ತಿರಸ್ಕೃತಗೊಂಡ ನಾಮ ಪತ್ರ/ ಬಿ ಎಸ್ ಪಿ ಮೈಸೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಉಚ್ಚಾಟನೆ
ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಬಿಎಸ್‌ಪಿ ರಾಜ್ಯಸಮಿತಿ ವತಿಯಿಂದ ನಿಯೋಜನೆಗೊಂಡಿದ್ದ ರೇವತಿರಾಜ್ ರವರ ನಾಮಪತ್ರ ತಿರಸ್ಕಾರಗೊಂಡು ಪಕ್ಷಕ್ಕೆ ಬಹಳ ಮುಜುಗರ ಮತ್ತು ಅಪಮಾನ ಉಂಟುಮಾಡಿದ ಆರೋಪದ ಮೇಲೆ ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಅವರನ್ನು ಉಚ್ಚಾಟಿಸಲಾಗಿದೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರೇವತಿರಾಜ್ ಅವರ ನಾಮಪತ್ರ ಸಲ್ಲಿಕೆ ಮತ್ತು ಚುನಾವಣೆ ಪ್ರಚಾರ ಕಾರ್ಯಗಳನ್ನು ಬಿಎಸ್‌ಪಿ ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಯವರಿಗೆ ಒಪ್ಪಿಸಿ, ಇವರನ್ನು ತಾರಾ ಪ್ರಚಾರಕರನ್ನಾಗಿಯೂ ಪಕ್ಷವು ನೇಮಕ ಮಾಡಿತ್ತು.
ತಿರಸ್ಕೃತಗೊಂಡ ನಾಮ ಪತ್ರ/ ಬಿ ಎಸ್ ಪಿ ಮೈಸೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಉಚ್ಚಾಟನೆ Read More »










