಿ ಎಸ್ ಕಾಂಗ್ರೆಸ್ ಸೇರ್ಪಡೆಗೆ ಸಿಎಂ ಸಿದ್ದರಾಮಯ್ಯ ತಡೆ!? Read More »

ಮಂಡ್ಯ ಕಣಕ್ಕಿಳಿಯಲು ಎಚ್.ಡಿ ಕುಮಾರಸ್ವಾಮಿ ನಿರ್ಧಾರ..!

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಎಲ್ಲಾ ಪಕ್ಷದಲ್ಲಿ ದೊಡ್ಡ ತಲೆಬಿಸಿಯಾಗಿರುವಂತಹದು, ಇದರಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದೇ ಸದ್ಯ ಬಹಳಷ್ಟು ಕುತೂಹಲ. ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ವದಂತಿಗಳ ಮಧ್ಯೆ, ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಕೂಡ ಬಿಜೆಪಿ ಟಿಕೆಟ್​ಗೆ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಈಗ ವರದಿಗಳ ಪ್ರಕಾರ ಜೆಡಿಎಸ್ ನಾಯಕ ಹೆಚ್​ಡಿ

ಮಂಡ್ಯ ಕಣಕ್ಕಿಳಿಯಲು ಎಚ್.ಡಿ ಕುಮಾರಸ್ವಾಮಿ ನಿರ್ಧಾರ..! Read More »

ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಹಲ್ಲೆ

ಸಮಗ್ರ ನ್ಯೂಸ್: ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರತ್​ಪೇಟೆಯಲ್ಲಿರುವ ಮೊಬೈಲ್ ಶಾಪ್​ನಲ್ಲಿ ಯುವಕ ಹುನುಮಾನ್​ ಚಾಲಿಸಾ ಅನ್ನು ಜೋರು ಸೌಂಡ್​ ಇಟ್ಟು ಹಚ್ಚಿದ್ದರು. ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ ಎಂದಿದ್ದರು. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್​

ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಹಲ್ಲೆ Read More »

ಲೋಕಸಭೆ ಟಿಕೆಟ್ ಗೊಂದಲ|ಇಂದು ದೆಹಲಿಗೆ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಿಂದ ಪ್ರಚಾರಗಳು ನಡೆಯುತ್ತಿದೆ. ಆದರೆ ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಇದೀಗ ಕಾಂಗ್ರೆಸ್ ನ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾಲೋಚನಾ ಸಭೆಗಳು ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ತೆರಳಲಿದ್ದಾರೆ.

ಲೋಕಸಭೆ ಟಿಕೆಟ್ ಗೊಂದಲ|ಇಂದು ದೆಹಲಿಗೆ ಸಿದ್ದರಾಮಯ್ಯ Read More »

ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ/ ಬೆಂಗಳೂರಿನಿಂದ ನೇರ ವಿಮಾನ ಸೇವೆ ಆರಂಭ

ಸಮಗ್ರ ನ್ಯೂಸ್: ಲಕ್ಷದ್ವೀಪಕ್ಕೆ ಪ್ರವಾಸ ಹೋಗಬಯಸುವ ಜನರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮಾರ್ಚ್ 31ರಿಂದ ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ನೇರ ಫೈಟ್ ಸೇವೆಯನ್ನು ನಡೆಸುತ್ತಿದೆ. ಈ ಮುಂಚೆ ಲಕ್ಷದ್ವೀಪಕ್ಕೆ ವಿಮಾನದ ಮೂಲಕ ಹೋಗಬೇಕೆಂದರೆ ಕನಿಷ್ಠ ಎರಡು ವಿಮಾನಗಳನ್ನಾದರೂ ಹತ್ತಬೇಕಿತ್ತು. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬೇರೆ ಫೈಟ್‍ನಲ್ಲಿ ಲಕ್ಷದ್ವೀಪಕ್ಕೆ ಹೋಗಬೇಕಿತ್ತು. ಸದ್ಯ ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣ ಇರುವುದು ಅಗತ್ತಿ ದ್ವೀಪದಲ್ಲಿ ಮಾತ್ರ. ಮಿನಿಕಾಯ್ ದ್ವೀಪದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸುವ

ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ/ ಬೆಂಗಳೂರಿನಿಂದ ನೇರ ವಿಮಾನ ಸೇವೆ ಆರಂಭ Read More »

