ರಾಜ್ಯ

ಮಡಿಕೇರಿ: ಭಾರತೀಯ ನೌಕಾಪಡೆಗಳ ತಂಡದಿಂದ ವೀರ ಪ್ರತಿಮೆಗಳಿಗೆ ಪುಷ್ಪಾರ್ಚನೆ

ಸಮಗ್ರ ನ್ಯೂಸ್: ಭಾರತೀಯ ನೌಕಾಪಡೆಗಳ ತಂಡ ಮಡಿಕೇರಿಯಲ್ಲಿರುವ ವೀರ ಪ್ರತಿಮೆಗಳಿಗೆ ಪುಷ್ಪಾರ್ಚನೆಯನ್ನು ಸಲ್ಲಿಸುವುದರ ಮೂಲಕ ಗೌರವ ಅರ್ಪಿಸಿದರು. ಕರ್ನಾಟಕ ಹೆರಿಟೇಜ್ ರ್‍ಯಾಲಿ ಮೂಲಕ ಅಗ್ನಿಪಥ್ ಯೋಜನೆಯ ಮಾಹಿತಿ, ದೇಶ ಸೇವೆಯ ಮಹತ್ವ ಹಾಗೂ ಕರ್ನಾಟಕ ಪಾರಂಪರೆಯನ್ನು ಪರಿಚಯಿಸುವ ಪ್ರಯತ್ನಕ್ಕೆ ಭಾರತೀಯ ನೌಕಾಪಡೆಯ ತಂಡ ಫೀಲ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ,ಮಂಗೇರಿರ ಮುತ್ತಣ್ಣ, ಅಜ್ಜಮಾಡ ದೇವಯ್ಯ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು. ನೌಕಾದಳ ಕಮಾಂಡರ್ ಕಮಾಂಡರ್ ರವೀಂದ್ರ ಕುಮಾರ್, ಸಂಯೋಜಕ ಲೆಫ್ಟಿನೆಂಟ್ ಕಮಾಂಡರ್ ಕುಂಚೆಟ್ಟಿರ ಸುಬ್ಬಯ್ಯ, ಮತ್ತಿತರ ಅಧಿಕಾರಿಗಳು

ಮಡಿಕೇರಿ: ಭಾರತೀಯ ನೌಕಾಪಡೆಗಳ ತಂಡದಿಂದ ವೀರ ಪ್ರತಿಮೆಗಳಿಗೆ ಪುಷ್ಪಾರ್ಚನೆ Read More »

ಲಾರಿ-ಆ್ಯಂಬುಲೆನ್ಸ್ ನಡುವೆ ಅಪಘಾತ

ಸಮಗ್ರ ನ್ಯೂಸ್: ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಕೊಳತ್ತೋಡು ಗ್ರಾಮದಲ್ಲಿ ಲಾರಿ ಹಾಗೂ ಆ್ಯಂಬುಲೆನ್ಸ್ ನಡುವೆ ಭೀಕರ ರಸ್ತೆ ಅಪಘಾತ ಸಂಬವಿಸಿದ್ದು ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಸಂಬಂಧಿಸಿದ ಆ್ಯಂಬುಲೆನ್ಸ್, ವಿರಾಜಪೇಟೆ DHS ಕಂಪೆನಿಗೆ ಸೇರಿದ ಲಾರಿ ನಡುವೆ ಬಿಟ್ಟಂಗಾಲದಲ್ಲಿ ಅಪಘಾತ ಸಂಭವಿಸಿದೆ. ಸವಾರನನ್ನು ಆಸ್ಪತ್ತೆಗೆ ಸಾಗಿಸುವಾಗ ಅತೀ ವೇಗದಿಂದ ಬಂದ ಆಂಬ್ಯುಲೆನ್ಸ್ ಲಾರಿಗೆ ಗುದ್ದಿದ್ದು, ಇದನ್ನು ರಕ್ಷಿಸಲು ಹೋಗಿ ಮರಕ್ಕೆ ಗುದ್ದಿ ಲಾರಿ ನಿಲ್ಲಿಸಿ ಲಾರಿ ಚಾಲಕನ

