ರಾಜ್ಯ

ಮೈಸೂರಿಗೆ ನರೇಂದ್ರ ಮೋದಿ| ಕೊಡಗಿಗೆ ಯೋಗಿ ಆದಿತ್ಯನಾಥ್

ಸಮಗ್ರ ನ್ಯೂಸ್: ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಮೈಸೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊಡಗಿಗೆ ಬರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾ.28ರಂದು ಮಡಿಕೇರಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅವರುಗಳ ಆಗಮನವನ್ನು ಬಹಿರಂಗಪಡಿಸಿದ್ದಾರೆ.

ಮೈಸೂರಿಗೆ ನರೇಂದ್ರ ಮೋದಿ| ಕೊಡಗಿಗೆ ಯೋಗಿ ಆದಿತ್ಯನಾಥ್ Read More »

ರಾಯಚೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ|ಡೀಸೆಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಬಿ.ವಿ ನಾಯಕ್ ಬೆಂಬಲಿಗರು

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಟಿಕೆಟ್ ವಿಚಾರವಾಗಿ ಇದೀಗ ಟಿಕೆಟ್‌ ವಂಚಿತ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕಗೆ ಟಿಕೆಟ್‌ ಕೊಟ್ಟಿರುವುದು ಬಿ.ವಿ‌. ನಾಯಕ ಅವರನ್ನು ಕೆರಳಿಸಿದೆ. ಇದೀಗ ಅವರ ಬಣ ಪ್ರತಿಭಟನೆಯನ್ನು ಮಾಡಿವೆ. ಅಭ್ಯರ್ಥಿ ಬದಲಾವಣೆಗೆ ಎರಡು ದಿನಗಳ ಗಡುವನ್ನು ನೀಡಿದೆ. ಇನ್ನು ಪ್ರತಿಭಟನೆ ವೇಳೆ ಬಿ.ವಿ. ನಾಯಕ ಅವರ ಅಭಿಮಾನಿಯೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದು ಹೈಡ್ರಾಮಾ ನಡೆಸಿದ್ದಾನೆ. ಕಾರ್ಯಕರ್ತರು ಕ್ಯಾನ್ ಕಸಿದುಕೊಂಡು

ರಾಯಚೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ|ಡೀಸೆಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಬಿ.ವಿ ನಾಯಕ್ ಬೆಂಬಲಿಗರು Read More »

ಮಲ್ಪೆ: ಸಮುದ್ರದ ಅಲೆಗೆ ಸಿಲುಕಿ ಅಸ್ವಸ್ಥಗೊಂಡಿದ್ದ ಮಗುವಿನ ರಕ್ಷಣೆ

ಸಮಗ್ರ ನ್ಯೂಸ್‌: ಬೀಚ್‌ನಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಅಸ್ವಸ್ಥಗೊಂಡ ಮಗುವನ್ನು ಮುಳುಗು ತಜ್ಞ ಈಶ್ವ‌ರ್ ಮಲ್ಪೆ ತಂಡ ರಕ್ಷಿಸಿರುವ ಘಟನೆ ಸಂಭವಿಸಿದೆ.ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದ ಮೈಸೂರು ಮೂಲದ ದಂಪತಿ ತಮ್ಮ ಒಂದೂವರೆ ವರ್ಷ ಪ್ರಾಯದ ಪೂರ್ವಿ ಎಂಬ ಮಗುವಿನೊಂದಿಗೆ ಸಮುದ್ರದಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಮಗು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ, ನೀರು ಕುಡಿದು, ಪ್ರಜ್ಞಾಹೀನವಾಗಿತ್ತು. ಇದನ್ನು ಕಂಡ ಮಲ್ಪೆಬೀಚ್ ಆಟೋರಿಕ್ಷಾ ನಿಲ್ದಾಣದ ಆಟೋ ಚಾಲಕರು ಆ ಮಗುವನ್ನು ತನ್ನ ಆಟೋರಿಕ್ಷಾ ಮೂಲಕ ಈಶ್ವ‌ರ್

ಮಲ್ಪೆ: ಸಮುದ್ರದ ಅಲೆಗೆ ಸಿಲುಕಿ ಅಸ್ವಸ್ಥಗೊಂಡಿದ್ದ ಮಗುವಿನ ರಕ್ಷಣೆ Read More »

ಮತ್ತೊಂದು ಪಟ್ಟಿ ರಿಲೀಸ್ ಮಾಡಿದ ಬಿಜೆಪಿ/ ಕರ್ನಾಟಕದ ಎಲ್ಲಾ ಕ್ಷೇತ್ರಗಳು ಭರ್ತಿ

ಸಮಗ್ರ ನ್ಯೂಸ್: ಬಿಜೆಪಿ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಾಕಿ ಇರಿಸಿಕೊಂಡಿದ್ದ ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬಿಜೆಪಿಯ ಹಿರಿಯ ನಾಯಕ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಬಾರಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ತೋರದ ಕಾರಣ, ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ. ಕಾರಜೋಳ ಅವರಿಗೆ ಚಿತ್ರದುರ್ಗ ಟಿಕೆಟ್ ಘೋಷಣೆ ಮಾಡುವುದರೊಂದಿಗೆ ಬಿಜೆಪಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ.