ಹವಾಮಾನ ವರದಿ|ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್ : ರಾಜ್ಯದ ಕರಾವಳಿ ಪ್ರದೇಶ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾ. 21 ರಿಂದ ಮಾ. 24ರವರೆಗೆ ಕರಾವಳಿ, ಮಲೆನಾಡು ಪ್ರದೇಶ ಹಾಗೂ ಉತ್ತರ ಕನ್ನಡ ಪ್ರದೇಶದಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ವರದಿ|ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮಳೆ ಸಾಧ್ಯತೆ Read More »

ಕರ್ನಾಟಕ ಸಿಐಡಿ ಬಿಟ್‌ಕಾಯಿನ್ ಹಗರಣ- ಆರೋಪಿಗಳನ್ನು ಕೋರಿ ಸಾರ್ವಜನಿಕ ನೋಟಿಸ್ ಜಾರಿ

ಸಮಗ್ರ ನ್ಯೂಸ್ : ಕರ್ನಾಟಕ ಸಿಐಡಿ ಪೊಲೀಸರು, ಬಿಟ್‌ಕಾಯಿನ್ ಹಗರಣವನ್ನು ಪರಿಶೀಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬೇಕಾಗಿರುವ ಉಪ ಪೊಲೀಸ್ ಅಧೀಕ್ಷಕ ಶ್ರೀಧರ್ ಪೂಜಾರ್ ಅವರನ್ನು ಪತ್ತೆಹಚ್ಚಲು ನೆರವು ನೀಡುವಂತೆ ಒತ್ತಾಯಿಸಿ ಸಾರ್ವಜನಿಕ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 23 ರಂದು ನಿರೀಕ್ಷಣಾ ಜಾಮೀನು ನಿರಾಕರಿಸಿದ ನಂತರ ಪೂಜಾರ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆತನ ವಿರುದ್ಧದ ಆರೋಪಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಹ್ಯಾಕರ್ ಶ್ರೀಕಿಯ ಸಹಯೋಗದೊಂದಿಗೆ ವಿವಿಧ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು, ಪಾವತಿ ಗೇಟ್‌ವೇಗಳು ಮತ್ತು ಸ್ಟಾಕ್

ಕರ್ನಾಟಕ ಸಿಐಡಿ ಬಿಟ್‌ಕಾಯಿನ್ ಹಗರಣ- ಆರೋಪಿಗಳನ್ನು ಕೋರಿ ಸಾರ್ವಜನಿಕ ನೋಟಿಸ್ ಜಾರಿ Read More »

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ|ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಯಮುನಾ ಚಂಗಪ್ಪ ವಿರುದ್ದ ಕಾಂಗ್ರೆಸ್ ದೂರು

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ಸುಳ್ಳು, ಪ್ರಚೋದನಾಕಾರಿ ಪೋಸ್ಟನ್ನು ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ ಹಿನ್ನಲೆಯಲ್ಲಿ ಕೊಡಗು ಕಾಂಗ್ರೆಸ್ ನಿಂದ ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿರುವ ಕೊಡಗು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ. ಕೊಡಗು ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ದಾಖಲೆಗಳೊಂದಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯ ಸಮಿತಿಯ ಪಧಾಧಿಕಾರಿಯಮುನಾ ಚಂಗಪ್ಪ ಅಲಿಯಾಸ್ ಯಮುನಾ ಅಕ್ಕಮ್ಮ ಪತಿ ಚಂಗಪ್ಪ ಎಂ.ಎಸ್ ರವರು ಮಾ.17 ರಂದು ತಮ್ಮ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ|ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಯಮುನಾ ಚಂಗಪ್ಪ ವಿರುದ್ದ ಕಾಂಗ್ರೆಸ್ ದೂರು Read More »

ಶಾಸಕರನ್ನು ಅನರ್ಹತೆ/ ಸ್ಪೀಕರ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ

ಸಮಗ್ರ ನ್ಯೂಸ್: ಹಿಮಾಚಲ ಪ್ರದೇಶದ ವಿಧಾನ ಸಭಾಧ್ಯಕ್ಷರು, 6 ಮಂದಿ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‍ನನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ನಿರಾಕರಿಸಿದೆ. ಈ ಕುರಿತಂತೆ 4 ವಾರಗಳಲ್ಲಿ ಪ್ರತಿಕ್ರಿಯೆ ಕೇಳಿ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇದರ ಜೊತೆಗೆ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ಬಾಕಿ ಇರುವಾಗ, ಅನರ್ಹ ಶಾಸಕರು ವಿಧಾನಸಭೆಯ ಕಾರ್ಯ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಶಾಸಕರನ್ನು ಅನರ್ಹತೆ/ ಸ್ಪೀಕರ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ Read More »