ರಾಜ್ಯ

ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ/ 71 ಸಾವಿರ ದಾಟಿದ 10 ಗ್ರಾಂ ಚಿನ್ನದ ಬೆಲೆ

ಸಮಗ್ರ ನ್ಯೂಸ್: ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿ ಮೊದಲ ಬಾರಿ 10 ಗ್ರಾಂ ಚಿನ್ನದ (24 ಕ್ಯಾರೆಟ್ ಗೋಲ್ಡ್) ದರ 71 ಸಾವಿರ ದಾಟಿದ್ದು, ಯುಗಾದಿಗೆ ಹಬ್ಬಕ್ಕೆ ಒಂದೆರಡು ದಿನ ಬಾಕಿ ಇರುವಾಗ ಬಂಗಾರ ದರ ಜನತೆಯ ತಲೆ ತಿರುಗಿಸುತ್ತಿದೆ. ಮದುವೆಗಾಗಿ ಜ್ಯುವೆಲ್ಲರಿ ಖರೀದಿಗೆ ಹೋದವರು ಹೌಹಾರುತ್ತಿದ್ದಾರೆ. ಹೀಗಾಗಿ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ. ಕಳೆದ ಹತ್ತು ದಿನಗಳಲ್ಲಿ ಬಂಗಾರದ ಬೆಲೆ 3500 – 4000 ರೂ. ನಷ್ಟು ಹೆಚ್ಚಳವಾಗಿದ್ದು, ಈ ನಡುವೆ

ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ/ 71 ಸಾವಿರ ದಾಟಿದ 10 ಗ್ರಾಂ ಚಿನ್ನದ ಬೆಲೆ Read More »

ಈ ಜಿಲ್ಲೆಯಲ್ಲಿ ಹೆಚ್ಚಾಯ್ತು ಬಿಸಿಲು, ಜನರ ಗೋಳಾಟ ಕೇಳೋರಿಲ್ಲ!

ಸಮಗ್ರ ನ್ಯೂಸ್: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ತಾಪಮಾನವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರುತ್ತಿದೆ. ಮುಂದಿನ ದಿನಗಳಲ್ಲಿ ಹಗಲಿನಲ್ಲಿ ಬೆಂಗಳೂರು ತಾಪಮಾನವು ದೆಹಲಿ ಮತ್ತು ಮುಂಬೈ ಅನ್ನು ಮೀರಿಸುತ್ತೆ ಎಂದು ವರದಿಯಾಗಿದೆ. ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರರ್ಗಾ, ನಿಂಬರ್ಗಾ ತಾಂಡಾ ಮತ್ತು ರಾಯಚೂರು ಜಿಲ್ಲೆಯ ಹೂಡಾ ಹೋಬಳಿಯಲ್ಲಿ ಶುಕ್ರವಾರ (ಏ.05) ರಂದು 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅತಿ ಹೆಚ್ಚು ತಾಪಮಾನ ದಾಖಲುಏಪ್ರಿಲ್ 5 ರಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ 42 ರಿಂದ

ಈ ಜಿಲ್ಲೆಯಲ್ಲಿ ಹೆಚ್ಚಾಯ್ತು ಬಿಸಿಲು, ಜನರ ಗೋಳಾಟ ಕೇಳೋರಿಲ್ಲ! Read More »

ಬೆಂಗಳೂರಿನ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ

ಸಮಗ್ರ ನ್ಯೂಸ್:ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂ ಬಳಿಯ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನು ಟೈರ್, ಪೈಪ್ ,ಹಾಗೂ ಪ್ಲೆವುಡ್​ಗಳನ್ನು ಇರಿಸಿರುವ ಸುಮಾರು 3 ಗೋದಾಮಿಗೂ ಬೆಂಕಿ ಆವರಿಸಿದೆ. ಸದ್ಯ ಸಿವಿಲ್ ಡಿಫೆನ್ಸ್ ಹಾಗೂ ಸ್ಥಳೀಯರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಬೆಂಗಳೂರಿನ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ Read More »

ಖಾಸಗಿ ಬಸ್​​​ ಪಲ್ಟಿ|ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಸಮಗ್ರ ನ್ಯೂಸ್: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಳಿಯ ಕಣಿವೆ ಪ್ರದೇಶದಲ್ಲಿ ಖಾಸಗಿ ಬಸ್​​​ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ. ಬಸ್‌ನಲ್ಲಿದ್ದಂತಹ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಖಾಸಗಿ ಬಸ್ ಬೆಂಗಳೂರಿನಿಂದ ಶಿವಮೊಗ್ಗದತ್ತ ತೆರಳುತ್ತಿತ್ತು. 50 ಜನ ಪ್ರಯಾಣಿಸುತ್ತಿದ್ದ ಮಾಹಿತಿ ದೊರೆತಿದೆ. ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಭೇಟಿ ನೀಡಿ ಪರಿಶೀಲನೆ