ಮತ್ತೊಂದು ಪಟ್ಟಿ ರಿಲೀಸ್ ಮಾಡಿದ ಬಿಜೆಪಿ/ ಕರ್ನಾಟಕದ ಎಲ್ಲಾ ಕ್ಷೇತ್ರಗಳು ಭರ್ತಿ Read More »

ಚಿಕ್ಕಮಗಳೂರು:ಕಾರು-ಸ್ಕೂಟಿ ನಡುವೆ ಅಪಘಾತ|ದಂಪತಿ ಮೃತ್ಯು

ಸಮಗ್ರ ನ್ಯೂಸ್: ಸ್ಕೂಟಿ-ಕಾರು ನಡುವೆ ಭೀಕರ ಅಪಘಾತ ನಡೆದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನ ವಂಗಲ ಗ್ರಾಮದಲ್ಲಿ ನಡೆದಿದೆ. ಅರ್ಜುನ್ ಹಾಗೂ ಶ್ವೇತ ಮೃತ ದುರ್ದೈವಿಗಳು. ಕಾರು ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲಕನ ಅಜಾಗರೂಕತೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು:ಕಾರು-ಸ್ಕೂಟಿ ನಡುವೆ ಅಪಘಾತ|ದಂಪತಿ ಮೃತ್ಯು Read More »

ಬಳ್ಳಾರಿ :ಶ್ರೀಗಂಧದ ಮರವನ್ನು ಸಾಗಿಸುತ್ತಿದ್ದ ಕಳ್ಳರು ಪೊಲೀಸರ ವಶ

ಸಮಗ್ರ ನ್ಯೂಸ್ : ಶ್ರೀಗಂಧದ ಮರವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಚ್ಎಲ್ಸಿ ಕ್ಯಾನಲ್ ಬಳಿ ನಡೆದಿದೆ. ಆರೋಪಿ ಒನ್ ಗಂಗಾನಾಯ್ಕ (ಸಂಡೂರ), ಮಾಂತೇಶ (ಕೊಟ್ಟೂರು), ಚೆನ್ನಪ್ಪ (ಬಾಗಲಕೋಟಿ), ರಾಮಣ್ಣ (ಬಾಗಲಕೋಟಿ) ಈ ನಾಲ್ವರನ್ಬಂನು ಬಂಧಿಸುವಲ್ಲಿ ಹೊಸಪೇಟೆ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಗೂಡ್ಸ್ವಾಹನ ಮತ್ತು ಫಿಕಪ್ ವಾಹನದಲ್ಲಿ ಸುಮಾರು 203 ಕೆಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನು ಯಾವುದೇ ದಾಖಲೆಗಳಿಲ್ಲದೆ

ಬಳ್ಳಾರಿ :ಶ್ರೀಗಂಧದ ಮರವನ್ನು ಸಾಗಿಸುತ್ತಿದ್ದ ಕಳ್ಳರು ಪೊಲೀಸರ ವಶ Read More »

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ/ ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿಕೆ

ಸಮಗ್ರ ನ್ಯೂಸ್: ಬೇಸಿಗೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. 2024ನೇ ಸಾಲಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಡಿಕೆಗೆ ಅನುಗುಣವಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ಉತ್ಪಾದನೆಗೆ ಒತ್ತು ನೀಡಲಾಗಿದೆ. ಉಷ್ಣ ವಿದ್ಯುತ್ ಸ್ಥಾವರಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮುಖ್ಯ ಆಧಾರವಾಗಿದ್ದು, ರಾಜ್ಯದ 3 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಳೆದ ವರ್ಷ ಗರಿಷ್ಠ 22,000ಮಿ.ಯೂ. ವಿದ್ಯುತ್

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ/ ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿಕೆ Read More »