ಲಾರಿ-ಆ್ಯಂಬುಲೆನ್ಸ್ ನಡುವೆ ಅಪಘಾತ Read More »

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಸಮಗ್ರ ನ್ಯೂಸ್: ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಕ್ಕಬ್ಬೆ ಸಮೀಪ ನಾಲಾಡಿಯಲ್ಲಿ ನಡೆದಿದೆ. ಮೃತ ಕಂಬೆಯಂಡ ರಾಜ ದೇವಯ (59) ಇಂದು ಬೆಳಗ್ಗೆ ನಾಲಾಡಿಯಲಿರುವ ತಮ್ಮ ಮನೆಯ ಸಮೀಪದ ತೋಟಕ್ಕೆ ತೆರಳಿದಾಗ ದಿಢೀರ್ ಕಾಣಿಸಿಕೊಂಡ ಆನೆ ಇವರ ಮೇಲೆ ಎರಗಿ ತುಳಿದುಕೊಂದಿದೆ. ಒಟ್ಟು ಮೂರು ಆನೆಗಳು ತೋಟದಲ್ಲಿ ಇದ್ದವು ಎಂದು ಹೇಳಲಾಗುತ್ತಿದೆ. ಕೆ.ಕೆ ರಾಜ ದೇವಯ್ಯ ಅವರು ಕೃಷಿಕರು ಹಾಗೂ ಕಕ್ಕಬೆಯಲ್ಲಿ ಸ್ವಂತ ಆಟೋ ಬಾಡಿಗೆಗೆ ಓಡಿಸುತ್ತಿದ್ದರು.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ Read More »

ಲೋಕಾಯುಕ್ತರ ನೇಮಕ ಪ್ರಕ್ರಿಯೆಗೆ ವಿಸ್ತೃತ ಮಾರ್ಗಸೂಚಿ/ ತಾನೇ ರೂಪಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ಭ್ರಷ್ಟಾಚಾರವನ್ನು ನಿಗ್ರಹ ಮಾಡುವ ಮೂಲ ಉದ್ದೇಶದೊಂದಿಗೆ ಸ್ಥಾಪನೆಯಾಗಿರುವ ಲೋಕಾಯುಕ್ತರ ನೇಮಕ ಪ್ರಕ್ರಿಯೆಗೆ ವಿಸ್ತೃತ ಮಾರ್ಗಸೂಚಿ ರೂಪಿಸಬೇಕಾದ ಅಗತ್ಯವಿದ್ದು, ಸ್ವತಃ ತಾನೇ ರೂಪಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಲೋಕಾಯುಕ್ತರ ನೇಮಕದಲ್ಲಿ ಲೋಪ ಆಗುತ್ತಿರುವುದು ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರನ್ನು ನೇಮಿಸುವಾಗ ಆ ಸಮಿತಿಯಲ್ಲಿ ಇರುವ ಸದಸ್ಯರು, ಅವರಿಗೆ ನೀಡುವ ಮಾಹಿತಿ, ಅವಧಿ, ಸಲಹೆ ನೀಡುವ ಅಧಿಕಾರ, ಚರ್ಚಾ ಪ್ರಕ್ರಿಯೆ ಮುಂತಾದವುಗಳ ಕುರಿತು ವಿಸ್ತೃತವಾಗಿ ಮಾರ್ಗಸೂಚಿ ರೂಪಿಸಲಾಗುವುದು ಎಂದು ಮುಖ್ಯ ನ್ಯಾ ಚಂದ್ರಚೂಡ್ ನೇತೃತ್ವದ ಪೀಠ

ಲೋಕಾಯುಕ್ತರ ನೇಮಕ ಪ್ರಕ್ರಿಯೆಗೆ ವಿಸ್ತೃತ ಮಾರ್ಗಸೂಚಿ/ ತಾನೇ ರೂಪಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್ Read More »