ಖಾಸಗಿ ಬಸ್​​​ ಪಲ್ಟಿ|ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಕೋಲಾರ:ಮೋದಿ ಅವರನ್ನು ಕೆಳಗಿಳಿಸಿ ರಾಹುಲ್‌ ಗಾಂಧಿಯನ್ನು ದೇಶದ ಪ್ರಧಾನಿ ಮಾಡೋಣ- ಸಿದ್ದರಾಮಯ್ಯ

ಸಮಗ್ರ ನ್ಯೂಸ್‌ : ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಳಗಿಳಿಸಿ ರಾಹುಲ್‌ ಗಾಂಧಿ ಅವರನ್ನು ದೇಶದ ಪ್ರಧಾನಿ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಕುರುಡುಮಲೆ ವಿನಾಯಕನ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ರೋಡ್ ಶೋನಲ್ಲಿ ಮಾತನಾಡಿದರು. ಬಿಜೆಪಿಯವರು ಮೊದಲಿಗೆ ಗ್ಯಾರಂಟಿ ಜಾರಿ ಸಾಧ್ಯವೇ ಇಲ್ಲ, ರಾಜ್ಯ ದಿವಾಳಿ ಆಗಲಿದೆ ಎನ್ನುವ ಸುಳ್ಳು ಸೃಷ್ಟಿಸಿದರು. ಜಾರಿ ಮಾಡಿದ ಬಳಿಕ ಹೊಸ ಸುಳ್ಳು

ಕೋಲಾರ:ಮೋದಿ ಅವರನ್ನು ಕೆಳಗಿಳಿಸಿ ರಾಹುಲ್‌ ಗಾಂಧಿಯನ್ನು ದೇಶದ ಪ್ರಧಾನಿ ಮಾಡೋಣ- ಸಿದ್ದರಾಮಯ್ಯ Read More »

ಬೀದರ್: ಗುರುನಾನಕ್‌ ಕಾಲೇಜಿಗೆ ರಜತ ಮಹೋತ್ಸವ ಸಂಭ್ರಮ

ಸಮಗ್ರ ನ್ಯೂಸ್‌ : ನಗರದ ಗುರುನಾನಕ್‌ ಪ್ರಥಮ ದರ್ಜೆ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮ ನಗರದಲ್ಲಿ ಶುಕ್ರವಾರ ನಡೆಯಿತು. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್‌ ಉದ್ಘಾಟಿಸಿ, ಗುರು ನಾನಕ್ ಪ್ರಥಮ ದರ್ಜೆ ಕಾಲೇಜು 25 ವರ್ಷಗಳು ಪೂರ್ಣಗೊಳಿಸಿರುವುದು ಸಂತಸದ ವಿಷಯ.ಗಡಿ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಆಧಾರಿತ ಜ್ಞಾನ ನೀಡುತ್ತಿದೆ. ಜೊತೆಗೆ ಅನ್ನದಾಸೋಹ ಕೂಡ ಮಾಡುತ್ತಿರುವುದು ಶ್ಲಾಘನಾರ್ಹ ಎಂದರು. ‌ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ .ಎಸ್. ಬಿರಾದಾರ, ಕುಲಸಚಿವ ಪ್ರೊ. ಪರಮೇಶ್ವರ

ಬೀದರ್: ಗುರುನಾನಕ್‌ ಕಾಲೇಜಿಗೆ ರಜತ ಮಹೋತ್ಸವ ಸಂಭ್ರಮ Read More »

ಹುಬ್ಬಳ್ಳಿಯಲ್ಲಿ ಬಿಸಿಲಿನ ದಾಹ: ಆಟೋ ಚಾಲಕನ ಕಾರ್ಯಕ್ಕೆ ತಣ್ಣಗಾದ ಪ್ರಯಾಣಿಕರು

ಸಮಗ್ರ ನ್ಯೂಸ್ : ಸೂರ್ಯನ ಆರ್ಭಟಕ್ಕೆ ಜನರು ಬೆಂದು ಹೋಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಜನರು ಬಾಯಿ ಬಿಡುತ್ತಿದ್ದಾರೆ. ಈ ವೇಳೆ ನಾಗರಾಜ ಗಬ್ಬೂರ ಎಂಬ ಆಟೋ ಚಾಲಕನೊಬ್ಬ ಪ್ರಯಾಣಿಕರ ದಾಹ ತೀರಿಸಲು ಒಂದು ಮಹತ್ತರ ಕಾರ್ಯವನ್ನು ಮಾಡಿದ್ದಾರೆ. ಆಟೋಗಳಲ್ಲಿ ನೀರಿನ ಕ್ಯಾನ್ಗಳನ್ನು ಅಳವಡಿಸಿ ಪ್ರಯಾಣಿಕರ ದಾಹ ತೀರಿಸುತ್ತಿರುವ ಆಟೋ ಚಾಲಕ ನಾಗರಾಜ ಗಬ್ಬೂರ. ಈತ ಸುಮಾರು ನಾಲ್ಕೈದು ವರ್ಷಗಳಿಂದ ತನ್ನ ಆಟೋದಲ್ಲಿ ಮಾತ್ರ ನೀರಿನ ಕ್ಯಾನ್ ಇಟ್ಟುಕೊಂಡು ಚಲಿಸುತ್ತಿದ್ದರು. ಆದ್ರೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ

ಹುಬ್ಬಳ್ಳಿಯಲ್ಲಿ ಬಿಸಿಲಿನ ದಾಹ: ಆಟೋ ಚಾಲಕನ ಕಾರ್ಯಕ್ಕೆ ತಣ್ಣಗಾದ ಪ್ರಯಾಣಿಕರು Read More »

ಮಡಿಕೇರಿ:ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ

ಸಮಗ್ರ ನ್ಯೂಸ್ : ಕೊಡಗು ಜಿಲ್ಲೆಯಲ್ಲಿ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಜಿಲ್ಲೆಗಳ ಹಳ್ಳಿ, ಪಟ್ಟಣಗಳಲ್ಲಿ ಜಾತ್ರೆ, ರಥೋತ್ಸವ, ದರ್ಗಾಗಳಲ್ಲಿ ಉರೂಸ್‍ಗಳು ಮತ್ತು ಊರು ಹಬ್ಬಗಳ ಆಚರಣೆಯಿರುತ್ತದೆ. ಇಂತಹ ಆಚರಣೆಯ ಸಂದರ್ಭದಲ್ಲಿ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳುಬೇನೆ, ಕಾಲರಾ, ವಿಷಮಶೀತ ಜ್ವರ, ಕಾಮಾಲೆ(ಜಾಂಡೀಸ್) ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಮತ್ತು ಉಲ್ಭಣಗೊಳ್ಳದಂತೆ ತೆಗೆದುಕೊಳ್ಳಬಹುದಾದ ಅಗತ್ಯ ಮುಂಜಾಗ್ರತಾ ಕ್ರಮಗಳೆಂದರೆ, ಜಾತ್ರೆ, ಊರ ಹಬ್ಬ ಮತ್ತಿತರ ಸಾಮಾಜಿಕ ಉತ್ಸವಗಳ ಸಂದರ್ಭಗಳಲ್ಲಿ ಸಾಂಕ್ರಾಮಿಕ

ಮಡಿಕೇರಿ:ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ Read More »

ಪ್ರಜಾಧ್ವನಿ 2.0/ ಕೋಲಾರದಲ್ಲಿ ಸಿಕ್ಕಿತು ಚಾಲನೆ

ಸಮಗ್ರ ನ್ಯೂಸ್: ಕೋಲಾರದಲ್ಲಿ ಇಂದು ಕಾಂಗ್ರೆಸ್ ಚುನಾವಣಾ ರಣಕಹಳೆ ಮೊಳಗಿಸಿದ್ದು, ‘ಪ್ರಜಾಧ್ವನಿ 2.0’ ಪ್ರಚಾರಕ್ಕೆ ಚಾಲನೆ ನೀಡಿದೆ. ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾ‌ರ್ ನೇತೃತ್ವದಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಅಂಬೇಡ್ಕರ್ ವೃತ್ತದಿಂದ ಸೌಂದರ್ಯ ಸರ್ಕಲ್ ವರೆಗೆ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯ ಹಾಗೂ ಡಿಕೆ, ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರ ಮತಯಾಚಿಸಿದರು.

ಪ್ರಜಾಧ್ವನಿ 2.0/ ಕೋಲಾರದಲ್ಲಿ ಸಿಕ್ಕಿತು ಚಾಲನೆ Read More »

ಬೀದರ್‌ ಲೋಕಸಭಾ ಚುನಾವಣೆ|ಪ್ರಚಾರದ ಅಖಾಡಲ್ಲಿ ‘ತಾರೆ’ ಗಳಿಗೆ ಬೇಡಿಕೆ

ಸಮಗ್ರ ನ್ಯೂಸ್‌ : ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಧಿಸೂಚನೆ ಹೊರಬೀಳಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ, ತಾರಾ ಪ್ರಚಾರಕರನ್ನು ಜಿಲ್ಲೆಗೆ ಕರೆತರಲು ಯೋಜನೆ ರೂಪಿಸಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಈಗಾಗಲೇ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದ್ದು, ಕಳೆದ ಕೆಲವು ದಿನಗಳಿಂದ ಬಿರುಸಿನ ಪ್ರಚಾರ ಕೂಡ ಕೈಗೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಯ ದಿನ ಶಕ್ತಿ ಪ್ರದರ್ಶನ ಮಾಡಿ,

ಬೀದರ್‌ ಲೋಕಸಭಾ ಚುನಾವಣೆ|ಪ್ರಚಾರದ ಅಖಾಡಲ್ಲಿ ‘ತಾರೆ’ ಗಳಿಗೆ ಬೇಡಿಕೆ Read More »