ಚಿಕ್ಕಮಗಳೂರು:೪ ಕೋಟಿ ಮೌಲ್ಯದ ಚಿನ್ನಾಭರಣ ವಶ

ಸಮಗ್ರ ನ್ಯೂಸ್: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ವಶಕ್ಕೆ ಪಡೆದ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ. ೬ ಕೆಜಿ ೫೮೬ ಗ್ರಾಂ ಚಿನ್ನ, ೧ ಕೆಜಿ ೭೧.೪೯೨ ಗ್ರಾಂ ವಜ್ರಾಭರಣ, ೧ ಕೆಜಿ ಬೆಳ್ಳಿ ವಸ್ತುಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಂದ ಒಂದು

ಚಿಕ್ಕಮಗಳೂರು:೪ ಕೋಟಿ ಮೌಲ್ಯದ ಚಿನ್ನಾಭರಣ ವಶ Read More »

ಡಿಕೆಶಿ ಸಿಎಂ ಆಗಲಿ ಎಂದು ಅರ್ಚಕರಿಂದ ಸಂಕಲ್ಪ; ಅರ್ಚಕರು ಹೇಳಿದರಲ್ಲಿ ತಪ್ಪೇನು ಎಂದ ಶಿವಕುಮಾರ್

ಸಮಗ್ರ ನ್ಯೂಸ್: ಡಿಸಿಎಂ ಡಿ.ಕೆ. ಶಿವಕುಮಾರ್‌ ನಿನ್ನೆ ಟೆಂಪಲ್‌ ರನ್‌ ಮಾಡಿದ್ದು, ಧರ್ಮಸ್ಥಳ, ಶೃಂಗೇರಿ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಭೇಟಿ ನೀಡಿ ಮಹಾಬಲೇಶ್ವರ ಸನ್ನಿದಿಯಲ್ಲಿ ಆತ್ಮಲಿಂಗ ಪೂಜೆ ಸಲ್ಲಿಸಿದ್ದಾರೆ. ಇದೇ ಸಂಧರ್ಭದಲ್ಲಿ ಡಿ.ಕೆ‌‌. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅರ್ಚಕರು ಸಂಕಲ್ಪ ಮಾಡಿದ್ದಾರೆ. ಗೋಕರ್ಣದಲ್ಲಿ ಆತ್ಮಲಿಂಗ ಪೂಜೆ ಸಲ್ಲಿಸುವ ವೇಳೆ ಮಹಾಬಲೇಶ್ವರ ದೇವಸ್ಥಾನದ ಅರ್ಚಕರು ಈ ಸಂಕಲ್ಪವನ್ನು ಮಾಡಿದ್ದು, ಡಿಕೆಶಿಯಿಂದ ವಿಧಿ ವಿಧಾನದಂತೆ ಶಿವನ ಪೂಜೆ ಮಾಡಿಸಿದ್ದಾರೆ. ಲೋಕಸಭಾ

ಡಿಕೆಶಿ ಸಿಎಂ ಆಗಲಿ ಎಂದು ಅರ್ಚಕರಿಂದ ಸಂಕಲ್ಪ; ಅರ್ಚಕರು ಹೇಳಿದರಲ್ಲಿ ತಪ್ಪೇನು ಎಂದ ಶಿವಕುಮಾರ್ Read More »

ಕೋಲಾರ ‘ಲೋಕ’ ಟಿಕೆಟ್ ವಾರ್: ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದ್ದರೆ 5 ಶಾಸಕರಿಂದ ರಾಜೀನಾಮೆ

ಸಮಗ್ರ ನ್ಯೂಸ್: ಕೋಲಾರ ಕಾಂಗ್ರೆಸ್​ ಟಿಕೆಟ್ ಇನ್ನಷ್ಟು ಕಗ್ಗಂಟಾಗಿಯೆ ಉಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದರೂ, ನಾಯಕರ ನಡುವಿನ ಭಿನ್ನಮತ ಶಮನವಾಗಿಲ್ಲ. ಸಚಿವ ಕೆ.ಹೆಚ್​​.ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೇ ಜಿಲ್ಲೆಯ ಐವರು ಶಾಸಕರು ರಾಜಿನಾಮೆ ನೀಡುತ್ತೇವೆ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೊತ್ತೂರು ಮಂಜುನಾಥ್ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರ ಬಳಿ ಸಮಯ ಕೇಳಿದ್ದೇವೆ, ಸ್ಪೀಕರ್ ಬಳಿ ಸುಧಾಕರ್ ಸಮಯ ಕೇಳಿದ್ದಾರೆ ಎಂದು ಎಂಎಲ್

ಕೋಲಾರ ‘ಲೋಕ’ ಟಿಕೆಟ್ ವಾರ್: ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದ್ದರೆ 5 ಶಾಸಕರಿಂದ ರಾಜೀನಾಮೆ Read More »