5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಡೆಸುತ್ತಿರುವ 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಹಲವು ಸುತ್ತಿನ ಕಾನೂನು ಸಮರದ ಬಳಿಕ ಪಬ್ಲಿಕ್‌ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್‌ ಶುಕ್ರವಾರ ಬೆಳಗ್ಗೆ ಗ್ರೀನ್‌ ಸಿಗ್ನಲ್‌ ನೀಡಿತ್ತು. ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರುಪ್ಸಾ ಇದನ್ನು ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್‌

5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ Read More »

ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ/ ಐಪಿಎಲ್ ವೀಕ್ಷಕರಿಗೆ ಸಾಥ್ ಕೊಡುತ್ತೆ ನಮ್ಮ ಮೆಟ್ರೋ

ಸಮಗ್ರ ನ್ಯೂಸ್: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 24, 29, ಏ.2ರಂದು ಐಪಿಎಲ್ ಪಂದ್ಯಾವಳಿ ಮತ್ತು ಮಾ. 24 ರಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಾಫ್ ಮ್ಯಾರಥಾನ್ ಆಯೋಜನೆ ಮಾಡಿರುವ ಹಿನ್ನಲೆಯಲ್ಲಿ ಮಾರ್ಚ್ 24 ರಂದು ತನ್ನ ಎಲ್ಲಾ ನಾಲ್ಕು ಟರ್ಮಿನಲ್‍ಗಳಿಂದ ಮತ್ತು ಇಂಟರ್‍ಚೇಂಜ್ ಸ್ಟೇಷನ್ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ- ಮೆಜೆಸ್ಟಿಕ್‍ನಿಂದ ಬೆಳಗ್ಗೆ 7ರ ಬದಲು ಮುಂಜಾನೆ 4ರಿಂದ ಮತ್ತು ಐಪಿಎಲ್ ವೀಕ್ಷಕರಿಗಾಗಿ ಮಾರ್ಚ್ 24, 29, ಏ.2ರಂದು ನಮ್ಮ ಮೆಟ್ರೋ ಕೊನೆಯ ಸೇವೆಯನ್ನು ರಾತ್ರಿ 11.30ರವರೆಗೆ

ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ/ ಐಪಿಎಲ್ ವೀಕ್ಷಕರಿಗೆ ಸಾಥ್ ಕೊಡುತ್ತೆ ನಮ್ಮ ಮೆಟ್ರೋ Read More »

ಕಲಬುರಗಿಯಲ್ಲಿ ಬಡ್ಡಿ ಹಣ ನೀಡದಕ್ಕೆ ವ್ಯಕ್ತಿಯ ಮೇಲೆ ಆ್ಯಸಿಡ್ ಅಟ್ಯಾಕ್

ಸಮಗ್ರ ನ್ಯೂಸ್: ಬಡ್ಡಿ ಹಣಕ್ಕಾಗಿ ವ್ಯಕ್ತಿ ಮೇಲೆ ಆ್ಯಸಿಡ್ ಎರಚಿರುವ ಅಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜುಬೇರ್ ಅಹ್ಮದ್ ಎಂಬುವರ ಮೇಲೆ ಇಮ್ರಾನ್‌ ಖಾನ್ ಎಂಬ ವ್ಯಕ್ತಿ ಆ್ಯಸಿಡ್ ನಿಂದ ದಾಳಿ ನಡೆಸಿದ್ದಾನೆ. ಜುಬೇರ್ ಬಲಗೈ ಹಾಗೂ ಕಾಲಿನ ಮೇಲೆ ಆ್ಯಸಿಡ್ ಬಿದ್ದಿದ್ದು ಸುಟ್ಟ ಗಾಯಗಳಾಗಿವೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅರ್ಷದ್ ಮೀನು ವ್ಯಾಪಾರಕ್ಕಾಗಿ ಪರ್ವೇಜ್ ಬಳಿ ಜುಬೇರ್ 35 ಲಕ್ಷ ಹಣ ಪಡೆದುಕೊಂಡಿದ್ದ. ಅದಕ್ಕೆ ಬಡ್ಡಿ, ಚಕ್ರಬಡ್ಡಿ ಹಚ್ಚಿ 90

ಕಲಬುರಗಿಯಲ್ಲಿ ಬಡ್ಡಿ ಹಣ ನೀಡದಕ್ಕೆ ವ್ಯಕ್ತಿಯ ಮೇಲೆ ಆ್ಯಸಿಡ್ ಅಟ್ಯಾಕ್ Read More »

ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅರೆಸ್ಟ್

ಸಮಗ್ರ ನ್ಯೂಸ್: ಅನಧಿಕೃತವಾಗಿ ಮನೆಯಲ್ಲಿ ಮಗು ಇಟ್ಟುಕೊಂಡ ಆರೋಪದ ಮೇಲೆ ರೀಲ್ಸ್​ ರಾಣಿ ಸೋನು ಶ್ರೀನಿವಾಸ್​ ಗೌಡನ್ನು ಬ್ಯಾಡರಹಳ್ಳಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದ ಸೋನು ಗೌಡ ಮಕ್ಕಳ ಹಕ್ಕು ಕಸದಿರುವ ಅರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ. ಉತ್ತರ ಕರ್ನಾಟಕದ ಎಂಟು ವರ್ಷದ ಮಗುವನ್ನು ತನ್ನ ಬಲಿ ಇಟ್ಟಿಕೊಂಡಿರುವುದರಿಂದ ಮಕ್ಕಳ ರಕ್ಷಣ ಇಲಾಖೆ ಅಧಿಕಾರಿ ಗೀತಾ ದೂರು ನೀಡಿದ್ದರು. ಮಗು ದತ್ತು ಪಡೆದಿರುವುದಾಗಿ ಸೋನು ಗೌಡ ಇತ್ತೀಚೆಗೆ

ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ Read More »

ಲೋಕಸಭಾ ಚುನಾವಣೆ/ ತಲಕಾವೇರಿಯಿಂದ ಪ್ರಚಾರ ಆರಂಭಿಸಿದ ಯುದುವೀರ್

ಸಮಗ್ರ ನ್ಯೂಸ್: ತಲಕಾವೇರಿಯಲ್ಲಿ ಮಾತೆ ಕಾವೇರಿಗೆ ಪೂಜೆ ಸಲ್ಲಿಸುವ ಮೂಲಕ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ತಮ್ಮ ಚುನಾವಣಾ ಪ್ರಚಾರ ಆರಂಭಿಸಿದರು. ಮೊದಲು ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ ಅವರು, ಬಳಿಕ ಭಗಂಡೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಯದುವೀರ್ ಹಾಗೂ ಇತರರು ಚೇರಂಬಾಣೆ, ಸಂಪಾಜೆ, ಮೂರ್ನಾಡು ಸೇರಿದಂತೆ ವಿವಿಧೆಡೆಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಶಾಸಕ

ಲೋಕಸಭಾ ಚುನಾವಣೆ/ ತಲಕಾವೇರಿಯಿಂದ ಪ್ರಚಾರ ಆರಂಭಿಸಿದ ಯುದುವೀರ್ Read More »

ಬೆಂಗಳೂರಿನ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ

ಸಮಗ್ರ ನ್ಯೂಸ್: ಇನ್ನೇನು ಲೋಕಸಭೆ ಚುನಾವಣೆಗೆ ಕೆಲವು ದಿನಗಳಷ್ಟೆ ಬಾಕಿ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹಲವು ತಪಾಸಣೆಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಮೂರು ಉಪವಿಭಾಗಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿಗಳು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿದರು. 234 ಮನೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, 177 ರೌಡಿಗಳು ಮನೆಯಲ್ಲಿರಲಿಲ್ಲ. ನ್ಯಾಯಾಂಗ ಬಂಧನದಲ್ಲಿರುವ ಎಂಟು ರೌಡಿಗಳ ಮನೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಬೆಂಗಳೂರಿನ ಜಯನಗರ, ಬನಶಂಕರಿ, ಚೆನ್ನಮ್ಮನ ಅಚ್ಚುಕಟ್ಟು, ಕುಮಾರಸ್ವಾಮಿ ಲೇಔಟ್ ಸೇರಿದಂತೆ

ಬೆಂಗಳೂರಿನ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ Read More »